ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ರಾಜಸ್ಥಾನ ರಾಯಲ್ಸ್‌ ತಂಡ ಗೆಲುವಿನ ಲಯಕ್ಕೆ ಬರುವ ನಿಟ್ಟಿನಲ್ಲಿ ಗುರುವಾರ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. ಐದು ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಅಗ್ರಸ್ಥಾನದಲ್ಲಿದೆ.

ಜೈಪುರ (ಏ.27): ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡ ನಿರಾಸೆಯಲ್ಲಿರುವ ರಾಜಸ್ಥಾನ ರಾಯಲ್ಸ್‌ ತಂಡ ಗುರುವಾರದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲು ಸಜ್ಜಾಗಿದೆ. ಟಾಸ್‌ ಗೆದ್ದಿರುವ ರಾಜಸ್ಥಾನ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಇದು ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ಲೀಗ್‌ನ 200ನೇ ಪಂದ್ಯ ಎನಿಸಿದೆ. ಚೆನ್ನೈ ವಿರುದ್ಧದ ಪ್ರಮುಖ ಪಂದ್ಯಕ್ಕೆ ವೇಗಿ ಟ್ರೆಂಟ್‌ ಬೌಲ್ಟ್‌ ಗಾಯದ ಕಾರಣಕ್ಕಾಗಿ ಅಲಭ್ಯರಾಗಿದ್ದು ಅವರ ಬದಲು ಆಡಮ್‌ ಜಂಪಾ ಸ್ಥಾನ ಪಡೆದಿದ್ದಾರೆ.ಇದಕ್ಕೂ ಮುನ್ನ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು ಚೆನ್ನೈನ ಚೆಪಾಕ್‌ ಮೈದಾನದಲ್ಲಿಯೇ ಮಣಿಸಿದ್ದ ರಾಜಸ್ಥಾನ ರಾಯಲ್ಸ್‌ ಈಗ ತನ್ನ ತವರಿನಲ್ಲಿ ಚೆನ್ನೈ ವಿರುದ್ಧ ಗೆಲುವು ಸಾಧಿಸುವ ಗುರಿಯಲ್ಲಿದೆ. ಆದರೆ, ಅದು ತಂಡಕ್ಕೆ ಸುಲಭವಿಲ್ಲ. ಚೆನ್ನೈ ತಂಡವೀಗ ಸತತ ಮೂರು ಪಂದ್ಯಗಳ ಗೆಲುವಿನ ನಾಗಾಲೋಟದಲ್ಲಿದ್ದು, ಆದಷ್ಟು ಶೀಘ್ರವಾಗಿ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯುವ ಗುರಿಯಲ್ಲಿದೆ. 

ನಾವು ಮೊದಲು ಬ್ಯಾಟಿಂಗ್ ಮಾಡಲು ನಿರ್ಧಾರ ಮಾಡಿದ್ದೇವೆ. ನಮ್ಮ ಬಲದ ಬಗ್ಗೆ ನಮಗೆ ವಿಶ್ವಾಸವಿದೆ. ಮೊತ್ತವನ್ನು ರಕ್ಷಣೆ ಮಾಡುವುದು ನಮಗೆ ಸುಲಭ ಎಂದು ಅನಿಸಿದೆ. ರಾಜಸ್ಥಾನ ರಾಯಲ್ಸ್‌ ತಂಡದ 200ನೇ ಐಪಿಎಲ್‌ ಪಂದ್ಯ ಆಡುವುದು ಬಹಳ ಖುಷಿ ಎನಿಸಿದೆ. 10 ವರ್ಷಗಳ ಕಾಲ ಆಡಿದ್ದೂ ಕೂಡ ನನಗೆ ಸಂಭ್ರಮ ತಂದಿದೆ. ಇಂದು ಇಲ್ಲಿ ಗುಲಾಬಿ ಬಣ್ಣ ಏಳುವ ವಿಶ್ವಾಸವಿದೆ. ಆದರೆ, ಚೆನ್ನೈ ಟೀಮ್‌ ಬಗ್ಗೆ ನಮಗೆ ತಿಳಿದಿದೆ. ಬೌಲ್ಟ್‌ ಈ ಪಂದ್ಯಕ್ಕೆ ಮಿಸ್‌ ಆಗಿದ್ದಾರೆ. ಅವರ ಬದಲು ಜಂಪಾ ಆಡುತ್ತಿದ್ದಾರೆ ಎಂದು ಟಾಸ್‌ನ ವೇಳೆ ಸಂಜು ಸ್ಯಾಮ್ಸನ್‌ ಹೇಳಿದ್ದಾರೆ.

ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ/ವಿ.ಕೀ), ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಆಡಮ್ ಝಂಪಾ, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್

ಕ್ರಿಕೆಟ್‌ ಬದುಕಿನ ಕೊನೆ ಹಂತದಲ್ಲಿದ್ದೇನೆ: ನಿವೃತ್ತಿಯ ಸುಳಿವು ಕೊಟ್ರಾ ಧೋನಿ?

ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ(ನಾಯಕ/ವಿ.ಕೀ), ಮಥೀಶ ಪತಿರಾನ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಆಕಾಶ್ ಸಿಂಗ್

ವೇಗಿ ನಟರಾಜನ್ ಮಗಳ ಜತೆ ಅಮೂಲ್ಯ ಕ್ಷಣ ಕಳೆದ ಧೋನಿ..! ವಿಡಿಯೋ ವೈರಲ್‌