ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮೊದಲ ಶತಕ ದಾಖಲಾಗಿದೆ. ಇಂಗ್ಲೆಂಡ್ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಸ್ಫೋಟಕ ಬ್ಯಾಟಿಂಗ್ ಮೂಲಕ ಈ ದಾಖಲೆ ಬರೆದಿದ್ದಾರೆ.ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡ 228 ರನ್ ಸಿಡಿಸಿದೆ.

ಕೋಲ್ಕತಾ(ಏ.14): ಐಪಿಎಲ್ 2023 ಟೂರ್ನಿಯಲ್ಲಿ ಮೊದಲ ಸೆಂಚುರಿ ದಾಖಲಾಗಿದೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಶತಕ ಸಿಡಿಸಿದ್ದಾರೆ. ಬ್ರೂಕ್ 55 ಎಸೆತದಲ್ಲಿ ಸೆಂಚುರಿ ಪೂರೈಸಿದ್ದಾರೆ. ಹ್ಯಾರಿ ಬ್ರೂಕ್ ಮತ್ತೊಂದು ವಿಶೇಷತೆ ಅಂದರೆ, ಟೆಸ್ಟ್, ಏಕದಿನ, ಟಿ20 ಹಾಗೂ ಇದೀಗ ಐಪಿಎಲ್ ಟೂರ್ನಿಯಲ್ಲಿ ಸೆಂಚುರಿ ಸಿಡಿಸಿದ ಸಾಧನೆ ಮಾಡಿದ್ದಾರೆ. ಎಲ್ಲಾ ಮಾದರಿ ಹಾಗೂ ಲೀಗ್ ಟೂರ್ನಿಯಲ್ಲಿ ಶತಕ ಸಿಡಿಸಿದ ಹೆಗ್ಗಳಿಕೆಗೆ ಹ್ಯಾರಿ ಬ್ರೂಕ್ ಪಾತ್ರರಾಗಿದ್ದಾರೆ. ಹ್ಯಾರಿ ಬ್ರೂಕ್ ಭರ್ಜರಿ ಶತಕದಿಂದ ಸನ್‌ರೈಸರ್ಸ್ ಹೈದರಾಬಾದ್ 4 ವಿಕೆಟ್ ನಷ್ಟಕ್ಕೆ 228 ರನ್ ಸಿಡಿಸಿದೆ.

ಸೋಲಿನಿಂದ ಟೂರ್ನಿ ಆರಂಭಿಸಿದ ಸನ್‌ರೈಸರ್ಸ್ ಹೈದರಾಬಾದ್ ಇದೀಗ ಟೂರ್ನಿ ಮೇಲೆ ಹಿಡಿತ ಸಾಧಿಸುತ್ತಿದೆ. ಕಳೆದ ಪಂದ್ಯದಲ್ಲಿ ಗೆದ್ದು ಬೀಗಿದ ಹೈದರಾಬಾದ್ ಇದೀಗ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 228 ರನ್ ಸಿಡಿಸಿದೆ. ಹ್ಯಾರಿ ಬ್ರೂಕ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನಕ್ಕೆ ಕೆಕೆಆರ್ ಬೆಚ್ಚಿ ಬಿದ್ದಿದೆ. ಬ್ರೂಕ್ 55 ಎಸೆತದಲ್ಲಿ 3 ಸಿಕ್ಸರ್ ಹಾಗೂ 12 ಬೌಂಡರಿ ಮೂಲಕ ಅಜೇಯ 100 ರನ್ ಸಿಡಿಸಿದರು. 

'ನೀವು ಆಕೆಯ ಅರೋಗ್ಯಕ್ಕೆ ಇನ್ನಷ್ಟು ಶಕ್ತಿ ತುಂಬಿದ್ದೀರಿ..' ಧೋನಿ ಕುರಿತಾಗಿ ಖುಷ್ಬೂ ಮಾತು!

ಟಾಸ್ ಸೋತು ಬ್ಯಾಟಿಂಗ್ ಇಳಿದ ಹೈದರಾಬಾದ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆಯಿತು. ಒಂದೆಡೆ ಹ್ಯಾರಿ ಬ್ರೂಕ್ ಅಬ್ಬರ ಶುರುವಾಗಿತ್ತು.ಆದರೆ ಮಯಾಂಕ್ ಅಗರ್ವಾಲ್ ಹಾಗೂ ರಾಹುಲ್ ತ್ರಿಪಾಠಿ ಬಹುಬೇಗನೆ ವಿಕೆಟ್ ಕೈಚೆಲ್ಲಿದರು. ನಾಯಕ ಆ್ಯಡಿನ್ ಮರ್ಕ್ರಮ್ ಜೊತೆ ಇನ್ನಿಂಗ್ಸ್ ಮುಂದುವರಿಸಿದ ಬ್ರೂಕ್, ಕೆಕೆಆರ್ ಬೌಲಿಂಗ್ ಧೂಳೀಪಟ ಮಾಡಿದರು. ಮರ್ಕ್ರಮ್ 26 ಎಸೆತದಲ್ಲಿ 50 ರನ್ ಸಿಡಿಸಿ ಔಟಾದರು. 

ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶ ನೀಡಿದರು. 17 ಎಸೆತದಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 32 ರನ್ ಕಾಣಿಕೆ ನೀಡಿದರು. ಅಂತಿಮ ಹಂತದಲ್ಲಿ ಹೆನ್ರಿಚ್ ಕಾಲ್ಸೀನ್ ಹಾಗೂ ಬ್ರೂಕ್ ಅಬ್ಬರ ಹೊಸ ಮೈಲಿಗಲ್ಲು ಸೃಷ್ಟಿಸಿತು. ಕಾಲ್ಸಿನ್ 6 ಎಸೆತದಲ್ಲಿ ಅಜೇಯ 16 ರನ್ ಸಿಡಿಸಿದರು. ಇತ್ತ ಬ್ರೂಕ್ ಅಜೇಯ 100 ರನ್ ಸಿಡಿಸಿದರು. 4 ವಿಕೆಟ್ ನಷ್ಟಕ್ಕೆ ಹೈದರಾಬಾದ್ 228 ರನ್ ಸಿಡಿಸಿತು.

IPL 1000 Matches: ಐಪಿಎಲ್‌ ಸಹಸ್ರಗಲ್ಲು, ದಾಖಲೆಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಟೇ ಮೈಲಿಗಲ್ಲು

ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಗರಿಷ್ಠ ಮೊತ್ತ
2019, (231 ರನ್ vs ಆರ್‌ಸಸಿಬಿ)
2023, (228 ರನ್ vs ಕೆಕೆಆರ್)
2020, (219 ರನ್ vs ಡಿಸಿ)
2029, (212 ರನ್ vs ಪಿಬಿಕೆಎಸ್)