IPL 2022 ಅಬ್ಬರಿಸಿದ ರಾಣಾ, ರಸೆಲ್, ಸನ್ ರೈಸರ್ಸ್ ಗೆ 176 ರನ್ ಗುರಿ

ಜೆ. ಸುಚಿತ್ ಎಸೆದ ಕೊನೆಯ ಓವರ್ ನಲ್ಲಿ 2 ಸಿಕ್ಸರ್, 1 ಬೌಂಡರಿಗಳೊಂದಿಗೆ 17 ರನ್ ಸಿಡಿಸಿದ ಆಂಡ್ರೆ ರಸೆಲ್, ಸನ್ ಸೈರ್ಸ್ ಹೈದರಾಬಾದ್ ವಿರುದ್ಧ ಕೆಕೆಆರ್ ತಂಡ 175 ರನ್ ಗಳ ಸವಾಲಿನ ಮೊತ್ತ ಪೇರಿಸಲು ನೆರವಾದರು.
 

IPL 2022 SRH vs KKR Nitish Rana Fifty Andre Russell  Helps Kolkata Knight Riders to post 176 runs target for Sunrisers Hyderabad san

ಮುಂಬೈ (ಏ. 15): ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಕೋಲ್ಕತ ನೈಟ್ ರೈಡರ್ಸ್ (Kolkata Knight Riders) ತಂಡ 15ನೇ ಆವೃತ್ತಿಯ ಐಪಿಎಲ್ ನ (IPL 2022) 25ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡದ ಗೆಲುವಿಗೆ 000 ರನ್ ಸವಾಲು ನೀಡಿದೆ. ನಿತೀಶ್ ರಾಣಾ (Nitish Rana) ಐಪಿಎಲ್ ನಲ್ಲಿ ಬರೋಬ್ಬರಿ 19 ಇನ್ನಿಂಗ್ಸ್ ಗಳ ಬಳಿಕ ತಮ್ಮ ಮೊದಲ ಅರ್ಧಶತಕ ಬಾರಿಸಿದರು.

ಬ್ರಬೋರ್ನ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ, ನಿತೀಶ್ ರಾಣಾ (54ರನ್, 36 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ಆಂಡ್ರೆ ರಸೆಲ್ (49*ರನ್, 25 ಎಸೆತ, 4 ಬೌಂಡರಿ, 4 ಸಿಕ್ಸರ್) ಬಾರಿಸಿದ ಅರ್ಧಶತಕಗಳ ನೆರವಿನಿಂದ 8 ವಿಕೆಟ್ ಗೆ 175 ರನ್ ಬಾರಿಸಿತು.

ಕಳಪೆ ಫಾರ್ಮ್ ನಲ್ಲಿದ್ದ ಅಜಿಂಕ್ಯ ರಹಾನೆಯನ್ನು(Ajinkya Rahane) ತಂಡದಿಂದ ಕೈಬಿಟ್ಟು, ಆರನ್ ಫಿಂಚ್ ರನ್ನು (Aron Finch) ಆರಂಭಿಕರನ್ನಾಗಿ ಆಯ್ಕೆ ಮಾಡಿದ್ದ ಕೆಕೆಆರ್ ತಂಡ ಇದರಲ್ಲಿ ಯಶಸ್ಸು ಕಾಣಲಿಲ್ಲ. ಟಿ20 ಮಾದರಿಯಲ್ಲಿ ಭುವನೇಶ್ವರ್ ಕುಮಾರ್ ಅವರ ಸ್ವಿಂಗ್ ಎಸೆತಗಳನ್ನು ಆಡಲು ಪರದಾಡುವ ಆರನ್ ಫಿಂಚ್ ಗೆ ಈ ಬಾರಿಯೂ ಅದೇ ಸವಾಲಾಯಿತು. ಮೊದಲ ಓವರ್ ನಲ್ಲಿ ಹೇಗೋ ಭುವನೇಶ್ವರ್ ಎಸೆತಗಳನ್ನು ಎದುರಿಸಿ ಪಾರಾಗಿದ್ದ ಆರನ್ ಫಿಂಚ್, ಮಾರ್ಕೋ ಜಾನ್ಸೆನ್ ಎಸೆದ 2ನೇ ಓವರ್ ನಲ್ಲಿ ಪೂರನ್ ಗೆ ಕ್ಯಾಚ್ ನೀಡಿ ಹೊರನಡೆದರು. ಅದರೊಂದಿಗೆ 11 ರನ್ ಗೆ ಕೆಕೆಆರ್ ತಂಡದ ಮೊದಲ ವಿಕೆಟ್ ಉರುಳಿತ್ತು.

ನಂತರ ವೆಂಕಟೇಶ್ ಅಯ್ಯರ್ ಗೆ (6) ಜೊತೆಯಾದ ನಾಯಕ ಶ್ರೇಯಸ್ ಅಯ್ಯರ್ (28ರನ್, 25 ಎಸೆತ, 3 ಬೌಂಡರಿ) ಚೇತರಿಕೆ ನೀಡುವ ಪ್ರಯತ್ನ ಮಾಡಿದರಾದರೂ, ಕ್ರೀಸ್ ನಲ್ಲಿ ರನ್ ಗಳಿಸಲು ಒದ್ದಾಡುತ್ತಿದ್ದ ವೆಂಕಟೇಶ್ ಅಯ್ಯರ್, 13 ಎಸೆತಗಳಲ್ಲಿ 6 ರನ್ ಬಾರಿಸಿ ನಟರಾಜನ್ ಗೆ ವಿಕೆಟ್ ನೀಡಿದರು. ಭಡ್ತಿ ಪಡೆದು ಬಂದು ಆಡಿದ ಸುನೀಲ್ ನಾರಾಯಣ್ ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ ಗಟ್ಟಿ ಆರ್ಭಟಿಸುವ ಸೂಚನೆ ನೀಡಿದರಾದರೂ ಮರು ಎಸೆತದಲ್ಲೇ ನಟರಾಜನ್ ಇವರ ವಿಕೆಟ್ ಕೂಡ ಉರುಳಿಸಿದರು.

ಎಲ್ಲಿದ್ದಾರೆ ಯೂನಿವರ್ಸಲ್‌ ಬಾಸ್‌ ? IPL ಯಾಕೆ ಆಡುತ್ತಿಲ್ಲ Chris Gayle ?

31 ರನ್ ಗೆ 3 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಈ ಹಂತದಲ್ಲಿ ದೊಡ್ಡ ಜೊತೆಯಾಟದ ಅಗತ್ಯವಿತ್ತು. ಶ್ರೇಯಸ್ ಅಯ್ಯರ್ ಹಾಗೂ ನಿತೀಶ್ ರಾಣಾ 39 ರನ್ ಗಳ ಜೊತೆಯಾಟವಾಡಿ ಚೇತರಿಕೆ ನೀಡುವ ಪ್ರಯತ್ನವನ್ನೂ ಮಾಡಿದ್ದರು. ರನ್ ಸರಾಗವಾಗಿ ಬರದೇ ಇದ್ದರೂ, ಎಚ್ಚರಿಕೆಯ ಬ್ಯಾಟಿಂಗ್ ಮಾಡುತ್ತಿದ್ದ ಕೆಕೆಆರ್ ತಂಡ ನಾಯಕ ಅಯ್ಯರ್ ಆಟದ ಮೇಲೆ ವಿಶ್ವಾಸವಿಟ್ಟಿತ್ತು. 10ನೇ ಓವರ್ ನ ಕೊನೇ ಎಸೆತದಲ್ಲಿ ಉಮ್ರಾನ್ ಮಲೀಕ್, ಶ್ರೇಯಸ್ ಅಯ್ಯರ್ ಅವರನ್ನು ಬೌಲ್ಡ್ ಮಾಡುವುದರೊಂದಿಗೆ ಕೆಕೆಆರ್ ದೊಡ್ಡ ಆಘಾತ ಕಂಡಿತು.

IPL 2022 ಟೂರ್ನಿಗೆ ಅಂಟಿಕೊಂಡ ಕೊರೋನಾ, ಡೆಲ್ಲಿ ತಂಡದಲ್ಲಿ ಮೊದಲ ಕೇಸ್ ಪತ್ತೆ

ಒಂದೆಡೆ ಭದ್ರವಾಗಿ ತಳವೂರಿ ನಿಂತಿದ್ದ ನಿತೇಶ್ ರಾಣಾಗೆ ಈ ಹಂತದಲ್ಲಿ ಜೊತೆಯಾ ಶೆಲ್ಡನ್ ಜಾಕ್ಸನ್ ಹೆಚ್ಚಿನ ರನ್ ಬಾರಿಸದೇ ಇದ್ದರೂ ತಂಡದ ಮೊತ್ತ 100ರ ಗಡಿ ದಾಟುವವರೆಗೂ ಜೊತೆಯಾಟದಲ್ಲಿ ಭಾಗಿಯಾದರು. ಈ ವೇಳೆ ಉಮ್ರಾನ್ ಮಲೀಕ್ ಅವರ ಮತ್ತೊಂದು ಆಕರ್ಷಕ ಎಸೆತ ಜಾಕ್ಸನ್ ಅವರ ಬಲಿ ಪಡೆಯಿತು. ಕೊನೆಯಲ್ಲಿ ರಾಣಾ ಹಾಗೂ ಆಂಡ್ರೆ ರಸೆಲ್ ಕೆಲ ಸ್ಪೋಟಕ ಶಾಟ್ ಗಳನ್ನು ಬಾರಿಸುವ ಮೂಲಕ ತಂಡದ ಮೊತ್ತವನ್ನು 140ರ ಗಡಿ ದಾಟಿಸುವಲ್ಲಿ ಯಶ ಕಂಡಿದ್ದರು.

Latest Videos
Follow Us:
Download App:
  • android
  • ios