ಭುಜದ ಗಾಯದ ಕಾರಣದಿಂದಾಗಿ ಕಲೆದ ಮೂರು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಪಂಜಾಬ್‌ ಕಿಂಗ್ಸ್‌ ತಂಡದ ನಾಯಕ ಶಿಖರ್‌ ಧವನ್‌ ಮತ್ತೆ ಕಣಕ್ಕಿಳಿಯಲಿ ಸಜ್ಜಾಗಿದ್ದಾರೆ. ಅಂಕಪಟ್ಟಿಯಲ್ಲಿ 4 ಹಾಗೂ 6ನೇ ಸ್ಥಾನದಲ್ಲಿರುವ ಲಕ್ನೋ ಸೂಪರ್‌ ಜೈಂಟ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗಲಿವೆ. 

ಮೊಹಾಲಿ (ಏ.28): ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಲಕ್ನೋ ಸೂಪರ್‌ ಜೈಂಟ್ಸ್‌ ಹಾಗೂ 6ನೇ ಸ್ಥಾನದಲ್ಲಿರುವ ಪಂಜಾಬ್‌ ಕಿಂಗ್ಸ್‌ ತಂಡಗಳು ಇಂದು ಮೊಹಾಲಿಯಲ್ಲಿ ಮುಖಾಮುಖಿಯಾಗಲಿವೆ. ಟಾಸ್‌ ಗೆದ್ದ ಪಂಜಾಬ್‌ ತಂಡದ ನಾಯಕ ಶಿಖರ್‌ ಧವನ್‌ ಮೊದಲು ಬೌಲಿಂಗ್‌ ಮಾಡುವ ತೀರ್ಮಾನ ಮಾಡಿದ್ದಾರೆ. ಭುಜದ ಗಾಯದಿಂದಾಗಿ ಕಳೆದ ಮೂರು ಪಂದ್ಯ ತಪ್ಪಿಸಿಕೊಂಡಿದ್ದ ಶಿಖರ್‌ ಧವನ್‌ ತಂಡಕ್ಕೆ ವಾಪಸಾಗಿದ್ದಾರೆ. ಪಂದ್ಯಕ್ಕಾಗಿ ಪಂಜಾಬ್‌ ತಂಡ ಎರಡು ಪ್ರಮುಖ ಬದಲಾವಣೆಯನ್ನು ಮಾಡಿದೆ. ಮ್ಯಾಥ್ಯೂ ಶಾರ್ಟ್‌ ಬದಲಿಗೆ ಸಿಕಂದರ್‌ ರಾಜಾ ತಂಡಕ್ಕೆ ವಾಪಸಾಗಿದ್ದರೆ, ಅದರೊಂದಿಗೆ ನೂತನ ವೇಗಿ ಗರ್ನೂರ್‌ ಬ್ರಾರ್‌ ಈ ಪಂದ್ಯದ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಇನ್ನು ಲಕ್ನೋ ಸೂಪರ್‌ ಜೈಂಟ್ಸ್‌ ಪಂದ್ಯಕ್ಕಾಗಿ ತಂಡಕ್ಕೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಧವನ್‌ ಮಾತ್ರವಲ್ಲದೆ ಪಂಜಾಬ್‌ ತಂಡಕ್ಕೆ ಕಗೀಸೋ ರಬಾಡ ಕೂಡ ತಂಡಕ್ಕೆ ವಾಪಸಾಗಿದ್ದಾರೆ.

ಕೆಎಲ್‌ ರಾಹುಲ್‌ ಇದೇ ಮೈದಾನ ಐಪಿಎಲ್‌ನ ಅತಿವೇಗದ ಅರ್ಧಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ. ಅದೇ ನೆನಪಿನಲ್ಲಿಯೇ ಮತ್ತೊಮ್ಮೆ ದೊಡ್ಡ ಇನ್ನಿಂಗ್ಸ್‌ ಆಡುವ ಭರವಸೆಯಲ್ಲಿದ್ದಾರೆ. ಆದರೆ, ಈ ಬಾರಿ ಅವರು ಲಕ್ನೋ ಸೂಪರ್‌ ಜೈಂಟ್‌f ತಂಡವನ್ನು ಮುನ್ನಡೆಸುತ್ತಿದ್ದು, ಅತಿವೇಗದ ಅರ್ಧಶತಕ ಬಾರಿಸಿದ್ದ ತಂಡವಾದ ಪಂಜಾಬ್‌ ಕಿಂಗ್ಸ್‌ ಈ ಬಾರಿ ಎದುರಾಳಿಯಾಗಿದೆ. ಈ ತಿಂಗಳ ಆರಂಭದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದಾಗ ಪಂಜಾಬ್‌ ಸಣ್ಣ ಅಂತರದಲ್ಲಿ ಸೋಲು ಕಂಡಿತ್ತು. ಇನ್ನು ಮೊಹಾಲಿ ಪಿಚ್‌ನಲ್ಲಿ ಶಿಖರ್‌ ಧವನ್‌ ವಿರುದ್ಧ ಅಮಿತ್‌ ಶಾ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಇಲ್ಲಿ ಧವನ್‌ ವಿರುದ್ಧ ಆಡಿದ ಐದು ಇನ್ನಿಂಗ್ಸ್‌ಗಳಲ್ಲಿ ಮೂರು ಬಾರಿ ಅವರ ವಿಕೆಟ್‌ ಉರುಳಿಸಲು ಯಶಸ್ವಿಯಾಗಿದ್ದಾರೆ. ಧವನ್‌ಗೆ ಎಸೆದ 32 ಎಸೆತಗಳಲ್ಲಿ ಕೇವಲ 39 ರನ್‌ ನೀಡಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ XI: 1 ಕೆಎಲ್ ರಾಹುಲ್ (ನಾಯಕ), 2 ಕೈಲ್ ಮೇಯರ್ಸ್, 3 ಕೃನಾಲ್ ಪಾಂಡ್ಯ, 4 ಮಾರ್ಕಸ್ ಸ್ಟೋನಿಸ್, 5 ದೀಪಕ್ ಹೂಡಾ, 6 ನಿಕೋಲಸ್ ಪೂರನ್ (ವಿ.ಕೀ), 7 ಆಯುಷ್ ಬಡೋನಿ, 8 ನವೀನ್-ಉಲ್-ಹಕ್, 9 ರವಿ ಬಿಷ್ಣೋಯ್ , 10 ಅವೇಶ್ ಖಾನ್, 11 ಯಶ್ ಠಾಕೂರ್.

'ಮೂರ್ಖತನದ ಆಟ..' ಕೆಎಲ್‌ ರಾಹುಲ್‌ ಬ್ಯಾಟಿಂಗ್‌ಗೆ ವೆಂಕಟೇಶ್‌ ಪ್ರಸಾದ್‌ ಕಿಡಿ!

ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ಅಥರ್ವ ಟೈಡೆ, ಶಿಖರ್ ಧವನ್ (ಸಿ), ಸಿಕಂದರ್ ರಜಾ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರಾನ್, ಜಿತೇಶ್ ಶರ್ಮಾ (ಡಬ್ಲ್ಯೂ), ಶಾರುಖ್ ಖಾನ್, ಕಗಿಸೊ ರಬಾಡಾ, ರಾಹುಲ್ ಚಾಹರ್, ಗುರ್ನೂರ್ ಬ್ರಾರ್, ಅರ್ಶ್‌ದೀಪ್ ಸಿಂಗ್

ಆರ್‌ಸಿಬಿ ಕೆಣಕಿದ ಗಂಭೀರ್ ವಿರುದ್ದ ಸೇಡು ತೀರಿಸಿಕೊಂಡ್ರಾ ರಾಹುಲ್? ಲಖನೌ ಸೋಲಿಗೆ ನಾಯಕ ಟ್ರೋಲ್!