ಜೀವ ಬಾಯಿಗೆ ಬಂದಿತ್ತು.! RCB vs KKR ಪಂದ್ಯದಲ್ಲಿ ಟ್ರೆಂಡ್ ಆದ ಟಾಪ್ 10 ಮೀಮ್ಸ್‌ಗಳಿವು..!

* ಕೆಕೆಆರ್ ಎದುರು ಭರ್ಜರಿ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 

* ಜೀವ ಬಾಯಿಗೆ ಬರಿಸಿ ಪಂದ್ಯ ಗೆದ್ದ ಫಾಫ್ ಡು ಪ್ಲೆಸಿಸ್ ಪಡೆ

* ಸಾಧಾರಣ ಗುರಿ ಬೆನ್ನತ್ತಿ ರೋಚಕ ಗೆಲುವ ಸಾಧಿಸಿದ ಆರ್‌ಸಿಬಿ

IPL 2022 Top 10 memes from Royal Challengers Bangalore vs Kolkata Knight Riders match kvn

ಬೆಂಗಳೂರು(ಮಾ.31): ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡಗಳ ನಡುವಿನ ರೋಚಕ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ (Faf du Plessis) ನೇತೃತ್ವದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವು 3 ವಿಕೆಟ್‌ಗಳ ಅಂತರದ ಭರ್ಜರಿ ಜಯ ಸಾಧಿಸುವ ಮೂಲಕ ಗೆಲುವಿನ ಖಾತೆ ತೆರೆದಿದೆ. ಪಂದ್ಯ ಸೋತರೂ, ಗೆದ್ದರೂ, ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಪಂದ್ಯದಲ್ಲೇ ಮತ್ತೊಮ್ಮೆ ಜೀವ ಬಾಯಿಗೆ ಬರುವಂತೆ ಮಾಡಿ ಪಂದ್ಯ ಗೆದ್ದು, ಚಮಕ್ ಕೊಟ್ಟಿದೆ.

ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿ, ಟೆನ್ಷನ್‌ ಕೊಟ್ಟು ಗೆಲ್ಲುವುದು ಎಂದರೆ ಆರ್‌ಸಿಬಿಗೆ ಬಹಳ ಇಷ್ಟ. ಸುಲಭವಾಗಿ ಗೆಲ್ಲಬಹುದಾದ ಪಂದ್ಯವನ್ನು ಕೊನೆವರೆಗೂ ಎಳೆದೊಯ್ದು ತಂಡ ಗೆಲ್ಲುತ್ತೋ, ಸೋಲುತ್ತೋ ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡುವಂತೆ ಮಾಡುವುದರಲ್ಲಿ ನೈಪುಣ್ಯತೆ ಹೊಂದಿರುವ ಆರ್‌ಸಿಬಿ, ಕೆಕೆಆರ್‌ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲೂ ಅದೇ ರೀತಿಯಾಗಿ ಜಯ ಸಾಧಿಸಿ, ಈ ಆವೃತ್ತಿಯಲ್ಲಿ ತನ್ನ ಖಾತೆ ತೆರೆಯಿತು.

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು 15ನೇ ಆವತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ಎದುರು 5 ವಿಕೆಟ್‌ಗಳ ಅಂತರದ ಆಘಾತಕಾರಿ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿತ್ತು. ಬ್ಯಾಟರ್‌ಗಳು 200+ ರನ್‌ ಕಲೆಹಾಕಿದ್ದರೂ ಸಹಾ, ಆ ಮೊತ್ತವನ್ನು ಕಾಪಾಡಿಕೊಳ್ಳಲು ಆರ್‌ಸಿಬಿ ಬೌಲರ್‌ಗಳು ವಿಫಲರಾಗಿದ್ದರು. ಆದರೆ ನವಿ ಮುಂಬೈನ ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ವಿರುದ್ದದ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳು ಮಾರಕ ದಾಳಿ ನಡೆಸುವ ಎದುರಾಳಿ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. 129 ರನ್‌ಗಳ ಸಾಧಾರಣ ಗುರಿಯನ್ನು ಆರ್‌ಸಿಬಿ ತಂಡ 7 ವಿಕೆಟ್ ಕಳೆದುಕೊಂಡು ಕೊನೆಯ ಓವರ್‌ನಲ್ಲಿ ಗೆಲುವಿನ ನಿಟ್ಟುಸಿರು ಬಿಟ್ಟಿತ್ತು.

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ವನಿಂದು ಹಸರಂಗ(Wanindu Hasaranga), ಆಕಾಶ್‌ ದೀಪ್‌ ಮಾರಕ ದಾಳಿಗೆ ತತ್ತರಿಸಿ ಕೇವಲ 18.5 ಓವರ್‌ಗಳಿಗೆ 118 ರನ್ ಬಾರಿಸಿ ಆಲೌಟ್ ಆಯಿತು. ಹಸರಂಗ 4 ಓವರ್‌ನಲ್ಲಿ 15 ಚುಕ್ಕಿ ಎಸೆತದ ಸಹಿತ ಕೇವಲ 20 ರನ್‌ ನೀಡಿ 4 ವಿಕೆಟ್ ಕಬಳಿಸಿದರೆ, ಆಕಾಶ್ ದೀಪ್ ಕೊಂಚ ದುಬಾರಿ ಎನಿಸಿದರೂ ಪ್ರಮುಖ 3 ವಿಕೆಟ್ ಪಡೆದರು. ಇನ್ನು ಅಲ್ಪ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡವು ಒಂದು ಹಂತದಲ್ಲಿ ಕೇವಲ 36 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಕಂಗಾಲಾಗಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಡೇವಿಡ್ ವಿಲ್ಲಿ, ಶೆರ್ಫಾನೆ ರುದರ್‌ಫೋರ್ಡ್‌ ಹಾಗೂ ಕೊನೆಯಲ್ಲಿ ದಿನೇಶ್ ಕಾರ್ತಿಕ್, ಶಹಬಾಜ್ ಅಹಮ್ಮದ್ ಹಾಗೂ ಹರ್ಷಲ್ ಪಟೇಲ್ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದರು. ಬೌಲಿಂಗ್‌ನಲ್ಲಿ ಹರ್ಷಲ್ ಪಟೇಲ್ 4 ಓವರ್‌ ಬೌಲಿಂಗ್ ಮಾಡಿ 2 ಮೇಡನ್ ಸಹಿತ 11 ರನ್ ನೀಡಿ 2 ವಿಕೆಟ್ ಪಡೆದರೆ, ಬ್ಯಾಟಿಂಗ್‌ನಲ್ಲಿ ಅಜೇಯ 10 ರನ್ ಬಾರಿಸಿ ಉಪಯುಕ್ತ ರನ್ ಕಾಣಿಕೆ ನೀಡಿದರು.

ಮನೆಯಲ್ಲಿ IPL ನೋಡುತ್ತಿರುವುದಕ್ಕೆ ಹತಾಶೆ ಎನಿಸುತ್ತಿದೆ: ಸ್ಯಾಮ್‌ ಕರ್ರನ್

ಆರ್‌ಸಿಬಿ ಹಾಗೂ ಕೆಕೆಆರ್ ಪಂದ್ಯವನ್ನು ವೀಕ್ಷಿಸಿದ ನೆಟ್ಟಿಗರು, ಹಾಸ್ಯಮಯ ಟ್ರೋಲ್‌ ಮಾಡಿ ಗಮನ ಸೆಳೆದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ಆಯ್ದ ಟಾಪ್ 10 ಮೀಮ್ಸ್‌ಗಳು ಇಲ್ಲಿವೆ ನೋಡಿ..

 

Latest Videos
Follow Us:
Download App:
  • android
  • ios