Asianet Suvarna News Asianet Suvarna News

IPL 2024 ಪಾದಾರ್ಪಣೆ ಮಾಡುವ ರೀತಿ ಅನುಭವ ಆಗ್ತಿದೆ: ರಿಷಭ್‌ ಪಂತ್

ಈ ಬಗ್ಗೆ ಡೆಲ್ಲಿ ತಂಡದ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಕ್ರಿಕೆಟ್‌ಗೆ ಮರಳಲು ಉತ್ಸುಕನಾಗಿದ್ದೇನೆ. ಆದರೆ ಈಗ ಮತ್ತೊಮ್ಮೆ ಪಾದಾರ್ಪಣೆ ಮಾಡುವ ಅನುಭವ ಆಗುತ್ತಿದೆ. ಭಯಾನಕ ಅಪಘಾತದ ಬಳಿಕವೂ ನನಗೆ ಕ್ರಿಕೆಟ್‌ ಆಡಲು ಸಾಧ್ಯವಾಗುತ್ತಿರುವುದು ಅದ್ಭುತ’ ಎಂದು ಪಂತ್‌ ಹೇಳಿದ್ದಾರೆ.

IPL 2024 Rishabh Pant back in the nets for Delhi Capitals kvn
Author
First Published Mar 14, 2024, 11:18 AM IST

ನವದೆಹಲಿ(ಮಾ.14): ಭೀಕರ ಕಾರು ಅಪಘಾತದ 14 ತಿಂಗಳ ಬಳಿಕ ಮತ್ತೆ ಕ್ರಿಕೆಟ್ ಅಂಗಳಕ್ಕೆ ಕಾಲಿಡುತ್ತಿರುವ ಯುವ ಕ್ರಿಕೆಟಿಗ ರಿಷಭ್‌ ಪಂತ್‌, ಪಾದಾರ್ಪಣೆ ಪಂದ್ಯ ಆಡುವ ಅನುಭವ ಆಗುತ್ತಿದೆ ಎಂದು ಹೇಳಿದ್ದಾರೆ. 

ಈ ಬಗ್ಗೆ ಡೆಲ್ಲಿ ತಂಡದ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಕ್ರಿಕೆಟ್‌ಗೆ ಮರಳಲು ಉತ್ಸುಕನಾಗಿದ್ದೇನೆ. ಆದರೆ ಈಗ ಮತ್ತೊಮ್ಮೆ ಪಾದಾರ್ಪಣೆ ಮಾಡುವ ಅನುಭವ ಆಗುತ್ತಿದೆ. ಭಯಾನಕ ಅಪಘಾತದ ಬಳಿಕವೂ ನನಗೆ ಕ್ರಿಕೆಟ್‌ ಆಡಲು ಸಾಧ್ಯವಾಗುತ್ತಿರುವುದು ಅದ್ಭುತ’ ಎಂದು ಪಂತ್‌ ಹೇಳಿದ್ದಾರೆ.

RCB ಬಗ್ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಏನ್ ಹೇಳ್ತಿದ್ದಾರೆ ಅರ್ಥವಾಯ್ತಾ?

ಪಂಜಾಬ್‌ನ 2 ಪಂದ್ಯಕ್ಕೆ ಧರ್ಮಶಾಲಾ ಆತಿಥ್ಯ?

ನವದೆಹಲಿ: 17ನೇ ಆವೃತ್ತಿ ಐಪಿಎಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ ತನ್ನ ತವರಿನ 2 ಪಂದ್ಯಗಳನ್ನು ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ಆಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಉಳಿದ 5 ತವರಿನ ಪಂದ್ಯಗಳನ್ನು ಪಂಜಾಬ್‌ ತಂಡ ಮೊಹಾಲಿಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಮುಲ್ಲಾನ್ಪುರ ಕ್ರೀಡಾಂಗಣದಲ್ಲಿ ಆಡಲಿದೆ.

ಆರ್‌ಸಿಬಿಯ Bangalore ಇನ್ನು Bengaluru ಆಗಿ ಬದಲಾವಣೆ?

ಬೆಂಗಳೂರು: 17ನೇ ಆವೃತ್ತಿ ಐಪಿಎಲ್‌ಗೂ ಮುನ್ನ ಆರ್‌ಸಿಬಿ ತಂಡ ತನ್ನ ಹೆಸರಿನಲ್ಲಿ ಬದಲಾವಣೆ ಮಾಡಲಿದೆಯೇ ಎಂಬ ಕುತೂಹಲ ತಂಡದ ಅಭಿಮಾನಿಗಳಲ್ಲಿ ಮನೆ ಮಾಡಿದೆ. ತಂಡದ ಹೆಸರಲ್ಲಿರುವ Bangalore ಬದಲು Bengaluru ಎಂದು ಬದಲಿಸುವ ಬಗ್ಗೆ ಫ್ರಾಂಚೈಸಿಯು ಸುಳಿವು ನೀಡಿದೆ.

‘ಕಾಂತಾರ’ ಖ್ಯಾತಿಯ ರಿಷಭ್‌ ಶೆಟ್ಟಿ ಅವರು ನಟಿಸಿರುವ ಪ್ರೊಮೋ ವಿಡಿಯೋವನ್ನು ಬುಧವಾರ ಫ್ರಾಂಚೈಸಿ ಬಿಡುಗಡೆ ಮಾಡಿದೆ. ಮೂರು ಕೋಣಗಳ ಮೇಲೆ ರಾಯಲ್‌, ಚಾಲೆಂಜರ್ಸ್‌ ಮತ್ತು ಬ್ಯಾಂಗಳೂರ್‌ ಎಂದು ಬರೆಯಲಾಗಿದೆ. ರಿಷಭ್ 2 ಕೋಣಗಳನ್ನು ದಾಟಿ ಬ್ಯಾಂಗಳೂರ್‌ ಎಂದು ಬರೆದಿರುವ 3ನೇ ಕೋಣದ ಬಳಿ ಬಂದು, ಇದು ಬೇಡ, ಭಟ್ರೆ ತಗೊಂಡು ಹೋಗಿ ಎಂದು ಹೇಳುತ್ತಾರೆ. ಕೊನೆಯಲ್ಲಿ ಅರ್ಥ ಆಯ್ತಾ ಎಂದು ಪ್ರಶ್ನಿಸುತ್ತಾರೆ.

ರಾಜಕೀಯಕ್ಕೆ ಎಂಟ್ರಿಕೊಟ್ಟ ಯೂಸುಫ್ ಪಠಾಣ್ ಒಟ್ಟು ಆಸ್ತಿ 248 ಕೋಟಿ..! 6 ಕೋಟಿ ಮನೆಯಲ್ಲಿ ವಾಸ

ಆರ್‌ಸಿಬಿ ತನ್ನ ಹೆಸರನ್ನು ಬದಲಾವಣೆ ಮಾಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಮಾ.19ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮದಲ್ಲಿ ಹೊಸ ಹೆಸರು ಪ್ರಕಟಗೊಳ್ಳುವ ನಿರೀಕ್ಷೆಯಿದೆ.

ವಿದೇಶಿ ಮಂಡಳಿ ಜೊತೆ ನೇರ ಸಂಪರ್ಕ ಬೇಡ: ರಾಜ್ಯ ಸಂಸ್ಥೆಗಳಿಗೆ ಬಿಸಿಸಿಐ

ನವದೆಹಲಿ: ವಿದೇಶಿ ಕ್ರಿಕೆಟ್‌ ಮಂಡಳಿಗಳ ಜೊತೆ ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ನೇರ ಸಂಪರ್ಕ ಸಾಧಿಸುವುದನ್ನು ನಿರ್ಬಂಧಿಸಲು ಬಿಸಿಸಿಐ ನಿರ್ಧರಿಸಿದೆ. ಈ ಬಗ್ಗೆ ಮಾ.18ರಂದು ನಡೆಯಲಿರುವ ಅಪೆಕ್ಸ್‌ ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ಮುಂದಾಗಿದೆ. ಕೆಲ ರಾಜ್ಯ ಸಂಸ್ಥೆಗಳು ವಿದೇಶಿ ತಂಡಗಳ ಜೊತೆ ನೇರವಾಗಿ ಸಂಪರ್ಕ ಸಾಧಿಸಿ ಸರಣಿ, ಅಭ್ಯಾಸ ಶಿಬಿರ ಆಯೋಜಿಸುತ್ತಿವೆ. ಆದರೆ ಇದನ್ನು ಬಿಸಿಸಿಐ ನಿಷೇಧಿಸಲು ನಿರ್ಧರಿಸಿದ್ದು, ಇನ್ನು ಮುಂದೆ ಬಿಸಿಸಿಐ ಮೂಲಕವೇ ವಿದೇಶಿ ಕ್ರಿಕೆಟ್‌ ಮಂಡಳಿಗಳ ಜೊತೆ ವ್ಯವಹಾರ ನಡೆಸಬೇಕು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
 

Follow Us:
Download App:
  • android
  • ios