ರಾಜಸ್ಥಾನದ ವಿರುದ್ಧದದ ಗೆಲುವಿನ ಬಳಿಕ ಪ್ಲೇ ಆಫ್ ರೇಸ್‌ನಲ್ಲಿ ಆರ್‌ಸಿಬಿ ಪ್ರಬಲ ಸ್ಪರ್ಧಿಯಾಗಿ ಕಾಣಿಸಿಕೊಂಡಿದೆ. ಇತ್ತ ಕೆಕೆಆರ್ ವಿರುದ್ದ ಗೆಲುವು ಸಾಧಿಸಿ ಪ್ಲೇ ಆಫ್ ಹಾದಿ ಸುಗಮಗೊಳಿಸಲು ಚೆನ್ನೈ ಪ್ಲಾನ್ ಮಾಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್‌ಕೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಚೆನ್ನೈ(ಮೇ.14): ಐಪಿಎಲ್ ಟೂರ್ನಿಯ ಲೀಗ್ ಪಂದ್ಯಗಳು ಅಂತಿಮ ಘಟ್ಟಕ್ಕೆ ತಲುಪಿದೆ. ಇದೀಗ ಪ್ಲೇಆಫ್ ಪೈಪೋಟಿ ಜೋರಾಗಿದೆ. ಹೀಗಾಗಿ ಇಂದಿನ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 

ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11
ರುತುರಾಜ್ ಗಾಯಕ್ವಾಡ್, ಡೇವೋನ್ ಕಾನ್ವೆ, ಅಜಿಂಕ್ಯ ರಹಾನೆ, ಮೊಯಿನ್ ಆಲಿ, ಅಂಬಾಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ, ಎಂ.ಎಸ್ ಧೋನಿ(ನಾಯಕ), ದೀಪಕ್ ಚಹಾರ್, ತುಷಾರ್ ದೇಶಪಾಂಡೆ, ಮಹೀಶ್ ತೀಕ್ಷಾನ 

ರಾಜಸ್ಥಾನ ಬಗ್ಗುಬಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು; ಪ್ಲೇ ಆಫ್‌ ಕನಸು ಜೀವಂತ

ಕೋಲ್ಕತಾ ನೈಟ್ ರೈಡರ್ಸ್ ಪ್ಲೇಯಿಂಗ್ 11
ರಹಮಾನುಲ್ಲಾ ಗುರ್ಬಾಜ್, ಜೇಸನ್ ರಾಯ್, ನಿತೀಶ್ ರಾಣಾ(ನಾಯಕ), ಆ್ಯಂಡ್ರೆ ರಸೆಲ್, ರಿಂಕು ಸಿಂಗ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ವೈಭವ್ ಆರೋರ, ಹರ್ಷಿತ್ ರಾನಾ, ಸುಯಾಶ್ ಶರ್ಮಾ, ವರುಣ್ ಚಕ್ರವರ್ತಿ

ಚೆನ್ನೈ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 12 ಪಂದ್ಯದಲ್ಲಿ 7 ಗೆಲುವು 4 ಪಂದ್ಯದಲ್ಲಿ ಸೋಲು ಕಂಡಿರುವ ಸಿಎಸ್‌ಕೆ 15 ಅಂಕ ಸಂಪಾದಿಸಿದೆ. ಇತ್ತ ಕೋಲ್ಕತಾ ನೈಟ್ ರೈಡರ್ಸ್ 8ನೇ ಸ್ಥಾನದಲ್ಲಿದೆ. 12 ಪಂದ್ಯದಲ್ಲಿ 5 ಗೆಲುವು ಹಾಗೂ 7 ಸೋಲು ಅನುಭವಿಸಿ 10 ಅಂಕ ಸಂಪಾದಿಸಿದೆ. ಕೆಕೆಆರ್ ಪ್ಲೇ ಆಫ್ ಕನಸು ಛಿದ್ರಗೊಂಡಿಲ್ಲ. ಇಂದು ಸಿಎಸ್‌ಕೆ ವಿರುದ್ದ ಹಾಗೂ ಕೊನೆಯ ಲೀಗ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಗೆಲುವು ಸಾಧಿಸಿ ಪ್ಲೇ ಆಫ್ ಆಸೆ ಜೀವಂತವಾಗಿರಿಸಲು ಲೆಕ್ಕಾಚಾರ ಹಾಕಿಕೊಂಡಿದೆ. ಆದರೆ ಕೆಕೆಆರ್ ಪ್ಲೇ ಆಫ್ ಪ್ರವೇಶಿಸಲು ಇತರ ತಂಡದ ಫಲಿತಾಂಶದ ಮೇಲೆ ಅವಲಂಬಿತವಾಗಿದೆ.

ಪ್ಲೇ ಆಫ್‌ ರೇಸಿಂದ ಹೊರಬಿದ್ದ ಡೆಲ್ಲಿ; ಬ್ಯಾಟರ್‍‌ಗಳ ಮೇಲೆ ನಾಯಕ ವಾರ್ನರ್‍‌ ಸಿಡಿಮಿಡಿ

ಚೆನ್ನೈ ಸೂಪರ್ ಕಿಂಗ್ಸ್ 15 ಅಂಕ ಸಂಪಾದಿಸಿ 2ನೇ ಸ್ಥಾನದಲ್ಲಿದೆ. ಹೀಗಾಗಿ ಇನ್ನುಳಿದ 2 ಪಂದ್ಯದಲ್ಲಿ ಗೆಲುವು ಸಿಎಸ್‌ಕೆ ಪ್ಲೇ ಆಫ್ ಪ್ರವೇಶ ಖಚಿತಪಡಿಸಲಿದೆ. ಉಭಯ ತಂಡಗಳು ಪ್ಲೇ ಆಫ್ ಲೆಕ್ಕಾಚಾರದೊಂದಿಗೆ ಹೋರಾಟ ನಡೆಸಲಿದೆ. ಹೀಗಾಗಿ ತೀವ್ರ ಪೈಪೋಟಿ ನಡೆಯಲಿದೆ. 

ಕೆಕೆಆರ್ ವಿರುದ್ಧದ ಈ ಹಿಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 49 ರನ್ ಗೆಲುವು ದಾಖಲಿಸಿತ್ತು. ಈ ಪಂದ್ಯದಲ್ಲಿ ಅಜಿಂಕ್ಯ ರಹಾನೆ 29 ಎಸೆತದಲ್ಲಿ 71 ರನ್ ಸಿಡಿಸಿ ಅಬ್ಬರಿಸಿದ್ದರು. ಇದರ ಪರಿಣಾಮ ಚೆನ್ನೈ ಸೂಪರ್ ಕಿಂಗ್ಸ್ 235 ರನ್ ಸಿಡಿಸಿತ್ತು. ಇತ್ತ ಕೆಕೆಆರ್ 8 ವಿಕೆಟ್ ನಷ್ಟಕ್ಕೆ 186 ರನ್ ಸಿಡಿಸಿ ಸೋಲೊಪ್ಪಿಕೊಂಡಿತ್ತು.