ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ಹಾಗೂ ಐಪಿಎಲ್‌ನ ಯಶಸ್ವಿ ತಂಡ ಮುಂಬೈ ಇಂಡಿಯನ್ಸ್‌ ನಡುವಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಟಾಸ್‌ ಗೆದ್ದುಕೊಂಡಿದೆ. ಇನ್ನು ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಎರಡು ಪ್ರಮುಖ ಬದಲಾವಣೆ ಮಾಡಿದೆ. 

ಅಹಮದಾಬಾದ್ (ಏ.25): ಕಳೆದ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಅಲ್ಪ ಮೊತ್ತವನ್ನು ರಕ್ಷಿಸಿಕೊಂಡ ವಿಶ್ವಾಸದಲ್ಲಿರುವ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ಹಾಗೂ ಕಳೆದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ 13 ರನ್‌ಗಳ ಆಘಾತಕಾರಿ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್‌ ತಂಡಗಳು ಐಪಿಎಲ್‌ 2023 ಪಂದ್ಯದಲ್ಲಿ ಮಂಗಳವಾರ ಮುಖಾಮುಖಿಯಾಗಲಿದೆ. ಟಾಸ್‌ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡದ ಮೊದಲು ಬೌಲಿಂಗ್‌ ಮಾಡುವ ನಿರ್ಧಾರ ಮಾಡಿದ್ದು, ತಂಡದಲ್ಲಿ ಎರಡು ಪ್ರಮುಖ ಬದಲಾವಣೆ ಘೋಷಣೆ ಮಾಡಿದೆ. ಇನ್ನು ಲಕ್ನೋ ತಂಡದಲ್ಲೂ ಕೊಂಚ ಬದಲಾವಣೆ ಮಾಡಲಾಗಿದ್ದು, ಜೋಶ್‌ ಲಿಟಲ್‌ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.ಕಳೆದ ಪಂದ್ಯದಲ್ಲಿ ಆಡಿದ್ದ ಹೃತಿಕ ಶೋಕೀನ್‌ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದು ಅವರ ಬದಲು ಕುಮಾರ ಕಾರ್ತಿಕೇಯ ಸ್ಥಾನ ಪಡೆದಿದ್ದಾರೆ, ಇನ್ನು ಅನಾರೋಗ್ಯದ ಕಾರಣ ಜೋಫ್ರಾ ಆರ್ಚರ್‌ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಬದಲು ರೆಲ್ಲಿ ಮೆರಿಡೆತ್‌ ಸ್ಥಾನ ಪಡೆದಿದ್ದಾರೆ.

ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ ಇಲೆವೆನ್‌): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿ.ಕೀ), ಕ್ಯಾಮರೂನ್‌ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ನೆಹಾಲ್ ವಧೇರಾ, ಕುಮಾರ್ ಕಾರ್ತಿಕೇಯ, ಅರ್ಜುನ್ ತೆಂಡೂಲ್ಕರ್, ರಿಲೆ ಮೆರೆಡಿತ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆನ್‌ಡಾರ್ಫ್.

ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ ಇಲೆವೆನ್‌): ವೃದ್ಧಿಮಾನ್ ಸಹಾ(ವಿ.ಕೀ), ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಮೋಹಿತ್ ಶರ್ಮಾ

ವಿರಾಟ್ ಕೊಹ್ಲಿಗೆ ಬಿತ್ತು ಬಲವಾದ ದಂಡದ ಬರೆ; ನಿಷೇಧದ ಭೀತಿಯಲ್ಲಿ ಕಿಂಗ್‌ ಕೊಹ್ಲಿ..!

ನಾವು ಮೊದಲು ಬೌಲಿಂಗ್‌ ಮಾಡುವ ನಿರ್ಧಾರ ಮಾಡಲು ಕಾರಣವೂ ಇದೆ. ಪಿಚ್‌ಅನ್ನು ಇದೇ ನಿನ್ನೆ ನೋಡಿದ್ದೆವು. ಬಹಳ ಗಟ್ಟಿಯಾಗಿತ್ತು. ಇಲ್ಲಿ ಈಗ ಸಾಕಷ್ಟು ನೀರಿ ಹರಿಸಲಾಗಿದೆ. ಹಾಗಾಗಿ ಪಿಚ್‌ನ ವಾತಾವರಣವನ್ನು ನೋಡಿಕೊಂಡು ಅದರ ಸಂಪೂರ್ಣ ಲಾಭ ಪಡೆಯುವ ಪ್ರಯತ್ನ ಮಾಡಲಿದ್ದೇವೆ. ಬಹುಶಃ ತೇವಾಂಶದ ಲಾಭ ಸಿಗಬಹುದು. ಉತ್ತಮವಾಗಿ ಪಂದ್ಯವನ್ನು ಆರಂಭಿಸಿದರೆ, ಪಂದ್ಯ ಪ್ರಗತಿಯಾಗುತ್ತಾ ಒಂದು ಅಂದಾಜು ಸಿಗುತ್ತದೆ. ಇನ್ನು ಪಂಜಾಬ್‌ ಕಿಂಗ್ಸ್‌ ವಿರುದ್ಧ ಮಾಡಿದಂತ ತಪ್ಪುಗಳು ನಮಗೆ ಅರ್ಥವಾಗಿದೆ. ಅದನ್ನು ಡ್ರೆಸಿಂಗ್‌ ರೂಮ್‌ನಲ್ಲೂ ಚರ್ಚೆ ಮಾಡಿ ನಾವು ಒಪ್ಪಿಕೊಂಡೆವು. ತಪ್ಪುಗಳನ್ನು ಒಪ್ಪಿಕೊಂಡು ಮುಂದಿನ ಪಂದ್ಯದಲ್ಲಿ ನೀವು ಹೇಗೆ ಆಡುತ್ತೀರಿ ಅನ್ನೋದು ಬಹಳ ಪ್ರಮುಖವಾಗುತ್ತದೆ. ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದ ಬಳಿಕ ಆಟಗಾರರೊಂದಿಗೆ ಉತ್ತಮವಾಗಿ ಚರ್ಚೆ ಮಾಡಿದೆವು. ಇದು ಫಲಿತಾಂಶವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ ಎಂದು ರೋಹಿತ್‌ ಶರ್ಮ ಪಂದ್ಯದ ಟಾಸ್‌ ವೇಳೆ ಹೇಳಿದರು.

ವಿರಾಟ್ ಕೊಹ್ಲಿ ಜತೆ ಬ್ಯಾಡ್ಮಿಂಟನ್ ಆಡಿದ ಅನುಷ್ಕಾ ಶರ್ಮಾ; ಫಿಟ್ನೆಸ್ ಪಾಠ ಮಾಡಿದ ವಿರುಷ್ಕಾ ಜೋಡಿ

ಪಿಚ್‌ ಬಹಳ ಉತ್ತಮವಾಗಿ ಕಾಣುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿರುವ ಸಾಧ್ಯತೆ ಇದೆ. ಕಳೆದ ಪಂದ್ಯದಲ್ಲಿ ನಮ್ಮ ಆಟ ಅದ್ಭುತವಾಗಿತ್ತು. ಇಡೀ ಪಂದ್ಯದಲ್ಲಿ ಒಟ್ಟು 36 ಓವರ್‌ಗಳ ಕಾಲ ಲಕ್ನೋ ಹಿಡಿತ ಸಾಧಿಸಿತ್ತು. ಆದರೆ, ಆಟಗಾರರು ತಿರುಗೇಟು ನೀಡಿದ ರೀತಿ ನನಗೆ ಖುಷಿ ನೀಡುತ್ತದೆ. ನೆವರ್‌ ಗಿವ್‌ಅಪ್‌ ಹೇಗೆ ಅನ್ನೋದನ್ನ ನಾವು ತೋರಿಸಿಕೊಟ್ಟಿದ್ದೇವೆ. ಅದಲ್ಲದೆ, ಅದೃಷ್ಟ ಕೂಡ ನಮ್ಮ ಕಡೆಯುತ್ತು ಅಂತಾ ಕಾಣುತ್ತದೆ. ನಾವು ಅದೇ ತಂಡದೊಂದಿಗೆ ಆಡಲಿದ್ದೇವೆ, ಜೋಶ್ವಾ ಲಿಟಲ್‌ ಬದಲಿ ಅಟಗಾರರ ಲಿಸ್ಟ್‌ನಲ್ಲಿದ್ದಾರೆ ಎಂದು ಟಾಸ್‌ ವೇಳೆ ಹಾರ್ದಿಕ್‌ ಪಾಂಡ್ಯ ಹೇಳಿದ್ದಾರೆ.