Asianet Suvarna News Asianet Suvarna News

IPL 2022 ತ್ರಿಪಾಠಿ, ಮಾರ್ಕ್ರಮ್ ಆಟಕ್ಕೆ ಕಂಗಾಲಾದ ಕೆಕೆಆರ್!

ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳಾದ ರಾಹುಲ್ ತ್ರಿಪಾಠಿ ಹಾಗೂ ಏಡೆನ್ ಮಾರ್ಕ್ರಮ್ ಆಕರ್ಷಕ ಅರ್ಧಶತಕದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ 7 ವಿಕೆಟ್ ಗಳಿಂದ ಕೋಲ್ಕತ ನೈಟ್ ರೈಡರ್ಸ್ ತಂಡವನ್ನು ಸೋಲಿಸಿದೆ.

IPL 2022 SRH vs KKR Rahul Tripathi and Aiden Markram super Half Century Helps Sunrisers Hyderabad to Beat Kolkata Knight Riders san
Author
Bengaluru, First Published Apr 15, 2022, 11:13 PM IST

ಮುಂಬೈ (ಏ.15): ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ರಾಹುಲ್ ತ್ರಿಪಾಠಿ (Rahul Tripathi) ಹಾಗೂ ದಕ್ಷಿಣ ಆಫ್ರಿಕಾದ ಪ್ರಮುಖ ಆಟಗಾರ ಏಡೆನ್ ಮಾರ್ಕ್ರಮ್ (Aiden Markram) ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad ) ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ(IPL 2022) 3ನೇ ಗೆಲುವು ದಾಖಲಿಸಿದೆ.

ಬ್ರಬೋರ್ನ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ ನೈಟ್ ರೈಡರ್ಸ್ ( Kolkata Knight Riders) ತಂಡ 8 ವಿಕೆಟ್ ಗೆ 175 ರನ್ ಬಾರಿಸಿದರೆ, ಪ್ರತಿಯಾಗಿ ಸನ್ ರೈಸರ್ಸ್ ಹೈದರಾಬಾದ್ (SRH) ತಂಡ 17.5 ಓವರ್ ಗಳಲ್ಲಿ 3 ವಿಕೆಟ್ ಗೆ 176 ರನ್ ಬಾರಿಸಿ ಗೆಲುವು ಕಂಡಿತು. ಸನ್ ರೈಸರ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಮಾತ್ರ ವಹಿಸಿದ ರಾಹುಲ್ ತ್ರಿಪಾಠಿ 71 ರನ್ (37 ಎಸೆತ, 4 ಬೌಂಡರಿ, 6 ಸಿಕ್ಸರ್) ಬಾರಿಸಿದರೆ, ಏಡೆನ್ ಮಾರ್ಕ್ರಮ್ ಅಜೇಯ 68 ರನ್ (36 ಎಸೆತ, 6 ಬೌಂಡರಿ, 4 ಸಿಕ್ಸರ್) ಬಾರಿಸಿದರು. ಈ ಸೋಲಿನೊಂದಿಗೆ ಕೋಲ್ಕತ ನೈಟ್ ರೈಡರ್ಸ್ (KKR) ತಂಡ 2 ರಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದರೆ, ಸನ್ ರೈಸರ್ಸ್ ಹೈದರಾಬಾದ್ ತಂಡ 7ನೇ ಸ್ಥಾನಕ್ಕೇರಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡದ ಚೇಸಿಂಗ್ ನ ಆರಂಭದಲ್ಲೇ ಪ್ಯಾಟ್ ಕಮ್ಮಿನ್ಸ್ ಆಘಾತ ನೀಡಿದರು. ಉಮೇಶ್ ಯಾದವ್ ಎಸೆತಗಳಲ್ಲಿ ರನ್ ಗಳಿಸಲು ಪರದಾಟ ನಡೆಸಿದ ಅಭಿಷೇಕ್ ಶರ್ಮ, ಪ್ಯಾಟ್ ಕಮ್ಮಿನ್ಸ್ ಅವರ ಎಸೆತವನ್ನು ಬಾರಿಸುವ ಯತ್ನದಲ್ಲಿ ಚೆಂಡು ಇನ್ ಸೈಡ್ ಎಡ್ಜ್ ಆಗಿ ವಿಕೆಟ್ ಅನ್ನು ಎಗರಿಸಿತು. 10 ಎಸೆತಗಳಲ್ಲಿ 3 ರನ್ ಬಾರಿಸಿ ನಿರ್ಗಮಿಸಿದರು.
ಬಳಿಕ ನಾಯಕ ಕೇನ್ ವಿಲಿಯಮ್ಸನ್ (17 ರನ್, 16 ಎಸೆತ, 3 ಬೌಂಡರಿ) ಹಾಗೂ ರಾಹುಲ್ ತ್ರಿಪಾಠಿ 2ನೇ ವಿಕೆಟ್ ಗೆ 36 ರನ್ ಜೊತೆಯಾಟವಾಡಿ ಬೇರ್ಪಟ್ಟಿತು. ರಾಹುಲ್ ತ್ರಿಪಾಠಿ ಆರಂಭದಲ್ಲಿ ರನ್ ಗಳಿಸಲು ಪರದಾಟ ನಡೆಸಿದರೆ, ಕೇನ್ ವಿಲಿಯಮ್ಸನ್ ಈ ಜೊತೆಯಾಟದಲ್ಲಿ 17 ರನ್ ಗಳನ್ನು ಬಾರಿಸಿದ್ದರು. ಪವರ್ ಪ್ಲೇಯ ಕೊನೆಯ ಓವರ್ ನಲ್ಲಿ ಕೇನ್ ವಿಲಿಯಮ್ಸನ್ ರಸೆಲ್ ಗೆ ಬೌಲ್ಡ್ ಆಗಿ ಹೊರನಡೆದರು.

IPL 2022 ಅಬ್ಬರಿಸಿದ ರಾಣಾ, ರಸೆಲ್, ಸನ್ ರೈಸರ್ಸ್ ಗೆ 176 ರನ್ ಗುರಿ

39 ರನ್ ಗೆ 2 ವಿಕೆಟ್ ಕಳೆದುಕೊಂಡಿದ್ದ ಹಂತದಲ್ಲಿ ಸನ್ ರೈಸರ್ಸ್ ತಂಡಕ್ಕೆ ದೊಡ್ಡ ಜೊತೆಯಾಟದ ಅಗತ್ಯವಿತ್ತು. ಇದನ್ನು ಪೂರೈಸಿದ್ದು ರಾಹುಲ್ ತ್ರಿಪಾಠಿ ಹಾಗೂ ಏಡೆನ್ ಮಾರ್ಕ್ರಮ್ ಜೋಡಿ. ಆಕರ್ಷಕ ಮಣಿಕಟ್ಟಿನ ಶಾಟ್ ಗಳು, ಮೈದಾನದಲ್ಲಿ ಚಾಕಚಕ್ಯತೆಯ ಬ್ಯಾಟಿಂಗ್ ನಡೆಸಿದ ರಾಹುಲ್ ತ್ರಿಪಾಠಿ ನಿಯಮಿತವಾಗಿ ಬೌಂಡರಿಗಳನ್ನು ಬಾರಿಸುವ ಮೂಲಕ 21 ಎಸೆತಗಳಲ್ಲಿ ಅರ್ಧಶತಕ ಪೂರ್ತಿ ಮಾಡಿದರು. ಇನ್ನೊಂದೆಡೆ, ರಾಹುಲ್ ತ್ರಿಪಾಠಿ ಆಟವನ್ನು ನೋಡಿ ಮಾರ್ಕ್ರಮ್ ಕೂಡ ಕೆಲ ಬೌಂಡರಿಗಳನ್ನು ಆಕರ್ಷಕವಾಗಿ ಬಾರಿಸಿದ್ದರಿಂದ ಮೂರನೇ ವಿಕೆಟ್ ಗೆ ಈ ಜೋಡಿ 94 ರನ್ ಜೊತೆಯಾಟವಾಡಿತು. ಉಮೇಶ್ ಯಾದವ್ ಎಸೆದ 14ನೇ ಓವರ್ ನ ಕೊನೆ ಮೂರು ಎಸೆತಗಳಲ್ಲಿ ಮೂರು ಬೌಂಡರಿ ಸಿಡಿಸಿದ ಮಾರ್ಕ್ರಮ್, ಸನ್ ರೈಸರ್ಸ್ ತಂಡಕ್ಕೆ ಗೆಲುವಿನ ಭರವಸೆ ನೀಡಿದ್ದರು.

IPL 2022 ಅಂದು ಸಿಎಸ್​​ಕೆಗೆ ವಿಲನ್, ಇಂದು ಚೆನ್ನೈ ಹೀರೋ..!

ತಂಡದ ಮೊತ್ತ 133 ರನ್ ಆಗಿದ್ದಾಗ ರಸೆಲ್ ಎಸೆತದಲ್ಲಿ ರಾಹುಲ್ ತ್ರಿಪಾಠಿ ಔಟಾಗುವ ವೇಳೆ ಸನ್ ರೈಸರ್ಸ್ ತಂಡ ಜಯ ಸಾಧಿಸುವುದು ಬಹುತೇಕ ಖಚಿತವಾಗಿತ್ತು. ಮುರಿಯದ ನಾಲ್ಕನೇ ವಿಕೆಟ್ ಗೆ ಮಾರ್ಕ್ರಮ್ ಹಾಗೂ ನಿಕೋಲಸ್ ಪೂರನ್ 43 ರನ್ ಜೊತೆಯಾಟವಾಡುವ ಮೂಲಕ ಇನ್ನೂ 13 ಎಸೆತಗಳು ಬಾಕಿ ಇರುವಂತೆ ತಂಡಕ್ಕೆ ಗೆಲುವು ನೀಡಿದರು. ಈ ಜೊತೆಯಾಟದಲ್ಲಿ ಮಾರ್ಕ್ರಮ್ ಒಬ್ಬರೇ 38 ರನ್ ಸಿಡಿಸಿದ್ದರು.

Latest Videos
Follow Us:
Download App:
  • android
  • ios