IPL 2022 ಗುಜರಾತ್ ವಿರುದ್ಧ ಭರ್ಜರಿ ಗೆಲುವು, ಡೆಲ್ಲಿ ಫಲಿತಾಂಶದತ್ತ ಆರ್‌ಸಿಬಿ ಚಿತ್ತ!
- ಮಹತ್ವದ ಪಂದ್ಯದಲ್ಲಿ ಫಾರ್ಮ್‌ಗೆ ಮರಳಿದ ವಿರಾಟ್ ಕೊಹ್ಲಿ
- ಆರಂಭಿಕರ 115 ರನ್ ಜೊತೆಯಾಟ, ಗುಜರಾತ್ ವಿರುದ್ಧ ಗೆಲುವು
- 8 ವಿಕೆಟ್ ಗೆಲುವು ದಾಖಲಿಸಿದ ಬೆಂಗಳೂರು ತಂಡ
ಮುಂಬೈ(ಮೇ.19): ಗುಜರಾತ್ ಟೈಟಾನ್ಸ್ ವಿರುದ್ದದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ IPL 2022 ಟೂರ್ನಿ ಪ್ಲೇ ಆಫ್ ಹಂತಕ್ಕೆ ಪ್ರವೇಶ ಪಡೆಯಲು ಆರ್‌ಸಿಬಿ ತನ್ನ ಪ್ರಯತ್ನ ಮಾಡಿದೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಸೋಲಿಗೆ ಆರ್‌ಸಿಬಿ ಪ್ರಾರ್ಥನೆ ಆರಂಭಿಸಿದೆ.
ಗುಜರಾತ್ ವಿರುದ್ದದ ಗೆಲ್ಲಲೇಬೇಕಾದ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 2 ಅಂಕದ ಜೊತೆಗೆ ನೆಟ್ ರೇಟ್ ಕೂಡ ಉತ್ತಮ ಪಡಿಸಿಕೊಂಡಿದೆ. ಆದರೆ ಫ್ಲೇ ಆಫ್ ಪ್ರವೇಶಕ್ಕೆ ಇಷ್ಟು ಸಾಲಲ್ಲ. ಮುಂಬೈ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋಲು ಕಂಡರೆ ಮಾತ್ರ ಆರ್‌ಸಿಬಿ ಪ್ಲೇ ಆಫ್ ಪ್ರವೇಶ ಪಡೆಯಲಿದೆ. ಸದ್ಯ ತಂಡಗಳ ಫಲಿತಾಂಶದ ಲೆಕ್ಕಾಚಾರ ಹಾಕಿದರೆ ಆರ್‌ಸಿಬಿ ಪ್ಲೇ ಆಫ್ ಗೇರುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ.
IPL 2022: ಅಮೋಘ ಬ್ಯಾಟಿಂಗ್ ಮೂಲಕ ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ಕನ್ನಡಿಗ ರಾಹುಲ್..!
169 ರನ್ ಆರ್‌ಸಿಬಿ ಮುಂದಿದ್ದ ಟಾರ್ಗೆಟ್. ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡುಪ್ಲೆಸಿಸ್ ಭರ್ಜರಿ ಆರಂಭದಿಂದ ಬೆಂಗಳೂರು ತಂಡ ಸುಲಭವಾಗಿ ರನ್ ಚೇಸ್ ಮಾಡುವ ಸೂಚನೆ ನೀಡಿತು. ಕಳಪೆ ಫಾರ್ಮ್‌ನಿಂದ ತೀವ್ರ ನಿರಾಸೆಗೊಂಡಿದ್ದ ವಿರಾಟ್ ಕೊಹ್ಲಿ ಮಹತ್ವದ ಪಂದ್ಯದಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದರು. ಕೊಹ್ಲಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು.
ಕೊಹ್ಲಿ ಹಾಗೂ ಡುಪ್ಲೆಸಿಸ್ ಜೋಡಿ ಮೊದಲ ವಿಕೆಟ್‌ಗೆ 115 ರನ್ ಜೊತೆಯಾಟ ನೀಡಿತು. ಡುಪ್ಲೆಸಿಸ್ 44 ರನ್ ಸಿಡಿಸಿ ಔಟಾದರು. ಅಬ್ಬರಿಸಿದ ವಿರಾಟ್ ಕೊಹ್ಲಿ 73 ರನ್ ಸಿಡಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಉತ್ತಮ ಹೋರಾಟ ನೀಡಿದರು. ಇತ್ತ ದಿನೇಶ್ ಕಾರ್ತಿಕ್ ಅಂತಿಮ ಹಂತದಲ್ಲಿ ಉತ್ತಮ ಸಾಥ್ ನೀಡಿದರು.
ಮ್ಯಾಕ್ಸ್‌ವೆಲ್ ಅಜೇಯ 40 ರನ್ ಸಿಡಿಸಿದರೆ, ಕಾರ್ತಿಕ್ ಅಜೇಯ 2 ರನ್ ಸಿಡಿಸಿದರು. ಈ ಮೂಲಕ ಆರ್‌ಸಿಬಿ ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. 8 ವಿಕೆಟ್ ಗೆಲುವು ದಾಖಲಿಸಿದ ಆರ್‌ಸಿಬಿ , ಪಂಜಾಬ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಟೂರ್ನಿಯಿಂದ ಹೊರದಬ್ಬಿದೆ.
IPL 2022 ಟೂರ್ನಿಯಲ್ಲಿ ಮಹತ್ವದ ಬದಲಾವಣೆ, ಫೈನಲ್ ಪಂದ್ಯದ ಸಮಯ ಬದಲು!
ಎಬಿಡಿ, ಗೇಲ್‌ಗೆ ಆರ್‌ಸಿಬಿ ಹಾಲ್ ಆಫ್ ಫೇಮ್
ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿ ರಾಯಲ… ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಆಟಗಾರರಿಗೆ ‘ಹಾಲ್ ಆಫ್ ಫೇಮ್’ ಗೌರವ ನೀಡುವ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ತಂಡದ ಪ್ರಮುಖ ಆಟಗಾರರಾಗಿದ್ದ ಕ್ರಿಸ್ ಗೇಲ್ ಹಾಗೂ ಎಬಿ ಡಿ ವಿಲಿಯರ್ಸ್ ಈ ಗೌರವ ಪಡೆದ ಮೊದಲ ಆಟಗಾರರು ಎನಿಸಿಕೊಳ್ಳಲಿದ್ದಾರೆ.
ಮಂಗಳವಾರ ಆಯೋಜಿಸಿದ್ದ ವಿಶೇಷ ಕಾರ‍್ಯಕ್ರಮದಲ್ಲಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಬಗ್ಗೆ ಘೋಷಣೆ ಮಾಡಿದರು. ಇದೇ ವೇಳೆ ಇಬ್ಬರೂ ಆಟಗಾರರೊಂದಿಗಿನ ನೆನೆಪುಗಳನ್ನು ಅವರು ಬಿಚ್ಚಿಟ್ಟರು. ‘ನಿಮ್ಮಿಬ್ಬರಿಗೂ ಈ ಗೌರವ ನೀಡುತ್ತಿರುವ ಈ ಕ್ಷಣ ತುಂಬಾ ಶ್ರೇಷ್ಠವಾದದ್ದು. ನಿಮ್ಮ ಆಟ ಐಪಿಎಲ್ ಟೂರ್ನಿಯನ್ನು ಹೇಗೆ ಬದಲಾಯಿಸಿತು ಮತ್ತು ಎಷ್ಟುಪರಿಣಾಮಕಾರಿ ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ’ ಎಂದು ಕೊಂಡಾಡಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ‍್ಯಕ್ರಮದಲ್ಲಿ ಭಾಗಿಯಾಗಿದ್ದ ಗೇಲ್ ಮತ್ತು ವಿಲಿಯರ್ಸ್ ಅವರು ಆರ್‌ಸಿಬಿ ಪರ ಕಳೆದ ಹಳೆಯ ದಿನಗಳನ್ನು ಮೆಲುಕು ಹಾಕಿದರು.