ಮುಂಬೈ ಇಂಡಿಯನ್ಸ್ ಎದುರು ಮಾರಕ ದಾಳಿ ನಡೆಸಿದ ಆರ್ಶದೀಪ್ ಸಿಂಗ್ಮುಂಬೈ ಎದುರು ರೋಚಕ ಜಯ ಕಂಡ ಪಂಜಾಬ್ ಕಿಂಗ್ಸ್‌ಐಪಿಎಲ್‌ನ ದುಬಾರಿ ಓವರ್ ಬೌಲಿಂಗ್ ಮಾಡಿದ ಎಡಗೈ ವೇಗಿ
ಮುಂಬೈ(ಏ.24): ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಕೊನೆ ಓವರಲ್ಲಿ ಪಂಜಾಬ್ ವೇಗಿ ಆರ್ಶದೀಪ್ ಸಿಂಗ್ ಎರಡು ಬಾರಿ ಸ್ಟಂಪ್ ಮುರಿದರು. ಇದರಿಂದಾಗಿ ಬಿಸಿಸಿಐಗೆ 48 ಲಕ್ಷ ರುಪಾಯಿ ಹೊರೆಯಾಯಿತು. ವೇಗಿ ಆರ್ಶದೀಪ್ ಸಿಂಗ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್ ಮಾಡಿದ್ದಾರೆ..!
ವರದಿಗಳ ಪ್ರಕಾರ ಸ್ಟಂಪ್ಸ್‌ನ ಪೂರ್ತಿ ಸೆಟ್ ಅಂದರೆ ಕ್ಯಾಮೆರಾ ಅಳವಡಿಸಿರುವ ಒಂದು ಸ್ಟಂಪ್ ಜೊತೆ ಇನ್ನೆರಡು ಸ್ಟಂಪ್‌ಗಳು ಹಾಗೂ ಎಲ್‌ಇಡಿ ಬೇಲ್ಸ್‌ಗೆ 24 ಲಕ್ಷ ರು ಆಗುತ್ತದೆ. ಆರ್ಶದೀಪ್ ಸತತ 2 ಎಸೆತದಲ್ಲಿ ಸ್ಟಂಪ್ ಮುರಿದರು. ಒಂದು ಸ್ಟಂಪ್ ಮುರಿದರೂ ಇಡೀ ಸೆಟ್ ಬದಲಿಸಬೇಕಾಗುತ್ತದೆ. ಹೀಗಾಗಿ ಒಂದೇ ಓವರ್‌ನಲ್ಲಿ ಎರಡು ಬಾರಿ ಸ್ಟಂಪ್ಸ್ ಮುರಿದ ಆರ್ಶದೀಪ್, ಬಿಸಿಸಿಐಗೆ ಬರೋಬ್ಬರಿ 48 ಲಕ್ಷ ರುಪಾಯಿ ಹೊರೆಯಾಗುವಂತೆ ಮಾಡಿದರು.
ಕೊನೆಯ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ ಗೆಲ್ಲಲು 16 ರನ್‌ಗಳ ಅಗತ್ಯವಿತ್ತು. ಕೊನೆಯ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿ ಹೊತ್ತ ಆರ್ಶದೀಪ್ ಮೊದಲ ಎಸೆತದಲ್ಲಿ ಟಿಮ್ ಡೇವಿಡ್‌ಗೆ ಒಂದು ರನ್ ನೀಡಿದರು. ಇನ್ನು ಎರಡನೇ ಎಸೆತದಲ್ಲಿ ಯಾವುದೇ ರನ್ ನೀಡಲಿಲ್ಲ. ಮೂರನೇ ಎಸೆತದಲ್ಲಿ ತಿಲಕ್ ವರ್ಮಾ ಅವರನ್ನು ಕ್ಲೀನ್ ಬೌಲ್ಡ್ ಆಯಿತು. ಆಗ ವಿಕೆಟ್ ಮುರಿದು ಹೋಯಿತು. ಇನ್ನು ಮರು ಎಸೆತದಲ್ಲಿ ನೆಹಲ್ ವಡೇರಾ ಅವರನ್ನು ಅದೇ ರೀತಿ ಕ್ಲೀನ್ ಬೌಲ್ಡ್ ಮಾಡಿ, ಮತ್ತೊಮ್ಮೆ ವಿಕೆಟ್ ಮುರಿದು ಹಾಕಿದರು. ಇನ್ನು 5 ಎಸೆತದಲ್ಲಿ ಯಾವುದೇ ರನ್ ನೀಡಲಿಲ್ಲ. ಕೊನೆಯ ಎಸೆತದಲ್ಲಿ ಆರ್ಚರ್ ಕೇವಲ ರನ್ ಗಳಿಸಿದರು. ಕೊನೆಯ ಓವರ್‌ನಲ್ಲಿ ಆರ್ಶದೀಪ್ ಕೇವಲ 2 ರನ್ ನೀಡಿ 2 ವಿಕೆಟ್ ಕಬಳಿಸುವ ಮೂಲಕ ಪಂಜಾಬ್‌ಗೆ ರೋಚಕ ಗೆಲುವು ತಂದುಕೊಟ್ಟರು.
ಡೇವಿಡ್ ವೀಸಾ ಐಪಿಎಲ್‌ನಲ್ಲಿ ಆಡಿದ ನಮೀಬಿಯಾದ ಮೊದಲಿಗ!
ಕೋಲ್ಕತಾ(ಏ.24): ಚೆನ್ನೈ ಸೂಪರ್ ಕಿಂಗ್‌್ಸ ವಿರುದ್ಧ ಭಾನುವಾರ ಕೋಲ್ಕತಾ ಪರ ಕಣಕ್ಕಿಳಿದ ಡೇವಿಡ್ ವೀಸಾ ಐಪಿಎಲ್‌ನಲ್ಲಿ ಆಡಿದ ಮೊದಲ ನಮೀಬಿಯಾ ಆಟಗಾರ ಎನಿಸಿಕೊಂಡರು. ಹಾಗಂತ ವೀಸಾ ಐಪಿಎಲ್‌ನಲ್ಲಿ ಆಡಿದ್ದು ಇದೇ ಮೊದಲಲ್ಲ. ಅವರು ಆರ್ಸಿಬಿ ಪರ 2015ರಲ್ಲಿ 14, 2016ರಲ್ಲಿ 1 ಪಂದ್ಯವನ್ನಾಡಿದ್ದರು. ಆದರೆ ಆ ವೇಳೆ ಅವರು ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸುತ್ತಿದ್ದರು.
IPL 2023: ಕೊನೇ ಓವರ್‌ನಲ್ಲಿ 16 ರನ್ ರಕ್ಷಿಸಿಕೊಂಡ ಆರ್ಶ್‌ದೀಪ್, ಪಂಜಾಜ್‌ಗೆ ವಿಜಯದೀಪ!
2021ರಲ್ಲಿ ನಮೀಬಿಯಾ ತಂಡ ಸೇರ್ಪಡೆಗೊಂಡ ವೀಸಾ ಟಿ20 ವಿಶ್ವಕಪ್‌ನಲ್ಲೂ ಆ ತಂಡದ ಪರ ಆಡಿದ್ದರು. ಈ ಆವೃತ್ತಿಯ ಐಪಿಎಲ್ಗೂ ಮುನ್ನ ನಡೆದ ಆಟಗಾರರ ಹರಾಜಿನಲ್ಲಿ ಅವರು ಕೋಲ್ಕತಾ ತಂಡಕ್ಕೆ 1 ಕೋಟಿ ರು.ಗೆ ಬಿಕರಿಯಾಗಿದ್ದರು. ಇದೇ ವೇಳೆ ನಮೀಬಿಯಾ ಐಪಿಎಲ್‌ನಲ್ಲಿ ಪ್ರಾತಿನಿಧ್ಯ ಪಡೆದ 15ನೇ ದೇಶ ಎನಿಸಿಕೊಂಡಿತು.
ಡೆಲ್ಲಿ ತಂಡಕ್ಕೆ ಕಮಲೇಶ್ ಬದಲು ಪ್ರಿಯಂ ಗರ್ಗ್
ನವದೆಹಲಿ: ಗಾಯಗೊಂಡು 16ನೇ ಆವೃತ್ತಿಯ ಐಪಿಎಲ್ನಿಂದ ಹೊರಬಿದ್ದ ವೇಗಿ ಕಮಲೇಶ್ ನಾಗರಕೋಟಿ ಬದಲು ಡೆಲ್ಲಿ ಕ್ಯಾಪಿಟಲ್ಸ್ ತಂಡ ಭಾರತ ಅಂಡರ್-19 ತಂಡದ ಮಾಜಿ ನಾಯಕ ಪ್ರಿಯಂ ಗರ್ಗ್ ಅವರನ್ನು ಸೇರಿಸಿಕೊಂಡಿದೆ. ಆಟಗಾರರ ಹರಾಜಿನಲ್ಲಿ ಬಿಕರಿಯಾಗದ ಪ್ರಿಯಂ ಅವರನ್ನು ತಂಡ ಮೂಲಬೆಲೆ 20 ಲಕ್ಷ ರು.ಗೆ ಖರೀದಿಸಿದೆ. 2020ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ ಪ್ರಿಯಂ ಕಳೆದ 3 ಆವೃತ್ತಿಗಳಲ್ಲಿ ಒಟ್ಟು 21 ಪಂದ್ಯಗಳನ್ನಾಡಿದ್ದರು.
