ಮೇ 26ಕ್ಕೆ ಚೆನ್ನೈನಲ್ಲಿ ಐಪಿಎಲ್ ಫೈನಲ್ ಪಂದ್ಯ..?

ಟೂರ್ನಿಯ ಕ್ವಾಲಿಫೈಯರ್ 1 ಹಾಗೂ ಎಲಿಮಿನೇಟರ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಲಿದ್ದು, ಎರಡನೇ ಕ್ವಾಲಿಫೈಯರ್ ಪಂದ್ಯ ಹಾಗೂ ಫೈನಲ್ ಪಂದ್ಯಕ್ಕೆ ಚೆನ್ನೈನ ಚೆಪಾಕ್ ಮೈದಾನ ಆತಿಥ್ಯ ವಹಿಸಲಿದೆ ಎಂದು ಹೇಳಲಾಗುತ್ತಿದೆ. 

IPL 2024 Finals match likely to be held in Chennai MA Chidambaram Stadium on May 26 kvn

ನವದೆಹಲಿ(ಮಾ.24): 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯವು ಚೆನ್ನೈನ ಚೆಪಾಕ್ ಮೈದಾನದಲ್ಲಿ ಮೇ 26ರಂದು ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಟೂರ್ನಿಯ ಕ್ವಾಲಿಫೈಯರ್ 1 ಹಾಗೂ ಎಲಿಮಿನೇಟರ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಲಿದ್ದು, ಎರಡನೇ ಕ್ವಾಲಿಫೈಯರ್ ಪಂದ್ಯ ಹಾಗೂ ಫೈನಲ್ ಪಂದ್ಯಕ್ಕೆ ಚೆನ್ನೈನ ಚೆಪಾಕ್ ಮೈದಾನ ಆತಿಥ್ಯ ವಹಿಸಲಿದೆ ಎಂದು ಹೇಳಲಾಗುತ್ತಿದೆ. 

IPL 2024: ವ್ಯರ್ಥವಾದ ಕ್ಲಾಸೆನ್‌ ಸ್ಪೋಟಕ ಇನ್ನಿಂಗ್ಸ್‌, ಕೆಕೆಆರ್‌ಗೆ ಗೆಲುವು ನೀಡಿದ ರಾಣಾ!

ಸದ್ಯ ಬಿಸಿಸಿಐ 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಿದ್ದು, ಇತರ ಪಂದ್ಯಗಳ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆಯಿದೆ.

ಐಪಿಎಲ್‌: ರಿಂಕು ಸೇರಿ ನಾಲ್ವರ ವೇತನ ಹೆಚ್ಚಳ

ನವದೆಹಲಿ: ಐಪಿಎಲ್‌ನಲ್ಲಿ ಆಡುತ್ತಿರುವ ಭಾರತದ ಐವರು ಯುವ ಆಟಗಾರರ ವೇತನ ಹೆಚ್ಚಳವಾಗಲಿದೆ. ಬಿಸಿಸಿಐ ನಿಯಮದ ಪ್ರಕಾರ ಐಪಿಎಲ್‌ ಹರಾಜಿನಲ್ಲಿ ಆಯ್ಕೆಯಾದಾಗ ಇನ್ನೂ ಭಾರತ ತಂಡದ ಪರ ಆಡದೆ, ಆ ಬಳಿಕ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಆಟಗಾರರಿಗೆ ವೇತನ ಹೆಚ್ಚಳಗೊಳ್ಳಲಿದೆ.

ಈ ನಿಯಮದ ಪ್ರಕಾರ ರಿಂಕು ಸಿಂಗ್‌, ಜಿತೇಶ್‌ ಶರ್ಮಾ, ಸಾಯಿ ಸುದರ್ಶನ್‌ ಹಾಗೂ ರಜತ್‌ ಪಾಟೀದಾರ್‌ರ ವೇತನವನ್ನು ಬಿಸಿಸಿಐ ಪರಿಷ್ಕರಿಸಲಿದೆ. 55 ಲಕ್ಷ ರು. ವೇತನ ಪಡೆಯುತ್ತಿರುವ ರಿಂಕುಗೆ 1 ಕೋಟಿ ರು. ಸಿಗಲಿದ್ದು, ತಲಾ 20 ಲಕ್ಷ ರು. ಗಳಿಸುತ್ತಿರುವ ಉಳಿದ ಮೂವರ ವೇತನ 50 ಲಕ್ಷ ರು.ಗೆ ಹೆಚ್ಚಳಗೊಳ್ಳಲಿದೆ.

Latest Videos
Follow Us:
Download App:
  • android
  • ios