Asianet Suvarna News Asianet Suvarna News

IPL 2023 ಅಂತಿಮ ಓವರ್‌ನಲ್ಲಿ ಲೆಕ್ಕಾಚಾರ ಬದಲು, ರಾಜಸ್ಥಾನ ಮಣಿಸಿದ ಲಖನೌ ಸೂಪರ್ ಜೈಂಟ್ಸ್!

ಟಾರ್ಗೆಟ್ 155 ರನ್. ಮೊದಲ ವಿಕೆಟ್‌ಗೆ 87 ರನ್ ಜೊತೆಯಾಟ ಕೂಡ ಬಂದಿತ್ತು. ಆದರೆ ಅಂತಿಮ ಹಂತದಲ್ಲಿ ಲಖನೌ ಸೂಪರ್ ಜೈಂಟ್ಸ್ ಲೆಕ್ಕಾಚಾರ ಬದಲಿಸಿತು. ಅದ್ಬುತ ಬೌಲಿಂಗ್ ಮೂಲಕ ರಾಜಸ್ಥಾನ ರಾಯಲ್ಸ್ ತಂಡವನ್ನು ಕಟ್ಟಿಹಾಕಿತು. 

IPL 2023 26th Match result Rajasthan Royals restrict Lucknow Super Giants by 144 runs and win by 10 runs ckm
Author
First Published Apr 19, 2023, 11:24 PM IST | Last Updated Apr 19, 2023, 11:24 PM IST

ಜೈಪುರ(ಏ.19): ಸುಲಭ ಟಾರ್ಗೆಟ್, ಆದರೆ ರಾಜಸ್ಥಾನ ರಾಯಲ್ಸ್ ಚೇಸ್ ಮಾಡಲು ವಿಫಲವಾಯಿತು. 155 ರನ್ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ಅಬ್ಬರದ ಆರಂಭ ಪಡೆದರೂ ಗೆಲುವು ಸಿಗಲಿಲ್ಲ. ಬಟ್ಲರ್, ಜೈಸ್ವಾಲ್, ಪಡಿಕ್ಕಲ್ ಹೋರಾಟ ವ್ಯರ್ಥಗೊಂಡಿತು. ಅಂತಿಮ ಓವರ್‌ನಲ್ಲಿ 19 ರನ್ ಬೇಕಿತ್ತು. ಆದರೆ ರಾಜಸ್ಥಾನ ರಾಯಲ್ಸ್ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಯಿತು. ರಾಜಸ್ಥಾನ ರಾಯಲ್ಸ್ ತಂಡವನ್ನು 10 ರನ್‌ಗಳಿಂದ ಮಣಿಸಿದ ಲಖನೌ ಸೂಪರ್ ಜೈಂಟ್ಸ್ ಸಂಭ್ರಮ ಆಚರಿಸಿತು. ಆದರೆ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ರಾಜಸ್ಥಾನ ಮೊದಲ ಸ್ಥಾನದಲ್ಲಿ ಮಂದುವರಿದರೆ, ಲಖನೌ 2ನೇ ಸ್ಥಾನದಲ್ಲಿದೆ.

ಗೆಲುವಿಗೆ 155 ರನ್ ಟಾರ್ಗೆಟ್ ನೀಡಲಾಗಿತ್ತು. ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಆರಂಭಕ್ಕೆ ಲಖನೌ ಬೆದರಿತು. ದಿಟ್ಟ ಆರಂಭ ರಾಜಸ್ಥಾನ ರಾಯಲ್ಸ್ ತಂಡದ ಆತಂಕ ದೂರಮಾಡಿತು. ಮೊದಲ ವಿಕೆಟ್‌ಗೆ ಈ ಜೋಡಿ 87 ರನ್ ಜೊತೆಯಾಟ ನೀಡಿತು. ಯಶಸ್ವಿ ಜೈಸ್ವಾಲ್ 44 ರನ್ ಸಿಡಿಸಿ ಔಟಾದರು. ಇತ್ತ ನಾಯಕ ಸಂಜು ಸ್ಯಾಮ್ಸನ್ ಕೇವಲ 2 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. 

'ಸಿಟಿಆರ್‌ ಮಸಾಲೆ ದೋಸೆ, ಬೆಂಗಳೂರು ಆಟೋ, ಅಣ್ಣಾವ್ರ ಹಾಡು..' ಮಿ.360 ಎಬಿಡಿ ಕನ್ನಡ ಪ್ರೇಮ!

ಹೋರಾಟ ನೀಡಿದ ಬಟ್ಲರ್ 40 ರನ್ ಸಿಡಿಸಿ ನಿರ್ಗಮಿಸಿದರು. ದೇವದತ್ ಪಡಿಕ್ಕಲ್ ಹೋರಾಟ ಆರಂಭಿಸಿದರೆ, ಶಿಮ್ರೊನ್ ಹೆಟ್ಮೆಯರ್ ಕೇವಲ 2 ರನ್ ಸಿಡಿಸಿ ಔಟಾದರು. ಪಡಿಕ್ಕಲ್ ಹಾಗೂ ರಿಯಾನ ಪರಾಗ್ ಹೋರಾಟದಿಂದ ರಾಜಸ್ಥಾನ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಅಂತಿಮ 6 ಎಸೆತದಲ್ಲಿ ರಾಜಸ್ಥಾನ ಗೆಲುವಿಗೆ 19 ರನ್ ಅವಶ್ಯಕತೆ ಇತ್ತು. ಆದರೆ ಸತತ ವಿಕೆಟ್ ಕಳೆದುಕೊಂಡು 144 ರನ್ ಸಿಡಿಸಿತು. ಇದರೊಂದಿಗೆ ಲಖನೌ 10 ರನ್ ಗೆಲುವು ಕಂಡಿತು.

ಲಖನೌ ಇನ್ನಿಂಗ್ಸ್: ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ಉತ್ತಮ ಹೋರಾಟ ನೀಡಿದರೂ ಟಿ20 ಶೈಲಿಯಲ್ಲಿ ಬ್ಯಾಟಿಂಗ್ ಮಾಡಲು ವಿಫಲವಾಯಿತು. ಲಖನೌ ಆರಂಭ ಅಷ್ಟೇ ಉತ್ತಮವಾಗಿತ್ತು. ನಾಯಕ ಕೆಎಲ್ ರಾಹುಲ್ ಹಾಗೂ ಕೈಲ್ ಮೇಯರ್ಸ್ 82 ರನ್ ಜೊತೆಯಾಟ ನೀಡಿದರು. ರಾಹುಲ್ 32 ಎಸೆತದಲ್ಲಿ 39 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಕೈಲ್ ಮೇಯರ್ಸ್ 51 ರನ್ ಕಾಣಿಕೆ ನೀಡಿದರು. ಮಾರ್ಕಸ್ ಸ್ಟೊಯ್ನಿಸ್ 21 ಹಾಗೂ ನಿಕೋಲಸ್ ಪೂರನ್ 29 ರನ್ ಸಿಡಿಸಿದರು. ಈ ಮೂಲಕ ಲಖನೌ ಸೂಪರ್ ಜೈಂಟ್ಸ್ 7 ವಿಕೆಟ್ ನಷ್ಟಕ್ಕೆ 154 ರನ್ ಸಿಡಿಸಿತು.

ಮತ್ತೆ ಭುಗಿಲೆದ್ದ ಫಿಕ್ಸಿಂಗ್ ಭೂತ, ಬುಕ್ಕಿ ಸಂಪರ್ಕ ಮಾಹಿತಿ ಬಿಸಿಸಿಐಗೆ ರವಾನಿಸಿದ ಆರ್‌ಸಿಬಿ ವೇಗಿ ಸಿರಾಜ್!

ಅಂಕಪಟ್ಟಿ: ರಾಜಸ್ಥಾನ ಮೊದಲ ಸ್ಥಾನದಲ್ಲಿದ್ದರೆ, ಲಖನೌ 2ನೇ ಸ್ಥಾನದಲ್ಲಿದೆ.  ಚೆನ್ನೈ ಸೂಪರ್ ಕಿಂಗ್ಸ್ ಆಡಿದ 5 ಪಂದ್ಯದಲ್ಲಿ 3 ರಲ್ಲಿ ಗೆಲುವು ದಾಖಲಿಸಿ 2ರಲ್ಲಿ ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಗುಜಾತ್ ಟೈಟಾನ್ಸ್ 5 ಪಂದ್ಯದಲ್ಲಿ 3 ಗೆಲುವು 2 ಸೋಲು ಅನುಭವಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ 5 ಪಂದ್ಯದಲ್ಲಿ 3 ಗೆಲುವಿನ ಮೂಲಕ 5ನೇ ಸ್ಥಾನದಲ್ಲಿದೆ. ಇದೀಗ ಸತ ಗೆಲುವು ದಾಖಲಿಸುತ್ತಿರು ಮುಂಬೈ ಇಂಡಿಯನ್ಸ್ 5 ಪಂದ್ಯದಲ್ಲಿ 3 ಗೆಲುವಿನ ಮೂಲಕ 6ನೇ ಸ್ಥಾನ ಅಲಂಕರಿಸಿದೆ. 5 ಪಂದ್ಯದಲ್ಲಿ 3 ಸೋಲು ಹಾಗೂ 2 ಗೆಲುವು ದಾಖಲಿಸಿರುವ ಕೋಲ್ಕತಾ ನೈಟ್ ರೈಡರ್ಸ್ 7ನೇ ಸ್ಥಾನದಲ್ಲಿದೆ. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5 ಪಂದ್ಯದಲ್ಲಿ 2 ಗೆಲುವು ದಾಖಲಿಸಿ 8ನೇ ಸ್ಥಾನಕ್ಕೆ ಕುಸಿದಿದೆ. 9ನೇ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ 5ರಲ್ಲಿ 2 ಗೆಲುವು ದಾಖಲಿಸಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಆಡಿದ 5 ಪಂದ್ಯ ಸೋತು ಕೊನೆಯ ಸ್ಥಾನದಲ್ಲಿದೆ.

Latest Videos
Follow Us:
Download App:
  • android
  • ios