ಚೆನ್ನೈ ಮೈದಾನದಲ್ಲಿ ಸಿಎಸ್‌ಕೆ-ಮುಂಬೈ ಇಂಡಿಯನ್ಸ್‌ ಮುಖಾಮುಖಿಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್‌ ಆಯ್ಕೆಚೆನ್ನೈ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ

ಚೆನ್ನೈ(ಮೇ.06): 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ 49ನೇ ಪಂದ್ಯದಲ್ಲಿಂದು ಬಲಿಷ್ಠ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. 

ಐಪಿಎಲ್‌ನ ಬದ್ದ ಎದುರಾಳಿಗಳೆಂದು ಗುರುತಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂ ಆತಿಥ್ಯ ವಹಿಸಿದೆ. ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ನಿರೀಕ್ಷೆಯಂತೆಯೇ ಯಾವುದೇ ಬದಲಾವಣೆಗಳಾಗಿಲ್ಲ. ಆದರೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ತಿಲಕ್ ವರ್ಮಾ ಅನಾರೋಗ್ಯದಿಂದ ಬಳಲುತ್ತಿದ್ದು, ತಿಲಕ್ ವರ್ಮಾ ಬದಲಿಗೆ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಟ್ರಿಸ್ಟಿನ್ ಸ್ಟಬ್ಸ್‌ ತಂಡ ಕೂಡಿಕೊಂಡಿದ್ದಾರೆ. ಇನ್ನು ಕುಮಾರ್ ಕಾರ್ತಿಕೇಯ ಬದಲಿಗೆ ರಾಘವ್ ಘೋಯಲ್‌ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದಾರೆ.

IPL 2023 ಇಂದು ಚೆನ್ನೈ-ಮುಂಬೈ ಹೈವೋಲ್ಟೇಜ್ ಕದ​ನ

16ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಮೊದಲ ಮುಖಾಮುಖಿಯಲ್ಲಿ 5 ಬಾರಿಯ ಐಪಿಎಲ್ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ಎದುರು 4 ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು 7 ವಿಕೆಟ್‌ಗಳ ಜಯ ಸಾಧಿಸಿತ್ತು. ಇನ್ನು ಚೆನ್ನೈನ ಚೆಪಾಕ್‌ ಮೈದಾನದಲ್ಲಿ ನಡೆದ ಕಳೆದ 5 ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಗೆಲುವಿನ ನಗೆ ಬೀರಿದ್ದು, ಅದೇ ಲಯವನ್ನು ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದೆ 

Scroll to load tweet…

ತಂಡಗಳು ಹೀಗಿವೆ ನೋಡಿ:

ಚೆನ್ನೈ ಸೂಪರ್ ಕಿಂಗ್ಸ್: ಡೆವೊನ್‌ ಕಾನ್‌ವೇ, ಋತುರಾಜ್ ಗಾಯಕ್ವಾಡ್‌, ಅಜಿಂಕ್ಯ ರಹಾನೆ, ಮೋಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂ ಎಸ್ ಧೋನಿ(ನಾಯಕ), ದೀಪಕ್ ಚಹರ್‌, ಮಹೀಶ್ ಪತಿ​ರನ, ಮಕೇಶ್ ದೇಶ​ಪಾಂಡೆ, ಮಹೀಶ್ ತೀಕ್ಷ​ಣ.

ಮುಂಬೈ ಇಂಡಿಯನ್ಸ್: ರೋಹಿತ್‌ ಶರ್ಮಾ(ನಾ​ಯ​ಕ​), ಇಶಾನ್‌ ಕಿಶನ್, ಕ್ಯಾಮರೋನ್ ಗ್ರೀನ್‌, ಸೂರ್ಯ​ಕು​ಮಾ​ರ್‌ ಯಾದವ್, ಟ್ರಿಸ್ಟನ್ ಸ್ಟಬ್ಸ್‌, ಟಿಮ್ ಡೇವಿಡ್‌, ನೆಹಾಲ್ ವಧೇರಾ, ಆಕಾಶ್‌ ಮದ್ವಾಲಾ, ಪೀಯೂಸ್ ಚಾವ್ಲಾ, ಅರ್ಶದ್‌ ಖಾನ್, ಜೋಫ್ರಾ ಆರ್ಚ​ರ್‌.

ಪಂದ್ಯ: ಮಧ್ಯಾಹ್ನ 3.30ರಿಂದ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

ಪಿಚ್‌ ರಿಪೋರ್ಟ್‌

ಚೆಪಾಕ್‌ ಕ್ರೀಡಾಂಗಣದ ಪಿಚ್‌ ಸ್ಪಿನ್‌ ಸ್ನೇಹಿಯಾಗಿದ್ದರೂ ಕಳೆದ 4 ಪಂದ್ಯ​ಗ​ಳಲ್ಲಿ 4 ಬಾರಿ 200+ ಮೊತ್ತ ದಾಖ​ಲಾ​ಗಿ​ದೆ. ಮಧ್ಯಾ​ಹ್ನದ ಪಂದ್ಯ​ವಾ​ಗಿ​ರುವ ಕಾರಣ ಮತ್ತೊಮ್ಮೆ ದೊಡ್ಡ ಮೊತ್ತ ದಾಖ​ಲಾ​ಗುವ ಸಾಧ್ಯತೆ ಹೆಚ್ಚು