ಬೆಂಗಳೂರಿನಲ್ಲಿ ಸುರಿದ ಮಳೆಯಿಂದ ಪಂದ್ಯ 20 ಓವರ್ ಬದಲು 14 ಓವರ್‌ಗೆ ಸೀಮಿತಗೊಳಿಸಲಾಗಿದೆ. ಆದರೆ ಆತಂಕ ಎಂದರೆ ತವರಿನಲ್ಲಿ ಮತ್ತೆ ಆರ್‌ಸಿಬಿ ಟಾಸ್ ಸೋತಿದೆ. 

ಬೆಂಗಳೂರು(ಏ.18) ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಆರಂಭಗೊಡಿದೆ. ಆರ್‌ಸಿಬಿ ತಂಡದ ತವರಿನ ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ಇದೀಗ 20 ಓವರ್ ಬದಲ 14 ಓವರ್‌ಗೆ ಸೀಮಿತಗೊಳಿಸಲಾಗಿದೆ. ಈ ಮಹತ್ವದ ಪಂದ್ಯದಲ್ಲಿ ಆರ್‌ಸಿಬಿ ಟಾಸ್ ಸೋತಿದೆ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಕಳೆದ 2 ತವರಿನ ಪಂದ್ಯದಲ್ಲಿ ಟಾಸ್ ಸೋತ ಆರ್‌ಸಿಬಿ ಪಂದ್ಯವನ್ನೂ ಸೋತಿತ್ತು. ಇದರ ಜೊತೆಗೆ ಮಳ ಕಾಟ ಕೂಡ ಆರ್‌ಸಿಬಿ ತೀವ್ರ ಸವಾಲಾಗಲಿದೆ. ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಆರ್‌ಸಿಬಿ ಪ್ಲೇಯಿಂಗ್ 11
ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕ್ರುನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಸೂಯಾಶ್ ಶರ್ಮಾ, ಯಶ್ ದಯಾಳ್

ಪಂಜಾಬ್ ಪ್ಲೇಯಿಂಗ್ 11
ಪ್ರಿಯಾಂಶ್ ಆರ್ಯ, ನೆಹಾಲ್ ವಾಧೆರಾ, ಶ್ರೇಯಸ್ ಅಯ್ಯರ್(ನಾಯಕ), ಶಶಾಂಕ್ ಸಿಂಗ್, ಜೋಶ್ ಇಂಗ್ಲಿಸ್, ಮಾರ್ಕಸ್ ಸ್ಟೊಯ್ನಿಸ್, ಮಾರ್ಕೋ ಜಾನ್ಸೆನ್, ಹರ್ಪ್ರೀತ್ ಬ್ರಾರ್, ಕ್ಸೆವಿಯರ್ ಬಾರ್ಟ್ಲೆಟ್, ಅರ್ಶದೀಪ್ ಸಿಂಗ್, ಯಜುವೇಂದ್ರ ಚಹಾಲ್

ಸತತ ಸೋಲುಗಳಿಂದ ಕಂಗೆಟ್ಟ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಡೆಡ್ಲಿ ಬ್ಯಾಟರ್ ಎಂಟ್ರಿ! ಖಡಕ್ ಸಂದೇಶ ರವಾನೆ

ಪಂದ್ಯದ ಓವರ್ ಹಾಗೂ ಪವರ್ ಪ್ಲೇ
ಮಳೆಯಿಂದ ಪಂದ್ಯವನ್ನು 14 ಓವರ್‌ಗೆ ಸೀಮಿತಗೊಳಿಸಲಾಗಿದೆ. ಬ್ಯಾಟಿಂಗ್ ಪವರ್ ಪ್ಲೇ 4 ಓವರ್. ನಾಲ್ವರು ಬೌಲರ್ಸ್ ಗರಿಷ್ಠ 3 ಓವರ್ ಬೌಲಿಂಗ್ ಮಾಡಬಹುದು. ಇನ್ನು ಒಬ್ಬ ಓವರ್ ಉಳಿದ 2 ಓವರ್ ಬೌಲಿಂಗ್ ಮಾಡಬಹುದು.

ಆರ್‌ಸಿಬಿ ತವರಿನಲ್ಲ ಆಡಿದ 2 ಪಂದ್ಯ ಸೋತಿದೆ. ಇದೀಗ ತವರಿನ ಪಂದ್ಯದಲ್ಲಿ ಗೆಲುವಿನ ಹಳಿಗೆ ಬರುವ ವಿಶ್ವಾಸದಲ್ಲಿದೆ. ಬೆಂಗಳೂರಿನಲ್ಲಿ ಆರ್‌ಸಿಬಿ ಟಾಸ್ ಕೈಕೊಡುತ್ತಿರುವುದು ಅಭಿಮಾನಿಗಳಿಗೆ ಚಿಂತೆಯಾಗಿದೆ. ತವರಿನಿಂಚ ಆಚೆಗೆ ಆಡಿದ 4 ಪಂದ್ಯದಲ್ಲಿ ಆರ್‌ಸಿಬಿ ಗೆಲುವು ದಾಖಲಿಸಿದೆ . ಈಮೂಲಕ ಅಂಕಪಟ್ಟಿಯಲ್ಲಿ ಆರ್‌ಸಿಬಿ 3ನೇ ಸ್ಥಾನದಲ್ಲಿದೆ. ಇನ್ನು ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.