ಐಪಿಎಲ್ 2022 ಟೂರ್ನಿಯಲ 3ನೇ ಲೀಗ್ ಪಂದ್ಯ ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿ ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ
ಮುಂಬೈ(ಮಾ.27): ಐಪಿಎಲ್ ಟೂರ್ನಿಯಲ್ಲಿಂದು ಮಹತ್ವದ ಪಂದ್ಯ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದೆ. ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಆರ್‌ಸಿಬಿ ತಂಡ:
ಫಾಫ್ ಡುಪ್ಲೆಸಿಸ್, ಅನೂಜ್ ರಾವತ್, ದಿನೇಶ್ ಕಾರ್ತಿಕ್, ಶೇರ್ಫಾನೆ ರುದ್‌ಫೋರ್ಡ್, ವಿರಾಟ್ ಕೊಹ್ಲಿ, ಡೆವಿಡ್ ವೀಲೆ, ವಾನಿಂದು ಹಸರಂಗ, ಶಹಬಾಜ್ ಅಹಮ್ಮದ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಅಕ್ಷ್ ದೀಪ್
ಪಂಜಾಬ್ ಕಿಂಗ್ಸ್ ತಂಡ:
ಮಯಾಂಕ್ ಅಗರ್ವಾರ್(ನಾಯಕ), ಶಿಖರ್ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಬಾನುಕಾ ರಾಜಪಕ್ಸ, ಶಾರುಖ್ ಖಾನ್, ಒಡೆನ್ ಸ್ಮಿತ್, ರಾಜ್ ಬಾವ, ಅರ್ಶದೀಪ್ ಸಿಂಗ್, ಹರ್ಪ್ರೀತ್ ಬ್ರಾರ್, ಸಂದೀಪ್ ಶರ್ಮಾ, ರಾಹುಲ್ ಚಹಾರ್
IPL 2022 DC vs MI ಸಂಪ್ರದಾಯ ಮುಂದುವರಿಸಿದ ಮುಂಬೈ, ಡೆಲ್ಲಿ ಕ್ಯಾಪಿಟಲ್ಸ್‌ಗೆ ರೋಚಕ ಗೆಲುವು!
ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ನೂತನ ನಾಯಕ ಫಾಫ್ ಡುಪ್ಲೆಸಿಸ್ ಸಾರಥ್ಯದಲ್ಲಿ ನಡೆಯುತ್ತಿರುವ ಮೊದಲ ಪಂದ್ಯ ಇದಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಎರಡೂ ತಂಡಗಳು ಕನ್ನಡಿಗರಿಗೆ ಆಪ್ತ ತಂಡಗಳು. ಆರ್‌ಸಿಬಿ ನಮ್ಮ ತಂಡವಾಗಿದ್ದರೆ, ಪಂಜಾಬ್‌ನಲ್ಲಿ ಕನ್ನಡಿಗರ ಪ್ರಾಬಲ್ಯವೇ ಹೆಚ್ಚು. ಕೋಚ್ ಅನಿಲ್ ಕುಂಬ್ಳೆ, ನಾಯಕ ಮಾಯಾಂಕ್ ಅಗರ್ವಾಲ್ ಸಾರಥ್ಯದಲ್ಲಿರುವ ಪಂಜಾಬ್ ತಂಡ, ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಂಬಿಕಸ್ತ ಆರಂಭಿಕನಾಗಿದ್ದ ಫಾಫ್ ಡುಪ್ಲೆಸಿಸ್ ಈ ಬಾರಿ ಆರ್‌ಸಿಬಿ ನಾಯಕನಾಗಿದ್ದಾರೆ. ನಾಯಕತ್ವ ಜವಾಬ್ದಾರಿಯಿಂದ ಮುಕ್ತಗೊಂಡಿರುವ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಕೊಹ್ಲಿ ಉತ್ತಮ ಪ್ರದರ್ಶನ ಆರ್‌ಸಿಬಿ ಸುಲಭ ಗೆಲುವು ತಂದುಕೊಡಲಿದೆ.
IPL 2022: ಕಿಂಗ್ ಕೊಹ್ಲಿ ಮುಂದಿವೆ ಎರಡು ಬಿಗ್ ಚಾಲೆಂಜಸ್..!
ಕೆಎಲ್ ರಾಹುಲ್ ನಿರ್ಗಮನದ ಬಳಿಕ ತಂಡದ ನಾಯಕತ್ವ ವಹಿಸಿಕೊಂಡಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ಹೊಸ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಶಿಖರ್ ಧವನ್ ಬ್ಯಾಟಿಂಗ್ ಕೂಡ ಪಂಜಾಬ್ ತಂಡಕ್ಕೆ ನೆರವಾಗಲಿದೆ. ಪಂಜಾಬ್ ಯುವ ಕ್ರಿಕೆಟಿಗರ ಮೇಲೆ ಹೆಚ್ಚಿನ ನಂಬಿಕೆ ಇಟ್ಟಿದೆ.
ಮಾರ್ಚ್ 30ಕ್ಕೆ ಕೆಕೆಆರ್ ಸವಾಲು
ಪಂಜಾಬ್ ಕಿಂಗ್ಸ್ ಪಂದ್ಯದ ಬಳಿಕ ಎರಡು ದಿನ ವಿಶ್ರಾಂತಿ ಪಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾರ್ಚ್ 30 ರಂದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಹೋರಾಟ ನಡೆಸಲಿದೆ. ಕೋಲ್ಕತಾ ನೈಡ್ ರೈಡರ್ಸ್ ಈ ಬಾರಿ ಅತ್ಯಂತ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಚೆನ್ನೈ ತಂಡವನ್ನೇ ಮಣಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಅಂ.ರಾ.ಕ್ರಿಕೆಟ್ ರೀತಿ ಆರ್‌ಸಿಬಿ ಆಟಗಾರರಿಗೆ ಕ್ಯಾಪ್ ನಂಬರ್!
ಫಾಫ್ ಡು ಪ್ಲೆಸಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡ ಐಪಿಎಲ್‌ನಲ್ಲಿ ಹೊಸ ಪದ್ಧತಿಗೆ ನಾಂದಿ ಹಾಡಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರತಿ ಬಾರಿ ಯಾವುದೇ ತಂಡದ ಆಟಗಾರ ಪಾದಾರ್ಪಣೆ ಮಾಡಿದರೆ ಆತನಿಗೆ ಕ್ಯಾಪ್ ನಂಬರ್ ನೀಡಲಾಗುತ್ತದೆ. ಉದಾಹರಣೆಗೆ ಭಾರತ ಪರ ಏಕದಿನ ಕ್ರಿಕೆಟ್‌ನಲ್ಲಿ ಆಡಿದ ಮೊದಲ ಆಟಗಾರ ಎಸ್.ಅಬಿದ್ ಅಲಿ, ಕಪಿಲ್ ದೇವ್ 25ನೇ ಆಟಗಾರ, ಸಚಿನ್ 74ನೇ ಆಟಗಾರ. ಇದೇ ರೀತಿ ಆರ್‌ಸಿಬಿ ಸಹ ಮೊದಲ ಆವೃತ್ತಿಯಿಂದ ತಂಡದ ಪರ ಆಡಿದ ಆಟಗಾರರಿಗೆ ಕ್ಯಾಪ್ ನಂಬರ್ ನೀಡಿದೆ. ಕೊಹ್ಲಿ ಆರ್‌ಸಿಬಿ ಪರ ಆಡಿದ 9ನೇ ಆಟಗಾರ. ಸಿರಾಜ್ 116ನೇ ಆಟಗಾರ.
