ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.  

ಹೈದರಾಬಾದ್(ಏ.24): ಐಪಿಎಲ್ 2023 ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಇಂದು ಈ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11
ಡೇವಿಡ್ ವಾರ್ನರ್(ನಾಯಕ), ಫಿಲಿಪ್ ಸಾಲ್ಟ್, ಮಿಚೆಲ್ ಮಾರ್ಶ್, ಮನೀಶ್ ಪಾಂಡೆ, ಸರ್ಫರಾಜ್ ಖಾನ್, ಅಕ್ಸರ್ ಪಟೇಲ್, ಅಮನ್ ಹಕೀಮ್ ಖಾನ್, ರಿಪಲ್ ಪಟೇಲ್, ಅನ್ರಿಚ್ ನೊರ್ಜೆ, ಕುಲ್ದೀಪ್ ಯಾದವ್, ಇಶಾಂತ್ ಶರ್ಮಾ

IPL ಇತಿಹಾಸದ ಅತ್ಯಂತ ದುಬಾರಿ ಓವರ್ ಮಾಡಿದ ಆರ್ಶದೀಪ್‌ ಸಿಂಗ್..! ಮುರಿದ ಸ್ಟಂಪ್ಸ್‌ ಬೆಲೆ 48 ಲಕ್ಷ..!

ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ 11
ಅಭಿಷೇಕ್ ಶರ್ಮಾ, ಹ್ಯಾರಿ ಬ್ರೂಕ್, ಆ್ಯಡಿನ ಮರ್ಕ್ರಮ್(ನಾಯಕ), ಮಯಾಂಕ್ ಅಗರ್ವಾಲ್, ಹೆನ್ರಿಚ್ ಕಲ್ಸೀನ್, ಮಾರ್ಕೋ ಜಾನ್ಸೆನ್, ವಾಶಿಂಗ್ಟನ್ ಸುಂದರ್, ಮಯಾಂಕ್ ಮಾರ್ಕಂಡೆ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್

ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಅಂದರೆ 10ನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಆಡಿದ 6 ಪಂದ್ಯದಲ್ಲಿ ಕೇವಲ 1 ಗೆಲುವು ದಾಖಲಿಸಿದ್ದರೆ, 5 ಸೋಲು ಕಂಡಿದೆ. ಸನ್‌ರೈಸರ್ಸ್ ಹೈದರಾಬಾದ್ ಡೆಲ್ಲಿಗಿಂತ ಒಂದು ಸ್ಥಾನ ಮೇಲಿದೆ. ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ 6 ಪಂದ್ಯದಲ್ಲಿ 2 ಗೆಲುವು ದಾಖಲಿಸಿದ್ದರೆ, 4 ಸೋಲು ಕಂಡಿದೆ. 

IPL 2023 ಆರ್‌ಸಿಬಿ ಪಂದ್ಯದ ನಡುವೆ ಮೋದಿ ಸುನಾಮಿ, ಗಮನಸೆಳೆದ ಬೊಮ್ಮಾಯಿ ಟಿಶರ್ಟ್!

ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಸ್ಥಾನ: ಕ​ಳೆದ ವರ್ಷ ಕಳಪೆ ಪ್ರದ​ರ್ಶ​ನ​ದೊಂದಿಗೆ ಅಂಕ​ಪ​ಟ್ಟಿ​ಯಲ್ಲಿ 9ನೇ ಸ್ಥಾನ​ದಲ್ಲಿ ಬಾಕಿ​ಯಾ​ಗಿ​ದ್ದನ್ನೇ ಸವಾ​ಲಾಗಿ ಸ್ವೀಕ​ರಿ​ಸಿ​ದಂತಿ​ರುವ ಚೆನ್ನೈ ಸೂಪರ್‌ ಕಿಂಗ್‌್ಸ ಈ ಬಾರಿ ಹಲವು ಸಮ​ಸ್ಯೆ​ಗ​ಳನ್ನು ಮೆಟ್ಟಿ​ನಿಂತು ಅಬ್ಬ​ರಿ​ಸು​ತ್ತಿದೆ. ಭಾನು​ವಾರ ಸ್ಫೋಟಕ ಬ್ಯಾಟಿಂಗ್‌, ಶಿಸ್ತು​ಬದ್ಧ ದಾಳಿ ಪ್ರದ​ರ್ಶಿ​ಸಿದ ಚೆನ್ನೈ, ಕೋಲ್ಕ​ತಾ​ವನ್ನು ಅದರ ತವ​ರಿ​ನಲ್ಲೇ 49 ರನ್‌​ಗ​ಳಿಂದ ಮಣಿಸಿ ಅಂಕ​ಪ​ಟ್ಟಿ​ಯಲ್ಲಿ ಅಗ್ರ​ಸ್ಥಾ​ನ​ಕ್ಕೇ​ರಿತು. ತಂಡ ಸಂಯೋ​ಜ​ನೆ​ಯಲ್ಲಿ ಮತ್ತೆ ಎಡ​ವಿದ ಕೋಲ್ಕತಾ ಸತತ 4ನೇ ಸೋಲುಂಡು 8ನೇ ಸ್ಥಾನ​ದಲ್ಲೇ ಬಾಕಿ​ಯಾ​ಯಿ​ತು.

ಡೆ​ಲ್ಲಿ ತಂಡಕ್ಕೆ ಕಮಲೇಶ್‌ ಬದಲು ಪ್ರಿಯಂ ಗರ್ಗ್
ಗಾಯ​ಗೊಂಡು 16ನೇ ಆವೃ​ತ್ತಿಯ ಐಪಿ​ಎ​ಲ್‌​ನಿಂದ ಹೊರ​ಬಿದ್ದ ವೇಗಿ ಕಮಲೇಶ್‌ ನಾಗ​ರ​ಕೋಟಿ ಬದಲು ಡೆಲ್ಲಿ ಕ್ಯಾಪಿ​ಟಲ್ಸ್‌ ತಂಡ ಭಾರತ ಅಂಡ​ರ್‌-19 ತಂಡದ ಮಾಜಿ ನಾಯಕ ಪ್ರಿಯಂ ಗಗ್‌ರ್‍ ಅವ​ರನ್ನು ಸೇರಿ​ಸಿ​ಕೊಂಡಿದೆ. ಆಟ​ಗಾ​ರರ ಹರಾ​ಜಿ​ನಲ್ಲಿ ಬಿಕರಿಯಾಗದ ಪ್ರಿಯಂ ಅವ​ರನ್ನು ತಂಡ ಮೂಲ​ಬೆಲೆ 20 ಲಕ್ಷ ರು.ಗೆ ಖರೀದಿಸಿದೆ. 2020ರಲ್ಲಿ ಸನ್‌​ರೈ​ಸ​ರ್‍ಸ್ ಹೈದ​ರಾ​ಬಾದ್‌ ತಂಡದಲ್ಲಿದ್ದ ಪ್ರಿಯಂ ಕಳೆದ 3 ಆವೃ​ತ್ತಿ​ಗ​ಳಲ್ಲಿ ಒಟ್ಟು 21 ಪಂದ್ಯ​ಗ​ಳ​ನ್ನಾ​ಡಿ​ದ್ದರು.