IPL 2024: ಸನ್‌ರೈಸರ್ಸ್ ಬೌಲಿಂಗ್ ಬೆಂಡೆತ್ತಿದ ರಿಂಕು-ರಸೆಲ್!
ಆಂಡ್ರೆ ರಸೆಲ್ ಹಾಗೂ ರಿಂಕು ಸಿಂಗ್ ಸ್ಪೋಟಕ ಬ್ಯಾಟಿಂಗ್ ಸಾಹಸದಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದೆ.
ಕೋಲ್ಕತ್ತಾ (ಮಾ.13): ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಬ್ಯಾಟಿಂಗ್‌ನ 14ನೇ ಓವರ್‌ವರೆಗೆ ತಂಡ 200ಕ್ಕೂ ಅಧಿಕ ಮೊತ್ತ ಬಾರಿಸುತ್ತದೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದರೆ, ರಿಂಕು ಸಿಂಗ್ ಹಾಗೂ ಆಂಡ್ರೆ ರಸೆಲ್ ತೋರಿದ ಬ್ಯಾಟಿಂಗ್ ರೌದ್ರಾವತಾರದಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡದ ಗೆಲುವಿಗೆ 209 ರನ್ ಗುರಿ ನೀಡಿದೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ಶನಿವಾರ ನಡೆದ ಐಪಿಎಲ್ 2024ನ 2ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಕೋಲ್ಕತ್ತ ನೈಟ್ ರೈಡರ್ಸ್ ತಂಡ 7 ವಿಕೆಟ್‌ಗೆ 208 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಆಂಡ್ರೆ ರಸೆಲ್ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 7 ಸಿಕ್ಸರ್‌ಗಳಲ್ಲಿ ಅಜೇಯ 64 ರನ್ ಸಿಡಿಸಿದರೆ, ಭಾರತದ ಸ್ಪೋಟಕ ಆಟಗಾರ ರಿಂಕು ಸಿಂಗ್ 15 ಎಸೆತಗಳಲ್ಲಿ 3 ಸಿಕ್ಸರ್‌ಗಳಿದ್ದ 23 ರನ್ ಸಿಡಿಸಿದರು. ಇವರಿಬ್ಬರು ಆಡಿದ ಇನ್ನಿಂಗ್ಸ್ ಕೆಕೆಆರ್ ತಂಡದ ದೊಡ್ಡ ಮೊತ್ತಕ್ಕೆ ಕಾರಣವಾಯಿತು.
ಕೆಕೆಆರ್ ತಂಡದ ಆರಂಭ ಉತ್ತಮವಾಗೇನೂ ಇರಲಿಲ್ಲ. ಆರಂಭಿಕ ಆಟಗಾರ ಫಿಲ್ ಸಾಲ್ಟ್ 4 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 3 ಬೌಂಡರಿಗಳದ್ದ ಅಮೂಲ್ಯ 54 ರನ್ ಸೇರಿಸಿದರೆ, 6ನೇ ಕ್ರಮಾಂಕದ ಆಟಗಾರ ರಮಣ್‌ದೀಪ್ ಸಿಂಗ್ 17 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 1 ಬೌಂಡರಿ ಇದ್ದ 35 ರನ್ ಸಿಡಿಸಿದ್ದು ಅಗ್ರ ಕ್ರಮಾಂಕದ ಬ್ಯಾಟಿಂಗ್‌ನ ಹೈಲೈಟ್ ಆಗಿತ್ತು. ಉಳಿದಂತೆ ಕೆಕೆಆರ್ ಬ್ಯಾಟಿಂಗ್‌ನ ಬಲಿಷ್ಠರಾದ ವೆಂಕಟೇಶ್ ಅಯ್ಯರ್ (7), ಸುನೀಲ್ ನಾರಾಯಣ್ (2), ನಾಯಕ ಶ್ರೇಯಸ್ ಅಯ್ಯರ್ (0) ಹಾಗೂ ನಿತೀಶ್ ರಾಣಾ (9) ಸಂಪೂರ್ಣ ವೈಫಲ್ಯ ಕಂಡಿದ್ದರು.
ಸನ್‌ರೈಸರ್ಸ್ ತಂಡದ ಪರವಾಗಿ ಬೌಲಿಂಗ್‌ನಲ್ಲಿ ಗಮನಸೆಳೆದ ಟಿ ನಟರಾಜನ್ 32 ರನ್ ನೀಡಿ ಮೂರು ವಿಕೆಟ್ ಉರುಳಿಸಿದರು. ಮಯಾಂಕ್ ಮರ್ಕಾಂಡೆ 2 ಹಾಗೂ ನಾಯಕ ಪ್ಯಾಟ್ ಕಮ್ಮಿನ್ಸ್ 1 ವಿಕೆಟ್ ಉರುಳಿಸಿದರು.
ಕೆಕೆಆರ್ ಬ್ಯಾಟಿಂಗ್ ವೇಳೆ ಒಂದು ಹಂತದಲ್ಲಿ ತಂಡ 32 ರನ್‌ಗೆ 3 ಹಾಗೂ 51 ರನ್‌ಗೆ 4 ವಿಕೆಟ್ ಕಳೆದುಕೊಂಡಿತ್ತು. ಆದರೆ, ಫಿಲ್ ಸಾಲ್ಟ್ ಮಾತ್ರವೇ ತಂಡದ ಇನ್ನಿಂಗ್ಸ್‌ನ್ನು ಆಧರಿಸಿದ್ದರು. ಇವರಿಗೆ ರಮಣ್‌ದೀಪ್ ಸಿಂಗ್ ಉತ್ತಮ ಸಾಥ್ ನೀಡಿದರು. ಅಂತಿಮವಾಗಿ ರಸೆಲ್ ಹಾಗೂ ರಿಂಕು ಸ್ಪೋಟಕ ಇನ್ನಿಂಗ್ಸ್ ಆಡಿದ್ದು, ಹೈದರಾಬಾದ್‌ನ ಬೌಲಿಂಗ್ ಹೋರಾಟವನ್ನು ವಿಫಲಗೊಳಿಸಿತು.
IPL ಟ್ರೋಫಿ ಗೆಲ್ಲಲು ಸನ್‌ರೈಸರ್ಸ್ ಮಾಸ್ಟರ್ ಪ್ಲಾನ್; ಚಾಂಪಿಯನ್ ನಾಯಕನಿಗೆ ಪಟ್ಟ ಕಟ್ಟಿದ ಆರೆಂಜ್ ಆರ್ಮಿ..!
ಸನ್‌ರೈಸರ್ಸ್ ತಂಡ್ ಬ್ಯಾಟಿಂಗ್ ವಿಭಾಗ ಕೂಡ ಸ್ಫೋಟಕ ಆಟಗಾರರಿಂದ ಕೂಡಿದ್ದು, ಈ ಮೊತ್ತ ಬೆನ್ನಟ್ಟುವುದು ಕೂಡ ಅಸಾಧ್ಯವಾಗಲಾರದು. ಈಡನ್ ಮೈದಾನದಲ್ಲಿ 201 ರನ್‌ಗಳನ್ನು ಅತ್ಯಂತ ಯಶಸ್ವಿಯಾಗಿ ಚೇಸ್ ಮಾಡಿರುವ ಇತಿಹಾಸವಿದೆ. ಇನ್ನು ಕೆಕೆಆರ್ ತಂಡದ ವೇಗದ ಬೌಲಿಂಗ್ ವೀಕಸ್‌ನೆಸ್ ಆಗಿದೆ. ಸ್ಟಾರ್ಕ್ ಹೊರತಾಗಿ ಸ್ಪಿನ್ನರ್‌ಗಳಾದ ಸುನೀಲ್ ನಾರಾಯಣ್ ಹಾಗೂ ವರುಣ್ ಚಕ್ರವರ್ತಿ ಮೇಲೆ ತಂಡದ ಬೌಲಿಂಗ್ ವಿಭಾಗ ನಿಂತಿದೆ.
SA20 League: ಸತತ ಎರಡನೇ ಬಾರಿಗೆ ಕಪ್ ಗೆದ್ದ ಸನ್‌ರೈಸರ್ಸ್..! ಖುಷಿಯಲ್ಲಿ ಸಂಭ್ರಮಿಸಿದ ಕಾವ್ಯ ಮಾರನ್