Asianet Suvarna News Asianet Suvarna News

ಸೋಲಿನಿಂದ ಕಂಗೆಟ್ಟ ಆರ್‌ಸಿಬಿ ಮತ್ತೊಂದು ಶಾಕ್, SRH ಪಂದ್ಯಕ್ಕೆ ಸ್ಟಾರ್ ಆಲ್ರೌಂಡರ್‌ ಡೌಟ್!

ಇವತ್ತು ಗೆಲ್ಲುತ್ತೆ, ನಾಳೆ ಗೆಲ್ಲುತ್ತೆ ಅಂತಾ 5 ಪಂದ್ಯ ಸೋತಿದ್ದಾಯ್ತು. ಅದರಲ್ಲೂ ಮುಂಬೈ ವಿರುದ್ಧದ ಸೋಲು ಅಭಿಮಾನಿಗಳ ಹೃದಯವನ್ನು ಚೂರು ಚೂರು ಮಾಡಿದೆ. ಇದರ ಬೆನ್ನಲ್ಲೇ ಮತ್ತೊಂದು ಶಾಕ್ ಎದುರಾಗಿದೆ. ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ಸ್ಟಾರ್ ಅಲ್ರೌಂಡರ್ ಅಲಭ್ಯರಾಗುವ ಸಾಧ್ಯತೆ ಇದೆ.
 

IPL 2024 RCB All rounder Glenn Maxwell may miss next match due to Injury says Report ckm
Author
First Published Apr 12, 2024, 6:55 PM IST

ಬೆಂಗಳೂರು(ಏ.12) ಆರ್‌ಸಿಬಿ ಪಾಲಿಗೆ ಐಪಿಎಲ್ 2024 ಟೂರ್ನಿ ಹೆಚ್ಚಿನ ವ್ಯತ್ಯಾಸಗಳಿಲ್ಲ. 1 ಗೆಲುವು ಕಂಡು 5 ಸೋಲು ಎದುರಿಸಿರುವ ಆರ್‌ಸಿಬಿ ಇದೀಗ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದೆ ಗೆಲ್ಲುತ್ತೇ ಅನ್ನೋ ವಿಶ್ವಾಸಕ್ಕೇನು ಕೊರತೆಯಿಲ್ಲ. ಮುಂಬೈ ಇಂಡಿಯನ್ಸ್ ವಿರುದ್ಧದ ಸೋಲಿನ ಬಳಿಕ ಪುಟಿದೇಳಲು ತಯಾರಿ ನಡೆಸುತ್ತಿರುವ ಆರ್‌ಸಿಬಿಗೆ ಆಘಾತ ಎದುರಾಗಿದೆ. ಆರ್‌ಸಿಬಿ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಏಪ್ರಿಲ್ 15ರಂದು ನಡೆಯಲಿರುವ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಡುವುದು ಬಹುತೇಕ ಅನುಮಾನವಾಗಿದೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಗಾಯಗೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ ಕೇವಲ 17 ಎಸೆತದಲ್ಲಿ 50 ರನ್ ಸಿಡಿಸಿದ್ದರು. ಸೂರ್ಯಕುಮಾರ್ ಬಲವಾದ ಹೊಡೆತದ ಪರಿಣಾಮ ಚೆಂಡು ಮ್ಯಾಕ್ಸ್‌ವೆಲ್ ಕೈಗೆ ತಾಗಿತ್ತು. ಬಲವಾದ ಹೊಡೆತದ ಪರಿಣಾಮ ಮ್ಯಾಕ್ಸ್‌ವೆಲ್ ಕೈಗೆ ಗಾಯವಾಗಿತ್ತು. ತಕ್ಷಣವೇ ಮೈದಾನದಿಂದ ಮ್ಯಾಕ್ಸ್‌ವೆಲ್ ಹೊರನಡೆದಿದ್ದರು. ಹೀಗಾಗಿ ಇನ್ನೆರಡು ದಿನದಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ. 

RCB ಎದುರು ಮೋಸ ಮಾಡಿ ಪಂದ್ಯ ಗೆದ್ರಾ ಮುಂಬೈ ಇಂಡಿಯನ್ಸ್‌..? ಇಲ್ಲಿವೆ ನೋಡಿ 4 ಸಾಕ್ಷಿ..!

ಗ್ಲೆನ್ ಮ್ಯಾಕ್ಸ್‌ವೆಲ್ ಟಿ20 ಸ್ಫೋಟಕ ಬ್ಯಾಟ್ಸ್‌ಮನ್. ಆದರೆ ಆರ್‌ಸಿಬಿ ಪರ ಈ ಬಾರಿಯ ಟೂರ್ನಿಯಲ್ಲಿ ಅಷ್ಟಕಷ್ಟೆ. ಮ್ಯಾಕ್ಸ್‌ವೆಲ್ ಅಬ್ಬರಿಸಿದರೆ ಗೆಲುವು ಖಚಿತ. ಆದರೆ ಇದುವರೆಗೂ ಮ್ಯಾಕ್ಸ್‌ವೆಲ್ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಹೀಗಾಗಿ ಮ್ಯಾಕ್ಸ್‌ವೆಲ್ ಅಲಭ್ಯರಾದರೆ ಹೆಚ್ಚಿನ ಆತಂಕವಿಲ್ಲ ಅನ್ನೋದು ಅಭಿಮಾನಿಗಳ ಮಾತು. ಮ್ಯಾನೇಜ್ಮೆಂಟ್ ಪ್ರಕಾರ ತಂಡದ ಬ್ಯಾಲೆನ್ಸ್ ತಪ್ಪಲಿದೆ. ಇದರ ಜೊತೆಗೆ ಮ್ಯಾಕ್ಸ್‌ವೆಲ್ ಕ್ರೀಸ್‌ಗಿಳಿದರೆ ಎದುರಾಳಿ ತಂಡ ಒಂದು ಕ್ಷಣ ವಿಚಲಿತರಾಗುವುದು ಖಚಿತ. ಹೀಗಾಗಿ ಮ್ಯಾಕ್ಸ್‌ವೆಲ್ ಅಲಭ್ಯರಾದರೆ ತಂಡದ ಮೇಲೆ ಮತ್ತಷ್ಟು ಹೊಡೆದ ಬೀಳಲಿದೆ ಅನ್ನೋ ಮಾತುಗಳಿವೆ.

2024ರ ಐಪಿಎಲ್ ಟೂರ್ನಿಯ 6 ಪಂದ್ಯಗಳಲ್ಲಿ 3 ಬಾರಿ ಡಕೌಟ್ ಆಗಿದ್ದಾರೆ. ಇನ್ನುಳಿದ 3 ಪಂದ್ಯದಲ್ಲಿ 32 ರನ್ ಸಿಡಿಸಿದ್ದಾರೆ. ಬೌಲಿಂಗ್‌ನಲ್ಲಿ 4 ವಿಕೆಟ್ ಕಬಳಿಸಿದ್ದಾರೆ. ಮ್ಯಾಕ್ಸ್‌ವೆಲ್ ಗಾಯಗೊಂಡಿರುವ ಕಾರಣ ತಂಡದಲ್ಲಿ ಬದಲಾವಣೆ ಸಾಧ್ಯತೆ ಹೆಚ್ಚಾಗಿದೆ. ಜೊತೆಗೆ ಮ್ಯಾಕ್ಸ್‌ವೆಲ್ ಫಾರ್ಮ್‌ನಲ್ಲಿ ಇಲ್ಲದ ಕಾರಣ ಬ್ರೇಕ್ ನೀಡಿ ಯುವಕರಿಗೆ ಅವಕಾಶ ನೀಡಲು ಆರ್‌ಸಿಬಿ ಟೀಂ ಮ್ಯಾನೇಜ್ಮೆಂಟ್ ಮುಂದಾಗಿದೆ.

IPL 2024 ಸೂರ್ಯ-ಕಿಶನ್ ಆರ್ಭಟಕ್ಕೆ ತತ್ತರಿಸಿದ ಆರ್‌ಸಿಬಿ, ಫಾಫ್ ಪಡೆಗೆ ಹೀನಾಯ ಸೋಲು..!

ಕಳಪೆ ಪ್ರದರ್ಶನ ನೀಡಿದ ಕ್ಯಾಮರೂನ್ ಗ್ರೀನ್ ಮುಂಬೈ ವಿರುದ್ದ ಪಂದ್ಯದಲ್ಲಿ ತಂಡದಿಂದ ಹೊರಗುಳಿದಿದ್ದರು. ಗ್ರೀನ್ ಸ್ಥಾನದಲ್ಲಿ ವಿಲ್ ಜ್ಯಾಕ್ ಕಣಕ್ಕಿಳಿದಿದ್ದರು. ಇದೀಗ ಮ್ಯಾಕ್ಸ್‌ವೆಲ್ ಅಲಭ್ಯರಾದರೆ ಮತ್ತೆ ಕ್ಯಾಮರೂನ್ ಗ್ರೀನ್ ಆರ್‌ಸಿಬಿ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. 
 

Follow Us:
Download App:
  • android
  • ios