ಹೈದರಾಬಾದ್‌ನಲ್ಲಿಂದು ಕೆಕೆಆರ್-ಸನ್‌ರೈಸರ್ಸ್ ಮುಖಾಮುಖಿಪ್ಲೇ-ಆಫ್ ದೃಷ್ಟಿಯಿಂದ ಇತ್ತಂಡಗಳಿಗೂ ಜಯ ಅನಿವಾರ್ಯಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ
ಹೈದರಾಬಾದ್(ಮೇ.04): 16ನೇ ಆವೃತ್ತಿ ಐಪಿಎಲ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿ, ಸತತ ಸೋಲು ಕಾಣುತ್ತಿರುವ ತಂಡಗಳಾದ ಸನ್‌ರೈಸರ್ಸ್ ಹೈದ್ರಾಬಾದ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಗುರುವಾರ ಡು ಆರ್ ಡೈ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಕೋಲ್ಕತಾ ನೈಟ್ ರೈಡರ್ಸ್ 9 ಪಂದ್ಯಗಳಲ್ಲಿ 3, ಸನ್‌ರೈಸರ್ಸ್ ಹೈದ್ರಾಬಾದ್ 8ರಲ್ಲಿ 3 ಗೆದ್ದಿವೆ. ಹೀಗಾಗಿ ಎರಡೂ ತಂಡಗಳಿಗಿದು ನಿರ್ಣಾಯಕ ಪಂದ್ಯ. ಮೊದಲ ಮುಖಾಮುಖಿಯಲ್ಲಿ ಸೋತಿದ್ದ ಕೆಕೆಆರ್ ಈ ಪಂದ್ಯದಲ್ಲೂ ಸೋತರೆ ಪ್ಲೇ-ಆಫ್ ರೇಸ್ನಿಂದ ಬಹುತೇಕ ಹೊರಬೀಳಲಿದೆ.
ಎರಡೂ ತಂಡಗಳು ಕೆಲ ವೈಯಕ್ತಿಕ ಪ್ರದರ್ಶನದಿಂದ ಗಮನ ಸೆಳೆದರೂ ತಂಡವಾಗಿ ಆಡುವಲ್ಲಿ ವಿಫಲವಾಗಿವೆ. ಕೆಕೆಆರ್ನ ಬಹುತೇಕ ಎಲ್ಲಾ ಬ್ಯಾಟರ್ಗಳ ಸ್ಟ್ರೈಕ್ರೇಟ್ 150ರ ಆಸುಪಾಸಿನಲ್ಲಿದ್ದರೂ ನಿರ್ಣಾಯಕ ಘಟ್ಟದಲ್ಲಿ ಅಬ್ಬರಿಸುತ್ತಿಲ್ಲ. ಸ್ಪಿನ್ನರ್ಗಳೇ ತಂಡದ ಆಧಾರಸ್ತಂಭ ಎನಿಸಿಕೊಂಡಿದ್ದರೂ ವೇಗಿಗಳಿಂದ ಸೂಕ್ತ ಬೆಂಬಲ ಸಿಗುತ್ತಿಲ್ಲ. ಯಾವೊಬ್ಬ ತಜ್ಞ ವೇಗಿಯೂ ಎರಡಕ್ಕಿಂತ ಹೆಚ್ಚು ವಿಕೆಟ್ ಪಡೆದಿಲ್ಲ ಎನ್ನುವುದು ಗಮನಾರ್ಹ ಸಂಗತಿ. ವರುಣ್ ಚಕ್ರವರ್ತಿ, ಸುನಿಲ್ ನರೈನ್ ಹಾಗೂ ಸುಯಾಶ್ ಶರ್ಮಾ ಮತ್ತೊಮ್ಮೆ ಸ್ಪಿನ್ ಮ್ಯಾಜಿಕ್ ಮಾಡಲು ಸಜ್ಜಾಗಿದ್ದಾರೆ
ಇನ್ನು ಟೂರ್ನಿಯ ಪ್ರದರ್ಶನದ ಬಗ್ಗೆ ಹೇಳಿಕೊಳ್ಳಲು ಹೈದ್ರಾಬಾದ್ಗೆ ಹ್ಯಾರಿ ಬ್ರೂಕ್, ಕೆಕೆಆರ್ ವಿರುದ್ಧವೇ ಸಿಡಿಸಿದ್ದ ಶತಕ ಮಾತ್ರ ಇದ್ದು, ಇತರರ ಕೊಡುಗೆ ತಂಡಕ್ಕೆ ಸಿಗುತ್ತಿಲ್ಲ. ಪ್ರತಿಭಾವಂತ ವೇಗಿಗಳ ದಂಡೇ ಇದ್ದರೂ ದುಬಾರಿಯಾಗುತ್ತಿರುವುದು ಪ್ರಮುಖ ಸಮಸ್ಯೆ ಎನಿಸಿದೆ. ಕೆಕೆಆರ್ ಎದುರು ಗೆಲುವು ಸಾಧಿಸಬೇಕಿದ್ದರೆ ಆರೆಂಜ್ ಆರ್ಮಿ ಸಂಘಟಿತ ಪ್ರದರ್ಶನ ತೋರಬೇಕಿದೆ.ಬ್ಯಾಟಿಂಗ್‌ನಲ್ಲಿ ಮಯಾಂಕ್ ಅಗರ್‌ವಾಲ್, ಅಭಿಷೇಕ್ ಶೆರ್ಮಾ, ರಾಹುಲ್ ತ್ರಿಪಾಠಿ ಹಾಗೂ ನಾಯಕ ಏಯ್ಡನ್ ಮಾರ್ಕ್‌ರಮ್ ಜವಾಬ್ದಾರಿ ಆಟ ಆಡಬೇಕಿದೆ. ಇನ್ನು ಹ್ಯಾರಿ ಬ್ರೂಕ್ ಹಾಗೂ ಹೆನ್ರಿಚ್ ಕ್ಲಾಸೇನ್ ಮತ್ತೊಮ್ಮೆ ಅಬ್ಬರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ವೃಷಭ- ವೃಶ್ಚಿಕ ರಾಶಿಯ ಅಪರೂಪದ ಹೊಂದಾಣಿಕೆಯಲ್ಲಿದೆ ವಿರುಷ್ಕಾ ಜೋಡಿಯ ಸುಖ ದಾಂಪತ್ಯದ ಗುಟ್ಟು!
ಐಪಿಎಲ್ ಇತಿಹಾಸದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಒಟ್ಟು 24 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಕೆಕೆಆರ್ ತಂಡವು ಸ್ಪಷ್ಟ ಮೇಲುಗೈ ಸಾಧಿಸಿದೆ. 24 ಪಂದ್ಯಗಳ ಪೈಕಿ 15 ಪಂದ್ಯಗಳಲ್ಲಿ ಕೆಕೆಆರ್ ತಂಡವು ಗೆಲುವು ಸಾಧಿಸಿದ್ದರೆ, 9 ಪಂದ್ಯಗಳಲ್ಲಿ ಆರೆಂಜ್ ಆರ್ಮಿ ಗೆಲುವಿನ ನಗೆ ಬೀರಿದೆ.
ಸಂಭವನೀಯ ಆಟಗಾರರ ಪಟ್ಟಿ
ಕೋಲ್ಕತಾ ನೈಟ್ ರೈಡರ್ಸ್: ಜೇಸನ್ ರಾಯ್, ಎನ್ ಜಗದೀಶನ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ(ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೇನ್, ಡೇವಿಡ್ ವೀಸಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ, ಸುಯಶ್ ಶರ್ಮಾ.
ಸನ್‌ರೈಸರ್ಸ್ ಹೈದರಾಬಾದ್: ಮಯಾಂಕ್ ಅಗರ್‌ವಾಲ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್ರಮ್(ನಾಯಕ), ಹೆನ್ರಿಚ್ ಕ್ಲಾಸೆನ್, ಹ್ಯಾರಿ ಬ್ರೂಕ್, ಅಬ್ದುಲ್ ಸಮದ್, ಮಯಾಂಕ್ ಮಾರ್ಕಂಡೆ, ಭುವನೇಶ್ವರ್ ಕುಮಾರ್, ಅಕೇಲ್ ಹೊಸೈನ್, ಉಮ್ರಾನ್ ಮಲಿಕ್, ಟಿ ನಟರಾಜನ್.
ಪಂದ್ಯ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಪಿಚ್ ರಿಪೋರ್ಟ್
ಬ್ಯಾಟಿಂಗ್ ಸ್ನೇಹಿ ಎನಿಸಿಕೊಂಡಿದ್ದರೂ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಈ ಬಾರಿ ಬೌಲರ್ಗಳೇ ಮೇಲುಗೈ ಸಾಧಿಸಿದ್ದಾರೆ. ಆಡಿದ 4 ಪಂದ್ಯಗಳಲ್ಲಿ 3ರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿದೆ. ಹೀಗಾಗಿ ಟಾಸ್ ಗೆಲ್ಲುವ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಬಹುದು.
