* ಸನ್‌ರೈಸರ್ಸ್ ಹೈದರಾಬಾದ್ ಎದುರು ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್* ಪಂದ್ಯ ಮುಕ್ತಾಯದ ಬಳಿಕ ನಟರಾಜನ್ ಕುಟುಂಬದ ಜತೆ ಸಮಯ ಕಳೆದ ಧೋನಿ* ಧೋನಿ ಹಾಗೂ ನಟರಾಜನ್ ಮಗಳ ನಡುವಿನ ಸಂಭಾಷಣೆಯ ವಿಡಿಯೋ ವೈರಲ್
ಚೆನ್ನೈ(ಏ.22): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 29ನೇ ಪಂದ್ಯದಲ್ಲಿ 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ತಂಡವು, ಆರೆಂಜ್ ಆರ್ಮಿ ಎದುರು ಸುಲಭ ಗೆಲುವು ದಾಖಲಿಸಿದೆ. ಇನ್ನು ಪಂದ್ಯ ಮುಕ್ತಾಯದ ಬಳಿಕ ಧೋನಿ, ಸನ್‌ರೈಸರ್ಸ್ ಹೈದರಾಬಾದ್ ತಂಡದ ಎಡಗೈ ವೇಗಿ ಟಿ ನಟರಾಜನ್ ಅವರ ಪುಟ್ಟ ಮಗಳ ಜತೆ ಕೆಲ ಅಮೂಲ್ಯ ಕ್ಷಣಗಣಗಳನ್ನು ಕಳೆದರು.
ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಎಂ ಎಸ್ ಧೋನಿ, ನಟರಾಜನ್ ಮಗಳ ಜತೆ ಆಟವಾಡುತ್ತಿರುವ ಹಾಗೂ ನಟರಾಜನ್ ಕುಟುಂಬದ ಜತೆ ಕೆಲಕಾಲ ಸಮಯ ಕಳೆದಿರುವ ವಿಡಿಯೋ ವೈರಲ್ ಆಗಿದೆ.
ಚೆನ್ನೈಗೆ ಭರ್ಜರಿ ಜಯಭೇರಿ:
ನಿರೀಕ್ಷೆಯಂತೆಯೇ ಚೆನ್ನೈ ಸೂಪರ್ ಕಿಂಗ್‌್ಸನ ಗುಣಮಟ್ಟದ ಸ್ಪಿನ್ನರ್‌ಗಳ ಎದುರು ಸನ್‌ರೈಸರ್ಸ್ ಹೈದರಾಬಾದ್ ತಂಡ ಪಲ್ಟಿ ಹೊಡೆಯಿತು. ತನ್ನ ಭದ್ರಕೋಟೆ ಚೆಪಾಕ್ ಕ್ರೀಡಾಂಗಣದಲ್ಲಿ ಸ್ಪಿನ್ ದಾಳಿಯಿಂದ ಸನ್‌ರೈಸರ್ಸ್ ಪಡೆಯ ಉಸಿರು ಕಟ್ಟಿಸಿದ ಸಿಎಸ್‌ಕೆ 7 ವಿಕೆಟ್ ಜಯ ಸಾಧಿಸಿ, 3ನೇ ಸ್ಥಾನಕ್ಕೇರಿತು.
ಮೊದಲ ಇನ್ನಿಂಗ್‌್ಸನಲ್ಲಿ ಸ್ಪಿನ್ನರ್‌ಗಳ ಗಾಳಕ್ಕೆ ಬಿದ್ದ ಹೈದ್ರಾಬಾದ್ ತಂಡವನ್ನು ಡೆವೊನ್ ಕಾನ್ವೇ ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಿದರು. ಅವರ ಮನಮೋಹಕ 77 ರನ್‌ಗಳ ಇನ್ನಿಂಗ್‌್ಸ ಸನ್‌ರೈಸರ್ಸ್ ಗಾಯದ ಮೇಲೆ ಬರೆ ಎಳೆದಂತ್ತಿತ್ತು. 6 ಪಂದ್ಯಗಳಲ್ಲಿ 4ರಲ್ಲಿ ಸೋತಿರುವ ಮಾರ್ಕ್ರಮ್ ನಾಯಕತ್ವದ ತಂಡ 9ನೇ ಸ್ಥಾನದಲ್ಲೇ ಬಾಕಿಯಾಗಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈಗೆ ಸ್ಪಿನ್ನರ್‌ಗಳು ಕೈಹಿಡಿದರು. ರವೀಂದ್ರ ಜಡೇಜಾ, ಮಹೀಶ್ ತೀಕ್ಷಣ ಹಾಗೂ ಮೋಯಿನ್ ಅಲಿ ತಮ್ಮ ನಡುವೆ ಒಟ್ಟು 10 ಓವರ್‌ಗಳನ್ನು ಬೌಲ್ ಮಾಡಿ ಕೇವಲ 67 ರನ್ ಬಿಟ್ಟುಕೊಟ್ಟರು. ಜಡೇಜಾ 4 ಓವರಲ್ಲಿ ಕೇವಲ 22 ರನ್‌ಗೆ 3 ವಿಕೆಟ್ ಕಬಳಿಸಿದರು. ವೇಗಿಗಳಿಂದಲೂ ಉತ್ತಮ ಬೆಂಬಲ ದೊರೆತಿದ್ದು, ಚೆನ್ನೈ ಮೊದಲ ಇನ್ನಿಂಗ್ಸಲ್ಲೇ ಪಂದ್ಯದಲ್ಲಿ ಮೇಲುಗೈ ಸಾಧಿಸಲು ಅನುಕೂಲವಾಯಿತು.
ಬೆಂಗಳೂರಿನ CTR ಗೆ ಭೇಟಿ ನೀಡಿದ ವಿರುಷ್ಕಾ ಜೋಡಿ..! ವಿಡಿಯೋ ವೈರಲ್
ಸನ್‌ರೈಸರ್ಸ್ 10.3 ಓವರ್‌ನಿಂದ 16.3 ಓವರ್ ವರೆಗೂ ಒಂದೂ ಬೌಂಡರಿ ಬಾರಿಸಲಿಲ್ಲ. ಕೊನೆಯ 57 ಎಸೆತಗಳಲ್ಲಿ ಕೇವಲ 3 ಬೌಂಡರಿಗಳು ದಾಖಲಾದವು. ಇದರಿಂದಾಗಿ ತಂಡ 20 ಓವರಲ್ಲಿ 7 ವಿಕೆಟ್‌ಗೆ ಕೇವಲ 134 ರನ್ ಕಲೆಹಾಕಿತು. ತಂಡದ ಮೊತ್ತ ಚೆಪಾಕ್‌ನ ಸರಾಸರಿ ಮೊದಲ ಇನ್ನಿಂಗ್‌್ಸ ಮೊತ್ತಕ್ಕೆ ಹೋಲಿಸಿದರೆ 20-25 ರನ್ ಕಡಿಮೆ ಎನಿಸಿತು.
ಚೆನ್ನೈ‘ಪವರ್-ಪ್ಲೇ’!: ಸುಲಭ ಗುರಿ ಬೆನ್ನತ್ತಿದ ಚೆನ್ನೈ, ಸನ್‌ರೈಸರ್ಸ್ ಆರಂಭಿಕ ಯಶಸ್ಸು ಸಾಧಿಸಲು ಬಿಡಲಿಲ್ಲ. ಋುತುರಾಜ್ ತುಸು ನಿಧಾನವಾಗಿ ಬ್ಯಾಟ್ ಬೀಸಿದರೂ, ಡೆವೊನ್ ಕಾನ್ವೇ ಸನ್‌ರೈಸರ್ಸ್ ಬೌಲರ್‌ಗಳನ್ನು ಚೆಂಡಾಡಿದರು. ಮಾರ್ಕೊ ಯಾನ್ಸನ್ ಎಸೆದ ಇನ್ನಿಂಗ್‌್ಸನ 6ನೇ ಓವರಲ್ಲಿ 23 ರನ್ ಚಚ್ಚಿದ ಸಿಎಸ್‌ಕೆ, ಪವರ್-ಪ್ಲೇ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 60 ರನ್ ಗಳಿಸಿತು.
ಪವರ್-ಪ್ಲೇ ಮುಗಿಯುತ್ತಿದ್ದಂತೆ ಚೆನ್ನೈನ ಪವರ್ ಕಡಿಮೆಯಾಯಿತು. 7ನೇ ಓವರ್‌ನಿಂದ 13ನೇ ಓವರ್ ವರೆಗೂ ಕೇವಲ ಒಂದು ಬೌಂಡರಿ ಗಳಿಸಲಷ್ಟೇ ಸಿಎಸ್‌ಕೆ ಬ್ಯಾಟರ್‌ಗಳು ಯಶಸ್ವಿಯಾದರು. ಈ ನಡುವೆ 30 ಎಸೆತದಲ್ಲಿ 35 ರನ್ ಬಾರಿಸಿದ ಋುತುರಾಜ್ ರನೌಟ್ ಆದರು. ರಹಾನೆ ಹಾಗೂ ರಾಯುಡು ತಲಾ 9 ರನ್‌ಗೆ ತಮ್ಮ ಆಟ ನಿಲ್ಲಿಸಿದರೂ, ಕಾನ್ವೇ ಕ್ರೀಸ್‌ನಲ್ಲಿ ನೆಲೆಯೂರಿದ್ದರಿಂದ ಯಾವುದೇ ಆತಂಕವಿಲ್ಲದೆ ಇನ್ನೂ 8 ಎಸೆತ ಬಾಕಿ ಇರುವಂತೆ ಚೆನ್ನೈ ಗುರಿ ತಲುಪಿತು. 57 ಎಸೆತದಲ್ಲಿ 12 ಬೌಂಡರಿ, 1 ಸಿಕ್ಸರ್‌ನೊಂದಿಗೆ 77 ರನ್ ಗಳಿಸಿ ಔಟಾಗದೆ ಉಳಿದ ಕಾನ್ವೇ, ಸತತ 3ನೇ ಅರ್ಧಶತಕ ದಾಖಲಿಸಿ ತಂಡ ತಮ್ಮ ಮೇಲಿಟ್ಟ ವಿಶ್ವಾಸ ಉಳಿಸಿಕೊಂಡರು.
