ಐಪಿಎಲ್ ಟೂರ್ನಿ ಅದ್ಧೂರಿಯಾಗಿ ಆರಂಭಗೊಂಡಿದೆ. ಬರೋಬ್ಬರಿ 3 ವರ್ಷಗಳ ಬಳಿಕ ಬಹುತೇಕ ತಂಡಗಳು ತಮ್ಮ ತಮ್ಮ ತವರಿನಲ್ಲಿ ಟೂರ್ನಿ ಆಡುತ್ತಿದೆ. ಕಳೆದ 5 ದಿನಗಳಿಂದ ಸುಗಮವಾಗಿ ಸಾಗುತ್ತಿದ್ದ ಐಪಿಎಲ್ ಟೂರ್ನಿಗೆ ವಿಘ್ನ ಎದುರಾಗಿದೆ. ಇದೀಗ ಟೂರ್ನಿಗೆ ಕೋವಿಡ್ 19 ಅಪ್ಪಳಿಸಿದೆ.

ಮುಂಬೈ(ಏ.04): ಅದ್ಧೂರಿ ಉದ್ಘಾಟನೆ, ಅಷ್ಟೇ ರೋಚಕ ಪಂದ್ಯಗಳಿಂದ ಐಪಿಎಲ್ 2023 ಟೂರ್ನಿ ಸುಗಮವಾಗಿ ಸಾಗುತ್ತಿದೆ. ಆಟಾಗರರ ಇಂಜುರಿ, ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಸೇರಿದಂತೆ ಕೆಲ ಅಡೆತಡೆಗಳನ್ನು ನಿವಾಸಿಕೊಂಡು ಮುಂದ ಸಾಗುತ್ತಿರುವ ಐಪಿಎಲ್ ಟೂರ್ನಿಗೆ ಇದೀಗ ಆತಂಕ ಎದುರಾಗಿದೆ. 2023ರ ಐಪಿಎಲ್ ಟೂರ್ನಿಗೆ ಕೋವಿಡ್ ಭೀತಿ ಎದುರಾಗಿದೆ. ಐಪಿಎಲ್ ಪಂದ್ಯದ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾಗೆ ಕೋವಿಡ್ ಕಾಣಿಸಿಕೊಂಡಿದೆ. ಇದರ ಪರಿಣಾಮ ಕಮೆಂಟೇಟರಿಯಿಂದ ದೂರ ಉಳಿದಿದ್ದಾರೆ. 

45ರ ಹರೆಯದ ಆಕಾಶ್ ಚೋಪ್ರಾ ಸದ್ಯ ಐಪಿಎಲ್ ಟೂರ್ನಿಯಲ್ಲಿ ಕ್ರಿಕೆಟ್ ಕಾಮೆಂಟರಿ ಮಾಡುತ್ತಿದ್ದರು. ಆದರೆ ಆಕಾಶ್ ಚೋಪ್ರಾಗೆ ಕೋವಿಡ್ ವೈರಸ್ ಕಾಣಿಸಿಕೊಂಡಿದೆ. ಈ ಕುರಿತು ಟ್ವಿಟರ್ ಮೂಲಕ ಆಕಾಶ್ ಚೋಪ್ರಾ ಮಾಹಿತಿ ಹಂಚಿಕೊಂಡಿದ್ದಾರೆ. ಕೋವಿಡ್ ವೈರಸ್‌ಗೆ ಕಾಟ್ ಅಂಡ್ ಬೋಲ್ಡ್ ಆಗಿದ್ದೇನೆ. ಸಿ ವೈರಸ್ ಮತ್ತೆ ಬಾಧಿಸಿದೆ. ಆದರೆ ಮೈಲ್ಡ್ ಸಿಂಪ್ಟಸ್ ಇದೆ. ಎಲ್ಲವೂ ನಿಯಂತ್ರಣದಲ್ಲಿದೆ. ಹೀಗಾಗಿ ಕೆಲ ದಿನ ನಾನು ಕಮೆಂಟರಿ ಕರ್ತವ್ಯದಿಂದ ದೂರ ಉಳಿಯುತ್ತಿದ್ದೇನೆ. ಮತ್ತಷ್ಟು ಶಕ್ತಿಯುತವಾಗಿ ಮರಳುತ್ತೇನೆ ಎಂದು ಆಕಾಶ್ ಚೋಪ್ರಾ ಟ್ವೀಟ್ ಮಾಡಿದ್ದಾರೆ.

IPL 2023: ಆರ್‌ಸಿಬಿಗೆ ಅತಿದೊಡ್ಡ ಶಾಕ್‌, ಕಳೆದ ಆವೃತ್ತಿಯ ಹೀರೋ ಟೂರ್ನಿಯಿಂದಲೇ ಔಟ್..!

ಜಿಯೋ ಸಿನೆಮಾ ಕಮೆಂಟರಿ ತಂಡದಲ್ಲಿರುವ ಆಕಾಶ್ ಚೋಪ್ರಾ, ಇತರ ಕೆಲ ಕ್ರಿಕೆಟ್ ಕಾರ್ಯಕ್ರಮಗಳನ್ನೂ ನಡೆಸಿಕೊಡುತ್ತಿದ್ದಾರೆ. ಇದೀಗ ಜಿಯೋ ಸಿನೆಮಾ ಬ್ರಾಡ್‌ಕಾಸ್ಟರ್ ಹಾಗೂ ಐಪಿಎಲ್ ಗವರ್ನಿಂಗ್ ಕೌನ್ಸಿಲ್, ಕೋವಿಡ್ ಪ್ರಕರಣ ಪತ್ತೆಯನ್ನು ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಸಂಪೂರ್ಣ ಗುಣಮುಖರಾಗುವವರಗೆ ಟೂರ್ನಿಯಿಂದ ದೂರ ಉಳಿಯುವಂತೆ ಸೂಚಿಸಿದೆ. ಇಷ್ಟೇ ಅಲ್ಲ ಎಲ್ಲಾ ಸಿಬ್ಬಂದಿಗಳು ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯಾವಾಗಿ ಪಾಲಿಸುವಂತೆ ಸೂಚಿಸಿದೆ.

ಆಟಗಾರರು ಸುರಕ್ಷತೆ, ಟೂರ್ನಿಯ ಸುಗಮವಾಗಿ ಸಾಗಲು ಕೋವಿಡ್ ವೈರಸ್‌ನಿಂದ ಸಂಪೂರ್ಣವಾಗಿ ದೂರ ಉಳಿಯಬೇಕಾಗಿದೆ. ಹೀಗಾಗಿ ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ಸೂಚಿಸಲಾಗಿದೆ. ಕೋವಿಡ್‌ನಿಂದ ಐಪಿಎಲ್ ಟೂರ್ನಿ ತೀವ್ರ ಹೊಡೆತ ಅನುಭವಿಸಿದೆ. ಕಳೆದ ಆವೃತ್ತಿಗಳು ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿತು. ಇತ್ತ ಬಯೋ ಬಬಲ್ ಸೇರಿದಂತೆ ಹಲವು ಕಠಿಣ ನಿರ್ಬಂಧಗಳ ಮೂಲಕ ಟೂರ್ನಿ ಆಯೋಜಿಸಲಾಗಿತ್ತು. ಹೀಗಾಗಿ ಅತೀವ ಎಚ್ಚರಿಕೆಯಿಂದ ಕೋವಿಡ್ ಪ್ರಕರಣ ನಿರ್ವಹಿಸಲು ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಮುಂದಾಗಿದೆ.

ಬೌಲರ್ಸ್‌ಗೆ ವಾರ್ನಿಂಗ್ ಕೊಟ್ಟ ಧೋನಿ! ಸುಧಾರಿಸಿಕೊಳ್ಳಿ ಇಲ್ಲವೇ ಬೇರೆ ನಾಯಕನಡಿ ಆಡಲು ರೆಡಿಯಾಗಿ ಅಂದಿದ್ದೇಕೆ ಮಹಿ..?

ದೇಶದಲ್ಲಿ ಪ್ರತಿ ದಿನ ಸರಾಸರಿ 3,000 ಹೊಸ ಕೋವಿಡ್ ಪ್ರಕರಣಗಳು ದಾಖಲಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಕೋವಿಡ್ ವೈರಸ್‌ಗೆ 9 ಮಂದಿ ಬಲಿಯಾಗಿದೆ. ಸಕ್ರಿಯ ಕೋವಿಡ್ ಪ್ರಕರಣಗಳು ಸಂಖ್ಯೆ 21,179ಕ್ಕೆ ಏರಿಕೆಯಾಗಿದೆ. ಕೇಂದ್ರ ವಿಮಾನಯಾನ ಸಚಿವಾಲಯ ಪ್ರಯಾಣಿಕರಿಗೆ ಕೆಲ ಮಾರ್ಗಸೂಚಿ ಬಿಡುಗಡೆ ಮಾಡಿದೆ. ವಿಮಾನ ಪ್ರಯಾಣಿಕರು ಮಾಸ್ಕ್ ಧರಿಸುವಂತೆ ಸೂಚಿಸಿದೆ. ಭಾರತದಲ್ಲಿ ಕೋವಿಡ್ ಪರಿಸ್ಥಿತಿ ಸದ್ಯ ನಿಯಂತ್ರಣದಲ್ಲಿದೆ. ಆದರೆ ವಿದೇಶದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದೆ. ಇದರ ಪರಿಣಾಮ ಭಾರತಕ್ಕೂ ತಟ್ಟುವ ಸಾಧ್ಯತೆ ಹೆಚ್ಚಿದೆ.