ಹೀಗಾಗಿ ಅವರು ಕೇವಲ ಇಂಪ್ಯಾಕ್ಟ್‌ ಆಟಗಾರನಾಗಿ ಕಣಕ್ಕಿಳಿದರು. ರೋಹಿತ್‌ ಬಗ್ಗೆ ಪಂದ್ಯದ ಬಳಿಕ ಮುಂಬೈ ತಂಡದ ಹಿರಿಯ ಸ್ಪಿನ್ನರ್‌ ಚಾವ್ಲಾ ಮಾಹಿತಿ ನೀಡಿದ್ದು, ರೋಹಿತ್‌ಗೆ ಸಣ್ಣ ಮಟ್ಟಿನ ಬೆನ್ನು ನೋವು ಕಾಣಿಸಿಕೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಫೀಲ್ಡ್‌ಗೆ ಇಳಿಸಲಿಲ್ಲ’ ಎಂದಿದ್ದಾರೆ.

ಮುಂಬೈ(ಮೇ.05): ಭಾರತದ ನಾಯಕ, ಮುಂಬೈ ಇಂಡಿಯನ್ಸ್‌ನ ತಾರಾ ಆಟಗಾರ ರೋಹಿತ್‌ ಶರ್ಮಾಗೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಬಹುನಿರೀಕ್ಷಿತ ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾಗೆ ಆತಂಕ ಶುರುವಾಗಿದೆ. ಶುಕ್ರವಾರ ಕೋಲ್ಕತಾ ವಿರುದ್ಧ ಪಂದ್ಯಕ್ಕೂ ಮುನ್ನ ರೋಹಿತ್‌ಗೆ ಬೆನ್ನು ನೋವು ಶುರುವಾಗಿದೆ. 

ಹೀಗಾಗಿ ಅವರು ಕೇವಲ ಇಂಪ್ಯಾಕ್ಟ್‌ ಆಟಗಾರನಾಗಿ ಕಣಕ್ಕಿಳಿದರು. ರೋಹಿತ್‌ ಬಗ್ಗೆ ಪಂದ್ಯದ ಬಳಿಕ ಮುಂಬೈ ತಂಡದ ಹಿರಿಯ ಸ್ಪಿನ್ನರ್‌ ಚಾವ್ಲಾ ಮಾಹಿತಿ ನೀಡಿದ್ದು, ರೋಹಿತ್‌ಗೆ ಸಣ್ಣ ಮಟ್ಟಿನ ಬೆನ್ನು ನೋವು ಕಾಣಿಸಿಕೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಫೀಲ್ಡ್‌ಗೆ ಇಳಿಸಲಿಲ್ಲ’ ಎಂದಿದ್ದಾರೆ. ಬೆನ್ನು ನೋವು ಸಣ್ಣ ಮಟ್ಟಿನದ್ದಾಗಿದ್ದು, ಮುಂದಿನ ಪಂದ್ಯಗಳಲ್ಲಿ ಆಡುವ ನಿರೀಕ್ಷೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

IPL 2024 ಪ್ಲೇ ಆಫ್‌ ರೇಸ್‌ನಲ್ಲಿಂದು ಕೆಕೆಆರ್ vs ಲಖನೌ ಫೈಟ್

ಭಾರತ ತನ್ನ ಮೊದಲ ಪಂದ್ಯವನ್ನು ಜೂ.5ರಂದು ಐರ್ಲೆಂಡ್‌ ವಿರುದ್ಧ ಆಡಲಿದ್ದು, ಜೂ.9ರಂದು ನ್ಯೂಯಾರ್ಕ್‌ನಲ್ಲಿ ಬದ್ಧವೈರಿ ಪಾಕಿಸ್ತಾನವನ್ನು ಎದುರಿಸಲಿದೆ. ಜೂ.12ರಂದು ಅಮೆರಿಕ, ಜೂ.15ರಂದು ಕೆನಡಾ ವಿರುದ್ಧ ಸೆಣಸಲಿದೆ.

ಟಿ20 ವಿಶ್ವಕಪ್‌: ರೋಹಿತ್‌, ಕೊಹ್ಲಿಗೆ ಮಣೆ ಹಾಕಿದ ಬಿಸಿಸಿಐ!

ಅಹಮದಾಬಾದ್‌: 2022ರ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಸೋಲುಂಡ ಬಳಿಕ ಭಾರತ 12 ತಿಂಗಳ ಕಾಲ ಹೊಸ ಪೀಳಿಗೆಯ ತಂಡವನ್ನು ಕಟ್ಟುವ ಪ್ರಾಮಾಣಿಕ ಪ್ರಯತ್ನ ನಡೆಸಿತು.

ಹಿರಿಯ ಆಟಗಾರರನ್ನು ಟಿ20 ಕ್ರಿಕೆಟ್‌ನಿಂದ ದೂರವಿರಿಸಿ, ಯುವ ಆಟಗಾರರನ್ನು ತಂಡದೊಳಕ್ಕೆ ತರಲಾಯಿತು. ಆದರೆ ಈ ವರ್ಷ ಜನವರಿಯಲ್ಲಿ ಬಿಸಿಸಿಐ ತನ್ನ ಯೋಜನೆಯಿಂದ ಯೂ-ಟರ್ನ್‌ ಮಾಡಿ, ವಿಶ್ವಕಪ್‌ಗೂ ಮುನ್ನ ಭಾರತ ಆಡಿದ ಕೊನೆಯ ಟಿ20 ಸರಣಿಯಲ್ಲಿ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿಯನ್ನು ಆಡಿಸಿತು. ಇದರೊಂದಿಗೆ ಈ ಇಬ್ಬರು ಹಿರಿಯ ಆಟಗಾರರನ್ನು ವಿಶ್ವಕಪ್‌ಗೆ ಆಯ್ಕೆ ಮಾಡುವ ಬಗ್ಗೆ ತನ್ನ ನಿಲುವನ್ನು ಬಿಸಿಸಿಐ ಸ್ಪಷ್ಟಪಡಿಸಿತ್ತು.

2024ರ ಟಿ20 ವಿಶ್ವಕಪ್‌ಗೆ ಭಾರತ ತಂಡ

ರೋಹಿತ್‌ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್‌, ಸಂಜು ಸ್ಯಾಮ್ಸನ್‌, ಹಾರ್ದಿಕ್‌ ಪಾಂಡ್ಯ, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್‌, ಕುಲ್ದೀಪ್‌ ಯಾದವ್‌, ಯಜುವೇಂದ್ರ ಚಹಲ್‌, ಅರ್ಶ್‌ದೀಪ್‌ ಸಿಂಗ್‌, ಜಸ್‌ಪ್ರೀತ್‌ ಬೂಮ್ರಾ, ಮೊಹಮದ್‌ ಸಿರಾಜ್‌.

ಮೀಸಲು ಆಟಗಾರರು: ಶುಭ್‌ಮನ್‌ ಗಿಲ್‌, ರಿಂಕು ಸಿಂಗ್‌, ಆವೇಶ್‌ ಖಾನ್‌, ಖಲೀಲ್‌ ಅಹ್ಮದ್‌.