6ನೇ ಸ್ಥಾನದಲ್ಲಿರುವ ಆರ್‌ಸಿಬಿ ತಂಡಕ್ಕೆ ಪ್ರತಿ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಇಂದು ಲಖನೌ ವಿರುದ್ದ ಗೆಲುವಿನ ವಿಶ್ವಾಸದಲ್ಲಿರುವ ಆರ್‌ಸಿಬಿ ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಲಖನೌ(ಮೇ.01): ಲಖನೌ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಟಾಸ್ ಗೆದ್ದ ಆರ್‌ಸಿಬಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆರ್‌ಸಿಬಿ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ. ಜೋಶ್ ಹೇಜಲ್‌ವುಡ್ ತಂಡ ಸೇರಿಕೊಂಡಿದ್ದಾರೆ. ಇನ್ನು ಅನೂಜ್ ರಾವತ್ ತಂಡ ಸೇರಿದ್ದಾರೆ. ಲಖನೌ ತಂಡದಲ್ಲಿ ಅವೇಶ್ ಖಾನ್ ಬದಲು ಕನ್ನಡಿಗ ಕೆ ಗೌತಮ್ ಸ್ಥಾನ ಪಡೆದಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ 11
ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್(ನಾಯಕ), ಅನೂತ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೊರ್, ದಿನೇಶ್ ಕಾರ್ತಿಕ್, ಸೂಯಾಶ್ ಪ್ರಭುದೇಸಾಯಿ, ವಾನಿಂಡು ಹಸರಂಗ, ಕರನ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್‌ವುಡ್ 

RCB ತಂಡದಿಂದ ಡೇವಿಡ್ ವಿಲ್ಲಿ ಔಟ್; ಅನುಭವಿ ಕೇದರ್ ಜಾಧವ್ ಇನ್‌..!

ಲಖನೌ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11
ಕೆಎಲ್ ರಾಹುಲ್(ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡ, ಮಾರ್ಕಸ್ ಸ್ಟೊಯ್ನಿಸ್, ಕ್ರುನಾಲ್ ಪಾಂಡ್ಯ, ನಿಕೋಲಸ್ ಪೂರನ್, ಕೃಷ್ಣಪ್ಪ ಗೌತಮ್, ರವಿ ಬಿಶ್ನೊಯ್, ನವೀನ್ ಉಲ್ ಹಕ್, ಅಮಿತ್ ಮಿಶ್ರಾ, ಯಶ್ ಠಾಕೂರ್

ಅಂಕಪಟ್ಟಿಯಲ್ಲಿ ಲಖನೌ ಸೂಪರ್ ಜೈಂಟ್ಸ್ 2ನೇ ಸ್ಥಾನದಲ್ಲಿದ್ದರೆ, ಇತ್ತ ಆರ್‌ಸಿಬಿ 6ನೇ ಸ್ಥಾನದಲ್ಲಿದೆ. ಲಖನೌ ತಂಡ ಪ್ಲೇ ಆಫ್ ಅವಕಾಶ ಭದ್ರಪಡಿಸಿಕೊಳ್ಳಲು ದಿಟ್ಟ ಹೋರಾಟ ಮೂಲಕ ಗೆಲುವು ಸಾಧಿಸಿತ್ತಿದೆ. ಆದರೆ ಆರ್‌ಸಿಬಿ ಸೋಲು ಗೆಲುವಿನ ಹಾದಿಯಲ್ಲಿ ಸಾಗುತ್ತಿದೆ. ಆಡಿದ 8 ಪಂದ್ಯದಲ್ಲಿ ಆರ್‌ಸಿಬಿ 4 ಗೆಲುವು 4 ಸೋಲು ಕಂಡಿದೆ. ಆದರೆ ಇನ್ನುಳಿದ ಪಂದ್ಯಗಳು ಆರ್‌ಸಿಬಿಗೆ ಅತ್ಯಂತ ಮಹತ್ವದ್ದಾಗಿದೆ. ಇತ್ತ ಲಖನೌ ಸೂಪರ್ ಜೈಂಟ್ಸ್ 8 ಪಂದ್ಯದಲ್ಲಿ 5 ಗೆಲುವು ದಾಖಲಿಸಿ 2ನೇ ಸ್ಥಾನದಲ್ಲಿದೆ. 

ಕಳೆದ ಪಂದ್ಯದಲ್ಲಿ ಆರ್‌ಸಿಬಿ ಕೆಕೆಆರ್ ವಿರುದ್ಧ ಮುಗ್ಗರಿಸಿತ್ತು. ಇತ್ತ ಲಖನೌ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು ದಾಖಲಿಸಿದೆ. ಆರ್‌ಸಿಬಿ ಸೋಲಿನ ಹಳಿಯಿದಂ ಹೊರಬರಲು ಇಂದು ಶಕ್ತಿ ಮೀರಿ ಪ್ರಯತ್ನಿಸಲಿದೆ. 

IPL ಟೂರ್ನಿಯಲ್ಲಿ ಬೇಡದ ದಾಖಲೆ ಬರೆದ ಎಂ ಎಸ್ ಧೋನಿ..!

ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ 8ರಲ್ಲಿ 6 ಪಂದ್ಯ ಗೆದ್ದು ಮೊದಲ ಸ್ಥಾನ ಅಲಂಕರಿಸಿದೆ. ಲಖನೌ 2ನೇ ಸ್ಥಾನದಲ್ಲಿದೆ. ಇನ್ನು ರಾಜಸ್ಥಾನ ರಾಯಲ್ಸ್ 9ರಲ್ಲಿ 5 ಗೆಲುವು ದಾಖಲಿಸಿ 3ನೇ ಸ್ಥಾನದಲ್ಲಿದೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ 9 ಪಂದ್ಯದಲ್ಲಿ 5 ಗೆಲುವು ದಾಖಲಿಸಿ 4ನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ 9 ಪಂದ್ಯದಲ್ಲಿ 5 ಗೆಲುವು ದಾಖಲಿಸಿ 5ನೇ ಸ್ಥಾನದಲ್ಲಿದೆ. ಇನ್ನು ಆರ್‌ಸಿಬಿ 6ನೇ ಸ್ಥಾನದಲ್ಲಿದ್ದರೆ, 8 ಪಂದ್ಯದಲ್ಲಿ 4 ಗೆಲುವು ದಾಖಲಿಸಿರುವ ಮುಂಬೈ ಇಂಡಿಯನ್ಸ್ 7ನೇ ಸ್ಥಾನದಲ್ಲಿದೆ. ಕೋಲ್ಕತಾ ನೈಟ್ ರೈಡರ್ಸ್ 9ರಲ್ಲಿ 3 ಗೆಲುವು ಸಾಧಿಸಿ 8ನೇ ಸ್ಥಾನದಲ್ಲಿದೆ. ಇನ್ನು ಸನ್‌ರೈಸರ್ಸ್ ಹೈದರಾಬಾದ್ 8 ರಲ್ಲಿ3 ಗೆಲುವು ದಾಖಲಿಸಿ 9ನೇ ಸ್ಥಾನದಲ್ಲಿದೆ. 10 ಹಾಗೂ ಕೊನೆಯ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ 8 ಪಂದ್ಯದಲ್ಲಿ 2 ಗೆಲುವು ದಾಖಲಿಸಿದೆ.

ತಂಡಕ್ಕೆ ಕೇದಾರ್ ಜಾದವ್: ಇಂಜುರಿ ಸಮಸ್ಯೆ ಎದುರಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೆಲ ಬದಲಾವಣೆ ಮಾಡಿದೆ. ಡೇವಿಡ್ ವಿಲಿ ಬದಲು ಕೇದಾರ್ ಯಾದವ್ ತಂಡದ ಜೊತೆ ಒಪ್ಪಂದ ಮಾಡಿಕೊಂಡಿದ್ದರೆ. ಶೀಘ್ರದಲ್ಲೇ ಕೇದಾರ್ ತಂಡ ಸೇರಿಕೊಳ್ಳಲಿದ್ದಾರೆ.