ರಾಜಸ್ಥಾನ ರಾಯಲ್ಸ್ ಎದುರು ಭರ್ಜರಿ ಜಯ ಕಂಡ ಆರ್‍‌ಸಿಬಿಆರ್‍ಸಿಬಿ ದಾಳಿಗೆ ಕೇವಲ 59 ರನ್‌ಗೆ ರಾಯಲ್ಸ್ ಆಲೌಟ್ಲಖನೌ ತಂಡವನ್ನು ಕಾಲೆಳೆದ ನೆಟ್ಟಿಗರು

ಬೆಂಗಳೂರು(ಮೇ.15): ಪ್ಲೇ-ಆಫ್‌ ರೇಸ್‌ನಲ್ಲಿ ಹಾಗೂ ಹೀಗೂ ಉಳಿದುಕೊಳ್ಳುವ ಕಲೆಯನ್ನು ಹಲವು ಆವೃತ್ತಿಗಳಿಂದ ಕರಗತ ಮಾಡಿಕೊಂಡಿರುವ ಆರ್‌ಸಿಬಿ ಈ ಬಾರಿಯೂ ಇನ್ನೇನು ಹೊರಬಿದ್ದೇ ಬಿಟ್ಟಿತು ಎನ್ನುವಾಗ ಬೃಹತ್‌ ಗೆಲುವು ಸಾಧಿಸಿ ರೇಸ್‌ನಲ್ಲಿ ಉಳಿದುಕೊಂಡಿದೆ. 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 60ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 112 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್‍‌ಸಿಬಿ ನೀಡಿದ್ದ 171 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡವು ಕೇವಲ 59 ರನ್‌ಗಳಿಗೆ ಸರ್ವಪತನ ಕಂಡಿತು. ಭಾರೀ ಅಂತರದ ಗೆಲುವಿನ ಜತೆಗೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ನೆಟ್‌ ರನ್‌ರೇಟ್ ಸುಧಾರಿಸಿಕೊಳ್ಳುವುದರ ಜತೆಗೆ ಅಂಕಪಟ್ಟಿಯಲ್ಲಿ5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.

ನಿಧಾನಗತಿಯ ಪಿಚ್‌ನಲ್ಲಿ ಫಾಫ್‌ ಡು ಪ್ಲೆಸಿ, ಗ್ಲೆನ್‌ ಮ್ಯಾಕ್ಸ್‌ವೆಲ್‌ರ ಅರ್ಧಶತಕ, ಕೊನೆಯಲ್ಲಿ ಅನುಜ್‌ ರಾವತ್‌ರ ಸ್ಫೋಟಕ ಆಟದ ನೆರವಿನಿಂದ 20 ಓವರಲ್ಲಿ 5 ವಿಕೆಟ್‌ಗೆ ಆರ್‌ಸಿಬಿ 171 ರನ್‌ ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ರಾಜಸ್ಥಾನ ಪವರ್‌-ಪ್ಲೇನಲ್ಲೇ ಕುಸಿಯಿತು.

ರಾಯಲ್ಸ್‌ಗೆ ಪವರ್‌ ಶಾಕ್‌!: ಮೊಹಮದ್‌ ಸಿರಾಜ್‌ ಇನ್ನಿಂಗ್‌್ಸನ 2ನೇ ಎಸೆತದಲ್ಲೇ ಯಶಸ್ವಿ ಜೈಸ್ವಾಲ್‌(0)ರನ್ನು ಪೆವಿಲಿಯನ್‌ಗಟ್ಟಿದರು. ಹೇಜಲ್‌ವುಡ್‌ ಗಾಯಗೊಂಡಿದ್ದರಿಂದ ಅವಕಾಶ ಪಡೆದ ವೇಯ್‌್ನ ಪಾರ್ನೆಲ್‌ 2ನೇ ಓವರಲ್ಲಿ ಅಪಾಯಕಾರಿ ಜೋಸ್‌ ಬಟ್ಲರ್‌(0) ಹಾಗೂ ಸಂಜು ಸ್ಯಾಮ್ಸನ್‌(04)ರನ್ನು ಔಟ್‌ ಮಾಡಿದರು. ಇಂಪ್ಯಾಕ್ಟ್ ಆಟಗಾರನಾಗಿ ಕ್ರೀಸ್‌ಗಿಳಿದ ದೇವದತ್‌ ಪಡಿಕ್ಕಲ್‌(04) ಯಾವುದೇ ಇಂಪ್ಯಾಕ್ಟ್ ಮಾಡದೆ ಹೊರನಡೆದರೆ, ಜೋ ರೂಟ್‌(10) ಪವರ್‌-ಪ್ಲೇ ಮುಗಿಯುವ ಮೊದಲೇ ಔಟಾದರು. 6 ಓವರ್‌ ಮುಕ್ತಾಯಕ್ಕೆ 28 ರನ್‌ಗೆ 5 ವಿಕೆಟ್‌ ಕಳೆದುಕೊಂಡ ರಾಜಸ್ಥಾನ ಚೇತರಿಸಿಕೊಳ್ಳಲಾಗಲಿಲ್ಲ.

ರಾಜಸ್ಥಾನ ಬಗ್ಗುಬಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು; ಪ್ಲೇ ಆಫ್‌ ಕನಸು ಜೀವಂತ

ಶಿಮ್ರೊನ್‌ ಹೆಟ್ಮೇಯರ್‌ 4 ಸಿಕ್ಸರ್‌, 1 ಬೌಂಡರಿಯೊಂದಿಗೆ 35 ರನ್‌ ಸಿಡಿಸಿ, ತಂಡ ಐಪಿಎಲ್‌ನಲ್ಲಿ ಕನಿಷ್ಠ ಮೊತ್ತಕ್ಕೆ ಆಲೌಟ್‌ ಆಗುವುದನ್ನು ತಪ್ಪಿಸಿದರು. ಸ್ಪಿನ್ನರ್‌ಗಳ ಕೈಚಳಕ, ಶಿಸ್ತಿನ ಕ್ಷೇತ್ರರಕ್ಷಣೆ ಆರ್‌ಸಿಬಿ ಜಯಕ್ಕೆ ನೆರವಾಯಿತು. 10.3 ಓವರಲ್ಲಿ ರಾಜಸ್ಥಾನ 59 ರನ್‌ಗೆ ಸರ್ವಪತನಗೊಂಡಿತು. ಪಾರ್ನೆಲ್‌ 3 ಓವರಲ್ಲಿ 10 ರನ್‌ಗೆ 3 ವಿಕೆಟ್‌ ಕಬಳಿಸಿದರೆ, ಬ್ರೇಸ್‌ವೆಲ್‌ ಹಾಗೂ ಕಣ್‌ರ್‍ ಶರ್ಮಾ ತಲಾ 2, ಮ್ಯಾಕ್ಸ್‌ವೆಲ್‌ ಹಾಗೂ ಸಿರಾಜ್‌ ತಲಾ 1 ವಿಕೆಟ್‌ ಕಿತ್ತರು.

ಐಪಿಎಲ್‌ನಲ್ಲಿ 3ನೇ ಕನಿಷ್ಠ ಮೊತ್ತ!

ರಾಯಲ್ಸ್‌ನ 59 ರನ್‌ ಐಪಿಎಲ್‌ ಇತಿಹಾಸದಲ್ಲೇ 3ನೇ ಕನಿಷ್ಠ ಮೊತ್ತ. 2017ರಲ್ಲಿ ಕೆಕೆಆರ್‌ ವಿರುದ್ಧ ಆರ್‌ಸಿಬಿ 49, 2009ರಲ್ಲಿ ಆರ್‌ಸಿಬಿ ವಿರುದ್ಧ ರಾಜಸ್ಥಾನ 59 ರನ್‌ಗೆ ಆಲೌಟ್‌ ಆಗಿತ್ತು.

ನೆಟ್‌ ರನ್‌ರೇಟ್‌ ಚೇತರಿಕೆ: ಆರ್‌ಸಿಬಿಗೆ ಅನುಕೂಲ!

ಒಂದೇ ಪಂದ್ಯದಲ್ಲಿ ಆರ್‌ಸಿಬಿಯ ನೆಟ್‌ ರನ್‌ರೇಟ್‌ ‘ರಾಕೆಟ್‌’ ವೇಗದಲ್ಲಿ ಮೇಲೆದ್ದಿದೆ. -0.345ರಿಂದ +0.166ಕ್ಕೆ ತಲುಪಿರುವ ನೆಟ್‌ ರನ್‌ರೇಟ್‌, ಆರ್‌ಸಿಬಿಗೆ ಪ್ಲೇ-ಆಫ್‌ಗೇರಲು ಅನುಕೂಲವಾಗಬಹುದು. ಮತ್ತೊಂದೆಡೆ ರಾಯಲ್ಸ್‌ಗೆ ಈ ಸೋಲು ಭಾರೀ ಪೆಟ್ಟು ನೀಡಿದ್ದು, ತಂಡದ ನೆಟ್‌ ರನ್‌ರೇಟ್‌ +0.63ರಿಂದ +0.140ಗೆ ಕುಸಿದಿದೆ. ಅಲ್ಲದೇ ಬಾಕಿ ಇರುವುದು ಕೇವಲ 1 ಪಂದ್ಯ. ರಾಯಲ್ಸ್‌ ಗರಿಷ್ಠ 14 ಅಂಕಕ್ಕೆ ತಲುಪಬಹುದು. ಹೀಗಾಗಿ ತಂಡ ಪ್ಲೇ-ಆಫ್‌ ಸ್ಥಾನದಿಂದ ವಂಚಿತವಾದರೂ ಅಚ್ಚರಿಯಿಲ್ಲ.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ಜಯ ಸಾಧಿಸುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರು ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿವೆ. ಇನ್ನು ಇದೆಲ್ಲದರ ನಡುವೆ ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿ ಕೂಡಾ ಆರ್‍‌ಸಿಬಿ ಪ್ರದರ್ಶನವು ಅದ್ಭುತವಾಗಿತ್ತು ಎಂದು ಶುಭ ಕೋರಿದೆ. 

Scroll to load tweet…

ಲಖನೌ ಟ್ವೀಟ್‌ ಮಾಡಿದ್ದನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ಮೊದಲೇ ಲಖನೌ ತಂಡದ ಮೆಂಟರ್ ಗೌತಮ್ ಗಂಭೀರ್ ಹಾಗೂ ವೇಗಿ ನವೀನ್ ಉಲ್ ಹಕ್ ಜತೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಕ್ರಿಕೆಟಿಗ ವಿರಾಟ್ ಕೊಹ್ಲಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದೆಲ್ಲದರ ನಡುವೆ ಈ ಟ್ವೀಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಓರ್ವ ನೆಟ್ಟಿಗನಂತೂ ಉರಿತಾ ಇದೆಯಾ ಎಂದು ಕಾಲೆಳೆದಿದ್ದಾರೆ. ನೆಟ್ಟಿಗರ ಪ್ರತಿಕ್ರಿಯೆ ಹೀಗಿತ್ತು ನೋಡಿ

Scroll to load tweet…
Scroll to load tweet…
Scroll to load tweet…