Asianet Suvarna News Asianet Suvarna News

IPL 2023 ನಾಲ್ಕು ವರ್ಷದ ಬಳಿಕ ಜೈಪುರದಲ್ಲಿ ಪಂದ್ಯ, ಲಖನೌ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ!

ಐಪಿಎಲ್ 2023 ಟೂರ್ನಿಯ ಬಲಿಷ್ಠ ತಂಡಗಳ ಹೋರಾಟ. ರಾಜಸ್ಥಾನ ರಾಯಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಜಸ್ಥಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

IPL 2023 26th Match RR win toss chose bowl first against Lucknow Super Giants in Jaipur stadium ckm
Author
First Published Apr 19, 2023, 7:05 PM IST | Last Updated Apr 19, 2023, 7:15 PM IST

ಜೈಪುರ(ಏ.19): ಐಪಿಎಲ್ 2023 ಟೂರ್ನಿಯ ಅಂಕಪಟ್ಟಿಯಲ್ಲಿ ಮೊದಲೆರೆಡು ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ಮುಖಾಮುಖಿಯಾಗಿದೆ. ಬಲಿಷ್ಠರ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ.ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಜೈಪುರದಲ್ಲಿ ಐಪಿಎಲ್ ಪಂದ್ಯ ಆಯೋಜನೆಯಾಗಿದೆ. 4 ವರ್ಷದ ಮೊದಲ ಪಂದ್ಯದಲ್ಲೇ ಆತಿಥೇಯ ರಾಜಸ್ಥಾನ ರಾಯಲ್ಸ್ ಟಾಸ್ ಗೆದ್ದುಕೊಂಡು  ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ರಾಜಸ್ಥಾನ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಆ್ಯಡಮ್ ಜಂಪಾ ಬದಲು ಜೇಸನ್ ತಂಡ ಸೇರಿಕೊಂಡಿದ್ದಾರೆ. 

ರಾಜಸ್ಥಾನ ರಾಯಲ್ಸ್ ಪ್ಲೇಯಿಂಗ್ 11
ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್(ನಾಯಕ), ರಿಯಾನ್ ಪರಾಗ್, ಶಿಮ್ರೊನ್ ಹೆಟ್ಮೆಯರ್, ಧ್ರುವ್ ಜುರೆಲ್, ಆರ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೋಲ್ಟ್, ಸಂದೀಪ್ ಶರ್ಮಾ, ಯುಜುವೇಂದ್ರ ಚಹಾಲ್ 

ಮತ್ತೆ ಭುಗಿಲೆದ್ದ ಫಿಕ್ಸಿಂಗ್ ಭೂತ, ಬುಕ್ಕಿ ಸಂಪರ್ಕ ಮಾಹಿತಿ ಬಿಸಿಸಿಐಗೆ ರವಾನಿಸಿದ ಆರ್‌ಸಿಬಿ ವೇಗಿ ಸಿರಾಜ್!

ಲಖನೌ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11
ಕೆಎಲ್ ರಾಹುಲ್(ನಾಯಕ), ದೀಪಕ್ ಹೂಡ, ಮಾರ್ಕಸ್ ಸ್ಟೊಯ್ನಿಸ್, ಕ್ರುನಾಲ್ ಪಾಂಡ್ಯ, ನಿಕೋಲಸ್ ಪೂರನ್, ಆಯುಷ್ ಬದೋನಿ, ನವೀನ್ ಉಲ್ ಹಕ್, ಅವೇಶ್ ಖಾನ್,  ಯುಧ್ವೀರ್ ಸಿಂಗ್ ಚರಕ್, ರವಿ ಬಿಶ್ನೋಯ್ 

ರಾಜಸ್ಥಾನ ರಾಯಲ್ಸ್ ಆಡಿದ 5 ಪಂದ್ಯದಲ್ಲಿ 4ರಲ್ಲಿ ಗೆಲುವು ದಾಖಲಿಸಿ ಮೊದಲ ಸ್ಥಾನದಲ್ಲಿದೆ. ರಾಜಸ್ಥಾನ ಕೇವಲ ಒಂದು ಸೋಲು ಕಂಡಿದೆ. ಇನ್ನು ಲಖನೌ ಸೂಪರ್ ಜೈಂಟ್ಸ್ ಆಡಿದ 5 ಪಂದ್ಯದಲ್ಲಿ 3 ಗೆಲುವು ದಾಖಲಿಸಿ 2ನೇ ಸ್ಥಾನದಲ್ಲಿದೆ. ಅಗ್ರಸ್ಥಾನದಲ್ಲಿರುವ ಈ ತಂಡಗಳ ಹೋರಾಟ ಈಗಾಗಲೇ ತೀವ್ರ ಕುತೂಹಲ ಕೆರಳಿಸಿದೆ. 

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯ ಹೊರತು ಪಡಿಸಿ ಇನ್ನುಳಿದ ಎಲ್ಲಾ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಗೆಲುವಿನ ನಗೆ ಬೀರಿದೆ. ರಾಜ​ಸ್ಥಾನ ಇತ​ರೆಲ್ಲಾ ತಂಡ​ಗ​ಳಿ​ಗೆ ಹೋಲಿ​ಸಿ​ದರೆ ಬಲಿಷ್ಠ ಬ್ಯಾಟಿಂಗ್‌ ಪಡೆ ಹೊಂದಿದ್ದು, ಜೈಸ್ವಾಲ್‌, ಬಟ್ಲರ್‌, ಸ್ಯಾಮ್ಸನ್‌ ಹಾಗೂ ಹೆಟ್ಮೇ​ಯರ್‌ರನ್ನು ಕಟ್ಟಿ​ಹಾ​ಕು​ವುದೇ ಎದು​ರಾಳಿ ಬೌಲ​ರ್‌​ಗ​ಳಿಗೆ ಸವಾಲಾಗಿ ಪರಿ​ಣ​ಮಿ​ಸಿದೆ. ರಿಯಾನ್‌ ಪರಾಗ್‌ ಸಿಕ್ಕ ಅವ​ಕಾಶ ಬಳ​ಸಿ​ಕೊ​ಳ್ಳು​ತ್ತಿಲ್ಲ. ಹೋಲ್ಡರ್‌, ಆರ್‌.​ಅ​ಶ್ವಿನ್‌ ಆಲ್ರೌಂಡ್‌ ವಿಭಾ​ಗ​ದಲ್ಲಿ ಬಲ ತುಂಬ​ಲಿದ್ದು, ಚಹಲ್‌ ಸ್ಪಿನ್‌ ಅಸ್ತ್ರದ ಮೂಲಕ ಎದು​ರಾಳಿ ಬ್ಯಾಟ​ರ್‌​ಗ​ಳನ್ನು ಕಾಡು​ತ್ತಿ​ದ್ದಾರೆ. ಕಳೆದ ಪಂದ್ಯ​ದಲ್ಲಿ ಧೋನಿ​ಯನ್ನು ಕೊನೆ ಕ್ಷಣ​ದಲ್ಲಿ ಕಟ್ಟಿ​ಹಾ​ಕಿದ್ದ ಸಂದೀಪ್‌ ಶರ್ಮಾ, ಬೌಲ್ಟ್‌ ಜೊತೆ ವೇಗದ ಬೌಲಿಂಗ್‌ ಪಡೆಗೆ ನೆರ​ವಾ​ಗ​ಬ​ಲ್ಲರು.

'ಸಿಟಿಆರ್‌ ಮಸಾಲೆ ದೋಸೆ, ಬೆಂಗಳೂರು ಆಟೋ, ಅಣ್ಣಾವ್ರ ಹಾಡು..' ಮಿ.360 ಎಬಿಡಿ ಕನ್ನಡ ಪ್ರೇಮ!

ಮತ್ತೊಂದೆಡೆ ಲಖನೌ ಟೂರ್ನಿಯ ಆರಂಭಿಕ ಲಯ​ವನ್ನು ಕಳೆ​ದು​ಕೊಂಡಿದ್ದು, ನಿರ್ಣಾ​ಯಕ ಘಟ್ಟ​ದಲ್ಲಿ ಆಟ​ಗಾ​ರರು ಕೈಕೊ​ಡು​ತ್ತಿ​ದ್ದಾರೆ. ಕೆ.ಎ​ಲ್‌.​ರಾ​ಹುಲ್‌ ತಮ್ಮ ಸ್ಟೆ್ರೖಕ್‌​ರೇಟ್‌ ಕಡೆಗೆ ಹೆಚ್ಚಿನ ಗಮನ ಕೊಡ​ಬೇ​ಕಿದ್ದು, ದೀಪಕ್‌ ಹೂಡಾ ಪದೇ ಪದೇ ವಿಫ​ಲ​ರಾ​ಗು​ದ್ದಾರೆ. ಆದರೆ ಪೂರನ್‌, ಸ್ಟೋಯ್ನಿಸ್‌ ಏಕಾಂಗಿ​ಯಾಗಿ ಪಂದ್ಯ ಗೆಲ್ಲಿ​ಸ​ಬಲ್ಲ ಸಾಮರ್ಥ್ಯ ಹೊಂದಿದ್ದು, ತಂಡ ಹೆಚ್ಚಿನ ಭರ​ವಸೆ ಇಟ್ಟು​ಕೊಂಡಿದೆ. ಕೃನಾಲ್‌ ಪ್ರದ​ರ್ಶನ ತಂಡಕ್ಕೆ ನಿರ್ಣಾ​ಯಕ. ಬಿಷ್ಣೋಯ್‌ ಮತ್ತೊಮ್ಮೆ ಟ್ರಂಪ್‌​ಕಾರ್ಡ್ಸ್ ಎನಿ​ಸಿ​ಕೊ​ಳ್ಳಬ​ಹುದು.

Latest Videos
Follow Us:
Download App:
  • android
  • ios