ಈಡನ್‌ ಗಾರ್ಡನ್ಸ್‌ನಲ್ಲಿ ಕೆಕೆಆರ್‌ಗೆ ಪಂಜಾಬ್ ಸವಾಲುಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಉಭಯ ತಂಡಗಳುಸೋಲುವ ತಂಡ ಪ್ಲೇ-ಆಫ್‌ ರೇಸ್‌ನಿಂದ ಔಟ್‌ 

ಕೋಲ್ಕ​ತಾ(ಮೇ.08): 16ನೇ ಆವೃತ್ತಿ ಐಪಿ​ಎಲ್‌ ಲೀಗ್‌ ಪಂದ್ಯ​ಗಳು ನಿರ್ಣಾ​ಯಕ ಹಂತ ತಲು​ಪಿದ್ದು, ಇನ್ನು ಪ್ರತಿ ತಂಡ​ಗಳ ಸೋಲು-ಗೆಲು​ವು ಪ್ಲೇ-ಆಫ್‌ ರೇಸ್‌​ನಲ್ಲಿ ಅಳಿ​ವು, ಉಳಿ​ವನ್ನು ನಿರ್ಧ​ರಿ​ಸಿದೆ. ಸೋಮ​ವಾರ ಕೋಲ್ಕತಾ ನೈಟ್ ರೈಡರ್ಸ್‌ ಹಾಗೂ ಪಂಜಾಬ್‌ ಕಿಂಗ್‌್ಸ ತಂಡ​ಗಳು ಪರ​ಸ್ಪರ ಸೆಣ​ಸಾ​ಡ​ಲಿದ್ದು, ಸೋಲುವ ತಂಡದ ಪ್ಲೇ-ಆಫ್‌ ಹಾದಿ ಬಂದ್‌ ಆಗುವ ಸಾಧ್ಯತೆಯಿದೆ. 10ರಲ್ಲಿ 5 ಪಂದ್ಯ ಗೆದ್ದಿರುವ ಪಂಜಾಬ್‌ ಕಿಂಗ್ಸ್‌ ಸೋತರೆ ರೇಸ್‌​ನಿಂದ ಬಹು​ತೇಕ ಹೊರ​ಬೀ​ಳ​ಲಿದ್ದು, 4 ಪಂದ್ಯ​ ಗೆದ್ದಿ​ರುವ ಕೆಕೆಆರ್‌ ಈ ಪಂದ್ಯದಲ್ಲಿ ಸೋತರೆ ಪ್ಲೇ-ಆಫ್‌ ಬಾಗಿಲು ಖಚಿತವಾಗಿ ಮುಚ್ಚಲಿದೆ.

ಟೂರ್ನಿ​ಯಲ್ಲಿ ಈ ಬಾರಿ ಎರಡೂ ತಂಡ​ಗಳು ಹೇಳಿ​ಕೊ​ಳ್ಳು​ವಂಥ ಪ್ರದ​ರ್ಶನ ನೀಡಿಲ್ಲ. ಕೆಕೆ​ಆರ್‌ನ ಬ್ಯಾಟ​ರ್‌​ಗಳು ಒಂದಷ್ಟು ಪಂದ್ಯ​ಗ​ಳಲ್ಲಿ ಮಿಂಚಿ​ದ್ದರೂ ತನ್ನ ಸ್ಪಿನ್ನ​ರ್‌​ಗಳನ್ನೇ ಹೆಚ್ಚಾಗಿ ನೆಚ್ಚಿ​ಕೊಂಡಿದೆ. ಟೂರ್ನಿ​ಯಲ್ಲಿ ತಂಡ​ದ ಸ್ಪಿನ್ನ​ರ್‌​ಗಳು 35 ವಿಕೆಟ್‌ ಪಡೆ​ದಿದ್ದು, ಯಾವುದೇ ತಂಡ​ಗಳ ಪೈಕಿ ಗರಿಷ್ಠ ಎನಿಸಿದೆ. ಕೋಲ್ಕತಾ ನೈಟ್‌ ರೈಡರ್ಸ್‌ ಗೆಲುವು ಸಾಧಿಸಬೇಕಿದ್ದರೇ, ಜೇಸನ್‌ ರಾಯ್, ವೆಂಕಟೇಶ್ ಅಯ್ಯರ್, ನಾಯಕ ನಿತೀಶ್ ರಾಣಾ ಹಾಗೂ ರಿಂಕು ಸಿಂಗ್ ಅಬ್ಬರಿಸಬೇಕಿದೆ. ಇನ್ನು ಬೌಲರ್‌ಗಳಾದ ವೆಂಕಟೇಶ್ ಅಯ್ಯರ್, ಸುನಿಲ್ ನರೈನ್‌ ಜತೆಗೆ ಸುಯಾಶ್ ಶರ್ಮಾ ಮತ್ತೊಮ್ಮೆ ಜಾದೂ ಮಾಡಬೇಕಿದೆ. ರಸೆಲ್‌ ಆಲ್ರೌಂಡ್‌ ಆಟವಾಡಿದರೆ, ಪಂಜಾಬ್‌ಗೆ ಗೆಲುವು ಕಷ್ಟವಾಗುವ ಸಾಧ್ಯತೆಯಿದೆ.

ಮತ್ತೊಂದೆಡೆ ಪಂಜಾಬ್‌ ಸ್ಪಿನ್ನ​ರ್‌​ಗಳು ಕನಿಷ್ಠ ಅಂದರೆ 12 ವಿಕೆಟ್‌ ಮಾತ್ರ ಪಡೆ​ದಿ​ದ್ದು, ತನ್ನ ವೇಗಿ​ಗ​ಳ ಮೇಲೆ ಹೆಚ್ಚಿನ ಭರ​ವಸೆ ಇರಿ​ಸಿದೆ. ಹೀಗಾಗಿ ಬ್ಯಾಟಿಂಗ್‌ ಸ್ನೇಹಿ ಪಿಚ್‌​ನಲ್ಲಿ ಉಭಯ ತಂಡಗಳಲ್ಲಿರುವ ಸ್ಫೋಟಕ ಬ್ಯಾಟರ್‌ಗಳ ನಡುವೆ ಸ್ಪರ್ಧೆ ಏರ್ಪಡುವ ನಿರೀಕ್ಷೆ ಇದೆ. ಪಂಜಾಬ್ ಕಿಂಗ್ಸ್‌ ತಂಡವು ಪ್ರಭ್‌ಸಿಮ್ರನ್ ಸಿಂಗ್, ಶಿಖರ್ ಧವನ್, ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ ಅವರು ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿದ್ದಾರೆ. ಇನ್ನು ಆರ್ಶದೀಪ್ ಸಿಂಗ್, ಸ್ಯಾಮ್ ಕರ್ರನ್ ಮಾರಕ ದಾಳಿ ನಡೆಸಿ ಕೆಕೆಆರ್ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಮಹತ್ವದ ಜವಾಬ್ದಾರಿಯಿದೆ.

IPL 2023 ಅಂತಿಮ ಎಸೆತ ನೋ ಬಾಲ್, ಫ್ರೀ ಹಿಟ್‌ನಲ್ಲಿ ಹೈದರಾಬಾದ್ ತಂಡಕ್ಕೆ ರೋಚಕ ಗೆಲುವು!

ಒಟ್ಟು ಮುಖಾಮುಖಿ: 31

ಕೆಕೆಆರ್‌: 20

ಪಂಜಾಬ್‌: 11

ಸಂಭವನೀಯ ಆಟಗಾರರ ಪಟ್ಟಿ

ಕೆಕೆಆರ್‌: ರೆಹಮಾನುಲ್ಲಾ ಗುರ್ಬಾಜ್‌, ಜೇಸನ್ ರಾಯ್‌, ವೆಂಕಟೇಶ್ ಅಯ್ಯರ್‌, ನಿತೀಶ್‌ ರಾಣಾ(ನಾಯಕ), ರಿಂಕು ಸಿಂಗ್‌, ಆಂಡ್ರೆ ರಸೆಲ್‌, ಸುನಿಲ್ ನರೇನ್‌, ಶಾರ್ದೂಲ್‌ ಠಾಕೂರ್, ವೈಭವ್‌ ಅರೋರಾ, ಹರ್ಷಿತ್‌ ರಾಣಾ, ವರುಣ್‌ ಚಕ್ರವರ್ತಿ, ಸುಯ​ಶ್‌ ಶರ್ಮಾ.

ಪಂಜಾಬ್‌: ಶಿಖರ್ ಧವನ್‌(ನಾಯಕ), ಪ್ರಭ್‌ಸಿಮ್ರನ್‌ ಸಿಂಗ್, ಮ್ಯಾಥ್ಯೂ ಶಾರ್ಟ್‌, ಲಿಯಾಮ್‌ ಲಿವಿಂಗ್‌ಸ್ಟೋನ್, ಜಿತೇಶ್‌ ಶರ್ಮಾ, ಸಿಕಂದರ್‌ ರಾಜಾ, ಶಾರುಖ್‌ ಖಾನ್, ಸ್ಯಾಮ್ ಕರ್ರನ್‌, ರಿಷಿ ಧವನ್, ಹಪ್ರೀತ್ ಬ್ರಾರ್, ರಾಹುಲ್‌ ಚಹಾರ್, ಆರ್ಶದೀಪ್ ಸಿಂಗ್.

ಪಂದ್ಯ: ಸಂಜೆ 7.30ರಿಂದ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

ಪಿಚ್‌ ರಿಪೋರ್ಟ್‌

ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣ ಬ್ಯಾಟ​ರ್‌​ಗಳ ಪಾಲಿಗೆ ಸ್ವರ್ಗ. ಈ ಬಾರಿ ಟೂರ್ನಿ​ಯ ಸರಾ​ಸರಿ ಮೊತ್ತ 192. ನಾಲ್ಕು ಪಂದ್ಯ​ಗ​ಳಲ್ಲಿ ಮೊದಲು ಬ್ಯಾಟ್‌ ತಂಡ​ಗಳು 3 ಬಾರಿ 200+ ರನ್‌ ಕಲೆ​ಹಾ​ಕಿವೆ. ಆದರೆ ಇಲ್ಲಿ ಚೇಸಿಂಗ್‌ ಅಷ್ಟುಸುಲ​ಭ​ವಲ್ಲ. ಹೀಗಾಗಿ ಟಾಸ್‌ ಮತ್ತೆ ನಿರ್ಣಾ​ಯಕ ಪಾತ್ರ ವಹಿ​ಸ​ಬ​ಹು​ದು.