ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ಸ್ಫೋಟಕ ಇನ್ನಿಂಗ್ಸ್ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ನೆರವಾಗಿದ್ದಾರೆ. ಆರ್‌ಸಿಬಿ ವಿರುದ್ಧದ ಪಂದ್ಯದ ಬಳಿಕ ಇದೀಗ ಗುಜರಾತ್ ವಿರುದ್ಧ ಅಬ್ಬರಿಸಿದ ಸೂರ್ಯಕುಮಾರ್ ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ ಹಲವು ದಾಖಲೆ ಬರೆದಿದ್ದಾರೆ.
ಮುಂಬೈ(ಮೇ.12): ಆರ್‌ಸಿಬಿ ವಿರುದ್ದ ಅಬ್ಬರಿಸಿ ಮುಂಬೈಗೆ ಗೆಲುವು ತಂದುಕೊಟ್ಟಿದ್ದ ಸೂರ್ಯಕುಮಾರ್ ಇದೀಗ ಗುಜರಾತ್ ಟೈಟಾನ್ಸ್ ವಿರುದ್ಧವೂ ಸೂರ್ಯಕುಮಾರ್ ದಾಖಲೆ ಬರೆದಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಮೂಲಕ ಸೂರ್ಯಕುಮಾರ್ ಯಾದವ್ ಕೇವಲ 49 ಎಸೆತದಲ್ಲಿ ಸೆಂಚುರಿ ಪೂರೈಸಿದ್ದಾರೆ. ಇದು ಐಪಿಎಲ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ಸಿಡಿಸಿದ ಮೊದಲ ಸೆಂಚುರಿಯಾಗಿದೆ. ಸೂರ್ಯಕುಮಾರ್ ಅಬ್ಬರದಿಂದ ಮುಂಬೈ ಇಂಡಿಯನ್ಸ್ 5 ವಿಕೆಟ್ ಕಳೆದುಕೊಂಡು 218 ರನ್ ಸಿಡಿಸಿದೆ.
ಸೂರ್ಯಕುಮಾರ್ ಯಾದವ್ 49 ಎಸೆತದಲ್ಲಿ 11 ಬೌಂಡರಿ ಹಾಗೂ 6 ಸಿಕ್ಸರ್ ಮೂಲಕ ಅಜೇಯ 103 ರನ್ ಸಿಡಿಸಿದ್ದಾರೆ. ಸೂರ್ಯಕುಮಾರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಗುಜರಾತ್ ಟೈಟಾನ್ಸ್ ಬೆಚ್ಚಿ ಬಿದ್ದಿದೆ. ಇದರ ಜೊತೆಗೆ ಸೂರ್ಯಕುಮಾರ್ ಯಾದವ್ ಹಲವು ದಾಖಲೆ ಬರೆದಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಮುಂಬೈ ಪರ ಸಿಡಿಸಿದ 3ನೇ ಗರಿಷ್ಠ ವೈಯುಕ್ತಿಕ ಸ್ಕೋರ್ ಅನ್ನೋ ದಾಖಲೆ ಬರೆದಿದ್ದಾರೆ.
IPL 2023 ಸೋಲಿನಿಂದ ಕಂಗೆಟ್ಟ ಆರ್‌ಸಿಬಿಗೆ ಇನ್ನೂ ಇದೇ ಪ್ಲೇ ಆಫ್ ಚಾನ್ಸ್!
114* ರನ್, ಸನತ್ ಜಯಸೂರ್ಯ vs ಸಿಎಸ್‌ಕೆ, 2008
109* ರನ್ , ರೋಹಿತ್ ಶರ್ಮಾ vs ಕೆಕೆಆರ್, 2012
103* ರನ್, ಸೂರ್ಯಕುಮಾರ್ ಯಾದವ್ vs ಗುಜರಾತ್, 2023
100* ರನ್, ಸಚಿನ್ ತೆಂಡುಲ್ಕರ್ vsಕೊಚ್ಚಿ ಟಸ್ಕರ್ಸ್, 2011
100* ರನ್, ಲಿಂಡಲ್ ಸಿಮೋನ್ಸ್ vs ಪಂಜಾಬ್, 2014
ಸೂರ್ಯಕುಮಾರ್ ಸಿಡಿಲಬ್ಬರದ ಬ್ಯಾಟಿಂಗ್‌ನಿಂದ ಮುಂಬೈ ಇಂಡಿಯನ್ಸ್ ಬೃಹತ್ ಮೊತ್ತ ಸಿಡಿಸಿದೆ. ಈ ಮೂಲಕ ಗುಜರಾತ್ ಟೈಟಾನ್ಸ್ ವಿರುದ್ದ ಗರಿಷ್ಠ ಮೊತ್ತ ಸಿಡಿಸಿದ ಹೆಗ್ಗಳಿಕೆಗೆ ಮುಂಬೈ ಇಂಡಿಯನ್ಸ್ ಪಾತ್ರವಾಗಿದೆ.
218/5 (ಮುಂಬೈ vs ಗುಜರಾತ್) 2023
207/7 (ಕೆಕೆಆರ್ vs ಗುಜರಾತ್) 2023
195/6 (ಹೈದರಾಬಾದ್ vs ಗುಜರಾತ್) 2022
189/9 (ಪಂಜಾಬ್ vs ಗುಜರಾತ್) 2022
ಜೈಸ್ವಾಲ್ ಶತಕ ಬಾರಿಸಲು ತಮ್ಮ ಫಿಫ್ಟಿ ಅವಕಾಶ ತ್ಯಾಗ ಮಾಡಿದ ಸ್ಯಾಮ್ಸನ್..! ಸಂಜು ನಡೆಗೆ ಫ್ಯಾನ್ಸ್ ಫಿದಾ
ಗುಜರಾತ್ ಟೈಟಾನ್ಸ್ ವಿರುದ್ದ ಸಿಡಿಸಿದ ವೈಯುಕ್ತಿಕ ಗರಿಷ್ಠ ಮೊತ್ತ ಅನ್ನೋ ಹೆಗ್ಗಳಿಕೆಗೆ ಸೂರ್ಯಕುಮಾರ್ ಪಾತ್ರರಾಗಿದ್ದಾರೆ.
103* ರನ್, ಸೂರ್ಯಕುಮಾರ್ ಯಾದವ್, 2023
92 ರನ್, ರುತುರಾಜ್ ಗಾಯಕ್ವಾಡ್, 2023
89 ರನ್, ಜೋಸ್ ಬಟ್ಲರ್, 2022
83 ರನ್ , ವೆಂಕಟೇಶ್ ಅಯ್ಯರ್, 2023
ಮುಂಬೈ ಪರ ಇಶಾನ್ ಕಿಶನ್ 31 ರನ್, ನಾಯಕ ರೋಹಿತ್ ಶರ್ಮಾ 29 ರನ್, ನೆಹಾಲ್ ವಧೆರಾ 15, ವಿಷ್ಣು ವಿನೋದ್ 30 ರನ್ ಕಾಣಿಕೆ ನೀಡಿದರು. ಇತ್ತ ಸೂರ್ಯಕುಮಾರ್ ಅಜೇಯ 103 ರನ್ ಸಿಡಿಸುವ ಮೂಲಕ ಮುಂಬೈ ಇಂಡಿಯನ್ಸ್ 5 ವಿಕೆಟ್ ನಷ್ಟಕ್ಕೆ 218 ರನ್ ಸಿಡಿಸಿತು.
