ಉತ್ತರಾಖಂಡ ರಾಜ್ಯದ 22 ವರ್ಷದ ಬ್ಯಾಟ್ಸ್ ಮನ್ ಅನುಜ್ ರಾವತ್  (66 ರನ್, 47 ಎಸೆತ, 2 ಬೌಂಡರಿ, 6 ಸಿಕ್ಸರ್) ಬಾರಿಸಿದ ಐಪಿಎಲ್ ಚೊಚ್ಚಲ ಅರ್ಧಶತಕ ಹಾಗು ಮಾಜಿ ನಾಯಕ ವಿರಾಟ್ ಕೊಹ್ಲಿಯ (48ರನ್, 36 ಎಸೆತ, 5 ಬೌಂಡರಿ) ಆಕರ್ಷಕ ಆಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ಮುಂಬೈ ಇಂಡಿಯನ್ಸ್  (Mumbai Indians) ವಿರುದ್ಧ ಭರ್ಜರಿ 7 ವಿಕೆಟ್ ಗೆಲುವು ದಾಖಲಿಸಿದೆ. 

ಪುಣೆ (ಏ.9): ಉತ್ತರಾಖಂಡ ರಾಜ್ಯದ 22 ವರ್ಷದ ಬ್ಯಾಟ್ಸ್ ಮನ್ ಅನುಜ್ ರಾವತ್ (66 ರನ್, 47 ಎಸೆತ, 2 ಬೌಂಡರಿ, 6 ಸಿಕ್ಸರ್) ಬಾರಿಸಿದ ಐಪಿಎಲ್ ಚೊಚ್ಚಲ ಅರ್ಧಶತಕ ಹಾಗು ಮಾಜಿ ನಾಯಕ ವಿರಾಟ್ ಕೊಹ್ಲಿಯ (48ರನ್, 36 ಎಸೆತ, 5 ಬೌಂಡರಿ) ಆಕರ್ಷಕ ಆಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ಭರ್ಜರಿ 7 ವಿಕೆಟ್ ಗೆಲುವು ದಾಖಲಿಸಿದೆ.

ಇದು ಐಪಿಎಲ್ ನಲ್ಲಿ ಆರ್ ಸಿಬಿ (Royal Challengers Bangalore) ತಂಡದ ಮೂರನೇ ಗೆಲುವಾಗಿದ್ದರೆ, ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಸತತ ನಾಲ್ಕನೇ ಸೋಲು ಕಂಡಿದೆ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಸ್ಟೇಡಿಯಂನಲ್ಲಿ ಶನಿವಾರ ನಡೆದ 2ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ (MI) ತಂಡ, ಸೂರ್ಯಕುಮಾರ್ ಯಾದವ್ (Suryakumar Yadav) ಬಾರಿಸಿದ 68 ರನ್ (37 ಎಸೆತ, 5 ಬೌಂಡರಿ, 6 ಸಿಕ್ಸರ್) ಬಾರಿಸಿದ ಸತತ 2ನೇ ಅರ್ಧಶತಕದ ನೆರವಿನಿಂದ 6 ವಿಕೆಟ್ ಗೆ 151 ರನ್ ಪೇರಿಸಿತು. ಪ್ರತಿಯಾಗಿ ಆರ್ ಸಿಬಿ (RCB) ತಂಡ 2ನೇ ವಿಕೆಟ್ ಗೆ 80 ರನ್ ಜೊತೆಯಾಟವಾಡಿ ತಂಡದ ಗೆಲುವನ್ನು ಸುಲಭ ಮಾಡಿದರು. ಇದರಿಂದಾಗಿ ಆರ್ ಸಿಬಿ ತಂಡ 18.3 ಓವರ್ ಗಳಲ್ಲಿ 7 ವಿಕಟ್ ಗೆ 152 ರನ್ ಬಾರಿಸಿ ಗೆಲುವಿನ ದಡ ಸೇರಿತು.

ಚೇಸಿಂಗ್ ಆರಂಭಿಸಿದ ಆರ್ ಸಿಬಿ ತಂಡದ ಆರಂಭಿಕರಾದ ಫಾಫ್ ಡು ಪ್ಲೆಸಿಸ್ (16 ರನ್, 24 ಎಸೆತ, 1 ಬೌಂಡರಿ) ಹಾಗೂ ಅನುಜರ್ ರಾವತ್ ಮೊದಲ ವಿಕೆಟ್ ಗೆ ಎಚ್ಚರಿಕೆಯ 50 ರನ್ ಜೊತೆಯಾಟವಾಡಿದರು. ಬಸಿಲ್ ಥಂಪಿ ಎಸೆದ ಮೊದಲ ಓವರ್ ನಲ್ಲಿ ಕೇವಲ 1 ರನ್ ಬಾರಿಸಿದ್ದ ಆರ್ ಸಿಬಿ ತಂಡ 2ನೇ ಓವರ್ ನಿಂದಲೇ ಬಿರುಸಿನ ಆಟವಾಡಲು ಆರಂಭಿಸಿತು. ಯುವ ಬ್ಯಾಟ್ಸ್ ಮನ್ ಅನುಜ್ ರಾವತ್, ಜೈದೇವ್ ಉನಾದ್ಕತ್ ಎಸೆದ 2ನೇ ಓವರ್ ನಲ್ಲಿ ಲಾಂಗ್ ಆಫ್ ಹಾಗೂ ಲಾಂಗ್ ಆನ್ ನಲ್ಲಿ ಎರಡು ಸಿಕ್ಸರ್ ಸಿಡಿಸಿ ರನ್ ವೇಗಕ್ಕೆ ಚಾಲನೆ ನೀಡಿದರು.

ಆದರೆ, ಅನುಜ್ ರಾವತ್ ರ ಎರಡು ಸಿಕ್ಸರ್ ಹೊರತಾಗಿ ಪವರ್ ಪ್ಲೇ ಅವಧಿಯಲ್ಲಿ ಆರ್ ಸಿಬಿ ಯಾವುದೇ ಬೌಂಡರಿ ಗಳಿಸಲಿಲ್ಲ. ಇನ್ನೊಂದೆಡೆ ರೋಹಿತ್ ಶರ್ಮ (Rohit Sharma) ಮೊದಲ ಆರು ಓವರ್ ಗಳಲ್ಲಿಯೇ ಜಸ್ ಪ್ರೀತ್ ಬುಮ್ರಾಗೆ (Bumrah) ಎರಡು ಓವರ್ ಗಳನ್ನು ನೀಡಿ ಆರಂಭಿಕರನ್ನು ಬೇರೆ ಮಾಡುವ ಪ್ರಯತ್ನ ಮಾಡಿದರು. ಆದರೆ, ಇದಕ್ಕೆ ಯಶ ಸಿಗಲಿಲ್ಲ. ಪವರ್ ಪ್ಲೇ ಮುಗಿದ ನಂತರ ದಾಳಿಗಿಳಿದ ಎಂ ಅಶ್ವಿನ್ ಅವರ ಓವರ್ ನಲ್ಲಿ ಆರ್ ಸಿಬಿ 15 ರನ್ ಸಿಡಿಸಿತು. ಮೊದಲ ವಿಕೆಟ್ ಗೆ 49 ಎಸೆತಗಳಲ್ಲಿ 50 ರನ್ ಜೊತೆಯಾಟವಾಡಿದ ಬಳಿಕ ಮೊದಲ ವಿಕಟ್ ಜೋಡಿ ಬೇರ್ಪಟ್ಟಿತು. ಎಂದಿನ ಲಯದಲ್ಲಿಲ್ಲದ ಫಾಫ್ ಡು ಪ್ಲೆಸಿಸ್, ಜೈದೇವ್ ಉನಾದ್ಕತ್ ಅವರ ಸ್ಲೋವರ್ ಎಸೆತವನ್ನು ಸಿಕ್ಸರ್ ಗಟ್ಟುವ ಯತ್ನದಲ್ಲಿ ಎಡವಿ ಔಟಾದರು.

IPL 2022 ಮುಂಬೈಗೆ ಚೇತರಿಕೆ ನೀಡಿದ ಸೂರ್ಯ, ಆರ್ ಸಿಬಿಗೆ 152 ರನ್ ಗುರಿ
ಅನುಜ್-ಕೊಹ್ಲಿ ಸೂಪರ್ ಜೊತೆಯಾಟ:
ನಿಧಾನಗತಿಯ ಎಸೆತಗಳು ವರ್ಕ್ ಔಟ್ ಆಗುತ್ತಿದ್ದಂತೆ, ಮುಂಬೈ ಇಂಡಿಯನ್ಸ್ ತಂಡ ಮಧ್ಯಮ ಓವರ್ ಗಳಲ್ಲಿ ಹೆಚ್ಚಾಗಿ ಕೈರಾನ್ ಪೊಲ್ಲಾರ್ಡ್ ಹಾಗೂ ಜೈದೇವ್ ಉನಾದ್ಕತ್ ಅವರ ಓವರ್ ಗಳನ್ನು ಬಳಸಿಕೊಂಡಿತು. ಆದರೆ, ಅನುಭವಿ ಆಟಗಾರ ವಿರಾಟ್ ಕೊಹ್ಲಿ ಮೈದಾನದಲ್ಲಿ ಇದ್ದಿದ್ದು ಆರ್ ಸಿಬಿ ಪಾಲಿಗೆ ವರದಾನವಾಯಿತು. ನಿಧಾನಗತಿಯ ಎಸೆತಗಳನ್ನೂ ಆಕರ್ಷಕವಾಗಿ ಬೌಂಡರಿಗಟ್ಟುತ್ತಿದ್ದ ವಿರಾಟ್ ಕೊಹ್ಲಿ, ಆರ್ ಸಿಬಿ ಸ್ಕೋರ್ ಕಾರ್ಡ್ ಪ್ರಗತಿಯನ್ನು ಮುಂದುವರಿಸಿದ್ದರು. 

IPL 2022 ಟಾಸ್ ಗೆದ್ದ ಆರ್ ಸಿಬಿ ಬೌಲಿಂಗ್ ಆಯ್ಕೆ, ತಂಡಕ್ಕೆ ಮರಳಿದ ಮ್ಯಾಕ್ಸ್ ವೆಲ್!
ಐಪಿಎಲ್ ಇತಿಹಾಸದ 3ನೇ ನಿಧಾನಗತಿಯ ಆರಂಭಿಕ ಜೊತೆಯಾಟ: 
ಫಾಫ್ ಡು ಪ್ಲೆಸಿಸ್ ಹಾಗೂ ಅನುಜ್ ರಾವತ್ ಐಪಿಎಲ್ ಇತಿಹಾಸದ ಮೂರನೇ ಅತ್ಯಂತ ನಿಧಾನಗತಿಯ ಆರಂಭಿಕ ಜೊತೆಯಾಟವಾಡಿದರು. ಈ ಜೋಡಿ 6.12ರ ರನ್ ರೇಟ್ ನಲ್ಲಿ ಸ್ಕೋರ್ ಮಾಡಿತು. 2012ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ರಾಹುಲ್ ದ್ರಾವಿಡ್ ಹಾಗೂ ಅಜಿಂಕ್ಯ ರಹಾನೆ 6 ರ ರನ್ ರೇಟ್ ನಲ್ಲಿ ಜೊತೆಯಾಟವಾಡಿದ್ದು ಅಗ್ರಸ್ಥಾನದಲ್ಲಿದ್ದರೆ, 2011ರಲ್ಲಿ ಕೆಕೆಆರ್ ತಂಡದ ಮಾನ್ವಿಂದರ್ ಬಿಸ್ಲಾ ಹಾಗೂ ಜಾಕ್ಸ್ ಕಾಲಿಸ್ ಆಡಿದ ಜೊತೆಯಾಟ 2ನೇ ಸ್ಥಾನದಲ್ಲಿದೆ.