ಗುಜರಾತ್ ಟೈಟಾನ್ಸ್ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಚೆನ್ನೈ ಸೂಪರ್ ಕಿಂಗ್ಸ್ರವೀಂದ್ರ ಜಡೇಜಾ-ಎಂ ಎಸ್ ಧೋನಿ ನಡುವೆ ಮನಸ್ತಾಪ?ಸಂಚಲನಕ್ಕೆ ಕಾರಣವಾದ ಜಡ್ಡು ಟ್ವೀಟ್

ಚೆನ್ನೈ(ಮೇ.25): ಚೆನ್ನೈ ಸೂಪರ್ ಕಿಂಗ್ಸ್‌ ನಾಯಕ ಎಂ.ಎ​ಸ್‌. ​ಧೋನಿ ಹಾಗೂ ತಾರಾ ಆಲ್ರೌಂಡರ್‌ ರವೀಂದ್ರ ಜಡೇಜಾ ನಡುವೆ ಮನ​ಸ್ತಾ​ಪ ಮೂಡಿದೆ ಎಂದು ಸಾಮಾ​ಜಿಕ ತಾಣ​ಗ​ಳಲ್ಲಿ ವದಂತಿ​ಗಳು ಹರಿ​ದಾ​ಡು​ತ್ತಿವೆ. ಇತ್ತೀ​ಚಿನ ಕೆಲ ಬೆಳ​ವ​ಣಿ​ಗೆ​ಗಳು ಇದಕ್ಕೆ ಪುಷ್ಠಿ ನೀಡು​ತ್ತಿರುವು​ದು ಇಬ್ಬರ ನಡುವೆ ಎಲ್ಲವೂ ಸರಿ​ಯಿಲ್ಲ ಎಂಬು​ದರ ಬಗ್ಗೆ ಚರ್ಚೆ ಹುಟ್ಟು​ಹಾ​ಕಿವೆ.

ಇತ್ತೀ​ಚೆ​ಗಷ್ಟೇ ಎಂ ಎಸ್ ಧೋನಿ ಬ್ಯಾಟಿಂಗ್‌ ನೋಡು​ವು​ದ​ಕ್ಕಾಗಿ ಅಭಿ​ಮಾ​ನಿ​ಗಳು ತಾವು ಔಟಾ​ಗಲು ಕಾಯು​ತ್ತಿ​ದ್ದಾರೆ ಎಂದು ಜಡೇಜಾ ಹೇಳಿ​ದ್ದು ಸುದ್ದಿ​ಯಾ​ಗಿತ್ತು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ವಿರು​ದ್ಧದ ಪಂದ್ಯ​ದಲ್ಲಿ ಧೋನಿ ಹಾಗೂ ಜಡೇಜಾ ನಡುವೆ ಮೈದಾ​ನ​ದಲ್ಲೇ ಮಾತಿನ ಚಕ​ಮಕಿಯಂತೆ ಕಂಡುಬಂದ ಸನ್ನಿವೇಶವೂ ನಡೆಯಿತು. 

IPL 2023 ಬೇಕಂತಲೇ ಧೋನಿಯಿಂದ ಸಮಯ ವ್ಯರ್ಥ? ಅಂಪೈರ್‌ ಕೂಡಾ ಸಾಥ್?

ಇನ್ನು ಮಂಗ​ಳ​ವಾರ ಮೊದ​ಲ ಕ್ವಾಲಿಫೈಯರ್‌ ಪಂದ್ಯದ ಬಳಿಕ ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್‌ ಅವ​ರು ಜಡೇಜಾರನ್ನು ಸಮಾಧಾನಪಡಿಸುತ್ತಿರುವ ವಿಡಿಯೋ ವೈರಲ್‌ ಆಗಿದ್ದು ಇನ್ನಷ್ಟು ಊಹಾ​ಪೋ​ಹ​ಕ್ಕೆ ಕಾರಣವಾಗಿದೆ. ಈ ನಡುವೆ ಸಾಮಾಜಿಕ ತಾಣಗಳಲ್ಲಿ ಇತ್ತೀಚೆಗೆ ಜಡೇಜಾ ಹಾಕುತ್ತಿರುವ ಪೋಸ್ಟ್‌ಗಳು ಯಾವುದೋ ವಿಚಾರಕ್ಕೆ ಅವರು ಬೇಸರಗೊಂಡಿರುವುದನ್ನು ಸ್ಪಷ್ಟಪಡಿಸುತ್ತಿವೆ.

Scroll to load tweet…

ಗುಜರಾತ್ ಟೈಟಾನ್ಸ್ ಎದುರಿನ ಮಹತ್ವದ ಪಂದ್ಯದಲ್ಲಿ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ, ಅಪ್‌ಸ್ಟಾಕ್ಸ್‌ ಮೋಸ್ಟ್ ವ್ಯಾಲಿಯೇಬಲ್ ಅಸೆಟ್‌ ಆಫ್‌ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದರು. ಜಡ್ಡು ಈ ಪ್ರಶಸ್ತಿ ಸ್ವೀಕರಿಸುತ್ತಿರುವ ಫೋಟೋದೊಂದಿಗೆ, ಅಪ್‌ಸ್ಟಾಕ್ಸ್‌ಗೆ ಇದು ಗೊತ್ತು, ಆದರೆ ಕೆಲವು ಅಭಿಮಾನಿಗಳಿಗೆ ಗೊತ್ತಿಲ್ಲ ಎಂದು ನಗುವ ಸಿಂಬಲ್ ಪೋಸ್ಟ್‌ ಮಾಡುವ ಮೂಲಕ ತಂಡದೊಳಗೆ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಸೂಚ್ಯವಾಗಿ ಹೇಳಿದ್ದಾರೆ. 

Scroll to load tweet…

ಚೆನ್ನೈನ ಚೆಪಾಕ್‌ ಮೈದಾನದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರವೀಂದ್ರ ಜಡೇಜಾ 4 ಓವರ್‌ ಬೌಲಿಂಗ್ ಮಾಡಿ ಕೇವಲ 18 ರನ್ ನೀಡಿ ಡೇವಿಡ್ ಮಿಲ್ಲರ್ ಹಾಗೂ ದಶುನ್ ಶನಕಾ ಅವರ ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿಲ್ಲಿ ಮಹತ್ತರ ಪಾತ್ರವಹಿಸುವಲ್ಲಿ ಯಶಸ್ವಿಯಾಗಿದ್ದರು. 

ಇನ್ನು ಕಳೆದ ವರ್ಷ ನಡೆದ ಐಪಿಎಲ್ ಟೂರ್ನಿಯಲ್ಲಿ ಆರಂಭದಲ್ಲಿ ರವೀಂದ್ರ ಜಡೇಜಾಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ತಂಡದ ನಾಯಕ ಪಟ್ಟ ಕಟ್ಟಲಾಗಿತ್ತು. ಆದರೆ ಜಡ್ಡು ನೇತೃತ್ವದಲ್ಲಿ ಸಿಎಸ್‌ಕೆ ತಂಡವು ಹೀನಾಯ ಪ್ರದರ್ಶನ ತೋರಿತ್ತು. ಹೀಗಾಗಿ ಜಡ್ಡು ಬದಲಿಗೆ ಧೋನಿಯೇ ಮತ್ತೆ ನಾಯಕತ್ವ ವಹಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಗಾಯಗೊಂಡ ಜಡೇಜಾ, ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದರು. ಹೀಗಾಗಿ ಜಡೇಜಾ ಹಾಗೂ ಧೋನಿ ನಡುವೆ ಯಾವುದೂ ಸರಿಯಿಲ್ಲ ಎನ್ನುವಂತಹ ಮಾತುಗಳು ಕೇಳಿ ಬಂದಿದ್ದವು.

ಕಳೆದ ಆವೃತ್ತಿಯ ಐಪಿಎಲ್ ಮುಗಿದ ಬಳಿಕ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತೊರೆದು ಮುಂಬೈ ಇಂಡಿಯನ್ಸ್ ಪಾಳಯವನ್ನು ಕೂಡಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಕ್ಯಾಪ್ಟನ್ ಕೂಲ್ ಮಧ್ಯ ಪ್ರವೇಶಿಸಿ, ಜಡೇಜಾ ಅವರನ್ನು ಚೆನ್ನೈ ತಂಡದಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.