ಗುಜರಾತ್‌ ಟೈಟಾನ್ಸ್‌ ವಿರುದ್ಧ ಕೆಎಲ್‌ ರಾಹುಲ್‌ ಆಡಿದ ಬ್ಯಾಟಿಂಗ್‌ಗೆ ಎಲ್ಲಾ ಕಡೆಯಿಂದ ಟೀಕೆ ವ್ಯಕ್ತವಾಗುತ್ತಿದೆ. ಅವರ ಬ್ಯಾಟಿಂಗ್‌ ರೀತಿಗೆ ದೊಡ್ಡ ಟೀಕಾಕಾರರಾಗಿರುವ ಭಾರತ ತಂಡದ ಮಾಜಿ ವೇಗಿ ವೆಂಕಟೇಶ್‌ ಪ್ರಸಾದ್‌ ಕೂಡ ಕೆಎಲ್‌ ರಾಹುಲ್‌ ಆಟವನ್ನು ಟೀಕಿಸಿದ್ದಾರೆ.

ಬೆಂಗಳೂರು (ಏ.22): ಪವರ್‌ ಪ್ಲೇ ಅವಧಿಯಲ್ಲಿ 150ಕ್ಕೂ ಅಧಿಕ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್‌, ಕೊನೇ 6 ಓವರ್‌ಗಳಲ್ಲಿ ಗೆಲುವಿಗೆ 31 ರನ್‌ ಪೇರಿಸಬೇಕಾದ ಸರಳ ಸವಾಲು ಇದ್ದ ನಡುವೆಯೂ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ 7 ರನ್‌ಗಳಿಂದ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ವಿರುದ್ಧ ಸೋಲು ಕಂಡಿದೆ. ಇದರ ಬೆನ್ನಲ್ಲಿಯೇ ಮಾಜಿ ಆಟಗಾರರು ಕೆಎಲ್‌ ರಾಹುಲ್‌ ಅವರ ನಿಧಾನಗತಿಯ ಇನ್ನಿಂಗ್ಸ್‌ ಪಂದ್ಯದ ಸೋಲಿಗೆ ಕಾರಣ ಎಂದು ಹೇಳಿದ್ದಾರೆ. ತಂಡವನ್ನು ಗೆಲುವಿನ ಅಂಚಿಗೆ ತಂದಿದ್ದು ರಾಹುಲ್‌ ಆದರೂ, ಸೋಲಿಗೆ ಕಾರಣವಾಗಿದ್ದೂ ಕೂಡ ರಾಹುಲ್‌ ಎನ್ನುವ ಟೀಕೆ ವ್ಯಕ್ತವಾಗಿದೆ. ಟೀಮ್‌ ಇಂಡಿಯಾ ಮಾಜಿ ವೇಗಿ, ಕೋಚ್‌ ಮತ್ತು ಕರ್ನಾಟಕ ತಂಡದ ಮಾಜಿ ಆಟಗಾರ ವೆಂಕಟೇಶ್‌ ಪ್ರಸಾದ್ ಕೂಡ ರಾಹುಲ್‌ ಅವರ ಬ್ಯಾಟಿಂಗ್‌ಅನ್ನು ಟೀಕಿಸಿದ್ದಾರೆ. ರಾಹುಲ್‌ರ ಬ್ಯಾಟಿಂಗ್‌ಅನ್ನು ಈ ಹಿಂದೆಯೂ ಸಾಕಷ್ಟು ಬಾರಿ ಟೀಕಿಸಿದ್ದ ವೆಂಕಟೇಶ್‌ ಪ್ರಸಾದ್‌, ಶನಿವಾರ ಗುಜರಾತ್‌ ಟೈಟಾನ್ಸ್‌ ವಿರುದ್ಧ ಗೆಲ್ಲುವಂತಿದ್ದ ಪಂದ್ಯವನ್ನು ಲಕ್ನೋ ಸೋಲು ಕಂಡ ಬಳಿಕ ಮತ್ತಷ್ಟು ಕಿಡಿಕಿಡಿಯಾಗಿದ್ದಾರೆ. ರಾಹುಲ್‌ ಆಡಿದ್ದು ಮೂರ್ಖತನದ ಆಟ ಎಂದಿರುವ ಅವರು, ಈ ಹಿಂದೆ ಪಂಜಾಬ್‌ ಪರವಾಗಿ ರಾಹುಲ್‌ ಆಡಿದ್ದ ಇಂಥದ್ದೇ ಇನ್ನಿಂಗ್ಸ್‌ಅನ್ನು ಅವರಿಗೆ ನೆನಪಿಸಿದ್ದಾರೆ.

'9 ವಿಕೆಟ್‌ ಇರುವಾಗ 35 ಎಸೆತಗಳಲ್ಲಿ 30 ರನ್‌ ಬೇಕಿದ್ದಾಗ ರನ್‌ ಚೇಸ್‌ಗೆ ಜೀವ ತುಂಬಲು ಸಣ್ಣ ಎಚ್ಚರಿಕೆ ಬ್ಯಾಟಿಂಗ್‌ ಮಾಡಿದ್ದರೂ ಸಾಕಿತ್ತು. 2020ರಲ್ಲಿ ಪಂಜಾಬ್‌ ಪರವಾಗಿಯೂ ಇಂಥದ್ದೇ ಕೆಲವು ಪಂದ್ಯಗಳಾಗಿದ್ದವು. ತೀರಾ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ತಂಡ ಸೋಲುತ್ತಿತ್ತು. ಬೌಲಿಂಗ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ಅತ್ಯುದ್ಬುತ ನಿರ್ವಹಣೆ ನೀಡಿತು. ಹಾರ್ದಿಕ್‌ ಪಾಂಡ್ಯ ಚಾಣಾಕ್ಷವಾಗಿ ನಾಯಕತ್ವ ನಿಭಾಯಿಸಿದರು. ಕೆಎಲ್‌ ರಾಹುಲ್‌ ಮೂರ್ಖತನ ಮಾಡಿದರು' ಎಂದು ಟ್ವೀಟ್‌ ಮಾಡಿದ್ದಾರೆ. ಎಲ್ಲೂ ರಾಹುಲ್‌ ಅಂತಾಗಲಿ ಕೆಎಲ್‌ ರಾಹುಲ್‌ ಅಂತಾಗಲಿ ಹೆಸರು ಬರೆಯದ ವೆಂಕಟೇಶ್‌ ಪ್ರಸಾದ್‌ ಎಲ್‌ಕೆಓ (ಲೋಕೋ) ಎಂದು ಬರೆದುಕೊಂಡಿದ್ದಾರೆ.

ಇನ್ನು ವೆಂಕಟೇಶ್‌ ಪ್ರಸಾದ್‌ ಅವರ ಟ್ವೀಟ್‌ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು ಎಲ್ಲರೂ ಕೆಎಲ್‌ ರಾಹುಲ್‌ ಅವರ ಬ್ಯಾಟಿಂಗ್ ವೈಖರಿಯನ್ನು ಟೀಕಿಸಿದ್ದಾರೆ. ' ಕೆಎಲ್‌ ರಾಹುಲ್‌ ಪಂಜಾಬ್‌ ಕಿಂಗ್ಸ್‌ ತಂಡದ ನಾಯಕರಾಗಿದ್ದ ವೇಳೆ, ಗೆಲ್ಲುವಂಥಿದ್ದ ಹಲವು ಪಂದ್ಯಗಳನ್ನು ಸೋಲುತ್ತಿತ್ತು. ಈಗ ಲಕ್ನೋ ಪರವಾಗಿ ಹಾಗೇ ಆಗುತ್ತಿದೆ. ಇಂಥ ನಿರ್ವಹಣೆಯನ್ನು ಸ್ಥಿರವಾಗಿ ತೋರಲು ವಿಶೇಷ ಟ್ಯಾಲೆಂಟ್‌ನ ಅಗತ್ಯವಿದೆ' ಎಂದು ಜಿತೇಂದರ್‌ ಗಿರಿಧರ್‌ ಎನ್ನುವವರು ಪ್ರತಿಕ್ರಿಯಿಸಿದ್ದಾರೆ.

Scroll to load tweet…

ಆರ್‌ಸಿಬಿ ಕೆಣಕಿದ ಗಂಭೀರ್ ವಿರುದ್ದ ಸೇಡು ತೀರಿಸಿಕೊಂಡ್ರಾ ರಾಹುಲ್? ಲಖನೌ ಸೋಲಿಗೆ ನಾಯಕ ಟ್ರೋಲ್!

'ಯಾವೆಗಲ್ಲಾ ರಾಹುಲ್‌ ಆಟವಾವಾಡ್ತಾರೋ ಅವರ ತಂಡ ಸೋಲು ಕಾಣುತ್ತದೆ....' ಎಂದು ಇನ್ನೊಬ್ಬರು ಟೀಕೆ ಮಾಡಿದ್ದಾರೆ. 'ವೆಂಕಿ ಭಾಯ್‌ ನೀವು ಹೀಗೆ ಬರೆದುಕೊಂಡಿರಬಹುದು. ಆದರೆ, ಎರಡೂ ಪಂದ್ಯಗಳ ನಡುವೆ ಯಾವ ವಿಚಾರ ಕಾಮನ್‌ ಎನ್ನುವುದು ಎಲ್ಲರಿಗೂ ಗೊತ್ತಿದೆ' ಎಂದು ಬರೆದಿದ್ದಾರೆ. 'ಬ್ರೇನ್‌ಲೆಸ್‌ ಫ್ರಮ್‌ ಕೆಎಲ್‌ ಎಂದು ಓದಿಕೊಳ್ಳುತ್ತೇವೆ ಬಿಡಿ. ಇದೇನು ಅಚ್ಚರಿಯ ವಿಚಾರವಲ್ಲ. ಯಾವುದೇ ತಂಡಕ್ಕೂ ಕೂಡ ಅವರೊಬ್ಬರು ಹೊರೆ' ಎಂದು ಬರೆದಿದ್ದಾರೆ.

IPL 2023: ಗೆಲ್ಲೋ ಮ್ಯಾಚ್‌ ಸೋಲಿಸಿದ ಕೆಎಲ್‌ ರಾಹುಲ್‌, ನೆಟ್ಟಿಗರ ಟೀಕೆ!

ಫಿಕ್ಸಿಂಗ್‌ ಎನ್ನುವುದು ತನ್ನ ಪ್ರಖ್ಯಾತ ಸ್ಥಿತಿಯಲ್ಲಿದೆ. ಚೆಂಡನ್ನು ಬಾರಿಸುವ ಉತ್ಸಾಹವೇ ಇಲ್ಲದೇ ಇದ್ದಾಗ ನಿಧಾನಗತಿಯ ಪಿಚ್‌ ಅನ್ನು ದೂಷಣೆ ಮಾಡುವುದು ಒಳ್ಳೆಯದಲ್ಲ. ಇದರಲ್ಲಿ ಕೆಎಲ್‌ ರಾಹುಲ್‌ ಅವರ ಟ್ಯಾಲೆಂಟ್‌ ಎದ್ದು ಕಾಣುತ್ತಿದೆ' ಎಂದು ಬರೆದಿದ್ದಾರೆ. 2020ರ ಐಪಿಎಲ್‌ಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದ ಗೆಲುವಿಗೆ 21 ಎಸೆತಗಳಲ್ಲಿ 24 ರನ್‌ ಬೇಕಿತ್ತು. ಆ ಪಂದ್ಯದಲ್ಲಿ ಕೆಎಲ್‌ ರಾಹುಲ್‌ 54 ಎಸೆತಗಳಲ್ಲಿ ಅಜೇಯ 71 ರನ್‌ ಬಾರಿಸಿದ್ದರು. ಹಾಗಿದ್ದರೂ ತಂಡ 2 ರನ್‌ಗಳಿಂದ ಸೋಲು ಕಂಡಿತ್ತು ಎಂದು ಇನ್ನೊಬ್ಬರು ಹಿಂದಿನ ಪಂದ್ಯವನ್ನು ನೆನಪಿಸಿದ್ದಾರೆ.