Asianet Suvarna News Asianet Suvarna News

IPL 2023 ಆರ್‌ಸಿಬಿ ಪಂದ್ಯದ ನಡುವೆ ಮೋದಿ ಸುನಾಮಿ, ಗಮನಸೆಳೆದ ಬೊಮ್ಮಾಯಿ ಟಿಶರ್ಟ್!

ಒಂದೆಡೆ ಐಪಿಎಲ್ ಜ್ವರ, ಮತ್ತೊಂದೆಡೆ ಚುನಾವಣಾ ಕಾವು. ಕರ್ನಾಟಕದಲ್ಲಿ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಇದೀಗ ಆರ್‌ಸಿಬಿ ಹಾಗೂ ಆರ್‌ಆರ್ ನಡುವಿನ ಪಂದ್ಯದಲ್ಲಿ ಪ್ರಧಾನಿ ಮೋದಿ ಸುನಾಮಿ ಹೆಚ್ಚಾಗಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ್ ಬೊಮ್ಮಾಯಿ ಟಿಶರ್ಟ್ ಧರಿಸಿ ಆರ್‌ಸಿಬಿಗೆ ಚಿಯರ್ ಅಪ್ ಮಾಡಿದ್ದಾರೆ.
 

IPL 2023 PM modi and CM Basavaraj Bommai Fans During RCB vs RR match at Chinnaswamy Bengaluru ckm
Author
First Published Apr 23, 2023, 9:15 PM IST

ಬೆಂಗಳೂರು(ಏ.23): ಕರ್ನಾಟಕದಲ್ಲಿ ಚುನಾವಣಾ ಕಾವು, ಐಪಿಎಲ್ ಪಂದ್ಯದ ಜ್ವರ ಜೋರಾಗಿದೆ. ಒಂದೆಡೆ ಕೇಂದ್ರದ ನಾಯಕರು ರಾಜ್ಯಕ್ಕೆ ಪ್ರವಾಸ ಮಾಡುತ್ತಿದ್ದಾರೆ. ಇತ್ತ ಆರ್‌ಸಿಬಿ ತಂಡ ಬೆಂಗಳೂರಿನಲ್ಲಿ ಪಂದ್ಯವಾಡುತ್ತಿದೆ. ಇದೀಗ ಆರ್‌ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಪ್ರಧಾನಿ ಮೋದಿ ಹವಾ ಸ್ಪಷ್ಟವಾಗಿತ್ತು. ಹಲವು ಆರ್‌ಸಿಬಿ ಅಭಿಮಾನಿಗಳು ಪ್ರಧಾನಿ ಮೋದಿ, ಸಿಎಂ ಬಸವರಾಜ್ ಬೊಮ್ಮಾಯಿ ಟಿಶರ್ಟ್ ಧರಿಸಿ ಪಂದ್ಯಕ್ಕೆ ಚಿಯರ್ ಅಪ್ ಮಾಡಿದ್ದರು. ಈ ಮೂಲಕ ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದೊಳಗೆ ಚುನಾವಣಾ ಕಾವು ಹೆಚ್ಚಿಸಿದ್ದಾರೆ.

ಹಲವು ಅಭಿಮಾನಿಗಳು ಮೋದಿ(MODI) ಹೆಸರಿನ ಅಕ್ಷಗಳ ಟಿಶರ್ಟ್ ಧರಿಸಿ ಆಗಮಿಸಿದ್ದರು. ಕೇಸರಿ ಟಿಶರ್ಟ್ ಮೇಲೆ ಮೋದಿ ಹೆಸರಿನ ಟಿಶರ್ಟ್ ರಾರಾಜಿಸಿತ್ತು. ಮತ್ತೆ ಕೆಲ ಅಭಮಾನಿಗಳು ಪ್ರಧಾನಿ ಮೋದಿ ಹಾಗೂ ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ ಭಾವಚಿತ್ರದ ಟಿಶರ್ಟ್ ಧರಿಸಿ ಆಗಮಿಸಿದ್ದರು. ಈ ಟಿಶರ್ಟ್ ಮೇಲೆ ಸಿಎಂ ಕ್ರ್ಯೂ ಎಂದು ಬರೆಯಲಾಗಿತ್ತು.

IPL 2023 ಆಟಕ್ಕುಂಟು ರನ್ನಿಲ್ಲ, ದಿನೇಶ್ ಕಾರ್ತಿಕ್ ಸೇರಿ ಆರ್‌ಸಿಬಿ ಮಧ್ಯಮ ಕ್ರಮಾಂಕ ಫುಲ್ ಟ್ರೋಲ್!

ಸಂಪೂರ್ಣ ಪಂದ್ಯದಲ್ಲಿ ಈ ಟಿಶರ್ಟ್ ಧರಿಸಿ ಪಂದ್ಯ ವೀಕ್ಷಿಸಿದ್ದಾರೆ. ಒಂದಡೆ ರಾಜಸ್ಥಾನ ರಾಯಲ್ಸ್ ವಿರುದ್ದ ಆರ್‌ಸಿಬಿ ಗೆಲುವಿನ ಸಂಭ್ರಮ ಆಚರಿಸಿದೆ. ಇತ್ತ ಅಭಿಮಾನಿಗಳು ಕ್ರೀಡಾಂಗಣದ ಹೊರಭಾಗದಲ್ಲಿ ಪ್ರಧಾನಿ ಮೋದಿ ಹಾಗೂ ಬೊಮ್ಮಾಯಿ ಪರ ಘೋಷಣೆ ಕೂಗಿದ್ದಾರೆ. ಇಂದಿನ ಪಂದ್ಯದಲ್ಲಿ ಹಲವು ವಿಶೇಷತೆಗಳು ನೋಡುಗರ ಗಮನಸೆಳೆದಿದೆ.

IPL 2023 PM modi and CM Basavaraj Bommai Fans During RCB vs RR match at Chinnaswamy Bengaluru ckm

ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 7 ರನ್ ರೋಚಕ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ ಆರಂಭದಲ್ಲೇ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿತು. ಆದರೆ ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಸ್ಫೋಟಕ ಬ್ಯಾಟಿಂಗ್ ತಂಡಕ್ಕೆ ನೆರವಾಯಿತು. ಡುಪ್ಲೆಸಿಸ್ 39 ಎಸೆತದಲ್ಲಿ 62 ರನ್ ಸಿಡಿಸಿ ಔಟಾದರು. ಇತ್ತ ಮ್ಯಾಕ್ಸ್‌ವೆಲ್ 44 ಎಸೆತದಲ್ಲಿ 77 ರನ್ ಸಿಡಿಸಿದ್ದರು. ಆರ್‌ಸಿಬಿ ಮಧ್ಯಮ ಕ್ರಮಾಂಕ ಹಾಗೂ ಕೆಳಕ್ರಮಾಂಕದಿಂದ ಯಾವುದೇ ರನ್ ಹರಿದುಬರಲಿಲ್ಲ. ಹೀಗಾಗಿ 9 ವಿಕೆಟ್ ನಷ್ಟಕ್ಕೆ 189 ರನ್ ಸಿಡಿಸಿತು.

IPL 2023 PM modi and CM Basavaraj Bommai Fans During RCB vs RR match at Chinnaswamy Bengaluru ckm

IPL 2023: ರಾಜಸ್ಥಾನ ರಾಯಲ್ಸ್ ಸದ್ದಡಗಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು..!

190 ರನ್ ಟಾರ್ಗೆಟ್ ಪಡೆದ ರಾಜಸ್ಥಾನ ರಾಯಲ್ಸ್ ಆರಂಭದಲ್ಲೇ ಜೋಸ್ ಬಟ್ಲರ್ ವಿಕೆಟ್ ಕಳೆದುಕೊಂಡಿತು. ಯಶಸ್ವಿ ಜೈಸ್ವಾಲ್ ಹಾಗೂ ದೇವದತ್ ಪಡಿಕ್ಕಲ್ ಹೋರಾಟದಿಂದ ರಾಜಸ್ಥಾನ ರಾಯಲ್ಸ್ ಚೇತರಿಸಿಕೊಂಡಿತು. ಜೈಸ್ವಾಲ್ 47 ರನ್ ಸಿಡಿಸಿದರೆ, ಪಡಿಕ್ಕಲ್ 52 ರನ್ ಸಿಡಿಸಿದರು. ನಾಯಕ ಸಂಜು ಸ್ಯಾಮ್ಸನ್ 22, ಧ್ರುವ್ ಜುರೆಲ್ ಅಜೇಯ 34 ರನ್ ಸಿಡಿಸಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್ 182 ರನ್ ಸಿಡಿಸಿ ಸೋಲೊಪ್ಪಿಕೊಂಡಿತು.
 

Follow Us:
Download App:
  • android
  • ios