ವಿರಾಟ್ ಕೊಹ್ಲಿ ಬಾರಿಸಿದ ಸೂಪರ್ ಸೆಂಚುರಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದೆ. ಅದರೊಂದಿಗೆ ಆರ್‌ಸಿಬಿಯ ಪ್ಲೇ ಆಫ್ ಆಸೆ ಇನ್ನಷ್ಟು ಬಲ ಪಡೆದುಕೊಂಡಿದೆ.
ಹೈದರಾಬಾದ್ (ಮೇ.18): ಕಿಂಗ್ ಕೊಹ್ಲಿ, ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಬಾರಿಸಿದ ಅತ್ಯಾಕರ್ಷಕ ಶತಕ ಹಾಗೂ ಅವರಿಗೆ ಸಾಥ್ ನೀಡಿದ ಫಾಫ್ ಡು ಪ್ಲೆಸಿಸ್ ಅವರ ಭರ್ಜರಿ ಇನ್ನಿಂಗ್ಸ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2023ಯಲ್ಲಿ ತನ್ನ 7ನೇ ಗೆಲುವು ದಾಖಲಿಸಿದೆ. ಗುರುವಾರ ರಾಜೀವ್ ಗಾಂದಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ತಂಡ 5 ವಿಕೆಟ್‌ಗೆ 186 ರನ್ ಬಾರಿಸಿತ್ತು. ಪ್ರತಿಯಾಗಿ ವಿರಾಟ್ ಕೊಹ್ಲಿ (100 ರನ್, 63 ಎಸೆತ, 12 ಬೌಂಡರಿ, 4 ಸಿಕ್ಸರ್) ಐಪಿಎಲ್‌ನಲ್ಲಿ ಬಾರಿಸಿದ 6ನೇ ಹಾಗೂ 2018ರ ಬಳಿಕ ಬಾರಿಸಿದ ಮೊದಲ ಶತಕದ ನೆರವಿನಿಂದ ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ ತಂಡ 2 ವಿಕಟ್‌ಗೆ 187 ರನ್ ಬಾರಿಸಿ ಗೆಲುವು ಕಂಡಿತು. ಈ ಗೆಲುವಿನೊಂದಿಗೆ ಆರ್‌ಸಿಬಿಯ ರನ್‌ರೇಟ್ ಕೂಡ ಭರ್ಜರಿಯಾಗಿ ಏರಿಕೆ ಕಂಡಿದೆ. ಹಾಗಿದ್ದರೂ, ಆರ್‌ಸಿಬಿ ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಮಾತ್ರವೇ ಪ್ಲೇ ಆಫ್ ಅವಕಾಶ ಇರಲಿದೆ. ಆದರೆ, ಆರ್‌ಸಿಬಿ ಭರ್ಜರಿ ಗೆಲುವು ಕಂಡಿರುವುದು ಪ್ಲೇ ಆಫ್ ರೇಸ್‌ನಲ್ಲಿರುವ ಇತರ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್. ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ ತಂಡಗಳಿಗೆ ಎದೆಯುರಿ ಆರಂಭವಾಗಿದೆ.
ಇನ್ನು ಈ ಗೆಲುವಿನೊಂದಿಗೆ ಆರ್‌ಸಿಬಿ ತಂಡ ಅಂಕಪಟ್ಟಿಯಲ್ಲಿ 13 ಪಂದ್ಯದಲ್ಲಿ7 ಗೆಲುವು ಹಾಗೂ 6 ಸೋಲಿನೊಂದಿಗೆ ನಾಲ್ಕನೇ ಸ್ಥಾನಕ್ಕೇರಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ಅಂತಿಮ ಪಂದ್ಯದಲ್ಲಿ ಗೆಲುವು ಕಂಡಲ್ಲಿ ಸರಾಗವಾಗಿ ಮುಂದಿನ ಹಂತಕ್ಕೇರುವ ಅವಕಾಶ ತಂಡಕ್ಕೆ ಇದೆ. ಲೀಗ್‌ನಲ್ಲಿ ತಂಡ ನಾಲ್ಕನೇ ಅತ್ಯುತ್ತಮ ರನ್ ರೇಟ್ ಹೊಂದಿದ್ದು ಕೂಡ ಲಾಭವಾಗುವ ಸಾಧ್ಯತೆ ಇದೆ. ಹಾಗೇನಾದರೂ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸನ್‌ರೈಸರ್ಸ್ ವಿರುರ್ದಧ ಸೋಲು ಕಂಡರೆ ತಂಡ ಸಲೀಸಾಗಿ ಪ್ಲೇ ಆಫ್‌ಗೆ ಏರಲಿದೆ.
ಚೇಸಿಂಗ್ ಹಾದಿಯಲ್ಲಿ ವಿರಾಟ್ ಕೊಹ್ಲಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ನಡೆಸಿದರು. ಆರಂಭದಲ್ಲಿ ಫಾಫ್ ಡು ಪ್ಲೆಸಿಸ್ ಬಿರುಸಾಗಿ ರನ್ ಬಾರಿಸಿದರು. ಪಂದ್ಯದ ಒಂದು ಹಂತದಲ್ಲಿ ಡು ಪ್ಲೆಸಿಸ್ 63 ರನ್ ಬಾರಿಸಿದ್ದರೆ, ಕೊಹ್ಲಿ 65 ರನ್ ಬಾರಿಸಿದ್ದರು. ಆದರೆ, ಪ್ಲೆಸಿಸ್ ತಮ್ಮ ಮೊತ್ತಕ್ಕೆ ಮೂರು ರನ್ ಸೇರಿಸುವ ವೇಳೆಗೆ ವಿರಾಟ್ ಕೊಹ್ಲಿ 26 ರನ್ ಸಿಡಿಸುವ ಮೂಲಕ ಶತಕಸ ಸನಿಹ ಬಂದು ನಿಂತಿದ್ದರು. ಈ ಹಂತದಲ್ಲಿ ಪ್ಲೆಸಿಸ್ ಕೂಡ ಕೊಹ್ಲಿಯ ಶತಕಕ್ಕೆ ಅವಕಾಶ ನೀಡಿದರು. ಗೆಲುವಿಗೆ ಬೇಕಿದ್ದ 25 ರನ್‌ಗಳಲ್ಲಿ 9 ರನ್‌ಗಳನ್ನು ಕೊಹ್ಲಿ ಬಾರಿಸಿದ್ದರೆ ಶತಕ ಪೂರೈಸುತ್ತಿತ್ತು. ಈ ವೇಳೆ ಅದ್ಭುತವಾಗಿ ಬ್ಯಾಟಿಂಗ್ ನಡೆಸಿದ ಕೊಹ್ಲಿ 61 ಎಸೆತಗಳಲ್ಲಿ ಶತಕ ಪೂರೈಸಿದರು.
ಇನ್ನು ಮಧ್ಯಮ ಓವರ್‌ಗಳಲ್ಲಿ ಆರ್‌ಸಿಬಿ ರನ್ ಬಾರಿಸಲು ಕೊಂಚ ತಡಕಾಡಿತ್ತು. 10, 11 ಹಾಗೂ12ನೇ ಓವರ್‌ಗಳಿಂದ ಕೇವಲ 18 ರನ್‌ಗಳು ತಂಡಕ್ಕೆ ಬಂದಿದ್ದವು. ಈ ಹಂತದಲ್ಲಿ ಸನ್‌ರೈಸರ್ಸ್ ತಂಡ ಗೆಲುವಿನ ನಿರೀಕ್ಷರ ಇಟ್ಟಿತಾದರೂ, ಪ್ಲೆಸಿಸ್ ಹಾಗೂ ಕೊಹ್ಲ ಕ್ರಮವಾಗಿ 13 ಹಾಗೂ 14ನೇ ಓವರ್‌ನಲ್ಲಿ 9 ಹಾಗೂ 15 ರನ್ ಸಿಡಿಸುವ ಮೂಲಕ ಸನ್‌ರೈಸರ್ಸ್ ತಂಡದ ಆಸೆಗೆ ತಣ್ಣೀರೆರಚಿದರು.
IPL 2023: ಕೇವಲ 49 ಎಸೆತಗಳಲ್ಲಿ ಸೆಂಚುರಿ ಚಚ್ಚಿದ ಹೆನ್ರಿಚ್ ಕ್ಲಾಸೆನ್, ಕ್ಲಾಸಿಕ್ ಇನ್ನಿಂಗ್ಸ್!
ಕೊಹ್ಲಿ ಶತಕ ಬಾರಿಸಿದ ಬೆನ್ನಲ್ಲಿಯೇ ವಿಕೆಟ್ ಒಪ್ಪಿಸಿದರು.ಆದರೆ, ಈ ವೇಳೆ ತಂಡದ ಗೆಲುವಿಗೆ ಹೆಚ್ಚಿನ ರನ್ ಅಗತ್ಯವಿರಲಿಲ್ಲ. ಮರು ಓವರ್‌ನಲ್ಲಿ ಪ್ಲೆಸಿಸ್ (71ರನ್, 47 ಎಸೆತ, 7 ಬೌಂಡರಿ, 2 ಸಿಕ್ಸರ್) ಕೂಡ ಔಟಾದರೂ, ಮ್ಯಾಕ್ಸ್‌ವೆಲ್ ಹಾಗೂ ಬ್ರೇಸ್‌ವೆಲ್ ತಂಡವನ್ನು ವಿಜಯದ ಗಡಿ ಮುಟ್ಟಿಸಿದರು.
IPL 2023: ಹೋರಾಡಿ ಸೋತ ಪಂಜಾಬ್ ಕಿಂಗ್ಸ್, 94 ರನ್ ಚಚ್ಚಿದ ಲಿವಿಂಗ್‌ಸ್ಟೋನ್!
