ಪಂಜಾಬ್ ಕಿಂಗ್ಸ್ ಎದುರು ರೋಚಕ ಸೋಲು ಕಂಡ ಚೆನ್ನೈ ಸೂಪರ್ ಕಿಂಗ್ಸ್ನಾಯಕ ಎಂ ಎಸ್ ಧೋನಿ ಹೆಸರಿಗೆ ಬೇಡದ ದಾಖಲೆ ಸೇರ್ಪಡೆ200 ರನ್ ರಕ್ಷಿಸಿಕೊಳ್ಳಲು ವಿಫಲವಾದ ಧೋನಿ ಪಡೆ
ಚೆನ್ನೈ(ಮೇ.01): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲಾರ್ಧ ಮುಕ್ತಯವಾಗಿದ್ದು, ದಿನದಿಂದ ದಿನಕ್ಕೆ ರೋಚಕತೆ ಹೆಚ್ಚುತ್ತಲೇ ಸಾಗುತ್ತಿದೆ. ಇನ್ನು ಐಪಿಎಲ್ ಇತಿಹಾಸದಲ್ಲಿ ಯಶಸ್ವಿ ನಾಯಕರಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಮಹೇಂದ್ರ ಸಿಂಗ್ ಧೋನಿ, ಇದೀಗ ಬೇಡದ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ 200+ ರನ್ ರಕ್ಷಿಸಿಕೊಳ್ಳಲು ವಿಫಲವಾದ ನಾಯಕ ಎನ್ನುವ ಕುಖ್ಯಾತಿಗೆ ಧೋನಿ ಭಾಜನರಾಗಿದ್ದಾರೆ.
ಹೌದು, ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎದುರು ಪಂಜಾಬ್ ಕಿಂಗ್ಸ್ ತಂಡವು 4 ವಿಕೆಟ್ ರೋಚಕ ಜಯ ಸಾಧಿಸಿತ್ತು. ಇದರ ಬೆನ್ನಲ್ಲೇ 41 ವರ್ಷದ ಧೋನಿ, ಈ ಕುಖ್ಯಾತಿಗೆ ಪಾತ್ರರಾಗಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್‌ಗೆ ಗಳಿಸಿದ್ದು ಭರ್ತಿ 200 ರನ್.ಇನ್ನು ಕಠಿಣ ಗುರಿ ಬೆನ್ನತ್ತಿ ಪವರ್-ಪ್ಲೇನಲ್ಲೇ 62 ರನ್ ಗಳಿಸಿದ್ದ ಪಂಜಾಬ್ ಆ ಬಳಿಕ ನಿಧಾನಗೊಂಡಿತು. ಕೊನೆಯ 5 ಓವರಲ್ಲಿ 72 ರನ್ ಅಗತ್ಯವಿತ್ತು. 16ನೇ ಓವರಲ್ಲಿ 24, 17ನೇ ಓವರಲ್ಲಿ 17 ರನ್ ದೋಚಿದ್ದರಿಂದ ಪಂದ್ಯ ಚೆನ್ನೈನ ಕೈ ಜಾರಿತು. ಕೊನೆ ಓವರಲ್ಲಿ 9, ಕೊನೆ ಬಾಲ್‌ಗೆ 3 ರನ್ ಬೇಕಿದ್ದಾಗ ಸಿಕಂದರ್ (13*) ತಂಡವನ್ನು ಗೆಲ್ಲಿಸಿದರು.
IPL 2023 ಪಾನಿಪೂರಿ ಮಾರಾಟದಿಂದ ಐಪಿಎಲ್‌ವರೆಗೆ..! ಶತಕವೀರ ಯಶಸ್ವಿ ಜೈಸ್ವಾಲ್ ಸಾಧನೆಗೆ ಸೆಲ್ಯೂಟ್
ಮತ್ತೆ ಕಾನ್‌ವೇ ಶೋ: ಚೆನ್ನೈ ಆರಂಭಿಕರು ಈ ಪಂದ್ಯದಲ್ಲೂ ಆರ್ಭಟಿಸಿದರು. ಗಾಯಕ್ವಾಡ್(37), ಶಿವಂ ದುಬೆ(28) ಎಂದಿನ ಆಟವಾಡಿದರೆ, ಕಾನ್‌ವೇ ಔಟಾಗದೆ 52 ಎಸೆತಗಳಲ್ಲಿ 92 ರನ್ ಸಿಡಿಸಿದರು. ಕೊನೆ 2 ಎಸೆತಗಳನ್ನು ಸಿಕ್ಸರ್ಗಟ್ಟಿದ ಧೋನಿ ತಂಡ 200 ರನ್ ತಲುಪಲು ಕಾರಣರಾದರು.
ಟರ್ನಿಂಗ್ ಪಾಯಿಂಟ್
ಪಂಜಾಬ್ ಗೆಲುವಿಗೆ 30 ಎಸೆತದಲ್ಲಿ 72 ರನ್ ಬೇಕಿದ್ದಾಗ ದೇಶಪಾಂಡೆ ಎಸೆದ 16ನೇ ಓವರಲ್ಲಿ 24, ಜಡೇಜಾ ಎಸೆದ 17ನೇ ಓವರಲ್ಲಿ 17 ರನ್ ದೋಚಿತು. ಇದು ಪಂದ್ಯ ಪಂಜಾಬ್ ಪರ ವಾಲುವಂತೆ ಮಾಡಿತು.
ಈ ಸೋಲು ಧೋನಿಗೆ ಅಪಖ್ಯಾತಿಯನ್ನು ತಂದಿದ್ದು, ಐಪಿಎಲ್ ಇತಿಹಾಸದಲ್ಲಿ ಧೋನಿ ನೇತೃತ್ವದ ತಂಡವು ಮೂರನೇ ಬಾರಿಗೆ 200+ ರನ್ ರಕ್ಷಿಸಿಕೊಳ್ಳಲು ವಿಫಲವಾಯಿತು. ಈ ಮೊದಲು ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ನಾಯಕರಾಗಿ ತಮ್ಮ ಕ್ರಿಕೆಟ್ ಬದುಕಿನಲ್ಲಿ ಎರಡು ಬಾರಿ 200+ ರನ್ ರಕ್ಷಿಸಿಕೊಳ್ಳಲು ವಿಫಲರಾಗಿದ್ದಾರೆ.
ಇನ್ನು 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಧೋನಿ ನೇತೃತ್ವದ ಸಿಎಸ್‌ಕೆ ತಂಡವು 9 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 3 ಸೋಲು ಸಹಿತ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.
ಕೊನೆ ಓವರಲ್ಲಿ 1000 ರನ್: ಧೋನಿ ದಾಖಲೆ
ಚೆನ್ನೈ: ಚೆನ್ನೈ ನಾಯಕ ಎಂ.ಎಸ್.ಧೋನಿ ಟಿ20 ಕ್ರಿಕೆಟ್ನ ಕೊನೆ ಓವರಲ್ಲಿ 1000 ರನ್ ಪೂರ್ತಿಗೊಳಿಸಿದ್ದು, ವೆಸ್ಟ್ಇಂಡೀಸ್ನ ಕೀರನ್ ಪೊಲ್ಲಾರ್ಡ್ ಬಳಿಕ ಈ ಸಾಧನೆ ಮಾಡಿದ ಕೇವಲ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಭಾನುವಾರ ಪಂಜಾಬ್ ವಿರುದ್ಧ ಕೊನೆ 2 ಎಸೆತಗಳಲ್ಲಿ ಸಿಕ್ಸರ್ ಸಿಡಿಸಿ ಅವರು ಈ ಮೈಲಿಗಲ್ಲು ಸಾಧಿಸಿದರು. ಐಪಿಎಲ್ನಲ್ಲಿ ಅವರು 20ನೇ ಓವರಲ್ಲಿ 290 ಎಸೆತಗಳಲ್ಲಿ ಎದುರಿಸಿ 709 ರನ್ ಗಳಿಸಿದ್ದಾರೆ. ಇದರಲ್ಲಿ 59 ಸಿಕ್ಸರ್, 49 ಬೌಂಡರಿಗಳು ಒಳಗೊಂಡಿವೆ.
