Asianet Suvarna News Asianet Suvarna News

IPL 2023 ಹೈದರಾಬಾದ್ ವಿರುದ್ಧ ಶುಭಮನ್ ಗಿಲ್ ಸೆಂಚುರಿ, ಕೆಲ ದಾಖಲೆ ಪುಡಿ ಪುಡಿ!

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಯುವ ಪ್ರತಿಭೆಗಳೆ ಸೆಂಚುರಿ ಸಿಡಿಸಿ ಮಿಂಚುತ್ತಿದ್ದಾರೆ. ಯಶಸ್ವಿ ಜೈಸ್ವಾಲ್ ಬಳಿಕ ಇದೀಗ ಗುಜರಾತ್ ಟೈಟಾನ್ಸ್ ತಂಡದ ಶುಭಮನ್ ಗಿಲ್ ಆಕರ್ಷಕ ಶತಕ ಸಿಡಿಸಿದ್ದಾರೆ.

IPL 2023 Shubman Gill hit century against Sunrisers Hyderabad set big target in board ckm
Author
First Published May 15, 2023, 9:10 PM IST

ಅಹಮ್ಮದಾಬಾದ್(ಮೇ.15): ಐಪಿಎಲ್ 2023 ಟೂರ್ನಿಯಲ್ಲಿ ಯುವ ಆಟಗಾರರು ಸೆಂಚುರಿ ಮೂಲಕ ಅಬ್ಬರಿಸುತ್ತಿದ್ದಾರೆ. ರಾಜಸ್ಥಾನ ರಾಯಲ್ಸ್ ಯುವ ಪ್ರತಿಭನೆ ಯಶಸ್ವಿ ಜೈಸ್ವಾಲ್ ಶತಕದ ಬಳಿಕ ಇದೀಗ ಗುಜರಾತ್ ಟೈಟಾನ್ಸ್ ಆಟಗಾರ ಶುಭಮನ್ ಗಿಲ್ ಶತಕ ಸಿಡಿಸಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗಿಲ್ ಸೆಂಚುರಿ ಬಾರಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಗಿಲ್ ಸಿಡಿಸಿದ ಚೊಚ್ಚಲ ಶತಕ ಇದಾಗಿದೆ. ಈ ಮೂಲಕ ಶುಬಮನ್‌ ಗಿಲ್ ಹಲವು ದಾಖಲೆ ಬರೆದಿದ್ದಾರೆ.

ಗುಜರಾತ್ ಟೈಟಾನ್ಸ್ ಪರ ಗರಿಷ್ಠ ಸ್ಕೋರ್ ಸಿಡಿಸಿದ ಆಟಗಾರರ ಪೈಕಿ ಇದೀಗ ತಮ್ಮದೇ ದಾಖಲೆಯನ್ನು ಗಿಲ್ ಮುರಿದಿದ್ದಾರೆ. 2022ರ ಐಪಿಎಲ್ ಟೂರ್ನಿಯಲ್ಲಿ ಗಿಲ್, ಪಂಜಾಬ್ ಕಿಂಗ್ಸ್ ವಿರುದ್ದ 96 ರನ್ ಸಿಡಿಸಿದ್ದರು. ಇದು ಗುಜರಾತ್ ಬ್ಯಾಟ್ಸ್‌ನ್ ಸಿಡಿಸಿದ ಗರಿಷ್ಠ ಸ್ಕೋರ್ ಆಗಿತ್ತು. 

RCB ಗೆಲುವಿನ ಬಗ್ಗೆ ಲಖನೌ ಟ್ವೀಟ್‌..! ಉರಿತಾ ಇದೆಯೇ ಎಂದ ಫ್ಯಾನ್ಸ್

ಗುಜರಾತ್ ಟೈಟಾನ್ಸ್ ಬ್ಯಾಟ್ಸ್‌ಮನ್ ಗರಿಷ್ಠ ಸ್ಕೋರ್
101 ರನ್, ಶುಭಮನ್ ಗಿಲ್ vs ಹೈದರಾಬಾದ್, 2023
96 ರನ್, ಶುಭಮನ್ ಗಿಲ್ vs ಪಂಜಾಬ್, 2022
94* ರನ್, ಡೇವಿಡ್ ಮಿಲ್ಲರ್ vs ಚೆನ್ನೇ, 2022
94* ರನ್ , ಶುಭಮನ್ ಗಿಲ್ vs ಲಖನೌ, 2023

ಶುಭಮನ್ ಗಿಲ್ 56 ಎಸೆತದಲ್ಲಿ ಸೆಂಚುರಿ ಪೂರೈಸಿದರು. ಗಿಲ್ ಸೆಂಚುರಿಯಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡಿತ್ತು. ಶುಭಮನ್ ಗಿಲ್ ಸೆಂಚುರಿಯಿಂದ ಗುಜರಾತ್ ಟೈಟಾನ್ಸ್ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. 101 ರನ್ ಸಿಡಿಸಿ ಗಿಲ್ ವಿಕೆಟ್ ಕೈಚೆಲ್ಲಿದರು. 

IPL 2023 ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಅಪ್‌ಡೇಟ್ ಕೊಟ್ಟ CSK ಸಿಇಒ ಕಾಶಿ ವಿಶ್ವನಾಥನ್

ಶುಭಮನ್ ಗಿಲ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಹೈದರಾಬಾದ್ ತಂಡ ಬೆಚ್ಚಿ ಬಿದ್ದಿದೆ. ಆರಂಭದಲ್ಲೇ ವಿಕೆಟ್ ಕಬಳಿಸಿ ಮೇಲುಗೈ ಸಾಧಿಸಿದ್ದ ಹೈದರಾಬಾದ್ ತಂಡಕ್ಕೆ ಗಿಲ್ ಶಾಕ್ ನೀಡಿದರು. ದಿಟ್ಟ ಹೋರಾಟದ ಮೂಲಕ ಗುಜರಾತ್ ಟೈಟಾನ್ಸ್ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಗಿದ್ದಾರೆ. ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಳ್ಳುವ ವಿಶ್ವಾಸದಲ್ಲಿರುವ ಗುಜರಾತ್ ಟೈಟಾನ್ಸ್ ಇದೀಗ ಗಿಲ್ ಸೆಂಚುರಿಯಿಂದ ಆತ್ಮವಿಶ್ವಾಸ ಡಬಲ್ ಆಗಿದೆ.

ಹೈದರಾಬಾದ್ ವಿರುದ್ಧ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಹೊರತು ಪಡಿಸಿದರೆ ಇತರರಿಂದ ಉತ್ತಮ ಹೋರಾಟ ಮೂಡಿಬರಲಿಲ್ಲ. ಶುಭಮನ್ ಗಿಲ್ 101 ರನ್ ಸಿಡಿಸಿದರೆ, ಸಾಯಿ ಸುದರ್ಶನ್ 47 ರನ್ ಕಾಣಿಕೆ ನೀಡಿದರು. ಇವರಿಬ್ಬರ ಅಬ್ಬರಕ್ಕೆ ಗುಜರಾತ್ ಉತ್ತಮ ಮೊತ್ತ ಸಿಡಿಸಿತು. ಇನ್ನುಳಿದವರು ಹೋರಾಟ ನೀಡಲಿಲ್ಲ. ಗುಜರಾತ್ ಟೈಟಾನ್ಸ್ 9 ವಿಕೆಟ್ ನಷ್ಟಕ್ಕೆ 188 ರನ್ ಸಿಡಿಸಿತು.

Follow Us:
Download App:
  • android
  • ios