IPL 2023 ಧೋನಿ ಸ್ಟಂಪಿಂಗ್‌ಗೆ ಕುಪ್ಪಳಿಸಿದ ಜನ, ಟ್ರೋಫಿ ಗೆಲ್ಲಲು 215 ರನ್ ಟಾರ್ಗೆಟ್ ನೀಡಿದ ಗುಜರಾತ್ ಸೈನ್ಯ!
ಮಹತ್ವದ ಪಂದ್ಯದಲ್ಲಿ ವೃದ್ಧಿಮಾನ್ ಸಾಹ ಅಬ್ಬರಿಸಿದರೆ, ಸಾಯಿ ಸುದರ್ಶನ್ ಸ್ಫೋಟಕ ಬ್ಯಾಟಿಂಗ್ ಗುಜರಾತ್ ತಂಡಕ್ಕೆ ನೆರವಾಯಿತು. ಇದರ ಪರಿಣಾಮ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಚೆನ್ನೈ ತಂಡಕ್ಕೆ 215 ರನ್ ಟಾರ್ಗೆಟ್ ನೀಡಿದೆ.
ಅಹಮ್ಮದಾಬಾದ್(ಮೇ.29): ಇದೇ ಮೊದಲ ಬಾರಿಗೆ ಮೀಸಲು ದಿನದಲ್ಲಿ ನಡೆಯುತ್ತಿರುವ ಐಪಿಎಲ್ ಫೈನಲ್ ಪಂದ್ಯ ಆರಂಭದಲ್ಲೇ ಹಲವು ರೋಚಕತೆಗೆ ಸಾಕ್ಷಿಯಾಗಿದೆ. ಸಾಯಿ ಸುದರ್ಶನ್ ಸ್ಫೋಟಕ ಬ್ಯಾಟಿಂಗ್, ವೃದ್ಧಿಮಾನ್ ಸಾಹ ಹಾಫ್ ಸೆಂಚುರಿ ಒಂದೆಡೆಯಾದರೆ, ಮತ್ತೊಂದೆಡೆ ನಾಯಕ ಎಂಎಸ್ ಧೋನಿ ಮಿಂಚಿನ ಸ್ಟಂಪಿಂಗ್ ಅಭಿಮಾನಿಗಳನ್ನು ನಿಂತಲ್ಲೇ ಕುಣಿಸಿದೆ. ಇತ್ತ ಸಾಯಿ ಸುದರ್ಶನ್ ಸ್ಪೋಟಕ ಬ್ಯಾಟಿಂಗ್ ಟೈಟಾನ್ಸ್ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಗಿಯಿತು. ಸುದರ್ಶನ್ 96 ರನ್ ಸಿಡಿಸುವ ಮೂಲಕ ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ 4 ವಿಕೆಟ್ ನಷ್ಟಕ್ಕೆ 214 ರನ್ ಸಿಡಿಸಿದೆ.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಧೋನಿ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇತ್ತ ಬ್ಯಾಟಿಂಗ್ ಇಳಿದ ಗುಜರಾತ್ ಟೈಟಾನ್ಸ್ ಉತ್ತಮ ಆರಂಭ ಪಡೆಯಿತು. ಶುಭಮನ್ ಗಿಲ್ ಹಾಗೂ ವೃದ್ದಿಮಾನ್ ಸಾಹ ಜೊತೆಯಾಟಕ್ಕೆ ಚೆನ್ನೈ ಸುಸ್ತಾಯಿತು. ಕಳೆದ ಕೆಲ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದ್ದ ವೃದ್ಧಿಮಾನ ಅಬ್ಬರ ಆರಂಭಗೊಂಡಿತು. ಇತ್ತ ಗಿಲ್ ಕೂಡ ದಿಟ್ಟ ಹೋರಾಟ ನೀಡಿದರು.
IPL Final ಕ್ಯಾಪ್ಟನ್ ಕೂಲ್ ಧೋನಿ ದಾಖಲೆ ಹೇಗಿದೆ.?
39 ರನ್ ಸಿಡಿಸಿದ್ದ ಶುಭಮನ್ ಗಿಲ್ ಸ್ಟಂಪ್ ಔಟ್ ಆದರು. ಧೋನಿ ಮಿಂಚಿನ ಸ್ಟಂಪಿಂಗ್ ಅಭಿಮಾನಿಗಳ ಮನತಣಿಸಿತು. ಗಿಲ್ ವಿಕೆಟ್ ಪತನ ಬಳಿಕ ಸಾಹ ಹಾಗೂ ಸಾಯಿ ಸುದರ್ಶನ್ ಹೋರಾಟ ಆರಂಭಗೊಂಡಿತು. ಸಾಹ ಹಾಫ್ ಸೆಂಚುರಿ ಸಿಡಿಸಿದರು. ಆದರೆ ಸಾಹ 39 ಎಸೆತದಲ್ಲಿ 54 ರನ್ ಸಿಡಿಸಿ ಔಟಾದರು. ಆದರೆ ಸಾಯಿ ಸುದರ್ಶನ್ ಸ್ಫೋಟಕ ಬ್ಯಾಟಿಂಗ್ ಚೆನ್ನೈ ತಂಡದ ತಲೆನೋವು ಹೆಚ್ಚಿಸಿತು.
ಸುದರ್ಶನ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಸಾಯಿ ಸುದರ್ಶನ್ ಹೋರಾಟಕ್ಕೆ ಬ್ರೇಕ್ ಹಾಕಲು ಚೆನ್ನೈ ಇನ್ನಿಲ್ಲದ ಪ್ರಯತ್ನ ಮಾಡಿತು. ಆದರೆ ಯಾವೂದೂ ಕೈಗೂಡಲಿಲ್ಲ. ಸುದರ್ಶನ್ ಬೌಂಡರಿ , ಸಿಕ್ಸರ್ ಆಟ ಚೆನ್ನೈ ಅಭಿಮಾನಿಗಳ ಆತಂಕ ಹೆಚ್ಚಿಸಿತು. ಸೆಂಚುರಿ ಸಮೀಪದಲ್ಲಿ ಸಾಯಿ ಸುದರ್ಶನ್ ಎಲ್‌ಬಿ ಬಲೆಗೆ ಬಿದ್ದರು. 47 ಎಸೆತದಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್ ಮೂಲಕ 96 ರನ್ ಸಿಡಿಸಿದರು.
ರಶೀದ್ ಖಾನ್ ಅಬ್ಬರಿಸಲಿಲ್ಲ. ಆದರೆ ನಾಯಕ ಹಾರ್ದಿಕ್ ಪಾಂಡ್ಯ 12 ಎಸೆತದಲ್ಲಿ ಅಜೇಯ 21 ರನ್ ಸಿಡಿಸಿದರು. ಈ ಮೂಲಕ ಗುಜರಾತ್ ಟೈಟಾನ್ಸ್ 4 ವಿಕೆಟ್ ನಷ್ಟಕ್ಕೆ 214 ರನ್ ಸಿಡಿಸಿತು.
IPL 2023 ಇತಿಹಾಸ ಹೇಳುತ್ತಿದೆ ಸಾಕ್ಷಿ, ಈ ಬಾರಿ ಸಿಎಸ್‌ಕೆಗೆ ಟ್ರೋಫಿ!
ಫೈನಲ್ ಪಂದ್ಯದಲ್ಲಿ ಗುಜರಾತ್ ಉತ್ತಮ ಹೋರಾಟ ನೀಡಿ 214 ರನ್ ಸಿಡಿಸಿದೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್‌ಗೆ ಕಠಿಣ ಗುರಿ ನೀಡಿದೆ. ಇದೀಗ ಸಿಎಸ್‌ಕೆಗೆ ಚೇಸಿಂಗ್ ಸವಾಲಿನಿಂದ ಕೂಡಿದೆ. ಒಂದೆಡೆ ಬೃಹತ್ ಮೊತ್ತ, ಮತ್ತೊಂದೆಡೆ ಪ್ರತಿ ಎಸೆತದಲ್ಲೂ ರನ್ ಸಿಡಿಸಿಬೇಕಾದ ಅನಿವಾರ್ಯತೆ ಎದುರಾಗಿದೆ. ಇತ್ತ ಗುಜರಾತ್ ತಂಡ ಸಿಎಸ್‌ಕೆ ಕಟ್ಟಿ ಹಾಕಿ ಸತತ 2ನೇ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ.