ಡೆಲ್ಲಿ ವಿರುದ್ಧ ಮುಂಬೈ ಗೆಲುವಿನಿಂದ ಆರ್‌ಸಿಬಿಗೆ ಲಕ್  ಮುಂಬೈ ಇಂಡಿಯನ್ಸ್‌ಗೆ ಬೆಂಬಲ ನೀಡಿದ್ದ ಆರ್‌ಸಿಬಿ ಪ್ಲೇ ಆಫ್ ಪ್ರವೇಶಕ್ಕೆ ಸಹಕರಿಸಿದ ಮುಂಬೈಗೆ ಆರ್‌ಸಿಬಿ ಧನ್ಯವಾದ

ಮುಂಬೈ(ಮೇ.22): ಐಪಿಎಲ್ 2022 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಅದೃಷ್ಠದ ಬಾಗಿಲು ತೆರೆದಿದೆ. ಇದೇ ಕಾರಣಕ್ಕೆ ಆರ್‌ಸಿಬಿ ಪ್ಲೇ ಆಫ್ ಪ್ರವೇಶ ಮಾಡಿದೆ. ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಲು ಕಾರಣ ಡೆಲ್ಲಿ ವಿರುದ್ಧ ಮುಂಬೈ ಇಂಡಿಯನ್ಸ್ ಗೆಲುವು. ಈ ಗೆಲುವಿಗೆ ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿ ತಂಡ ಮುಂಬೈ ಇಂಡಿಯನ್ಸ್‌ಗೆ ಧನ್ಯವಾದ ಹೇಳಿದೆ. ಈ ಉಪಕಾರವನ್ನು ಯಾವತ್ತೂ ಮರೆಯಲ್ಲ ಎಂದಿದೆ.

ನಂಬಲು ಸಾಧ್ಯವಾಗುತ್ತಿಲ್ಲ. ಇಡೀ ತಂಡ ಒಂದೂ ಎಸೆತ ತಪ್ಪಿಸದೆ ನೋಡುತ್ತಿದ್ದೆವು. ಪಂದ್ಯ ಗೆಲ್ಲುತ್ತಿದ್ದಂತೆ ನಮ್ಮ ಭಾವನೆ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಿಲ್ಲ. ಈ ಪಂದ್ಯ, ಈ ಗೆಲುವು ಹಾಗೂ ನಮ್ಮ ಪ್ಲೇ ಆಫ್ ಪ್ರವೇಶ ವನ್ನು ಯಾವತ್ತೂ ಮರೆಯುದಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

IPL 2022: ಮತ್ತೆ ಮತ್ತೆ ನೋಡಬೇಕೆನಿಸುವ ಆರ್‌ಸಿಬಿ ಸಂಭ್ರಮಾಚರಣೆ..! ವಿಡಿಯೋ ವೈರಲ್

ಮುಂಬೈ ಒಂದೊಂದೆ ವಿಕೆಟ್ ಕಬಳಿಸುತ್ತಿದ್ದಂತೆ ತಂಡ ಸಂಭ್ರಮಿಸಿತು. ಚೇಸಿಂಗ್ ವೇಳೆ ಮುಂಬೈ ಸಿಡಿಸಿದ ಪ್ರತಿ ಬೌಂಡರಿಯೂ ಆರ್‌ಸಿಬಿ ವಿಶ್ವಾಸವನ್ನು ಹೆಚ್ಚು ಮಾಡಿತು. ಕಳೆದ ಪಂದ್ಯದಲ್ಲಿ ನಾವು ಎಲ್ಲಾ ಶ್ರಮವಹಿಸಿದ್ದೆವು. ಇದೀಗ ಮುಂಬೈ ಇಂಡಿಯನ್ಸ್ ಗೆಲುವಿನೊಂದಿಗೆ ಆರ್‌ಸಿಬಿ ಪ್ಲೇ ಆಫ್ ಪ್ರೇವಶ ಸಾಧ್ಯವಾಗಿದೆ ಎಂದು ನಾಯಕ ಫಾಫ್ ಡುಪ್ಲೆಸಿಸ್ ಹೇಳಿದ್ದಾರೆ.

ಆರ್‌ಸಿಬಿ ಅಧಿಕೃತ ಟ್ವೀಟರ್ ಖಾತೆಯಲ್ಲಿ ತಂಡದ ಸಂಭ್ರಮವನ್ನು ಹಂಚಿಕೊಂಡಿದೆ. ಆಟಗಾರರು ಮುಂಬೈ ಗೆಲುವನ್ನು ಸಂಭ್ರಮಿಸಿದ ರೀತಿಯನ್ನು ಪೋಸ್ಟ್ ಮಾಡಲಾಗಿದೆ. 

ದೆಹಲಿ ಮುಂದಿದ್ದ ಅವಕಾಶ ಆರ್‌ಸಿಬಿಗೆ
ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಆರ್‌ಸಿಬಿ ಪಾಲಿಗೂ ಮಹತ್ವವಾಗಿತ್ತು. ಈ ಪಂದ್ಯದಲ್ಲಿ ಡೆಲ್ಲಿ ಗೆಲುವು ಸಾಧಿಸಿದರೆ ನೇರವಾಗಿ ಪ್ಲೇ ಆಫ್ ಪ್ರವೇಶಿಸಿತಿತ್ತು. ಆದರೆ ಡೆಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಪರಿಣಾಮ ಮುಂಬೈ ಗೆಲುವು ಸಾಧಿಸಿತು. ಇತ್ತ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಿತು.

IPL 2022 ಮುಂಬೈ ವಾಂಖೇಡೆ ಮೈದಾನದಲ್ಲೇ RCB, RCB ಜಯಘೋಷ..! ವಿಡಿಯೋ ವೈರಲ್

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ಪೃಥ್ವಿಶಾ 24 ರನ್ ಸಿಡಿಸಿದರೆ, ನಾಯಕ ರಿಷಬ್ ಪಂತ್ 39 ರನ್ ಸಿಡಿಸಿದ್ದರು. ರೋವ್ಮನ್ ಪೊವೆಲ್ 43 ಹಾಗೂ ಅಕ್ಸರ್ ಪಟೇಲ್ ಅಜೇಯ 19 ರನ್ ಸಿಡಿಸಿದರು. ಈ ಮೂಲಕ 159 ರನ್ ಸಿಡಿಸಿತ್ತು.

ಇತ್ತ ಮುಂಬೈ ಪರ ಇಶಾನ್ ಕಿಶನ್ 48 ರನ್ ಸಿಡಿಸಿದರೆ, ಡೇವಾಲಾಡ್ ಬ್ರೆವಿಸ್ 37 ರನ್ ಸಿಡಿಸಿದರು. ತಿಲಕ್ ವರ್ಮಾ 21 ರನ್ ಸಿಡಿಸಿ ಔಟಾದರು. ಆದರೆ ಟಿಮ್ ಡೇವಿಡ್ ಹೋರಾಟದಿಂದ ಮುಂಬೈ ಇಂಡಿಯನ್ಸ್ ಗೆಲುವಿನ ಹಾದಿಯಲ್ಲಿ ಸಾಗಿತು. ಆದರೆ 34 ರನ್ ಸಿಡಿಸಿ ಡೇವಿಡ್ ವಿಕೆಟ್ ಪತನಗೊಂಡಿತ್ತು. ಬಳಿಕ ರಮನದೀಪ್ ಅಜೇಯ 13 ರನ್ ಸಿಡಿಸೋ ಮೂಲಕ ಮುಂಬೈ 5 ವಿಕೆಟ್ ಗೆಲುವು ಕಂಡಿತ್ತು. ಮುಂಬೈ ಗೆಲುವು ಸಾಧಿಸುತ್ತಿದ್ದಂತೆ ಆರ್‌ಸಿಬಿ ತಂಡ ಕುಣಿದು ಕುಪ್ಪಳಿಸಿತು. ಡೆಲ್ಲಿ ಟೂರ್ನಿಯಿಂದ ಹೊರಬಿದ್ದರೆ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಿತು.