ಪಂಜಾಬ್ ಕಿಂಗ್ಸ್ ಹಾೂ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯ ಉಮೇಶ್ ಯಾದವ್ ದಾಳಿಗೆ ಪರದಾಡಿದ ಪಂಜಾಬ್ ಬ್ಯಾಟ್ಸ್‌ಮನ್ 137 ರನ್‌ಗೆ ಪಂಜಾಬ್ ಕಿಂಗ್ಸ್ ಆಲೌಟ್

ಮುಂಬೈ(ಏ.01): ಐಪಿಎಲ್ 2022 ಟೂರ್ನಿ ವೇಗಿ ಉಮೇಶ್ ಯಾದವ್‌ಗೆ ಸ್ಮರಣೀಯ ಟೂರ್ನಿಯಾಗಿ ಮಾರ್ಪಟ್ಟಿದೆ. ಐಪಿಎಲ್ ಪಂದ್ಯಗಳಲ್ಲಿ ದುಬಾರಿ ಬೌಲರ್ ಎಂದೇ ಟೀಕೆಗೆ ಗುರಿಯಾಗಿದ್ದ ಉಮೇಶ್ ಯಾದವ್ ಇದೀಗ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ 8ನೇ ಲೀಗ್ ಪಂದ್ಯದಲ್ಲಿ ಉಮೇಶ್ ಯಾದವ್ ಮಾರಕ ದಾಳಿ ಸಂಘಟಿಸಿದ್ದಾರೆ. ಪರಿಣಾಮ ಪಂಜಾಬ್ ಕಿಂಗ್ಸ್18.2 ಓವರ್‌ಗಳಲ್ಲಿ 137 ರನ್‌ಗೆ ಆಲೌಟ್ ಆಯಿತು.

ಟಾಸ್ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ಕಿಂಗ್ಸ್ ಆರಂಭದಲ್ಲೇ ನಾಯಕ ಮಯಾಂಕ್ ಅಗರ್ವಾಲ್ ವಿಕೆಟ್ ಕಳೆದುಕೊಂಡಿತು. ಕೇವಲ 1 ರನ್ ಸಿಡಿಸಿ ಮಯಾಂಕ್ ಔಟಾದರು. ಆದರೆ ಬಾನುಕಾ ರಜಪಕ್ಸೆ ಸ್ಪೋಟಕ ಬ್ಯಾಟಿಂಗ್‌ನಿಂದ ಪಂಜಾಬ್ ಚೇತರಿಸಿಕೊಂಡಿತು. 9 ಎಸೆತದಲ್ಲಿ 3 ಸಿಕ್ಸರ್ ಹಾಗೂ 3 ಬೌಂಡರಿ ಮೂಲಕ 31 ರನ್ ಸಿಡಿಸಿ ಔಟಾದರು.

ತಮ್ಮ ದಾಖಲೆ ಮುರಿದ Dwayne Bravo ಚಾಂಪಿಯನ್ ಬೌಲರ್‌ ಎಂದು ಬಣ್ಣಿಸಿದ ಲಸಿತ್ ಮಾಲಿಂಗ..!

ಉಮೇಶ್ ಯಾದವ್‌ಗೆ ಟಿಮ್ ಸೌಥಿ ಹಾಗೂ ಶಿವಂ ಮಾವಿ ಉತ್ತಮ ಸಾಥ್ ನೀಡಿದರು. ಉಮೇಶ್ ಯಾದವ್ ದಾಳಿಗೆ ರನ್ ಕಲೆ ಹಾಕಲು, ವಿಕೆಟ್ ಉಳಿಸಿಕೊಳ್ಳಲು ಪಂಜಾಬ್ ಬ್ಯಾಟ್ಸ್‌ಮನ್ ಪರದಾಡಿದರು. 42 ರನ್‌ಗೆ 2 ವಿಕೆಟ್ ಕಳೆದುಕೊಂಡ ಪಂಜಾಬ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಯಿತು. ಶಿಖರ್ ಧವನ್ 16 ರನ್ ಸಿಡಿಸಿ ಔಟಾದರು. ಲಿಯಾಮ್ ಲಿವಿಂಗ್ ಸ್ಟೋನ್ 19 ರನ್ ಸಿಡಿಸಿ ಔಟಾದರು. ರಾಜ ಭಾವ 11 ರನ್ ಗಳಿಸಿ ನಿರ್ಗಮಿಸಿದರು. ಶಾರುಖ್ ಖಾನ್ ಡಕೌಟ್‌ಗೆ ಬಲಿಯಾದರು. 

ಹರ್ಮನ್ ಪ್ರೀತ್ ಬ್ರಾರ್ 14 ರನ್ ಕಾಣಿಕೆ ನೀಡಿದರು. ರಾಹುಲ್ ಚಹಾರ್ ಶೂನ್ಯ ಸುತ್ತಿದರು. ಆದರೆ ಕಾಗಿಸೋ ರಬಡಾ ಬ್ಯಾಟಿಂಗ್‌ನಲ್ಲೂ ಪಂಜಾಬ್ ಕಿಂಗ್ಸ್‌ಗೆ ನೆರವಾದರು. ಕಾಗಿಸೋ ರಬಾಡ 16 ಎಸೆತದಲ್ಲಿ 25 ರನ್ ಸಿಡಿಸಿ ಔಟಾದರುಯ. ಇನ್ನು ಅರ್ಶದೀಪ್ ಸಿಂಗ್ ವಿಕೆಟ್ ಪತನದೊಂದಿಗೆ ಪಂಜಾಬ್ 137 ರನ್‌ಗಳಿಗೆ ಆಲೌಟ್ ಆಯಿತು.

ಇದು ಫೋಟೋ ಶಾಪ್ ಖಂಡಿತ ಅಲ್ಲ, ಧೋನಿ-ಗಂಭೀರ್ ಸಂಗಮಕ್ಕೆ ಕ್ರಿಕೆಟ್ ಅಭಿಮಾನಿಗಳು ಫಿದಾ..!

ಉಮೇಶ್ ಯಾದವ್ 4 ವಿಕೆಟ್ ಕಬಳಿಸಿ ಮಿಂಚಿದರು.ಉಮೇಶ್ ಯಾದವ್ 4 ವಿಕೆಟ್ ಕಬಳಿಸಿ ಮಿಂಚಿದರು.ಟಿಮ್ ಸೌಥಿ 2, ಶಿವಮ್ ಮಾವಿ 1, ಸುನಿಲ್ ನರೈನ್ 1 ಹಾಗೂ ಆ್ಯಂಡ್ರೆ ರಸೆಲ್ ತಲಾ 1 ವಿಕೆಟ್ ಕಬಳಿಸಿದರು. 

ಕೋಲ್ಕತಾ ನೈಟ್ ರೈಡರ್ಸ್ ಪ್ಲೇಯಿಂಗ್ 11
ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ(ನಾಯಕ), ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್, ಆ್ಯಂಡ್ರೆ ರಸೆಲ್, ಸುನಿಲ್ ನರೈನ್, ಟಿಮ್ ಸೌಥಿ, ಶಿವಂ ಮಾವಿ, ಉಮೇಶ್ ಯಾದಾವ್, ವರುಣ್ ಚಕ್ರವರ್ತಿ

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11
ಮಯಾಂಕ್ ಅಗರ್ವಾಲ್(ನಾಯಕ), ಶಿಖರ್ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಬಾನುಕ ರಾಜಪಕ್ಸ, ಒಡೆನ್ ಸ್ಮಿತ್, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ರಾಜ್ ಬಾವ, ಕಾಗಿಸೋ ರಬಡಾ, ಅರ್ಶದೀಪ್ ಸಿಂಗ್, ರಾಹುಲ್ ಚಹಾರ್

ಪಂಜಾಬ್ ಸತತ 2ನೇ ಗೆಲುವಿನ ನಿರೀಕ್ಷೆಯಲ್ಲಿದ್ದರೆ, ಕೋಲ್ಕತಾ ನೈಟ್ ರೈಡರ್ಸ್, ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ದ ಸೋಲಿನಿಂದ ಹೊರಬರಲು ಹವಣಿಸುತ್ತಿದೆ. ಹೀಗಾಗಿ ಇದೀಗ ಚೇಸಿಂಗ್ ಕೂಡ ಅಷ್ಟೇ ರೋಚಕವಾಗಿರಲಿದೆ.

ಒಟ್ಟು ಮುಖಾಮುಖಿ: 29

ಪಂಜಾಬ್‌: 10

ಕೆಕೆಆರ್‌: 19