IPL 2023 ಗೌತಮ್ ಗಂಭೀರ್ ಭಾರತದ ದಿಗ್ಗಜ, ಅವರಿಂದ ಸಾಕಷ್ಟು ಕಲಿತಿದ್ದೇನೆ: ನವೀನ್-ಉಲ್-ಹಕ್
ಐಪಿಎಲ್ ಎಲಿಮಿನೇಟರ್ ಹಂತದಲ್ಲೇ ಹೊರಬಿದ್ದ ಲಖನೌ ಸೂಪರ್ ಜೈಂಟ್ಸ್
ಗೌತಮ್ ಗಂಭೀರ್ ಪರ ಬ್ಯಾಟಿಂಗ್ ಮಾಡಿದ ಆಫ್ಘಾನ್ ವೇಗಿ ನವೀನ್ ಉಲ್ ಹಕ್
ನಾನು ಗಂಭೀರ್ ಅವರಿಂದ ಸಾಕಷ್ಟು ಕಲಿತಿದ್ದೇನೆ ಎಂದ ಲಖನೌ ವೇಗಿ
ಚೆನ್ನೈ(ಮೇ.25): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಲಖನೌ ಸೂಪರ್ ಜೈಂಟ್ಸ್ ತಂಡವು ಆಘಾತಕಾರಿ ಸೋಲು ಕಾಣುವ ಮೂಲಕ ತನ್ನ ಅಭಿಯಾನವನ್ನು ಮುಗಿಸಿದೆ. ಇನ್ನು ಏಕಾನ ಮೈದಾನದಲ್ಲಿ ಆರ್‌ಸಿಬಿ ಹಾಗೂ ಲಖನೌ ತಂಡಗಳ ನಡುವಿನ ಪಂದ್ಯದ ವೇಳೆ ಮೈದಾನದಲ್ಲಿಯೇ ವಿರಾಟ್ ಕೊಹ್ಲಿ ಹಾಗೂ ಲಖನೌ ವೇಗಿ ನವೀನ್-ಉಲ್-ಹಕ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಸಂದರ್ಭದಲ್ಲಿ ಗೌತಮ್ ಗಂಭೀರ್, ಆಫ್ವಾನ್ ಮೂಲದ ವೇಗಿ ನವೀನ್ ಉಲ್ ಹಕ್ ಬೆಂಬಲಕ್ಕೆ ನಿಂತಿದ್ದರು. ಇದಾದ ಬಳಿಕ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆಯೂ ಮಾತಿನ ಚಕಮಕಿ ನಡೆದಿತ್ತು. ಇದಾದ ಬಳಿಕ ಸೋಷಿಯಲ್ ಮೀಡಿಯದಲ್ಲೂ ನವೀನ್ ಉಲ್ ಹಕ್ ಹಾಗೂ ಗೌತಮ್ ಗಂಭೀರ್, ತೀರಾ ಕೆಳಮಟ್ಟದಲ್ಲಿ ವಿರಾಟ್ ಕೊಹ್ಲಿಯ ಕಾಲೆಳೆಯುವ ಯತ್ನ ನಡೆಸಿದ್ದರು.
ಪ್ರತಿಯೊಬ್ಬರು ತಮ್ಮ ತಂಡದ ಆಟಗಾರರನ್ನು ಬೆಂಬಲಿಸುತ್ತಾರೆ. ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗೌತಮ್ ಗಂಭೀರ್ ಅವರಿಂದ ತಾವು ಸಾಕಷ್ಟು ಕಲಿತಿದ್ದಾಗಿ ನವೀನ್ ಉಲ್ ಹಕ್ ಹೇಳಿದ್ದಾರೆ. "ಮೆಂಟರ್, ಕೋಚ್, ಆಟಗಾರರು ಅಥವಾ ಇನ್ಯಾರೇ ಆಗಿರಲಿ. ನಾನು ಮೈದಾನದಲ್ಲಿ ಸಹ ಆಟಗಾರರ ಜತೆಗೆ ನಿಲ್ಲುತ್ತೇನೆ, ನಾನು ಇದನ್ನು ಪ್ರತಿಯೊಬ್ಬರಿಂದಲೂ ನಿರೀಕ್ಷಿಸುತ್ತೇನೆ ಎಂದು ಮುಂಬೈ ಇಂಡಿಯನ್ಸ್ ಎದುರು ಸೋಲಿನ ಬಳಿಕ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ನವೀನ್ ಉಲ್ ಹಕ್ ಹೇಳಿದ್ದಾರೆ.
"ಗೌತಮ್ ಗಂಭೀರ್ ಅವರೊಬ್ಬ ಭಾರತದ ದಿಗ್ಗಜ ಆಟಗಾರರಾಗಿದ್ದಾರೆ. ಅವರಿಗೆ ಭಾರತೀಯರು ಒಳ್ಳೆಯ ಗೌರವ ನೀಡುತ್ತಾರೆ. ಅವರು ಭಾರತ ಕ್ರಿಕೆಟ್‌ಗೆ ಸಾಕಷ್ಟು ಒಳ್ಳೆಯ ಕೊಡುಗೆಯನ್ನು ನೀಡಿದ್ದಾರೆ. ಓರ್ವ ಮೆಂಟರ್, ಓರ್ವ ಕೋಚ್, ಓರ್ವ ಕ್ರಿಕೆಟ್ ದಿಗ್ಗಜನಾಗಿರುವ ಗೌತಮ್ ಗಂಭೀರ್ ಅವರನ್ನು ನಾನು ಕೂಡಾ ಗೌರವದಿಂದ ಕಾಣುತ್ತೇನೆ. ಅವರಿಂದ ನಾನು ಸಾಕಷ್ಟು ವಿಷಯಗಳನ್ನು ಕಲಿತುಕೊಂಡಿದ್ದೇನೆ" ಎಂದು ನವೀನ್ ಉಲ್ ಹಕ್ ಹೇಳಿದ್ದಾರೆ.
ಕ್ವಾಲಿಫೈಯರ್-2ಗೆ ಮುಂಬೈ, ಲಖನೌ ಮನೆಗೆ!
ಚೆನ್ನೈ: ಸತತ 2 ಸೋಲಿನೊಂದಿಗೆ 16ನೇ ಆವೃತ್ತಿ ಐಪಿಎಲ್ಗೆ ಕಾಲಿರಿಸಿದ್ದ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕ್ವಾಲಿಫೈಯರ್-2ಗೆ ಕಾಲಿಟ್ಟಿದ್ದು, 6ನೇ ಪ್ರಶಸ್ತಿ ಗೆಲ್ಲುವ ಹಾದಿಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಬುಧವಾರ ಲಖನೌ ಸೂಪರ್ಜೈಂಟ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ರೋಹಿತ್ ಪಡೆ 81 ರನ್ ಭರ್ಜರಿ ಗೆಲುವು ಸಾಧಿಸಿತು. ಲಖನೌ ಸತತ 2ನೇ ಬಾರಿಯೂ ಎಲಿಮಿನೇಟರ್ನಲ್ಲಿ ಅಭಿಯಾನ ಕೊನೆಗೊಳಿಸಿತು.
IPL 2023 ಧೋನಿ-ಜಡೇಜಾ ನಡುವೆ ಮತ್ತೆ ಒಡಕು? ತಂಡ ತೊರೆಯುತ್ತಾರಾ ಜಡ್ಡು?
ಚೆನ್ನೈನ ಕ್ರೀಡಾಂಗಣದಲ್ಲಿ ಚೇಸಿಂಗ್ ಕಷ್ಟವಾಗಲಿದೆ ಎಂದರಿತಿದ್ದ ರೋಹಿತ್, ಮೊದಲು ಬ್ಯಾಟ್ ಮಾಡುವ ನಿರ್ಧಾರ ಕೈಗೊಂಡರು. ನಾಯಕನ ಆಯ್ಕೆ ಸಮರ್ಥಿಸಿಕೊಳ್ಳುವಂತೆ ಬ್ಯಾಟ್ ಬೀಸಿದ ಮುಂಬೈ 8 ವಿಕೆಟ್ಗೆ 182 ರನ್ ಕಲೆಹಾಕಿತು. ಬಳಿಕ ಆಕಾಶ್ ಮಧ್ವಾಲ್ ಮಾರಕ ದಾಳಿಗೆ ತತ್ತರಿಸಿದ ಲಖನೌ 16.3 ಓವರಲ್ಲಿ 101 ರನ್‌ಗೆ ಸರ್ವಪತನ ಕಂಡಿತು.
4 ಓವರ್ ಮುಕ್ತಾಯಕ್ಕೂ ಮುನ್ನವೇ ಆರಂಭಿಕರನ್ನು ಕಳೆದುಕೊಂಡ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದು ಮಾರ್ಕಸ್ ಸ್ಟೋಯ್ನಿಸ್. ಆದರೆ ಇತರರು ತಂಡದ ಕೈಹಿಡಿಯಲಿಲ್ಲ. ಹೂಡಾ ಜೊತೆ ಓಡುವಾಗ ಗೊಂದಲಕ್ಕೆ ಸಿಲುಕಿ ಸ್ಟೋಯ್ನಿಸ್(27 ಎಸೆತದಲ್ಲಿ 40 ರನ್) ರನೌಟ್ ಆದರು. 3.3 ಓವರ್‌ನಲ್ಲಿ 5 ರನ್‌ಗೆ 5 ವಿಕೆಟ್ ಆಕಾಶ್ ಲಖನೌ ತಂಡದ ದಿಕ್ಕೆ
ನಾಳೆ ಕ್ವಾಲಿಫೈಯರ್-2
ಕ್ವಾಲಿಫೈಯರ್-1ರಲ್ಲಿ ಚೆನ್ನೈ ವಿರುದ್ಧ ಸೋತ ಗುಜರಾತ್ ಹಾಗೂ ಮುಂಬೈ ತಂಡಗಳು ಶುಕ್ರವಾರ ಅಹಮದಾಬಾದ್ನಲ್ಲಿ ಕ್ವಾಲಿಫೈಯರ್-2ರಲ್ಲಿ ಮುಖಾಮುಖಿಯಾಗಲಿವೆ. ಗೆಲ್ಲುವ ತಂಡ ಭಾನುವಾರ ಚೆನ್ನೈ ವಿರುದ್ಧ ಫೈನಲ್‌ನಲ್ಲಿ ಆಡಲಿದೆ.