ವೃಷಭ- ವೃಶ್ಚಿಕ ರಾಶಿಯ ಅಪರೂಪದ ಹೊಂದಾಣಿಕೆಯಲ್ಲಿದೆ ವಿರುಷ್ಕಾ ಜೋಡಿಯ ಸುಖ ದಾಂಪತ್ಯದ ಗುಟ್ಟು!
ವಿರಾಟ್ ಮತ್ತು ಅನುಷ್ಕಾ ಹಲವಾರು ಬಾರಿ ತಾವು ಅತ್ಯುತ್ತಮ ಜೋಡಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಹೆಗಲು ಕೊಟ್ಟಿದ್ದಾರೆ, ಇಷ್ಟದ ಸಮಯವನ್ನು ಹಂಚಿಕೊಂಡಿದ್ದಾರೆ.. ಈ ಜೋಡಿ ಎಲ್ಲರಿಗೂ ಮಾದರಿಯಾಗುವಲ್ಲಿ ಅವರ ರಾಶಿ ಹೊಂದಾಣಿಕೆ ಕೂಡಾ ಕೆಲಸ ಮಾಡುತ್ತಿದೆ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ ಯಾವುದೇ ಕಾರಣಕ್ಕೆ ವಿವಾದಕ್ಕೆ ಒಳಗಾಗಲಿ, ಒಬ್ಬರನ್ನೊಬ್ಬರು ಖಂಡಿತಾ ಬಿಟ್ಟು ಕೊಡುವುದಿಲ್ಲ. ವಿರಾಟ್ ವಿವಾದಕ್ಕೆ ಒಳಗಾದಾಗ ಅನುಷ್ಕಾ ಜೊತೆಯಾಗಿದ್ದಾಳೆ. ಅನುಷ್ಕಾ ಬಟ್ಟೆಯಿಂದ ಹಿಡಿದು ಮೇಕಪ್‌ವರೆಗೆ, ಅವಳ ಎಲ್ಲ ಸ್ವಭಾವದ ಬಗ್ಗೆ ತನಗೆ ಮೆಚ್ಚಿಗೆ ಇರುವುದನ್ನು ವಿರಾಟ್ ಪೋಸ್ಟ್‌ಗಳು ಆಗಾಗ ಬಹಿರಂಗಪಡಿಸುತ್ತವೆ. ಕ್ರೀಡಾಂಗಣವಿರಲಿ, ದೇವಾಲಯವಿರಲಿ- ಇಬ್ಬರೂ ಆದಷ್ಟು ಜೊತೆಯಾಗಿರಲು ಪ್ರಯತ್ನಿಸುತ್ತಾರೆ. ಜೋಡಿಯಾಗಿ ಅವರಿಬ್ಬರೂ ಎಲ್ಲರಿಗೂ ಮಾದರಿ.
ಇದೀಗ ಗೌತಮ್ ಗಂಭೀರ್ ಜೊತೆಗಿನ ವಾಗ್ವಾದದ ನಂತರ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದೇವಸ್ಥಾನವೊಂದಕ್ಕೆ ಭೇಟಿಯಾದ ವಿಡಿಯೋ ವೈರಲ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಇವರಿಬ್ಬರೂ ಸಾಕಷ್ಟು ದೇವಾಲಯಗಳಿಗೆ ಸುತ್ತುತ್ತಿದ್ದಾರೆ.
ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ಪ್ರಮುಖ ಕಪಲ್ ಗೋಲ್‌ಗಳನ್ನು ನೀಡುತ್ತಿರುವ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಷ್ಟೊಂದು ಸ್ಟ್ರಾಂಗ್ ಬಾಂಡ್ ಹೊಂದಿರಲು ಕಾರಣವೇನು ಗೊತ್ತಾ? ಒಬ್ಬರು ಮತ್ತೊಬ್ಬರನ್ನು ಅವರಿರುವಂತೆಯೇ ಸ್ವೀಕರಿಸಿ ಇಷ್ಟಪಡುವುದಕ್ಕೆ ಕಾರಣವೇನು ಎಂದು ಹುಡುಕಿದರೆ ಮೊದಲು ಸಿಗುವುದೇ ಅವರ ರಾಶಿ ಹೊಂದಾಣಿಕೆ.
ವಿರಾಟ್ ವೃಶ್ಚಿಕ ರಾಶಿಯಾಗಿರುವುದರಿಂದ ಮತ್ತು ಅನುಷ್ಕಾ ವೃಷಭ ರಾಶಿಯಾಗಿರುವುದರಿಂದ ಅವರಿಬ್ಬರೂ ಬಲವಾದ ವ್ಯಕ್ತಿತ್ವವನ್ನು ಹೊಂದಿದ್ದಾರೆ ಹಾಗೂ ಉತ್ತಮ ಹೊಂದಾಣಿಕೆಯನ್ನು ಹೊಂದಿದ್ದಾರೆ. ಕೆಲವು ಚಿಹ್ನೆಗಳನ್ನು ಒಟ್ಟುಗೂಡಿಸಿದಾಗ, ಅವರು ಮುರಿಯಲಾಗದ ಬಂಧವನ್ನು ಹೊಂದಿರುತ್ತಾರೆ. ಅತ್ಯಂತ ಶಕ್ತಿಶಾಲಿ ದಂಪತಿಯಾಗಿ ಹೊರಹೊಮ್ಮುತ್ತಾರೆ. ಅಂಥದೊಂದು ಕಾಂಬಿನೇಶನ್ ವೃಶ್ಚಿಕ ಮತ್ತು ವೃಷಭ ರಾಶಿಯವರದ್ದು. ಅವರ ನಿರಂತರ ಭಾವನಾತ್ಮಕ ಮತ್ತು ಬೌದ್ಧಿಕ ಬುದ್ಧಿವಂತಿಕೆಯು ಬಲವಾದ ಸಂಬಂಧಕ್ಕೆ ಮತ್ತು ಯಶಸ್ಸಿಗೆ ಅಡಿಪಾಯವನ್ನು ಹಾಕುತ್ತದೆ.
ಅಂದ ಹಾಗೆ, ವೃಶ್ಚಿಕ ಮತ್ತು ವೃಷಭ ರಾಶಿಯವರು ಮದುವೆಯಲ್ಲಿ ಹೊಂದಾಣಿಕೆಯಾಗಲು 3 ಕಾರಣಗಳು ಇಲ್ಲಿವೆ..
Name Astrology: ಈ ಹೆಸರಿನ ಹುಡುಗರು ತಮ್ಮ ಹೆಂಡತಿಯನ್ನು ರಾಣಿಯಂತೆ ನೋಡ್ಕೊಳ್ತಾರೆ!
ಪರಸ್ಪರ ಅಪಾರ ಗೌರವ
ವೃಶ್ಚಿಕ ರಾಶಿ ಮತ್ತು ವೃಷಭ ರಾಶಿಯವರು ಸಾಕಷ್ಟು ಕಟ್ಟುನಿಟ್ಟಾಗಿರುತ್ತಾರೆ ಮತ್ತು ಒಮ್ಮೆ ಅವರು ಯಾರೊಬ್ಬರನ್ನು ಇಷ್ಟಪಟ್ಟರೆಂದರೆ, ಅವರಿಗೆ ಸಂಪೂರ್ಣ ನಿಷ್ಠಾವಂತರಾಗಿರುತ್ತಾರೆ. ದಾಂಪತ್ಯ ದ್ರೋಹ ಎಂಬುದು ಅವರ ನಡುವೆ ಸುಳಿಯುವುದಿಲ್ಲ. ಈ ಎರಡೂ ರಾಶಿಚಕ್ರ ಚಿಹ್ನೆಗಳು ಪರಸ್ಪರರ ಭಾವನಾತ್ಮಕ ಅಗತ್ಯಗಳು ಹಾಗೂ ಅಳತೆಯನ್ನು ಅರ್ಥ ಮಾಡಿಕೊಳ್ಳುತ್ತವೆ. ತಮ್ಮ ಸಂಗಾತಿಯ ಭಾವನೆಗಳನ್ನು ಸದಾ ರಕ್ಷಿಸಲು ಪ್ರಯತ್ನಿಸುತ್ತವೆ ಮತ್ತು ಅಗತ್ಯವಿರುವಾಗ ಬೆಂಬಲವನ್ನು ನೀಡುತ್ತವೆ. ಸಂಬಂಧದಲ್ಲಿ ನಿಷ್ಠೆ ಮತ್ತು ವಿಶ್ವಾಸವು ಅವರಿಗೆ ಬಹಳ ಮುಖ್ಯವಾಗಿದೆ. ಈ ಗುಣದಿಂದಾಗಿ ಅವೆರಡು ರಾಶಿಗಳು ಆಳವಾದ ಮಟ್ಟದಲ್ಲಿ ಸಂಪರ್ಕಿಸುವಂತೆ ಮಾಡುತ್ತದೆ.
ಭಾವತೀವ್ರತೆ
ವೃಷಭ ಮತ್ತು ವೃಶ್ಚಿಕ ಜೊತೆಯಾದಾಗ, ಹೃದಯದಿಂದ ವಿಷಯಗಳನ್ನು ಅನುಭವಿಸುವ ಸಾಮರ್ಥ್ಯದಿಂದಾಗಿ ಹೆಚ್ಚೇ ಆಪ್ತವಾಗುತ್ತವೆ. ಭಾವನೆಗಳನ್ನು ಸಂವಹನ ಮಾಡುವ ಅವರ ಮುಕ್ತ ಸ್ವಭಾವವು ಅವರ ಸಂಬಂಧವನ್ನು ಸೇರಿಸುತ್ತದೆ, ಯಾವುದೇ ಗೋಜಲುಗಳಿಂದ ರಕ್ಷಿಸುತ್ತದೆ ಮತ್ತು ಆರೋಗ್ಯಕರವಾಗಿ ಬೆಳೆಯಲು ಸಹಾಯ ಮಾಡುತ್ತದೆ.
ಪೂರ್ವಜರು ನಿಮ್ಮೊಂದಿಗೆ ಸಂತೋಷವಾಗಿದ್ದಾರೆಯೇ ಅಥವಾ ಇಲ್ಲವೇ? ಈ ಸೂಚನೆ ಗಮನಿಸಿ..
ರಕ್ಷಣಾತ್ಮಕ ಸ್ವಭಾವ
ವೃಷಭ ರಾಶಿ ಮತ್ತು ವೃಶ್ಚಿಕ ರಾಶಿಯವರು ರಕ್ಷಣಾತ್ಮಕ ಸ್ವಭಾವವನ್ನು ಹೊಂದಿದ್ದಾರೆ ಮತ್ತು ಸ್ವಲ್ಪ ಸ್ವಾಮ್ಯತೆಯನ್ನು ಹೊಂದಿರುತ್ತಾರೆ. ಇದು ಪೋಷಣೆಯ ಸಂಬಂಧಕ್ಕೆ ಅತ್ಯಂತ ಮುಖ್ಯವಾಗಿದೆ. ಇಬ್ಬರೂ ಕಾಳಜಿ ವಹಿಸುವ ಭಾವನೆಯನ್ನು ಆನಂದಿಸುತ್ತಾರೆ ಮತ್ತು ಆರಾಧಿಸುತ್ತಾರೆ. ಸಂತೋಷದ ಸಮಯವನ್ನು ತಮ್ಮ ಸಂಗಾತಿಗೆ ಕೊಡುವ ಭರವಸೆ ನೀಡುತ್ತಾರೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.