Asianet Suvarna News Asianet Suvarna News

IPL 2023: ಜೈಪುರದಲ್ಲಿ ಮೊದಲ ಬಾರಿಗೆ 200 ರನ್‌ ಸಿಡಿಸಿದ ರಾಜಸ್ಥಾನ ರಾಯಲ್ಸ್‌!

ಯಶಸ್ವಿ ಜೈಸ್ವಾಲ್‌ ಆಡಿದ ಸ್ಪೋಟಕ ಇನ್ನಿಂಗ್ಸ್‌ನಿಂದ ರಾಜಸ್ಥಾನ ರಾಯಲ್ಸ್‌ ತಂಡ 200 ಪ್ಲಸ್‌ ಮೊತ್ತ ಬಾರಿಸುವಲ್ಲಿ ಯಶ ಕಂಡಿದೆ. ಮಧ್ಯಮ ಓವರ್‌ಗಳಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಶಿಸ್ತಿನ ದಾಳಿ ನಡೆಸಿದರೂ, ಕೊನೆಯಲ್ಲಿ ಧ್ರುವ್‌ ಜುರೇಲ್‌ ಅಬ್ಬರದ ಆಟ ತಂಡಕ್ಕೆ ನೆರವಾಯಿತು.
 

IPL 2023 Rajasthan Royals scores 202 Vs Chennai Super Kings Yashasvi Jaiswal Dhruv Jurel Shines san
Author
First Published Apr 27, 2023, 9:20 PM IST | Last Updated Apr 27, 2023, 9:20 PM IST

ಜೈಪುರ (ಏ.27): ಐಪಿಎಲ್‌ನ ತನ್ನ 200ನೇ ಪಂದ್ಯದಲ್ಲಿ 200ಕ್ಕೂ ಅಧಿಕ ರನ್‌ ಪೇರಿಸುವಲ್ಲಿ ರಾಜಸ್ಥಾನ ರಾಯಲ್ಸ್‌ ತಂಡ ಯಶಸ್ವಿಯಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಚೆನ್ನೈ ತಂಡ ಶಿಸ್ತಿನ ದಾಳಿ ನಡೆಸಿದರೂ,ಕೊನೇ ಮೂರು ಓವರ್‌ಗಳಲ್ಲು ಧ್ರುವ್‌ ಜುರೇಲ್‌ ಅಬ್ಬರದ ಬ್ಯಾಟಿಂಗ್‌ ನಡೆಸಿದರು. ಇದರಿಂದಾಗಿ ಸಿಎಸ್‌ಕೆ ತನ್ನ ಗೆಲುವಿಗೆ ಬೃಹತ್‌ ಮೊತ್ತದ ಸವಾಲನ್ನು ಪಡೆದುಕೊಂಡಿದೆ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ 43 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 8 ಬೌಂಡರಿಗಳನ್ನು ಒಳಗೊಂಡ 77 ರನ್‌ ಪೇರಿಸಿ ತಂಡದ ದೊಡ್ಡ ಮೊತ್ತಕ್ಕೆ ಕಾರಣರಾದರು. ಮೊದಲ ವಿಕೆಟ್‌ಗೆ ಜೋಸ್‌ ಬಟ್ಲರ್‌ ಹಾಗೂ ಯಶಸ್ವಿ ಜೈಸ್ವಾಲ್‌ ಕೇವಲ 50 ಎಸೆತಗಳಲ್ಲಿ 86 ರನ್‌ ಜೊತೆಯಾಟವಾಡುವ ಮೂಲಕ ಬೃಹತ್‌ ಮೊತ್ತಕ್ಕೆ ಕಾರಣರಾದರು. ಕೊನೇ ಐದು ಓವರ್‌ಗಳಲ್ಲಿ 63 ರನ್‌ ಸಿಡಿಸುವಲ್ಲಿ ಯಶಸ್ವಿಯಾದ ರಾಜಸ್ಥಾನ ರಾಯಲ್ಸ್‌ ತಂಡ 5 ವಿಕೆಟ್‌ಗೆ 202 ರನ್‌ ಪೇರಿಸಿದೆ. ಇನ್ನು ಐಪಿಎಲ್‌ ಇತಿಹಾಸದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡ ತನ್ನ ತವರಿನ ಸವಾಯ್‌ ಮಾನ್‌ಸಿಂಗ್‌ ಸ್ಟೇಡಿಯಂನಲ್ಲಿ 200ಕ್ಕೂ ಅಧಿಕ ರನ್‌ ಪೇರಿಸಿದ್ದು ಇದೇ ಮೊದಲ ಬಾರಿಯಾಗಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬಟ್ಲರ್‌ ಹಾಗೂ ಯಶಸ್ವಿ ಜೈಸ್ವಾಲ್‌ ಸ್ಫೋಟಕ ಆರಂಭ ನೀಡಿದರು. ಚೆನ್ನೈ ಸೂಪರ್‌ ಕಿಂಗ್ಸ್‌ನ ಬಲಿಷ್ಠ ಬೌಲಿಂಗ್‌ ವಿಭಾಗದ ದಿಕ್ಕು ತಪ್ಪಿಸಿದ ಜೋಡಿ ಮೊದಲ ವಿಕೆಟ್‌ಗೆ 86 ರನ್‌ ಜೊತೆಯಾಟವಾಡುವ ಮೂಲಕ ಭದ್ರಬುನಾದಿ ಹಾಕಿಕೊಟ್ಟರು. ಇದರಲ್ಲಿ ಜೈಸ್ವಾಲ್‌ ಅವರ ಪಾಲು 53 ರನ್‌ ಆಗಿದ್ದವು. ಅದರೆ, ಬ್ಯಾಟಿಂಗ್‌ನಲ್ಲಿ ಪರದಾಟ ನಡೆಸಿದ ಬಟ್ಲರ್‌ 21 ಎಸೆತಗಳಲ್ಲಿ27 ರನ್‌ ಬಾರಿಸಿ ರವೀಂದ್ರ ಜಡೇಜಾಗೆ ವಿಕೆಟ್‌ ಒಪ್ಪಿಸಿದರು.

ಕೊಹ್ಲಿ 'ಸ್ಲೋ' ಬ್ಯಾಟಿಂಗ್‌ ಕೆಣಕಿದ ಮುಂಬೈ ಪೊಲೀಸ್‌ಗೆ ಬೆಂಗಳೂರು ಪೊಲೀಸ್‌ ಖಡಕ್‌ ಉತ್ತರ, ಆದರೆ ಒಂದಿದೆ ಟ್ವಿಸ್ಟು!

ಆ ಬಳಿಕ ರಾಜಸ್ಥಾನ ತಂಡ ಬ್ಯಾಟಿಂಗ್‌ ವೇಗ ಕಡಿಮೆಯಾಯಿತು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ನಾಯಕ ಸಂಜು ಸ್ಯಾಮ್ಸನ್‌ ಏಕದಿನ ಶೈಲಿಯಲ್ಲಿ ಬ್ಯಾಟಿಂಗ್‌ ಮಾಡಿ 17 ಎಸೆತಗಳಲ್ಲಿ 17 ರನ್‌ ಪೇರಿಸಿದರೆ, ಈ ಜೊತೆಯಾಟದಲ್ಲಿ 29 ಎಸೆತಗಳಲ್ಲಿ 39 ರನ್‌ ಬಂದಿತು. ತಂಡದ ಮೊತ್ತ 125 ರನ್‌ ಆಗಿದ್ದಾಗ ಸಂಜು ಸ್ಯಾಮ್ಸನ್‌ ತುಷಾರ್‌ ದೇಶಪಾಂಡೆಗೆ ವಿಕೆಟ್‌ ನೀಡಿದರೆ, ಈ ಮೊತ್ತಕ್ಕೆ 7 ರನ್‌ ಸೇರಿಸುವ ವೇಳೆಗ ಯಶಸ್ವಿ ಜೈಸ್ವಾಲ್‌ ಕೂಡ ಔಟಾದರು.  ಸ್ಪೋಟಕ ಬ್ಯಾಟ್ಸ್‌ಮನ್‌ ಶಿಮ್ರೋನ್‌ ಹೆಟ್ಮೆಯರ್‌ (8 ರನ್‌, 10 ಎಸೆತ) ಕೂಡ ದೊಡ್ಡ ಇನ್ನಿಂಗ್ಸ್‌ ಆಡಲು ವಿಫಲರಾದರು. ಇದರಿಂದಾಗಿ ಒಂದು ಹಂತದಲ್ಲಿ 1 ವಿಕೆಟ್‌ಗೆ 125 ರನ್‌ ಬರಿಸಿದ್ದ ರಾಜಸ್ಥಾನ, 146 ರನ್‌ ಬಾರಿಸುವ ವೇಳೆಗೆ 4 ವಿಕೆಟ್‌ ಕಳೆದುಕೊಂಡಿತು.

IPL 2023: ಟಾಸ್‌ ಗೆದ್ದ ರಾಜಸ್ಥಾನ, ಪ್ರಮುಖ ಬೌಲರ್‌ ಔಟ್‌!

ಅಬ್ಬರಿಸಿದ ಪಡಿಕ್ಕಲ್‌-ಧ್ರುವ್‌ ಜುರೇಲ್‌:  17ನೇ ಓವರ್‌ ಆರಂಭದ ವೇಳೆಗೆ 146 ರನ್‌ ಬಾರಿಸಿದ್ದ ತಂಡವನ್ನು 200ರ ಗಡಿ ದಾಟಿಸಲು ನೆರವಾಗಿದ್ದ ಕನ್ನಡಿಗ ದೇವದತ್‌ ಪಡಿಕ್ಕಲ್‌ ಹಾಗೂ ಧ್ರುವ್‌ ಜುರೇಲ್‌ ಅವರ ಸ್ಪೋಟಕ ಇನ್ನಿಂಗ್ಸ್‌. ಕೇವಲ 20 ಎಸೆತಗಳಲ್ಲಿ ಈ ಜೋಡಿ 48 ರನ್‌ ಕಲೆಹಾಕುವ ಮೂಲಕ ತಂಡದ ದೊಡ್ಡ ಮೊತ್ತಕ್ಕೆ ಆಸರೆಯಾದರು. ಈ ಜೊತೆಯಾಟದಲ್ಲಿ ಕೇವಲ 9 ಎಸೆತ ಎದುರಿಸಿದ ಧ್ರುವ್‌ ಜರೇಲ್‌ 26 ರನ್‌ ಬಾರಿಸಿದರು. 15 ಎಸೆತ ಎದುರಿಸಿದ ಜುರೇಲ್‌, 2 ಸಿಕ್ಸರ್‌ ಹಾಗೂ 3 ಬೌಂಡರಿಗಳಿದ್ದ 34 ರನ್‌ ಸಿಡಿಸಿದರು. ಅದರಲ್ಲೂ ಪಥಿರಣ ಹಾಗೂ ತುಷಾರ್‌ ದೇಶಪಾಂಡೆಗೆ ಈ ಜೋಡಿ ಚಳಿ ಬಿಡಿಸಿತು. ಇಬ್ಬರೂ ಕ್ರಮವಾಗಿ ತಮ್ಮ 4 ಓವರ್‌ಗಳ ಕೋಟಾದಲ್ಲಿ 44 ರನ್‌ ಹಾಗೂ 42 ರನ್‌ ನೀಡಿದರು. ಅಜೇಯವಾಗಿ ಉಳಿದ ದೇವದತ್‌ ಪಡಿಕ್ಕಲ್‌ 13 ಎಸೆತಗಳಲ್ಲಿ 23 ರನ್‌ ಸಿಡಿಸಿದರು.

Latest Videos
Follow Us:
Download App:
  • android
  • ios