ರವೀಂದ್ರ ಜಡೇಜಾ ಸ್ವಾರ್ಡ್ ಸೆಲಿಬ್ರೇಷನ್ ಕಾಫಿ ಮಾಡಿದ ಡೇವಿಡ್ ವಾರ್ನರ್ನಮ್ಮಿಬ್ಬರಲ್ಲಿ ಯಾರು ಬೆಸ್ಟ್ ಎಂದು ಕೇಳಿದ ಡೆಲ್ಲಿ ನಾಯಕಡೇವಿಡ್ ವಾರ್ನರ್ ಹಂಚಿಕೊಂಡ ವಿಡಿಯೋ ವೈರಲ್

ನವದೆಹಲಿ(ಮೇ.21): ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಡೆಲ್ಲಿ ನಾಯಕ ಡೇವಿಡ್‌ ವಾರ್ನರ್‌, ಚೆನ್ನೈ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಎದುರೇ ತಮ್ಮ ಬ್ಯಾಟ್‌ ಹಿಡಿದು ಖಡ್ಗ ವರಸೆಯ ಸಂಭ್ರಮಾಚರಣೆ ಮಾಡಿ ಗಮನ ಸೆಳೆದಿದ್ದಾರೆ. ಈ ವಿಡಿಯೋವನ್ನು ಡೇವಿಡ್ ವಾರ್ನರ್, ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದು. ಇದನ್ನು ಯಾರು ಚೆನ್ನಾಗಿ ಮಾಡುತ್ತಾರೆ ಹೇಳಿ ಎಂದು ಅಭಿಮಾನಿಗಳಿಗೆ ಪ್ರಶ್ನೆ ಮಾಡಿದ್ದಾರೆ.

ಆಸ್ಟ್ರೇಲಿಯಾದ ಸ್ಪೋಟಕ ಆರಂಭಿಕ ಬ್ಯಾಟರ್ ಯಾವಾಗಲೂ ಮೈದಾನದಲ್ಲಿ ಹಾಗೂ ಮೈದಾನದಾಚೆಗೆ ಸದಾ ವಿನೂತನ ಚಟುವಟಿಕೆಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಲೇ ಬಂದಿದ್ದಾರೆ. ಇದೀಗ ಶನಿವಾರ ಇಲ್ಲಿನ ಅರುಣ್‌ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದ ಡೆಲ್ಲಿ ಕ್ಯಾಪಿಟಲ್ಸ್‌ನ 5ನೇ ಓವರ್‌ ವೇಳೆ ಈ ಖಡ್ಗ ವರಸೆಯ ಸಂಭ್ರಮಾಚರಣೆ ಕ್ರಿಕೆಟ್ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. 

ದೀಪಕ್ ಚಹರ್ ಬೌಲಿಂಗ್‌ನಲ್ಲಿ ಡೇವಿಡ್‌ ವಾರ್ನರ್ ಒಂದು ರನ್‌ ಓಡಿದರು. ಇದಾದ ಬಳಿಕ ಎರಡನೇ ರನ್ ಓಡುವ ಯತ್ನ ನಡೆಸಿದರು. ಈ ಸಂದರ್ಭದಲ್ಲಿ ಎಕ್ಸ್‌ಟ್ರಾ ಕವರ್ ವಿಭಾಗದಲ್ಲಿ ನಿಂತಿದ ಮೋಯಿನ್ ಅಲಿ ಡೈರೆಕ್ಟ್ ವಿಕೆಟ್‌ಗೆ ಚೆಂಡು ಎಸೆದಿದ್ದರೆ, ವಾರ್ನರ್ ರನೌಟ್ ಆಗುವ ಸಾಧ್ಯತೆಯಿತ್ತು. ಇದಾದ ಬಳಿಕವೂ ವಾರ್ನರ್ ಎರಡನೇ ರನ್ ಓಡುವ ಯತ್ನ ನಡೆಸಿದರು. ಮತ್ತೆ ಅಜಿಂಕ್ಯ ರಹಾನೆ ವಿಕೆಟ್‌ಗೆ ಥ್ರೋ ಮಾಡುವ ವಿಫಲ ಯತ್ನ ನಡೆಸಿದರು. ಆಗ ಚೆಂಡು ಜಡೇಜಾ ಕೈ ಸೇರಿತು. ಜಡೇಜಾ ಕೂಡಾ ರನೌಟ್‌ ಯತ್ನ ಮಾಡಲು ಮುಂದಾದಾಗ ವಾರ್ನರ್, ಜಡ್ಡು ಎದುರೇ ಸ್ವಾರ್ಡ್‌ ಸೆಲಿಬ್ರೇಷನ್ ಮಾಡಿ ಗಮನ ಸೆಳೆದರು.

ಹೀಗಿತ್ತು ನೋಡಿ ಆ ಕ್ಷಣ:

View post on Instagram

ಕ್ವಾಲಿಫೈಯರ್‌-1ಗೆ ಚೆನ್ನೈ!

ನವದೆಹಲಿ: 4 ಬಾರಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್‌್ಸ 12ನೇ ಬಾರಿಗೆ ಐಪಿಎಲ್‌ ಪ್ಲೇ-ಆಫ್‌ ಹಂತಕ್ಕೆ ಪ್ರವೇಶಿಸಿದೆ. ಶನಿವಾರ ಇಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಚೆನ್ನೈ 77 ರನ್‌ಗಳ ದೊಡ್ಡ ಗೆಲುವು ಸಂಪಾದಿಸಿತು. 14 ಪಂದ್ಯಗಳಲ್ಲಿ 17 ಅಂಕ ಪಡೆದು, ಉತ್ತಮ ನೆಟ್‌ ರನ್‌ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆಯಿತು. ಇದರೊಂದಿಗೆ ತನ್ನ ತವರೂರಲ್ಲೇ ನಡೆಯಲಿರುವ ಕ್ವಾಲಿಫೈಯರ್‌-1 ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ಜೊತೆ ಸೆಣಸಾಟ ನಿಗದಿಪಡಿಸಿಕೊಂಡಿತು.

"ಅತ್ಯದ್ಭುತ ಪ್ರತಿಭೆ": ರಿಂಕು ಸಿಂಗ್ ಗುಣಗಾನ ಮಾಡಿದ ಗೌತಮ್ ಗಂಭೀರ್

ಋುತುರಾಜ್‌ ಗಾಯಕ್ವಾಡ್‌ ಹಾಗೂ ಡೆವೊನ್‌ ಕಾನ್ವೇ ಅವರ ಸ್ಫೋಟಕ ಆಟದ ನೆರವಿನಿಂದ ಚೆನ್ನೈ 20 ಓವರಲ್ಲಿ 3 ವಿಕೆಟ್‌ಗೆ 223 ರನ್‌ ಕಲೆಹಾಕಿತು. ಕಾನ್ವೇ 52 ಎಸೆತದಲ್ಲಿ 11 ಬೌಂಡರಿ, 3 ಸಿಕ್ಸರ್‌ನೊಂದಿಗೆ 87, ಗಾಯಕ್ವಾಡ್‌ 50 ಎಸೆತದಲ್ಲಿ 3 ಬೌಂಡರಿ, 7 ಸಿಕ್ಸರ್‌ನೊಂದಿಗೆ 79 ರನ್‌ ಚಚ್ಚಿದರು. ಶಿವಂ ದುಬೆ 9 ಎಸೆತದಲ್ಲಿ 3 ಸಿಕ್ಸರ್‌ನೊಂದಿಗೆ 22, ಜಡೇಜಾ 20 ರನ್‌ ಕೊಡುಗೆ ನೀಡಿದರು.

ಬೃಹತ್‌ ಗುರಿ ಬೆನ್ನತ್ತಿದ ಡೆಲ್ಲಿ ಪರ ನಾಯಕ ಡೇವಿಡ್‌ ವಾರ್ನರ್‌ ಏಕಾಂಗಿ ಹೋರಾಟ ನಡೆಸಿದರು. 58 ಎಸೆತದಲ್ಲಿ 7 ಬೌಂಡರಿ, 5 ಸಿಕ್ಸರ್‌ನೊಂದಿಗೆ 86 ರನ್‌ ಗಳಿಸಿದರು. ತಂಡದ ಉಳಿದ್ಯಾವ ಬ್ಯಾಟರ್‌ ಕೂಡ 15 ರನ್‌ ದಾಟಲಿಲ್ಲ. ದೀಪಕ್‌ ಚಹರ್‌ 3, ಪತಿರನ ಹಾಗೂ ತೀಕ್ಷಣ ತಲಾ 2 ವಿಕೆಟ್‌ ಕಿತ್ತರು.