ಲಖನೌ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೆಎಲ್‌ ರಾಹುಲ್‌ ನೇತೃತ್ವದ ಲಖನೌ ಸೂಪರ್‌ ಜೈಂಟ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡ ಮುಖಾಮುಖಿಯಾಗಲಿದೆ. ಹ್ಯಾಟ್ರಿಕ್‌ ಸೋಲು ತಪ್ಪಿಸಿಕೊಳ್ಳಲು ಪಂಬಾಜ್‌ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.

ಲಖನೌ (ಏ.15): ಸತತ ಎರಡು ಪಂದ್ಯಗಳಲ್ಲಿ ಹೀನಾಯ ಸೋಲಿನ ಹಿನ್ನಡೆಯಲ್ಲಿರುವ ಪಂಜಾಬ್‌ ಕಿಂಗ್ಸ್‌ ತಂಡ ಹಾಗೂ ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ರೋಚಕ ಗೆಲುವು ಸಾಧಿಸಿರುವ ಲಖನೌ ಸೂಪರ್‌ ಜೈಂಟ್ಸ್‌ ತಂಡ ಇಂದು ಭಾರತ ರತ್ನ ಶ್ರೀ ಅಟಲ್‌ ಬಿಹಾರಿ ವಾಜಪೇಯಿ ಎಕನಾ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದೆ. ಪಂದ್ಯಕ್ಕೂ ಮುನ್ನ ಪಂಜಾಬ್‌ ಕಿಂಗ್ಸ್‌ ತಂಡ ದೊಡ್ಡ ಹಿನ್ನಡೆ ಕಂಡಿದೆ. ಸನ್‌ರೈಸರ್ಸ್‌ ವಿರುದ್ಧ ಪಂದ್ಯದಲ್ಲಿ ಆಕರ್ಷಕ 99 ರನ್‌ ಸಿಡಿಸಿದ್ದ ಶಿಖರ್‌ ಧವನ್‌ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಸಣ್ಣ ಪ್ರಮಾಣದ ಗಾಯಾಳು ಇವರಾಗಿದ್ದು ಸ್ಯಾಮ್‌ ಕರ್ರನ್‌ ತಂಡದ ನೇತೃತ್ವ ವಹಿಸಿಕೊಂಡಿದ್ದಾರೆ. ಟಾಸ್‌ ಗೆದ್ದ ಪಂಜಾಬ್‌ ತಂಡದ ನಾಯಕ ಸ್ಯಾಮ್‌ ಕರ್ರನ್‌ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಲಖನೌ ಸೂಪರ್‌ ಜೈಂಟ್ಸ್‌ ತಂಡ ನಿಧಾನವಾಗಿ ಎಕನಾ ಕ್ರಿಕೆಟ್‌ ಮೈದಾನವನ್ನು ತನ್ನ ಬಲಿಷ್ಠ ತವರು ಮೈದಾನವನ್ನಾಗಿ ರೂಪುಗೊಳ್ಳುವ ರೀತಿಯಂತೆ ಕಾಣತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಇದೇ ಮೈದಾನದಲ್ಲಿ ಬಗ್ಗುಬಡಿದ್ದಿದ್ದ ಲಖನೌ ಬಳಿಕ ಸನ್‌ರೈಸರ್ಸ್‌ ತಂಡವನ್ನು ಮಣಿಸಿತ್ತು. ತವರಿನಲ್ಲಿ ಎರಡು ಭಿನ್ನ ಮಾದರಿಯ ಪಿಚ್‌ಗಳಲ್ಲಿ ಎರಡು ಗೆಲುವು ಸಾಧಿಸಿದ ವಿಶ್ವಾಸ ತಂಡದಲ್ಲಿದೆ. ಇನ್ನೂ ಆರ್‌ಸಿಬಿ ವಿರುದ್ಧ ಬೆಂಗಳೂರಿನಲ್ಲಿ 212ರನ್‌ ಚೇಸ್‌ ಮಾಡಿ ಗೆದ್ದಿದ್ದು, ದೊಡ್ಡ ಮಟ್ಟದ ಆತ್ಮವಿಶ್ವಾಸ ತುಂಬಿದೆ.

ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಕೆಎಲ್ ರಾಹುಲ್ ( ನಾಯಕ ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೋನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಿ.ಕೀ), ಆಯುಷ್ ಬಡೋನಿ, ಅವೇಶ್ ಖಾನ್, ಯುಧ್ವೀರ್ ಸಿಂಗ್ ಚರಕ್, ಮಾರ್ಕ್ ವುಡ್, ರವಿ ಬಿಷ್ಣೋಯ್

ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ಅಥರ್ವ ಟೈಡೆ, ಮ್ಯಾಥ್ಯೂ ಶಾರ್ಟ್, ಹರ್‌ಪ್ರೀತ್ ಸಿಂಗ್ ಭಾಟಿಯಾ, ಸಿಕಂದರ್ ರಜಾ, ಸ್ಯಾಮ್ ಕರ್ರನ್‌ (ನಾಯಕ), ಜಿತೇಶ್ ಶರ್ಮಾ(ವಿ.ಕೀ), ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್.

IPL 2023 ಆರ್‌ಸಿಬಿ ಸೋಲಿನ ಅನಿಷ್ಠ ದೂರಮಾಡಿದ ಕನ್ನಡಿಗ ವೈಶಾಕ್‌..!

ಈ ಪಿಚ್‌ನಲ್ಲಿ ಇದು ನಮ್ಮ ಮೊದಲ ಪಂದ್ಯ. ಮೊದಲು ಬ್ಯಾಟಿಂಗ್‌ ಅಥವಾ ಬೌಲಿಂಗ್‌ ಯಾವುದು ಬೇಕಾದರೂ ವರ್ಕ್‌ ಆಗಬಹುದು. ಭಿನ್ನ ವಾತಾವರಣದಲ್ಲಿ ನಮಗೆ ನಾವೇ ಸವಾಲು ಇರಿಸಿಕೊಳ್ಳಲು ಖುಷಿಯಾಗುತ್ತದೆ. ಇಲ್ಲಿ ನಮ್ಮ ಮೊದಲ ಐಪಿಎಲ್‌ ಋತು ಆಗಿದೆ. ಪ್ರತಿ ಪಂದ್ಯದ ವೇಳೆಯಲ್ಲೂ ಪಿಚ್‌ಅನ್ನು ಪರಿಶೀಲಿಸಿ ಅದಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುತ್ತೇವೆ. ಪ್ರತಿ ಪಂದ್ಯದಲ್ಲೂ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳುತ್ತೇನೆ. 12-13 ಜನರನ್ನು ಆಯ್ಕೆ ಮಾಡುತ್ತೇವೆ. ಕೊನೇ ಹಂತದಲ್ಲಿ 11ರ ಬಳಗ ನಿರ್ಧಾರ ಮಾಡಲಿದ್ದೇವೆ. ಎಲ್ಲರೂ ತಮ್ಮ ಆಟವನ್ನು ಆನಂದಿಸುತ್ತಿದ್ದಾರೆ. ತಂಡಕ್ಕೆ ಸಿಕ್ಕಿರುವ ಬೆಂಬಲದಿಂದಲೂ ನಾವು ಖುಷಿಯಾಗಿದ್ದೇವೆ ಎಂದು ಕೆಎಲ್‌ ರಾಹುಲ್‌ ಟಾಸ್‌ ವೇಳೆ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಮತ್ತೊಂದು ಫಿಫ್ಟಿ; ಡೆಲ್ಲಿಗೆ ಸವಾಲಿನ ಗುರಿ ನೀಡಿದ ಆರ್‌ಸಿಬಿ

ನಾವು ಮೊದಲು ಬೌಲಿಂಗ್‌ ನಿರ್ಧಾರ ಮಾಡಿದ್ದೇವೆ. ಇಲ್ಲಿಯವರೆಗೆ ಎಲ್ಲೂ ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಮಾಡಿರಲಿಲ್ಲ. ಅದಲ್ಲದೆ, ಇದು ಈ ಋತುವಿನ ನಮ್ಮ ಮೊದಲ ಟಾಸ್‌ ಗೆಲುವಾಗಿದೆ. ಕಳೆದ ಪಂದ್ಯದಲ್ಲಿಯೇ ಶಿಖರ್‌ ಗಾಯಕ್ಕೆ ಒಳಗಾಗಿದ್ದರು. ಆದರೆ, ಇದು ಎಷ್ಟು ಗಂಭೀರ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಬಹುಶಃ ದೀರ್ಘ ಸಮಯ ಅವರು ಹೊರಗುಳಿಯುವ ಸಾಧ್ಯತೆ ಕಡಿಮೆ. ಅವರ ಅನುಪಸ್ಥಿತಿ ತಂಡಕ್ಕೆ ಖಂಡಿತವಾಗಿಯೂ ಕಾಡಲಿದೆ. ನಾವು ಇಬ್ಬರು ಭಾರತೀಯ ಬ್ಯಾಟ್ಸ್‌ಮನ್‌ಅನ್ನು ತಂಡಕ್ಕೆ ಆಯ್ಕೆ ಮಾಡಿದ್ದು, ಸಿಕಂದರ್‌ ರಾಜಾ ಕೂಡ ತಂಡಕ್ಕೆ ವಾಪಸಾಗಿದ್ದಾರೆ ಎಂದು ಪಂಜಾಬ್‌ ಕಿಂಗ್ಸ್‌ ತಂಡದ ನಾಯಕ ಸ್ಯಾಮ್‌ ಕರ್ರನ್‌ ಹೇಳಿದ್ದಾರೆ.