* ಇಂದಿನಿಂದ ಆರ್‌ಸಿಬಿ ತಂಡದ ಐಪಿಎಲ್ ಅಭಿಯಾನ ಆರಂಭ* ನಾಯಕತ್ವದಿಂದ ಕೆಳಗಿಳಿದಿರುವ ವಿರಾಟ್ ಕೊಹ್ಲಿ ಮುಂದಿವೆ ಬೆಟ್ಟದಂತ ಸವಾಲು* ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಲ್ಲಲು ರೆಡಿಯಾದ ಕಿಂಗ್ ಕೊಹ್ಲಿ

ಬೆಂಗಳೂರು(ಮಾ.27): 15ನೇ ಆವೃತ್ತಿಯ ಐಪಿಎಲ್​​ಗೆ (IPL 2022) ಗ್ರ್ಯಾಂಡ್​ ಕಿಕ್​ ಅಪ್ ಸಿಕ್ಕಿದೆ. ಆದ್ರೆ ಆರ್​ಸಿಬಿ (RCB) ಟೂರ್ನಿಯಲ್ಲಿ ಇಂದು ಅಭಿಯಾನ ಆರಂಭಿಸಲಿದೆ. ಕಳೆದ ಎಲ್ಲಾ ಆವೃತ್ತಿಗಳಿಗಿಂತ ಕಿಂಗ್​​ ಕೊಹ್ಲಿಗೆ ಈ ಸಲದ ಚುಟುಕು ದಂಗಲ್ ವೆರಿ ಸ್ಪೆಷಲ್​ ಮತ್ತು ಚಾಲೆಂಜಿಂಗ್​ ಎನಿಸಿದೆ. 2020-21 ಕಿಂಗ್​​ ಕೊಹ್ಲಿ ಪಾಲಿಗೆ ಅನ್​​​ಲಕ್ಕಿ ಇಯರ್​​. ಒಂದೆಡೆ ಸೆಂಚುರಿ ಬರ, ಇನ್ನೊಂದೆಡೆ ಕ್ಯಾಪ್ಟನ್ಸಿ ಕೈತಪ್ಪಿದೆ. ಇಂತದ ಸಂಕಷ್ಟದ ನಡುವೆ 2022ನೇ ಐಪಿಎಲ್​​​​ಗೆ ಚಾಲನೆ ಸಿಕ್ಕಿದೆ. ಸದ್ಯ ಎಲ್ಲರ ಗಮನ ವಿರಾಟ್ ಕೊಹ್ಲಿ(Virat Kohli) ಮೇಲಿದೆ. ರಣ ಚತುರ, ಸೆಂಚುರಿ ಸಾಮ್ರಾಟನಿಗೆ ಈ IPL​ ನಿಜಕ್ಕೂ ಚಾಲೆಂಜಿಂಗ್​ ಅಂದ್ರೂ ತಪ್ಪಲ್ಲ. ಯಾಕಂದ್ರೆ ಮಾಡ್ರನ್​ ಕ್ರಿಕೆಟ್ ದೊರೆ ಮುಂದೆ ಈಗ ಎರಡು ದೊಡ್ಡ ಸವಾಲುಗಳಿವೆ.

ನಾಯಕನಾಗಿ ಫೇಲ್, ಆಟಗಾರನಾಗಿಯಾದ್ರು ಕಪ್​ ಗೆಲ್ಲಿಸಿಕೊಡ್ತಾರಾ..?

14ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಗಿಯುತ್ತಿದ್ದಂತೆಯೇ ಕೊಹ್ಲಿ ನಾಯಕತ್ವ ತ್ಯಜಿಸಿದ್ದು ಫ್ರಾಂಚೈಸಿಗೆ ದಂಗು ಬಡಿಸಿದಂತಾಗಿದೆ. ಫಾಫ್​ ಡು ಪ್ಲೆಸಿಸ್​​​​ಗೆ (Faf du Plessis) ಈ ಜವಾಬ್ದಾರಿ ಹೆಗಲಿಗೇರಿದೆ. ಹಾಗಂತ ಕೊಹ್ಲಿ ನಾಯಕರಾಗಿದ್ರೆ ಮಾತ್ರ ಆರ್​ಸಿಬಿ ಚಾಂಪಿಯನ್ ಅನ್ನೋದು ನಿಜಕ್ಕೂ ಅದು ಅತಿ ಆಸೆನೆ. ಯಾಕಂದ್ರೆ ವಿರಾಟ್ ಸುದೀರ್ಘ ಕಾಲ ದಂಡನಾಯಕನಾದ್ರು ಆರ್​ಸಿಬಿಗೆ ಒಮ್ಮೆಯೂ ಕಪ್ ಗೆಲ್ಲಿಸಿ ಕೊಡಲು ಸಾಧ್ಯವಾಗ್ಲಿಲ್ಲ. ಅಚ್ಚರಿ ರೀತಿಯಲ್ಲಿ ನಾಯಕತ್ವಕ್ಕೆ ಗುಡ್​ ಬೈ ಹೇಳಿದ್ರು.

ಸದ್ಯ ಕೊಹ್ಲಿ ಫ್ರೀ ಬರ್ಡ್​. ಅವರಿಗೆ ಈ ಹಿಂದಿನಂತೆ ನಾಯಕತ್ವದ ಒತ್ತಡವಿಲ್ಲ. ಅವರೀಗ ಬರೀ ತಂಡದ ಆಟಗಾರನಷ್ಟೇ. ಯಾವ ಟೀಕೆಗಳಿಗೂ ಅವರು ತಲೆಕೆಡಿಸಿಕೊಳ್ಳಬೇಕಿಲ್ಲ. ಹೀಗಾಗಿ ನಾಯಕನಾಗಿದ್ದಾಗ ಕಮರಿದ ಕಪ್ ಕನಸನ್ನು ಆಟಗಾರನಾಗಿ ಆದರೂ ನನಸಾಗಿಸ್ತಾರಾ ಅನ್ನೋ ಮಹಾದಾಸೆ ಆರ್​ಸಿಬಿ ಅಭಿಮಾನಿಗಳಲ್ಲಿ ಮನೆಮಾಡಿದೆ. ಕೊಹ್ಲಿಯ IPL​ ರೆಕಾರ್ಡ್​ ಅದ್ಭುತವಾಗಿದೆ. 207 ಪಂದ್ಯಗಳಿಂದ 6,283 ರನ್​ ಬಾರಿಸಿದ್ದಾರೆ. 5 ಆವೃತ್ತಿಗಳಲ್ಲಿ 500ಕ್ಕೂ ಅಧಿಕ ರನ್​ ಕಲೆಹಾಕಿದ್ದಾರೆ. ಹಳೇ ಖದರ್ ಮತ್ತೆ ಮರುಕಳಿಸಿ ಬ್ಯಾಟ್​ ಬೀಸಿದ್ರೆ ನಾಯಕನಾಗಿ ಅಲ್ಲದಿದ್ರು, ಆಟಗಾರನಾಗಿ ಆರ್​ಸಿಬಿ ಚೊಚ್ಚಲ ಟ್ರೋಫಿ ಗೆಲುವಿಗೆ ಕಾರಣರಾಗಬಹುದು.

ಭಾರತ ಪರ 2 ವರ್ಷ, IPLನಲ್ಲಿ ಸೆಂಚುರಿ ಬಾರಿಸದೇ 4 ವರ್ಷ..!

ಬ್ಯಾಕ್ ಟು ಬ್ಯಾಕ್​ ಸೆಂಚುರಿಗಳಿಂದಲೇ ಹೆಚ್ಚು ಫೇಮಸ್ ಅಗಿದ್ದ ವಿರಾಟ್ ಕೊಹ್ಲಿ ಈಗ ಶತಕದ ಬರ ಎದುರಿಸ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಸೆಂಚುರಿ ಮೂಡಿ ಬರದೇ 2 ವರ್ಷ ಕಳೆದಿದೆ. ಇನ್ನೂ ಐಪಿಎಲ್​​​ನಲ್ಲೂ ಅದು ಮಾಯವಾಗಿದೆ. 2017ರಲ್ಲಿ ವಿರಾಟ್ ಕಲರ್​ಫುಲ್ ಟೂರ್ನಿಯಲ್ಲಿ ಕೊನೆ ಬಾರಿ ಶತಕ ಸಿಡಿಸಿದ್ರು. 2016ರ ಒಂದೇ ಆವೃತ್ತಿಯಲ್ಲಿ ಬರೋಬ್ಬರಿ 4 ಶತಕ ಬಾರಿಸಿ ಸುದ್ದಿಯಾಗಿದ್ರು. 2017ರಲ್ಲಿ ಒಂದು ಶತಕ. ಇಂತಹ ಸೆಂಚುರಿ ಮ್ಯಾನ್​ ಕಳೆದ 4 ಆವೃತ್ತಿಗಳಿಂದ ಐಪಿಎಲ್​​ನಲ್ಲಿ ಸೆಂಚುರಿ ಬಾರಿಸಲು ಫೇಲಾಗಿದ್ದಾರೆ. ಕನಿಷ್ಠ ಪಕ್ಷ ಈ ಬಾರಿನಾದ್ರು ಆ ಶತಕದ ವೈಭವ ಮರುಕಳಿಸಲಿ.

IPL 2022: ಕಪ್ ಗೆಲ್ಲುವ ಕನಸಿನೊಂದಿಗೆ ಆರ್‌ಸಿಬಿ ಕಣಕ್ಕೆ..!

ಈ ಬಾರಿ ESCN ಅಭಿಯಾನಕ್ಕೆ ಬ್ರೇಕ್​: 

ಇನ್ನು 2016ರಿಂದ ಪ್ರತಿ ಆವೃತ್ತಿ ಶುರುವಾಗುತ್ತೆ ಅಂದ್ರೆ ಸಾಕು ಆರ್​ಸಿಬಿ ಅಭಿಮಾನಿಗಳಿಂದ ಈ ಸಲ ಕಪ್​​ ನಮ್ದೇ ಅನ್ನೋ ಅಭಿಯಾನ ಹೆಚ್ಚು ಸುದ್ದಿಯಲ್ಲಿರ್ಲಿತ್ತು. ಇದರಿಂದ ಟೂರ್ನಿ ಕ್ರೇಜ್​ ಹೆಚ್ಚಾಗಿರೋದು. ಆದ್ರೆ ಈ ಬಾರಿ ಯಾಕೋ ಕೊಹ್ಲಿ ಕ್ಯಾಪ್ಟನ್ಸಿ ತೊರೆಯುತ್ತಿದ್ದಂತೆ ಅದರ ಸುದ್ದಿನೇ ಇಲ್ಲ. ಕೊಹ್ಲಿನೇ ಕ್ಯಾಪ್ಟನ್ ಅಲ್ಲ ಅಂದ್ಮೇಲೆ ಈ ಸಲ ಕಪ್​​​ ನಮ್ದೇ ಅಭಿಯಾನ ಆದರೂ ಯಾಕೆ ಅಂತಾ ಆರ್​​​ಸಿಬಿ ಫ್ಯಾನ್ಸ್ ಸೈಲೆಂಟಾಗಿದ್ದಾರೆ.

ಮಿಡಲ್ ಆರ್ಡರ್​​​ನಲ್ಲಿ ಕೊಹ್ಲಿನೇ ತಂಡಕ್ಕೆ ಶಕ್ತಿ:

ನ್ಯೂ ಕ್ಯಾಪ್ಟನ್​​​, ನ್ಯೂ ಟೀಮ್​ ಜೊತೆ ಆರ್​ಸಿಬಿ, ಇಂದು ಪಂಜಾಬ್​​ ವಿರುದ್ಧ ಮೊದಲ ಪಂದ್ಯಕ್ಕೆ ಸಜ್ಜಾಗಿದೆ. ಆಕ್ಷನ್​​ನಲ್ಲಿ ಕೋಟಿ ಕೋಟಿ ಸುರಿದ್ರೂ ಹೊಸ ಮುಖಗಳಿಗೆ ಮಣೆ ಹಾಕಿದ್ರು, ಮಿಡಲ್ ಆರ್ಡರ್​​​ನಲ್ಲಿ ಕೊಹ್ಲಿಯನ್ನೇ ಹೆಚ್ಚು ಅವಲಂಬಿಸಿದೆ. ಬಿಗ್ ಇನ್ನಿಂಗ್ಸ್ ಕಟ್ಟುವ ಅಗತ್ಯವಿದೆ. ಒಟ್ಟಿನಲ್ಲಿ ಈ ಸಲದ ಐಪಿಎಲ್​​ ಕೊಹ್ಲಿಗೆ ಕಬ್ಬಿಣಡದ ಕಡಲೆಯಾಗಿದೆ. ಇಂತಹ ಸವಾಲಿನ ಚಕ್ರವ್ಯೂಹವನ್ನ ಕೊಹ್ಲಿ ಭೇದಿಸುತ್ತಾರಾ..? ಇಲ್ಲ ಫೇಲಾಗ್ತಾರಾ ಅನ್ನೋದನ್ನ ಕಾದು ನೋಡಬೇಕು.