Asianet Suvarna News Asianet Suvarna News

IPL 2023 ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಅಪ್‌ಡೇಟ್ ಕೊಟ್ಟ CSK ಸಿಇಒ ಕಾಶಿ ವಿಶ್ವನಾಥನ್

ತವರಿನಲ್ಲಿ ಕೊನೆಯ ಐಪಿಎಲ್ ಪಂದ್ಯವನ್ನಾಡಿ ಚೆನ್ನೈ ಸೂಪರ್ ಕಿಂಗ್ಸ್
ಧೋನಿ ಭವಿಷ್ಯದ ಬಗ್ಗೆ ಮತ್ತೊಮ್ಮೆ ತುಟಿಬಿಚ್ಚಿದ ಸಿಎಸ್‌ಕೆ ಸಿಇಒ
ಧೋನಿ ಐಪಿಎಲ್‌ ನಲ್ಲಿ ಮುಂದುವರೆಯುವ ವಿಶ್ವಾಸ

IPL 2023 CSK CEO Kasi Viswanathan Issues Statement On Skipper MS Dhoni Future kvn
Author
First Published May 15, 2023, 3:29 PM IST

ಚೆನ್ನೈ(ಮೇ.15): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತವರಿನ ಮೈದಾನದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಎದುರು ಕೊನೆಯ ಪಂದ್ಯವನ್ನಾಡಿತು. ಟೂರ್ನಿಯುದ್ದಕ್ಕೂ ಅದ್ಭುತ ಬೆಂಬಲ ನೀಡುತ್ತಾ ಬಂದಿರುವ ಅಭಿಮಾನಿಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹೃತ್ಪೂರ್ವಕ ಧನ್ಯವಾಗಳನ್ನು ಅರ್ಪಿಸಿದೆ. ಇದು ಧೋನಿ ಪಾಲಿಗೆ ತವರಿನ ಮೈದಾನದಲ್ಲಿ ಕೊನೆಯ ಪಂದ್ಯ ಎನ್ನುವಂತೆ ಬಿಂಬಿತವಾಗಿತ್ತು. ಇನ್ನು ಇದೆಲ್ಲದರ ನಡುವೆ ಚೆನ್ನೈ ಸೂಪರ್‍‌ ಕಿಂಗ್ಸ್‌ ಫ್ರಾಂಚೈಸಿಯ ಸಿಇಒ ಕಾಶಿ ವಿಶ್ವನಾಥನ್, ಧೋನಿ ಭವಿಷ್ಯದ ಕುರಿತಂತೆ ಮಹತ್ವದ ಸುಳಿವೊಂದನ್ನು ನೀಡಿದ್ದು, ಈ ಆವೃತ್ತಿಯ ಬಳಿಕವೂ ಧೋನಿ ಕ್ರಿಕೆಟ್‌ನಲ್ಲಿ ಮುಂದುವರೆಯುವ ವಿಶ್ವಾಸವನ್ನು ಸಿಎಸ್‌ಕೆ ಸಿಇಒ ವ್ಯಕ್ತಪಡಿಸಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಮುಂದಿನ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಯೂ ಆಡುತ್ತಾರೆ ಎಂದು ನಾವು ನಂಬಿದ್ದೇವೆ. ಹೀಗಾಗಿ ಪ್ರತಿ ಬಾರಿಯಂತೆ ಅಭಿಮಾನಿಗಳು ನಮ್ಮನ್ನು ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಕಾಶಿ ವಿಶ್ವನಾಥ್ ಹೇಳಿರುವ ವಿಡಿಯೋವನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ಪರ ಬಹುತೇಕ ಪಂದ್ಯಗಳಲ್ಲಿ 8ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿಯುತ್ತಿದ್ದಾರೆ. ಕೊನೆಯ ಕೆಲವು ಪಂದ್ಯಗಳಲ್ಲಿ ಭರ್ಜರಿ ಬೌಂಡರಿ ಹಾಗೂ ಸಿಕ್ಸರ್ ಬಾರಿಸುವ ಮೂಲಕ ಧೋನಿ, ಅಭಿಮಾನಿಗಳಿಗೆ ಖುಷಿಯ ರಸದೌತಣ ನೀಡುತ್ತಿದ್ದಾರೆ.

IPL 2023 ಚೆನ್ನೈ ಮಣಿಸಿದ ಕೆಕೆಆರ್ ನಾಯಕ ನಿತೀಶ್ ರಾಣಾಗೆ ಬಿಗ್ ಶಾಕ್‌..! ದೊಡ್ಡ ಮೊತ್ತದ ದಂಡದ ಬರೆ

ಆದರೆ ಧೋನಿ, ಇದೇ ವೇಳೆ ಕೆಲವು ಸಣ್ಣಪುಟ್ಟ ಗಾಯದ ಸಮಸ್ಯೆಯಿಂದಲೂ ಬಳಲುತ್ತಿದ್ದಾರೆ. ಹೀಗಾಗಿ ಇದೇ ಧೋನಿ ಪಾಲಿಗೆ ಕೊನೆಯ ಐಪಿಎಲ್‌ ಆಗುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಕಾಶಿ ವಿಶ್ವನಾಥನ್ ಅವರ ಮಾತುಗಳು, ಧೋನಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ಸಿಕ್ಕಿದಂತಾಗಿದೆ.

ಪ್ಲೇ ಆಫ್‌ ಹೊಸ್ತಿಲಲ್ಲಿ ಚೆನ್ನೈ ಸೂಪರ್ ಕಿಂಗ್ಸ್: 

ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 13 ಪಂದ್ಯಗಳನ್ನಾಡಿ 7 ಗೆಲುವು,  ಅ5 ಸೋಲು ಮತ್ತು ಒಂದು ಫಲಿತಾಂಶ ವಿಲ್ಲದೇ ಒಂದು ಅಂಕ ಹಂಚಿಕೊಂಡಿದ್ದರಿಂದ 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೇ 20 ರಂದು ತನ್ನ ಪಾಲಿನ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದ್ದು, ಇನ್ನೊಂದು ಗೆಲುವು ಅಧಿಕೃತವಾಗಿ ಚೆನ್ನೈ ತಂಡವನ್ನು ಪ್ಲೇ ಆಫ್‌ ಹಂತಕ್ಕೇರಿಸಲಿದೆ.

Follow Us:
Download App:
  • android
  • ios