Asianet Suvarna News Asianet Suvarna News

IPL 2023 ಇಂದು ಚೆನ್ನೈ-ಮುಂಬೈ ಹೈವೋಲ್ಟೇಜ್ ಕದ​ನ

ಚೆಪಾಕ್‌ ಮೈದಾನದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಮುಂಬೈ ಇಂಡಿಯನ್ಸ್‌ ಸವಾಲು
ತಲಾ 5 ಪಂದ್ಯಗಳನ್ನು ಗೆದ್ದಿ​ರುವ ಉಭಯ ತಂಡ​ಗಳು
ಪ್ಲೇ ಆಫ್‌ ಸನೀಹದಲ್ಲಿ ಉಭಯ ತಂಡಗಳು

IPL 2023 Chennai Super Kings take on Mumbai Indians at Chennai kvn
Author
First Published May 6, 2023, 11:40 AM IST

ಚೆನ್ನೈ(ಮೇ.06): 16ನೇ ಆವೃತ್ತಿ ಐಪಿ​ಎಲ್‌ನ ಲೀಗ್‌ ಪಂದ್ಯ​ಗಳು ಮುಕ್ತಾ​ಯದ ಹಂತ ತಲು​ಪಿ​ದ​ರೂ ಇನ್ನಷ್ಟೇ ಪ್ಲೇ-ಆಫ್‌ ಸನಿ​ಹಕ್ಕೆ ಬರ​ಬೇ​ಕಿ​ರುವ ಐಪಿ​ಎಲ್‌ನ ಅತ್ಯಂತ ಯಶಸ್ವಿ ತಂಡ​ಗಳು ಹಾಗೂ ಬದ್ಧ​ವೈ​ರಿ​ಗ​ಳಾದ ಮುಂಬೈ ಇಂಡಿಯನ್ಸ್‌ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ಶನಿ​ವಾರ ಮತ್ತೊಮ್ಮೆ ಮುಖಾ​ಮುಖಿ​ಯಾ​ಗ​ಲಿವೆ. ಪ್ಲೇ-ಆಫ್‌ ದೃಷ್ಟಿ​ಯಿಂದ ಎರಡೂ ತಂಡ​ಗ​ಳಿಗೆ ಈ ಪಂದ್ಯ ಮಹ​ತ್ವದ್ದು.

ಆರಂಭಿಕ 7 ಪಂದ್ಯ​ಗ​ಳಲ್ಲಿ 5ರಲ್ಲಿ ಗೆದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್‌ ಕಳೆದ ಮೂರು ಪಂದ್ಯ​ಗ​ಳಲ್ಲಿ ಗಳಿ​ಸಿದ್ದು ಕೇವಲ ಒಂದು ಅಂಕ. ಅಂದ​ರೆ ತಂಡ ಸದ್ಯ 10 ಪಂದ್ಯ​ಗ​ಳಲ್ಲಿ ಕೇವಲ 11 ಅಂಕ ಸಂಪಾ​ದಿ​ಸಿದ್ದು, ಅಗ್ರ-4ರಲ್ಲೇ ಉಳಿ​ಯ​ಬೇ​ಕಾ​ದರೆ ಇನ್ನು​ಳಿದ ಎಲ್ಲಾ 4 ಪಂದ್ಯ​ಗಳನ್ನು ಗೆಲ್ಲ​ಲೇ​ಬೇ​ಕಾ​ಗ​ಬ​ಹುದು. 

ಮತ್ತೊಂದೆಡೆ ಸತತ ಸೋಲಿ​ನೊಂದಿಗೆ ಟೂರ್ನಿಗೆ ಕಾಲಿ​ರಿ​ಸಿ​ದ್ದ ಮುಂಬೈ ಈಗ ಚಾಂಪಿ​ಯನ್‌ ಆಟ​ದಿಂದ​ಲೇ ಎಲ್ಲ​ರಲ್ಲೂ ನಡುಕ ಹುಟ್ಟಿ​ಸುತ್ತಿ​ದೆ. 9 ಪಂದ್ಯ​ಗ​ಳ​ಲ್ಲಿ 10 ಅಂಕ ಸಂಪಾ​ದಿ​ಸಿ​ರುವ ರೋಹಿತ್‌ ಶರ್ಮಾ ಪಡೆಗೂ ಈ ಪಂದ್ಯದ ಗೆಲುವು ಅನಿ​ವಾರ‍್ಯ. ಜೊತೆಗೆ ಮೊದಲ ಮುಖಾ​ಮುಖಿಯ ಸೋಲಿಗೂ ಸೇಡು ತೀರಿ​ಸಿ​ಕೊ​ಳ್ಳುವ ತವ​ಕ​ದ​ಲ್ಲಿದೆ.

ಎರಡೂ ತಂಡದಲ್ಲಿದ್ದಾರೆ ಸ್ಪೋಟಕ ಬ್ಯಾಟರ್‌ಗಳ ದಂಡು: ಹೌದು, ಐಪಿಎಲ್‌ನ ಬದ್ದ ಎದುರಾಳಿಗಳೆಂದು ಬಿಂಬಿಸಲ್ಪಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್‌ ಹಾಗೂ ಮುಂಬೈ ಇಂಡಿಯನ್ಸ್, ಹೀಗೆ ಎರಡೂ ತಂಡದಲ್ಲೂ ಸ್ಪೋಟಕ ಬ್ಯಾಟರ್‌ಗಳ ದಂಡೇ ಇದೆ. ಒಂದು ಕಡೆ ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಡೆವೊನ್ ಕಾನ್‌ವೇ, ಋತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಮೋಯಿನ್ ಅಲಿ, ಶಿವಂ ದುಬೆ ಹಾಗೂ ಅಂಬಟಿ ರಾಯುಡು ಅವರಂತಹ ಸ್ಪೋಟಕ ಬ್ಯಾಟರ್‌ಗಳ ದಂಡೇ ಇದೆ. ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ನಾಯಕ ರೋಹಿತ್ ಶರ್ಮಾ, ಇಶಾನ್ ಕಿಶನ್, ಕ್ಯಾಮರೋನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್ ಹಾಗೂ ತಿಲಕ್ ವರ್ಮಾ ಅವರಂತಹ ಟಿ20 ಸ್ಪೆಷಲಿಸ್ಟ್‌ ಆಟಗಾರರ ಪಡೆಯೇ ಇದ್ದು, ಇಂದು ಮತ್ತೊಮ್ಮೆ ಉಭಯ ತಂಡಗಳ ನಡುವೆ ರನ್ ಮಳೆ ಹರಿಯುವ ಸಾಧ್ಯತೆಯಿದೆ.

ಮುಖಾ​ಮುಖಿ: 35

ಚೆನ್ನೈ: 15

ಮುಂಬೈ: 20

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ: ಡೆವೊನ್‌ ಕಾನ್‌ವೇ, ಋತುರಾಜ್ ಗಾಯಕ್ವಾಡ್‌, ಅಜಿಂಕ್ಯ ರಹಾನೆ, ಮೋಯಿನ್ ಅಲಿ, ಶಿವಂ ದುಬೆ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂ ಎಸ್ ಧೋನಿ(ನಾಯಕ), ದೀಪಕ್ ಚಹರ್‌, ಮಹೀಶ್ ಪತಿ​ರನ, ಮಕೇಶ್ ದೇಶ​ಪಾಂಡೆ, ಮಹೀಶ್ ತೀಕ್ಷ​ಣ.

ಮುಂಬೈ: ರೋಹಿತ್‌ ಶರ್ಮಾ(ನಾ​ಯ​ಕ​), ಇಶಾನ್‌ ಕಿಶನ್, ಕ್ಯಾಮರೋನ್ ಗ್ರೀನ್‌, ಸೂರ್ಯ​ಕು​ಮಾ​ರ್‌ ಯಾದವ್, ತಿಲಕ್‌ ವರ್ಮಾ, ಟಿಮ್ ಡೇವಿಡ್‌, ವಧೇರಾ, ಕುಮಾರ್ ಕಾರ್ತಿ​ಕೇಯ, ಆಕಾಶ್‌, ಪೀಯೂಸ್ ಚಾವ್ಲಾ, ಅರ್ಶದ್‌ ಖಾನ್, ಜೋಫ್ರಾ ಆರ್ಚ​ರ್‌.

ಪಂದ್ಯ: ಮಧ್ಯಾಹ್ನ 3.30ರಿಂದ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

ಪಿಚ್‌ ರಿಪೋರ್ಟ್‌

ಚೆಪಾಕ್‌ ಕ್ರೀಡಾಂಗಣದ ಪಿಚ್‌ ಸ್ಪಿನ್‌ ಸ್ನೇಹಿಯಾಗಿದ್ದರೂ ಕಳೆದ 4 ಪಂದ್ಯ​ಗ​ಳಲ್ಲಿ 4 ಬಾರಿ 200+ ಮೊತ್ತ ದಾಖ​ಲಾ​ಗಿ​ದೆ. ಮಧ್ಯಾ​ಹ್ನದ ಪಂದ್ಯ​ವಾ​ಗಿ​ರುವ ಕಾರಣ ಮತ್ತೊಮ್ಮೆ ದೊಡ್ಡ ಮೊತ್ತ ದಾಖ​ಲಾ​ಗುವ ಸಾಧ್ಯತೆ ಹೆಚ್ಚು ಮತ್ತು ಟಾಸ್‌ ಗೆಲ್ಲುವ ತಂಡದ ಫೀಲ್ಡಿಂಗ್‌ ಆಯ್ಕೆ ಮಾಡಿ​ಕೊ​ಳ್ಳ​ಬ​ಹು​ದು.

Follow Us:
Download App:
  • android
  • ios