IPL 2023 ಬೇಕಂತಲೇ ಧೋನಿಯಿಂದ ಸಮಯ ವ್ಯರ್ಥ? ಅಂಪೈರ್ ಕೂಡಾ ಸಾಥ್?
ಮೊದಲ ಕ್ವಾಲಿಫೈಯರ್ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್
ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಎದುರು ಭರ್ಜರಿ ಜಯ
ಚರ್ಚೆಗೆ ಗ್ರಾಸವಾದ ಧೋನಿಯ ಆನ್‌ಫೀಲ್ಡ್ ನಡೆ
ಚೆನ್ನೈ(ಮೇ.25): ಐಪಿಎಲ್ನ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಚೆನ್ನೈ ಫೈನಲ್ಗೇರಿದರೂ, ಪಂದ್ಯದಲ್ಲಿ ತಂಡದ ನಾಯಕ ಎಂ.ಎಸ್.ಧೋನಿ ತೆಗೆದುಕೊಂಡ ನಿರ್ಧಾರವೊಂದು ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಗುಜರಾತ್ ಇನ್ನಿಂಗ್‌್ಸನ 16ನೇ ಓವರ್ ಅನ್ನು ಬೌಲ್ ಮಾಡಲು ಮಥೀಶ ಪತಿರನ ಸಿದ್ಧಗೊಳ್ಳುತ್ತಿದ್ದಾಗ ಅಂಪೈರ್ ಅನಿಲ್ ಚೌಧರಿ ಪತಿರನ ಅವರನ್ನು ತಡೆದರು. ಆಗ ಲೆಗ್ ಅಂಪೈರ್ ಕ್ರಿಸ್ ಗ್ಯಾಫನಿ ಬಳಿ ತೆರಳಿದ ಧೋನಿ ವಿಷಯ ಏನೆಂದು ವಿಚಾರಿಸಿದರು. ಪತಿರನ ತಮ್ಮ ಮೊದಲ ಓವರ್ (ಇನ್ನಿಂಗ್‌್ಸನ 12ನೇ ಓವರ್) ಬೌಲ್ ಮಾಡಿದ ಬಳಿಕ 9 ನಿಮಿಷ ಮೈದಾನದಿಂದ ಹೊರಗಿದ್ದರು. ನಿಯಮದ ಪ್ರಕಾರ ಆಟದ ಮಧ್ಯೆ ಆಟಗಾರ ಮೈದಾನ ತೊರೆದರೆ, ಎಷ್ಟು ಸಮಯ ಹೊರಗಿದ್ದರೋ ಅಷ್ಟು ಸಮಯ ಕಳೆದ ಬಳಿಕವಷ್ಟೇ ಬೌಲ್ ಮಾಡಬಹುದು. ಪತಿರನ ಬೌಲ್ ಮಾಡಬೇಕಿದ್ದರೆ ಇನ್ನೂ 4 ನಿಮಿಷವಾಗಬೇಕಿತ್ತು. ಇದಕ್ಕೆ ಧೋನಿ, ಈಗಾಗಲೇ ಚಹರ್, ಜಡೇಜಾ, ತೀಕ್ಷಣ ತಲಾ 4 ಓವರ್ ಮುಗಿಸಿದ್ದಾರೆ. ಉಳಿದಿರುವುದು ತುಷಾರ್ ದೇಶಪಾಂಡೆ ಮಾತ್ರ. ಅವರ 2 ಓವರ್, ಪತಿರನ ಅವರದ್ದು 3 ಓವರ್ ಬಾಕಿ ಇದೆ. ತಂಡದಲ್ಲಿರುವ ಮತ್ತೊಂದು ಬೌಲಿಂಗ್ ಆಯ್ಕೆ ಮೋಯಿನ್ ಅಲಿ.
30 ಎಸೆತದಲ್ಲಿ ಟೈಟಾನ್ಸ್‌ಗೆ ಗೆಲ್ಲಲು 71 ರನ್ ಬೇಕಿದೆ. ವಿಜಯ್ ಶಂಕರ್, ರಶೀದ್ ಖಾನ್ ಇಬ್ಬರು ಬಲಗೈ ಬ್ಯಾಟರ್‌ಗಳು ಆಡುತ್ತಿರುವಾಗ ಬಲಗೈ ಸ್ಪಿನ್ನರ್‌ನನ್ನು ದಾಳಿಗಿಳಿಸುವ ರಿಸ್‌್ಕ ತೆಗೆದುಕೊಳ್ಳಲು ಸಾಧ್ಯವಿಲ್ಲ. 4 ನಿಮಿಷ ಮಾಡನಾಡುತ್ತಲೇ ಕಳೆಯೋಣ ಎಂದು ಅಂಪೈರ್‌ಗಳಿಗೆ ಮನವರಿಕೆ ಮಾಡಿದರು ಎನ್ನಲಾಗಿದೆ.
5 ರನ್ ದಂಡದಿಂದ ಚೆನ್ನೈ ಪಾರು!
ಫೀಲ್ಡಿಂಗ್ ಮಾಡುತ್ತಿರುವ ತಂಡ ಉದ್ದೇಶಪೂರ್ವಕವಾಗಿ ಸಮಯ ವ್ಯರ್ಥ ಮಾಡಿದರೆ ನಿಯಮದ ಪ್ರಕಾರ 5 ರನ್ ದಂಡ ಹಾಕಬೇಕು, ಜೊತೆಗೆ ಯಾವ ಬೌಲರ್‌ನಿಂದಾಗಿ ಆಟ ವಿಳಂಬವಾಗುತ್ತಿದೆಯೋ ಆತನನ್ನು ಬೌಲಿಂಗ್ ಮಾಡದಂತೆ ಸೂಚಿಸಿ ಹೊರಕಳುಹಿಸಬೇಕು. ಇದು ಅಂಪೈರ್‌ಗಳು ಮಾತ್ರ ತೆಗೆದುಕೊಳ್ಳಬಹುದಾದ ನಿರ್ಧಾರ. ಆದರೆ ಧೋನಿಯ ವಿಚಾರದಲ್ಲಿ ಅಂಪೈರ್‌ಗಳು ಮೃದು ಧೋರಣೆ ತೋರಿದರೆ ಎನ್ನುವ ಚರ್ಚೆ ಸಾಮಾಜಿಕ ತಾಣಗಳಲ್ಲಿ ನಡೆಯುತ್ತಿದೆ.
10ನೇ ಬಾರಿಗೆ ಐಪಿಎಲ್ ಫೈನಲ್‌ಗೆ ಸಿಎಸ್‌ಕೆ ಲಗ್ಗೆ!
ನಾಯಕ ಎಂ.ಎಸ್.ಧೋನಿ ಚೆನ್ನೈ ಸೂಪರ್ ಕಿಂಗ್‌್ಸ ತಂಡವನ್ನು ಮತ್ತೊಮ್ಮೆ ಐಪಿಎಲ್ ಫೈನಲ್‌ಗೇರಿಸಿದ್ದಾರೆ. ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧ ಪ್ಲೇ-ಅಫ್‌ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ 15 ರನ್ ಗೆಲುವು ಸಾಧಿಸಿದ ಚೆನ್ನೈ 14 ಆವೃತ್ತಿಗಳಲ್ಲಿ 10ನೇ ಬಾರಿಗೆ ಫೈನಲ್ ಪ್ರವೇಶಿಸಿ ಈ ಮೈಲಿಗಲ್ಲು ತಲುಪಿದ ಮೊದಲ ತಂಡ ಎನ್ನುವ ದಾಖಲೆ ಬರೆಯಿತು.
ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಋತುರಾಜ್ ಗಾಯಕ್ವಾಡ್ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 172 ರನ್ ಬಾರಿಸಿತ್ತು. ಇನ್ನು ಗುರಿ ಬೆನ್ನತ್ತಿದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಕೇವಲ 157 ರನ್‌ಗಳಿಗೆ ಸರ್ವಪತನವಾಗುವ ಮೂಲಕ 15 ರನ್ ಅಂತರದ ಸೋಲು ಅನುಭವಿಸಿತು.
IPL 2023 2ನೇ ಕ್ವಾಲಿಫೈಯರ್‌ಗೆ ಲಗ್ಗೆ ಇಟ್ಟ ಮುಂಬೈ, ಟೂರ್ನಿಯಿಂದ ಲಖನೌ ಔಟ್!
12ನೇ ಬಾರಿಗೆ ಪ್ಲೇ-ಆಫ್‌ನಲ್ಲಿ ಆಡಿದ ಚೆನ್ನೈ 5ನೇ ಬಾರಿಗೆ ಚಾಂಪಿಯನ್ ಪಟ್ಟಅಲಂಕರಿಸಲು ಕಾತರಿಸುತ್ತಿದೆ. ಗುಜರಾತ್ ಈ ಪಂದ್ಯದಲ್ಲಿ ಸೋತಿದ್ದರೂ ಫೈನಲ್‌ಗೇರಲು ಮತ್ತೊಂದು ಅವಕಾಶವಿದೆ. ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡದ ವಿರುದ್ಧ ಮೇ 26ರಂದು ಶುಕ್ರವಾರ 2ನೇ ಕ್ವಾಲಿಫೈಯರ್‌ನಲ್ಲಿ ಮುಂಬೈ ಇಂಡಿಯನ್ಸ್ ಎದುರು ಸೆಣಸಲಿದೆ.