RCB ಎದುರು ಮೋಸ ಮಾಡಿ ಪಂದ್ಯ ಗೆದ್ರಾ ಮುಂಬೈ ಇಂಡಿಯನ್ಸ್‌..? ಇಲ್ಲಿವೆ ನೋಡಿ 4 ಸಾಕ್ಷಿ..!

ಈ ಪಂದ್ಯವು ಕೆಟ್ಟ ಅಂಪೈರಿಂಗ್‌ಗೆ ಸಾಕ್ಷಿಯಾಯಿತು. ಮೈದಾನದಲ್ಲಿ ಅಂಪೈರ್ ಕೈಗೊಂಡ ಕೆಲವೊಂದು ತೀರ್ಮಾನಗಳು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ. ಮೊದಲನೆಯದ್ದು, ಆರ್‌ಸಿಬಿ ಬ್ಯಾಟಿಂಗ್ ಮಾಡುವ ವೇಳೆ 17ನೇ ಓವರ್‌ಗೆ ಸಂಬಂಧಿಸಿದ್ದು. ಬುಮ್ರಾ ಎಸೆದ ಚೆಂಡು ಫಾಫ್ ಡು ಪ್ಲೆಸಿಸ್ ಬ್ಯಾಟ್ ವಂಚಿಸಿ ವಿಕೆಟ್ ಕೀಪರ್ ಕೈ ಸೇರಿತು.

Mumbai Indians vs RCB match Poor umpiring by Nitin Menon during this match no ball wide decisions kvn

ಮುಂಬೈ: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯ 25ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು 7 ವಿಕೆಟ್ ಭರ್ಜರಿ ಜಯ ಸಾಧಿಸಿತು. ಇನ್ನು ಈ ಪಂದ್ಯದಲ್ಲಿ ಅಂಪೈರ್ ನೀಡಿದ ಕೆಲವು ತೀರ್ಪುಗಳನ್ನು ಗಮನಿಸಿದರೆ, ಮುಂಬೈ ಇಂಡಿಯನ್ಸ್ ತಂಡವು ಮೋಸ ಮಾಡಿ ಪಂದ್ಯ ಗೆದ್ದಿದೆ ಎಂದು ಆರ್‌ಸಿಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಹೌದು, ಈ ಪಂದ್ಯವು ಕೆಟ್ಟ ಅಂಪೈರಿಂಗ್‌ಗೆ ಸಾಕ್ಷಿಯಾಯಿತು. ಮೈದಾನದಲ್ಲಿ ಅಂಪೈರ್ ಕೈಗೊಂಡ ಕೆಲವೊಂದು ತೀರ್ಮಾನಗಳು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ. ಮೊದಲನೆಯದ್ದು, ಆರ್‌ಸಿಬಿ ಬ್ಯಾಟಿಂಗ್ ಮಾಡುವ ವೇಳೆ 17ನೇ ಓವರ್‌ಗೆ ಸಂಬಂಧಿಸಿದ್ದು. ಬುಮ್ರಾ ಎಸೆದ ಚೆಂಡು ಫಾಫ್ ಡು ಪ್ಲೆಸಿಸ್ ಬ್ಯಾಟ್ ವಂಚಿಸಿ ವಿಕೆಟ್ ಕೀಪರ್ ಕೈ ಸೇರಿತು. ಆಗ ಕಿಶನ್‌ಗೆ ಔಟ್‌ಗೆ ಬಲವಾದ ಮನವಿ ಮಾಡಿದರು. ಅಂಪೈರ್ ಔಟ್ ನೀಡಿದರು. ಆದರೆ ಅಷ್ಟರಲ್ಲಿ ಮುಂಬೈ ಇಂಡಿಯನ್ಸ್ ತಂಡವು ಎರಡು ಡಿಆರ್‌ಎಸ್ ಬಳಸಿಕೊಂಡು ಆಗಿತ್ತು. ಹೀಗಿದ್ದೂ, ಮೈದಾನದಲ್ಲಿ ಅಂಪೈರ್, ಥರ್ಡ್ ಅಂಪೈರ್‌ ಮೊರೆ ಹೋಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಯಿತು.

ಪಂದ್ಯದ ಕೊನೆಯ ಓವರ್‌ನಲ್ಲಿ ನೋಬಾಲ್ ಕುರಿತಾಗಿ ಅಂಪೈರ್ ನೀಡಿದ ತೀರ್ಪು ಚರ್ಚೆಗೆ ಗ್ರಾಸವಾಗಿದೆ. ಆಕಾಶ್ ಮಧ್ವಾಲ್ ಎಸೆದ 20ನೇ ಓವರ್‌ನ ಎರಡನೇ  ಎಸೆತ ಹೈಪುಲ್ ಟಾಸ್ ಚೆಂಡು ಮೇಲ್ನೋಟಕ್ಕೆ ನೋಬಾಲ್ ಎನ್ನುವಂತಿತ್ತು. ಆದರೆ ಅಂಪೈರ್ ಅದನ್ನು ನೋಬಾಲ್ ನೀಡಲಿಲ್ಲ. ದಿನೇಶ್ ಕಾರ್ತಿಕ್ ಪ್ರಕಾರ ಅದು ನೋ ಬಾಲ್ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.

'ನಾನು ನಿಮ್ಮ ಅತಿದೊಡ್ಡ ಚಿಯರ್ ಲೀಡರ್..': ಆಗಾಗ ಸುದ್ದಿಯಲ್ಲಿರುವ ಚಹಲ್ ಪತ್ನಿ ಹೀಗೆ ಹೇಳಿದ್ದು ಯಾರಿಗೆ?

ಮುಂಬೈ ಇಂಡಿಯನ್ಸ್ ತಂಡವು ಬೌಲಿಂಗ್ ಮಾಡುವ ವೇಳೆ ಆಕಾಶ್ ಮಧ್ವಾಲ್ ಬೌಂಡರಿ ಲೈನ್‌ನಲ್ಲಿ ಚೆಂಡು ತಡೆಯುವ ಪ್ರಯತ್ನ ಮಾಡಿದರು. ಆಗ ಚೆಂಡು ಮಧ್ವಾಲ್ ಸಂಪರ್ಕದಲ್ಲಿದ್ದಾಗಲೇ ಅವರ ದೇಹ ಬೌಂಡರಿ ಗೆರೆಗೆ ತಾಗಿತ್ತು. ಹೀಗಿದ್ದೂ ಅಂಪೈರ್ ಅದನ್ನು ಬೌಂಡರಿ ಎಂದು ಘೋಷಿಸದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಯಿತು.

ಇನ್ನು ಬುಮ್ರಾ ಎಸೆದ ಚೆಂಡು ಮಹಿಪಾಲ್ ಲೋಮ್ರಾರ್ ಅವರನ್ನು ಎಲ್‌ಬಿ ಬಲೆಗೆ ಕೆಡಹುವಂತೆ ಮಾಡಿತು. ಆನ್‌ಫೀಲ್ಡ್ ಅಂಪೈರ್ ಔಟ್ ನೀಡಿದರು. ಆದರೆ ಡಿಆರ್‌ಎಸ್ ತೆಗೆದುಕೊಂಡಾಗ ಚೆಂಡು ವಿಕೆಟ್‌ನಿಂದ ದೂರ ಹೋದಂತೆ ಕಾಣುತ್ತಿದ್ದರೂ ಔಟ್ ನೀಡಿದ್ದು ಕೂಡಾ ಸಾಕಷ್ಟು ಅನುಮಾನ ಹುಟ್ಟಿಸುವಂತಿತ್ತು. ಈ ಎಲ್ಲಾ ಕಾರಣಗಳಿಂದ ಮುಂಬೈ ಇಂಡಿಯನ್ಸ್ ತಂಡವು ಮೋಸ ಮಾಡಿ ಆರ್‌ಸಿಬಿ ಎದುರು ಪಂದ್ಯ ಜಯಿಸಿತು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಆರ್‌ಸಿಬಿ ಹಾಗೂ ಮುಂಬೈ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೇ, ಇದು ಹೊಸ ಅಧ್ಯಾಯ' ಎಂದುಕೊಂಡು ಈ ಐಪಿಎಲ್‌ಗೆ ಕಣಕ್ಕಿಳಿದ ಆರ್‌ಸಿಬಿಗೆ ಎದುರಾಳಿಗಳೆಲ್ಲರೂ ಮುಟ್ಟಿ ನೋಡಿಕೊಳ್ಳುವಂತೆ ಬಾರಿಸುತ್ತಿದ್ದಾರೆ. ಗುರುವಾರ ಆರ್‌ಸಿಬಿ ಗಾಯದ ಮೇಲೆ ಮುಂಬೈ ಇಂಡಿಯನ್ಸ್ ಬರೆ ಎಳೆಯಿತು. ಬ್ಯಾಟರ್ ಗಳ ಸ್ವರ್ಗ ವಾಂಖೇಡೆ ಕ್ರೀಡಾಂಗಣದಲ್ಲಿ ಮೊದಲು ಬುಮ್ರಾ, ಆರ್‌ಸಿಬಿಯನ್ನು 200 ರನ್‌ಗಳೊಳಗೆ ಕಟ್ಟಿ ಹಾಕಿದರೆ, ಮುಂಬೈ ತನ್ನ ಬ್ಯಾಟಿಂಗ್ ಸೂಪರ್ ಹೀರೋಗಳ ಅಬ್ಬರದ ಆಟದ ನೆರವಿನಿಂದ 197 ರನ್ ಗುರಿಯನ್ನು ಕೇವಲ 3 ವಿಕೆಟ್ ಕಳೆದುಕೊಂಡು, ಇನ್ನೂ 27 ಎಸೆತ ಬಾಕಿ ಇರುವಂತೆಯೇ ತಲುಪಿತು.

ಈ ಹೀನಾಯ ಸೋಲು ಆರ್‌ಸಿಬಿಯ ಪ್ಲೇ-ಆಫ್ ಹಾದಿಯನ್ನು ಇನ್ನಷ್ಟು ಕಠಿಣಗೊಳಿಸಿದೆ. ಆಡಿರುವ 6 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದು, 5 ಸೋಲು ಕಂಡಿರುವ ಆರ್‌ಸಿಬಿಯ ನೆಟ್ ರನ್‌ರೇಟ್ ಮತ್ತಷ್ಟು ಕುಸಿದಿದ್ದು, ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸಬೇಕಿದ್ದರೆ ಬಾಕಿ ಇರುವ 8 ಪಂದ್ಯಗಳಲ್ಲೂ ಗೆಲ್ಲಬೇಕಾದ ಅನಿವಾರ್ಯತೆಯನ್ನು ತಂದು ಕೊಂಡಿದೆ. ಹ್ಯಾಟ್ರಿಕ್ ಸೋಲಿನೊಂದಿಗೆ ಟೂರ್ನಿ ಆರಂಭಿಸಿದ ಮುಂಬೈ, ಸತತ 2 ಜಯ ಸಾಧಿಸಿ ಪಟ್ಟಿಯಲ್ಲಿ ಮೇಲೇರಿದೆ. 

'ನಾನು ನಿಮ್ಮ ಅತಿದೊಡ್ಡ ಚಿಯರ್ ಲೀಡರ್..': ಆಗಾಗ ಸುದ್ದಿಯಲ್ಲಿರುವ ಚಹಲ್ ಪತ್ನಿ ಹೀಗೆ ಹೇಳಿದ್ದು ಯಾರಿಗೆ?

ಕಾರ್ತಿಕ್ ಕಮಾಲ್, ಬೂಮ್ರಾ 'ಬೆಂಕಿ': ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ಆರ್‌ಸಿಬಿ, ಆರಂಭ ದಲ್ಲೇ ವಿರಾಟ್ ಕೊಹ್ಲಿ (3) ವಿಕೆಟ್ ಕಳೆದುಕೊಂಡಿತು. ಪವರ್-ಪ್ಲೇನಲ್ಲಿ 18 ಡಾಟ್ ಬಾಲ್‌ಗಳನ್ನು ಆಡಿದ ಆರ್‌ಸಿಬಿ 6 ಓವರ್‌ ಮುಕ್ತಾಯಕ್ಕೆ ಗಳಿಸಿದ್ದು ಕೇವಲ 44 ರನ್. 10 ಓವರ್ ಅಂತ್ಯಕ್ಕೆ 2 ವಿಕೆಟ್‌ಗೆ 89 ರನ್ ಗಳಿಸಿದ್ದ ಆರ್‌ಸಿಬಿಗೆ, ರಜತ್‌ ಪಾಟೀದಾರ್ ಹಾಗೂ ಫಾಫ್ ಡುಪ್ಲೆಸಿಯ ಅರ್ಧಶತಕ ಆಸರೆಯಾಯಿತು. ಕೊನೆಯಲ್ಲಿ ಕಾರ್ತಿಕ್ 23 ಎಸೆತದಲ್ಲಿ 53 ರನ್ ಸಿಡಿಸಿ, ತಂಡ 190ರ ಗಡಿ ದಾಟಲು ಕಾರಣ ರಾದರು. ಆರ್ಸಿಬಿ ಕೊನೆಯ 5 ಓವರಲ್ಲಿ 66 ರನ್ ಗಳಿಸಿತು. ಮನಮೋಹಕ ಬೌಲಿಂಗ್ ಪ್ರದರ್ಶನ ತೋರಿದ ಬುಮ್ರಾ 5 ವಿಕೆಟ್ ಕಬಳಿಸಿದರು. 

ಕಿಶನ್, ಸೂರ್ಯ ಅಬ್ಬರ: ಸಿರಾಜ್‌ ಎಸೆದ ಇನ್ನಿಂಗ್‌ ನ 2ನೇ ಓವರಲ್ಲಿ 23 ರನ್ ದೋಚಿದ ಮುಂಬೈ, ಹಿಂದಿರುಗಿ ನೋಡಲಿಲ್ಲ. ಮೊದಲು ಇಶಾನ್ ಕಿಶನ್ 34 ಎಸೆತದಲ್ಲಿ 69 ರನ್ ಚಚ್ಚಿದರೆ, ಬಳಿಕ ಕೇವಲ 17 ಎಸೆತದಲ್ಲಿ ಅರ್ಧಶತಕ ಸಿಡಿಸಿದ ಸೂರ್ಯಕುಮಾರ್ 19 ಎಸೆತದಲ್ಲಿ 52 ರನ್ ಬಾರಿಸಿ ದರು. ರೋಹಿತ್ 38, ಹಾರ್ದಿಕ್ 6 ಎಸೆತದಲ್ಲಿ 21, ತಿಲಕ್ 16 ರನ್ ಗಳಿಸಿ ತಂಡವನ್ನು ನಿರಾಯಾಸವಾಗಿ ಗೆಲ್ಲಿಸಿದರು.
 

Latest Videos
Follow Us:
Download App:
  • android
  • ios