ಐಪಿಎಲ್ 2023 ಟೂರ್ನಿಯಲ್ಲಿ ಅದ್ಧೂರಿ ಶುಭಾರಂಭ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಹೋರಾಟಕ್ಕೆ ಸಜ್ಜಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ.
ಕೋಲ್ಕತಾ(ಏ.06): ಐಪಿಎಲ್ 2023 ಟೂರ್ನಿಯಲ್ಲಿ ಆರ್‌ಸಿಬಿ ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದರೆ, ಇತ್ತ ಕೋಲ್ಕತಾ ನೈಟ್ ರೈಡರ್ಸ್ ಸೋಲಿನೊಂದಿಗೆ ಆರಂಭಿಸಿತ್ತು. ಹೀಗಾಗಿ ಇಂದು ಆರ್‌ಸಿಬಿ ಹಾಗೂ ಕೆಕೆಆರ್ ನಡುವಿನ ಹೋರಾಟ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಪಂದ್ಯದ ಆರಂಭದಲ್ಲೇ ಆರ್‌ಸಿಬಿ ಮೇಲುಗೈ ಸಾಧಿಸಿದೆ. ಟಾಸ್ ಗೆದ್ದ ಬೆಂಗಳೂರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ ಒಂದು ಅನಿವಾರ್ಯ ಬದಲಾವಣೆ ಮಾಡಲಾಗಿದೆ. ಇಂಜುರಿಗೆ ತುತ್ತಾಗಿರುವ ಟೋಪ್ಲೆ ಬದಲು ಡೇವಿಡ್ ವಿಲೆ ತಂಡ ಸೇರಿಕೊಂಡಿದ್ದಾರೆ. ಇತ್ತ ಕೋಲ್ಕತಾ ತಂಡದಲ್ಲೂ ಒಂದು ಬದಲಾವಣೆ ಮಾಡಲಾಗಿದೆ. ಅಂಕುಲ್ ಬದಲು ಸುಯಾಶ್ ಶರ್ಮಾ ತಂಡ ಸೇರಿಕೊಂಡಿದ್ದಾರೆ.
ಆರ್‌ಸಿಬಿ ಪ್ಲೇಯಿಂಗ್ 11
ವಿರಾಟ್ ಕೊಹ್ಲಿ, ಫಾಫ್ ಡುಪ್ಲಸಿಸ್(ನಾಯಕ), ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್‌ವೆಲ್, ಮೆಚೆಲ್ ಬ್ರೆಸ್‌ವೆಲ್, ಶಹಬಾಜ್ ಅಹಮ್ಮದ್, ಡೇವಿಡ್ ವಿಲೆ, ಕರಣ್ ಶರ್ಮಾ, ಹರ್ಷಲ್ ಪಟೇಲ್, ಅಕಾಶ್ ದೀಪ್, ಮೊಹಮ್ಮದ್ ಸಿರಾಜ್
IPL 2023 ಹೆಟ್ಮೆಯರ್ ಧ್ರುವ್ ಹೋರಾಟಕ್ಕೆ ಬೆಚ್ಚಿ ಬಿದ್ದ ಪಂಜಾಬ್, ಅಂತಿಮ ಓವರ್‌ನಲ್ಲಿ ಗೆದ್ದು ನಿಟ್ಟುಸಿರು!
ಕೆಕೆಆರ್ ಪ್ಲೇಯಿಂಗ್ 11
ಮನ್ದೀಪ್ ಸಿಂಗ್, ರಹಮಾನುಲ್ಹಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ(ನಾಯಕ), ರಿಂಕು ಸಿಂಗ್, ಆ್ಯಂಡ್ರೆ ರಸೆಲ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ಟಿಮ್ ಸೌಥಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ
ಈಡನ್ ಗಾರ್ಡನ್ ಮೈದಾನದಲ್ಲಿ ಆರ್‌ಸಿಬಿ ಕಳೆದ ಆವೃತ್ತಿಯ ಅಂತಿಮ ಪಂದ್ಯ ಆಡಿ ಗೆಲುವಿನ ಸಿಹಿ ಕಂಡಿತ್ತು. ಎಲಿಮಿನೇಟರ್ ಪಂದ್ಯವನ್ನು ಈಡನ್ ಗಾರ್ಡನ್ಸ್‌ನಲ್ಲಿ ಅತೀವ ಒತ್ತಡದಲ್ಲಿ ಆಡಿ ಗೆಲುವು ದಾಖಲಿಸಿತ್ತು. 2019ರಲ್ಲಿ ಇದೇ ಮೈದಾನದಲ್ಲಿ ಆರ್‌ಸಿಬಿ ವಿರಾಟ್ ಕೊಹ್ಲಿ ಅಬ್ಬರದಿಂದ 213 ರನ್ ಸಿಡಿಸಿತ್ತು. ಇದೇ ಮೈದಾನದಲ್ಲಿ ಆರ್‌ಸಿಬಿ 49 ರನ್‌ಗ ಆಲೌಟ್ ಆಗಿ ಹಿನ್ನಡೆಯನ್ನು ಅನುಭವಿಸಿದೆ.
ಆರ್‌ಸಿಬಿ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರಿಸಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ 8 ವಿಕೆಟ್‌ಗಳ ಗೆಲುವು ದಾಖಲಿಸಿ, 2023ನೇ ಆವೃತ್ತಿಯನ್ನು ಆರಂಭಿಸ್ತು. 5 ಬಾರಿಯ ಚಾಂಪಿಯನ್ ಹಾಗೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಮೋಘ ದಾಖಲೆ ಹೊಂದಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಆರ್‌ಸಿಬಿ ಚೆಂಡಾಡಿತು. ಮುಂಬೈ ನೀಡಿದ 172 ರನ್ ಗುರಿಯನ್ನು ಇನ್ನೂ 23 ಎಸೆತ ಬಾಕಿ ಇರುವಾಗಲೇ ಬೆನ್ನತ್ತಿದ ಆರ್‌ಸಿಬಿ, ಮೊದಲ ಪಂದ್ಯದಲ್ಲೇ ಉತ್ತಮ ನೆಟ್ ರನ್‌ರೇಟ್ ಸಹ ಗಳಿಸಿತು. ಮುಂಬೈ ಸತತ 11ನೇ ವರ್ಷ ಮೊದಲ ಪಂದ್ಯದಲ್ಲಿ ಸೋಲುಂಡಿತು.
ವಿರಾಟ್ ಅನುಷ್ಕಾ ದಂಪತಿ ಫೋಟೋಗಳಲ್ಲಿ ಅಷ್ಟು ಹಲ್ಲು ಕಿಸಿಯೋದ್ಯಾಕೆ?
ಸ್ಪರ್ಧಾತ್ಮಕ ಗುರಿ ಬೆನ್ನತ್ತಲು ಇಳಿದ ಆರ್‌ಸಿಬಿಗೆ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿ ಉತ್ತಮ ಆರಂಭ ಒದಗಿಸಿದರು. ಮೊದಲ 4 ಓವರಲ್ಲಿ 40 ರನ್ ಚಚ್ಚಿದ ಈ ಜೋಡಿ ಪವರ್-ಪ್ಲೇ ಮುಕ್ತಾಯಕ್ಕೆ 53 ರನ್ ಕಲೆಹಾಕಿತು. ಮುಂಬೈ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಡು ಪ್ಲೆಸಿ 29 ಎಸೆತದಲ್ಲಿ ಅರ್ಧಶತಕ ಪೂರೈಸಿದರೆ, ವಿರಾಟ್ ಐಪಿಎಲ್‌ನಲ್ಲಿ 46ನೇ ಅರ್ಧಶತಕ ಬಾರಿಸಿದರು.
ಮೊದಲ ವಿಕೆಟ್‌ಗೆ ಇವರಿಬ್ಬರ ನಡುವೆ 14.5 ಓವರಲ್ಲಿ 148 ರನ್ ಜೊತೆಯಾಟ ಮೂಡಿಬಂತು. ಡು ಪ್ಲೆಸಿ 43 ಎಸೆತದಲ್ಲಿ 5 ಬೌಂಡರಿ, 6 ಸಿಕ್ಸರ್‌ಗಳೊಂದಿಗೆ 73 ರನ್ ಗಳಿಸಿ ಔಟಾದರು. 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ದಿನೇಶ್ ಕಾರ್ತಿಕ್ ಖಾತೆ ತೆರೆಯದೆ ಔಟಾದರೆ, ಮ್ಯಾಕ್ಸ್‌ವೆಲ್ 2 ಸಿಕ್ಸರ್ ಸಿಡಿಸಿ ತಂಡವನ್ನು ಜಯದ ಗೆರೆ ದಾಟಿಸಿದರು. ಮನಮೋಹಕ ಬ್ಯಾಟಿಂಗ್ ನಡೆಸಿದ ಕೊಹ್ಲಿ 49 ಎಸೆತದಲ್ಲಿ 6 ಬೌಂಡರಿ, 5 ಸಿಕ್ಸರ್‌ನೊಂದಿಗೆ 82 ರನ್ ಸಿಡಿಸಿ ಔಟಾಗದೆ ಉಳಿದರು.
