ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದ ಆರ್‌ಸಿಬಿ ಹಾಗೂ ಗುಜರಾತ್ ನಡುವಿನ ಪಂದ್ಯದ ವಿಳಂಭವಾಗಿ ಆರಂಭಗೊಂಡಿದೆ. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಬೌಲಿಂಗ್ ಆಯ್ಕೆ ಮಾಡಿದೆ.
ಬೆಂಗಳೂರು(ಮೇ.21): ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆ ಅವಾಂತರಕ್ಕೆ ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಪಂದ್ಯಕ್ಕೂ ತಟ್ಟಿದೆ. 7 ಗಂಟೆ ಬಂದಲು 7.45ಕ್ಕೆ ನಡೆದ ಟಾಸ್ ಪ್ರಕ್ರಿಯೆಯಲ್ಲಿ ಟಾಸ್ ಗೆದ್ದ ಗುಜರಾತ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. 7.30ಕ್ಕೆ ಆರಂಭವಾಗಬೇಕಿದ್ದ ಪಂದ್ಯ ಮಳೆಯಿಂದ 8 ಗಂಟೆಗೆ ಆರಂಭವಾಗಲಿದೆ. ಮಳೆ ಕಾರಣದಿಂದ ವಿಳಂಬವಾಗಿ ಪಂದ್ಯ ಆರಂಭಗೊಳ್ಳುತ್ತಿದೆ. ಆದರೆ ಯಾವುದೇ ಓವರ್ ಕಡಿತ ಮಾಡಿಲ್ಲ. ಆರ್‌ಸಿಬಿ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಕರಣ ಶರ್ಮಾ ಬದಲು ಹಿಮಾಂಶು ಶರ್ಮಾ ತಂಡ ಸೇರಿಕೊಂಡಿದ್ದಾರೆ. ಇತ್ತ ಗುಜರಾತ್ ಟೈಟಾನ್ಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಆರ್‌ಸಿಬಿ ಪ್ಲೇಯಿಂಗ್ 11
ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್(ನಾಯಕ), ಮಿಚೆಲ್ ಬ್ರೇಸ್‌ವೆಲ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೊರ್, ಅನೂಜ್ ರಾವತ್, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ವೇಯ್ನ್ ಪಾರ್ನೆಲ್, ಮೊಹಮ್ಮದ್ ಸಿರಾಜ್, ವಿಜಯಕುಮಾರ್ ವೈಶಾಕ್
ಸನ್‌ರೈಸರ್ಸ್ ಬಗ್ಗುಬಡಿದ ಮುಂಬೈ ಇಂಡಿಯನ್ಸ್, ಪ್ಲೇ ಆಫ್‌ಗೇರಲು ಬೇಕಿದೆ ಅದೃಷ್ಟದ ಸಾಥ್..!
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11
ಶುಭಮನ್ ಗಿಲ್, ವೃದ್ಧಿಮಾನ್ ಸಾಹ, ಹಾರ್ದಿಕ್ ಪಾಂಡ್ಯ(ನಾಯಕ), ದಸೂನ್ ಶನಕ, ಡೇವಿಡ್ ಮಿಲ್ಲರ್, ರಾಹುಲ್ ಟಿವಾಟಿಯಾ, ರಶೀದ್ ಖಾನ್, ಮೊಹಿತ್ ಶರ್ಮಾ, ನೂರ್ ಅಹಮ್ಮದ್, ಮೊಹಮ್ಮದ್ ಶಮಿ, ಯಶ್ ದಯಾಳ್
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಗೆಲುವು ದಾಖಲಿಸಿರುವ ಕಾರಣ ಇದೀಗ ಪ್ಲೇ ಆಫ್ ಪ್ರವೇಶಕ್ಕೆ ಗುಜರಾತ್ ಟೈಟಾನ್ಸ್ ವಿರುದ್ಧ ಆರ್‌ಸಿಬಿ ಗೆಲ್ಲಲೇಬೇಕಿದೆ. ಸಾಧಾರಣ ಗೆಲುವು ಆರ್‌ಸಿಬಿ ತಂಡದ ಪ್ಲೇ ಆಫ್ ಸ್ಥಾನ ಖಚಿತಪಡಿಸಲಿದೆ. ಸದ್ಯ ಹೈದರಾಬಾದ್ ವಿರುದ್ಧದ ಗೆಲುವಿನೊಂದಿಗೆ ಮುಂಬೈ 16 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಇತ್ತ ಆರ್‌ಸಿಬಿ 14 ಅಂಕದೊಂದಿಗೆ 5ನೇ ಸ್ಥಾನದಲ್ಲಿದೆ. ಗುಜರಾತ್ ವಿರುದ್ಧ ಗೆಲುವು ಸಾಧಿಸಿದರೆ ಆರ್‌ಸಿಬಿ ಕೂಡ 16 ಅಂಕ ಪಡೆಯಲಿದೆ. ಆದರೆ ಆರ್‌ಸಿಬಿ ನೆಟ್‌ರನ್ ರೇಟ್ ಮುಂಬೈಗಿಂತ ಉತ್ತಮವಾಗಿರುವುದರಿಂದ ಪ್ಲೇ ಆಫ್ ಸ್ಥಾನ ಖಚಿತಪಡಿಸಲಿದೆ.
'ನಮ್ಮಿಬ್ಬರಲ್ಲಿ ಯಾರು ಬೆಸ್ಟ್'?: ಜಡೇಜಾ ಸ್ಟೈಲ್ ಅನುಕರಿಸಿದ ವಾರ್ನರ್..! ವಿಡಿಯೋ ವೈರಲ್
ಪ್ಲೇ ಆಫ್ ಸುತ್ತಿನ ಹೋರಾಟದಲ್ಲಿ ಗುಜರಾತ್ ಟೈಟಾನ್ಸ್ ಮೊದಲ ತಂಡವಾಗಿ ಸ್ಥಾನ ಖಚಿತಪಡಿಸಿದೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ಪ್ಲೇ ಆಫ್ ಸ್ಥಾನ ಖಚಿತಪಡಿಸಿದೆ. ಇದೀಗ ಲೀಗ್ ಹಂತದ ಕೊನೆಯ ಪಂದ್ಯ ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಫಲಿತಾಂಶ 4ನೇ ಸ್ಥಾನವನ್ನು ನಿರ್ಧರಿಸಲಿದೆ.
